ಹೈದರಾಬಾದ್: ಬಿಸಿಲು ನಮ್ಮ - ನಿಮ್ಮನ್ನೆಲ್ಲ ಇನ್ನಿಲ್ಲದಂತೆ ಸುಡುತ್ತಿದೆ. ಮನೆಯಲ್ಲಿಯೂ ಬಿಸಿಲ ಜಳ ತಾಳಲಾರದೇ ಕೂಲರ್, ಎಸಿ ಆಶ್ರಯ ಪಡೆಯುತ್ತಿದ್ದೇವೆ. ಆದರೆ ಎಸಿ ಮತ್ತು ಕೂಲರ್‌ಗಳು ಮಾತ್ರವಲ್ಲದೇ ಕೆಲವು ಸಸ್ಯಗಳು ಸೂರ್ಯನ ಶಾಖದಿಂದ ನಿಮ್ಮನ್ನು ರಕ್ಷಿಸುತ್ತವೆ. ಅಂದ ಹಾಗೇ ಈ ಗಿಡಗಳನ್ನು ಮರದ ಕೆಳಗೆ ಕುಳಿತಂತೆ ಎಂದು ಖಂಡಿತಾ ಭಾವಿಸಬೇಡಿ. ಮನೆಯಲ್ಲಿ ನಿಮ್ಮ ಕೋಣೆಗಳಲ್ಲೇ ನೀವು ಈ ಸಸ್ಯಗಳನ್ನು ಇಟ್ಟುಕೊಳ್ಳಬಹುದು. ಕೆಲವು ರೀತಿಯ ಸಸ್ಯಗಳನ್ನು ನಿಮ್ಮ ಕೊಠಡಿಗಳಲ್ಲಿ ಇಟ್ಟುಕೊಳ್ಳುವುದರಿಂದ, ನಿಮ್ಮ ಕೋಣೆಯ ಉಷ್ಣತೆ ಕಡಿಮೆಯಾಗುತ್ತದೆ ಮತ್ತು ತಂಪಾಗುವಂತೆ ಮಾಡುತ್ತವೆ ಈ ಸಸ್ಯಗಳು. ಇದಲ್ಲದೇ ಕೆಲವು ಸಸ್ಯಗಳು ಕೋಣೆಯ ವಾತಾವರಣವನ್ನು ಶಾಂತ ಮತ್ತು ಆರಾಮದಾಯಕವಾಗಿಸುವ ಶಕ್ತಿಯನ್ನು ಹೊಂದಿವೆ. ಆ ಸಸ್ಯಗಳು ಯಾವುವು? ಒಂದೊಂದಾಗಿ ನೋಡೋಣ
ಲೋಳೆಸರ:ಅಲೋವೆರಾ ಎಂದು ಕರೆಯಲಾಗುವ ಈ ಸಸ್ಯಕ್ಕೆ ಲೋಳೆಸರ ಎಂಬ ಹೆಸರು ಕನ್ನಡದಲ್ಲಿದೆ. ನೈಸರ್ಗಿಕ ಕೂಲಿಂಗ್ ಜೆಲ್ ಎಂದು ಇದನ್ನು ಹೇಳಲಾಗುತ್ತದೆ. ಇದು ಹಲವಾರು ಔಷಧೀಯ ಗುಣಗಳನ್ನು ಹೊಂದಿರುವ ಸಸ್ಯವಾಗಿದೆ. ಆದರೆ ಇದು ನೈಸರ್ಗಿಕ ಏರ್ ಕೂಲರ್ ಆಗಿಯೂ ಕೆಲಸ ಮಾಡುತ್ತದೆ ಎಂಬುದು ನಿಮಗೆ ಗೊತ್ತಿರಲಿ. ಈ ಸಸ್ಯವು ರಾತ್ರಿಯಲ್ಲಿ ಆಮ್ಲಜನಕವನ್ನು ಬಿಡುಗಡೆ ಮಾಡುತ್ತದೆ ಮತ್ತು ಮಲಗುವ ಕೋಣೆಯನ್ನು ತಂಪಾಗಿಸಲು ಕಾರ್ಬನ್ ಡೈಆಕ್ಸೈಡ್ ಅನ್ನು ಹೀರಿಕೊಳ್ಳುತ್ತದೆ.
ಹಾವಿನ ಗಿಡ: ಹಾವಿನ ಗಿಡವನ್ನು ಅತ್ತೆಯ ನಾಲಿಗೆ ಎಂದೂ ಕರೆಯುತ್ತಾರೆ. ತುಂಬಾ ಸೊಗಸಾದ ಮತ್ತು ತಂಪಾಗಿರುವ ಈ ಸಸ್ಯವು ಅದರ ಗಾಳಿಯನ್ನು ಶುದ್ಧೀಕರಿಸುವ ಗುಣಲಕ್ಷಣಗಳಿಗೆ ಹೆಸರುವಾಸಿಯಾಗಿದೆ. ಕೋಣೆಯ ವಾತಾವರಣವನ್ನು ತಂಪಾಗಿಸಲು ಈ ಸಸ್ಯವು ತುಂಬಾ ಸಹಾಯಕವಾಗಿದೆ. ಅಲೋವೆರಾದಂತೆಯೇ ರಾತ್ರಿಯಲ್ಲಿ ಇಂಗಾಲದ ಡೈಆಕ್ಸೈಡ್ ಅನ್ನು ಹೀರಿಕೊಳ್ಳುವ ಮೂಲಕ ಇದು ವಾತಾವರಣವನ್ನು ತಂಪಾಗಿಡುವಂತೆ ಮಾಡುತ್ತದೆ.
ಲಿಲ್ಲಿ: ಶಾಂತಿ ಲಿಲ್ಲಿ ಬಿಳಿ ಹೂವುಗಳನ್ನು ಹೊಂದಿರುವ ಅದ್ಭುತ ಸಸ್ಯವಾಗಿದೆ. ಇದು ಮನೆಯ ವಾತಾವರಣವನ್ನು ಆಕರ್ಷಕವಾಗಿಸುತ್ತದೆ ಮತ್ತು ಗಾಳಿಯನ್ನು ತಂಪಾಗಿಸಲು ಸಹಾಯ ಮಾಡುತ್ತದೆ. ಈ ಸಸ್ಯವು ಅದರ ಎಲೆಗಳ ಮೂಲಕ ತೇವಾಂಶವನ್ನು ಬಿಡುಗಡೆ ಮಾಡುತ್ತದೆ ಮತ್ತು ಕೋಣೆಯನ್ನು ತಂಪಾಗಿಸುವ ವಾತಾವರಣವನ್ನು ಸೃಷ್ಟಿ ಮಾಡುತ್ತದೆ. ಗಾಳಿಯಿಂದ ಬಿಡುಗಡೆಯಾದ ಹಾನಿಕಾರಕ ವಿಷವನ್ನು ತೆಗೆದುಹಾಕುವ ಸಾಮರ್ಥ್ಯವನ್ನು ಹೊಂದಿರುವ ಶಾಂತಿ ಲಿಲ್ಲಿಯನ್ನು ಮನೆ ಮತ್ತು ಕಚೇರಿಯಲ್ಲಿ ಇರಿಸಿಕೊಳ್ಳಬಹುದು.