ETV Bharat / state

ಬಾಣಂತಿಯರ ಸಾವು ಪ್ರಕರಣ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ತನಿಖೆ: ಸಚಿವ ದಿನೇಶ್ ಗುಂಡೂರಾವ್ - MATERNAL DEATH CASE

ವಿಪಕ್ಷ ನಾಯಕ ಆರ್​.ಅಶೋಕ್​ ಅವರು ಬಾಣಂತಿಯರ ಸಾವಿನ ಪ್ರಕರಣ ಕುರಿತು ಪ್ರಸ್ತಾಪಿಸಿದ ವಿಷಯಗಳ ಕುರಿತು ಆರೋಗ್ಯ ಸಚಿವ ದಿನೇಶ್​ ಗುಂಡೂರಾವ್​ ವಿಸ್ತಾರವಾದ ಮಾಹಿತಿ ನೀಡಿದರು.

Minister Dinesh Gundu Rao
ಸಚಿವ ದಿನೇಶ್ ಗುಂಡೂರಾವ್ (ETV Bharat)
author img

By ETV Bharat Karnataka Team

Published : Dec 19, 2024, 3:14 PM IST

ಬೆಳಗಾವಿ: "ಬಳ್ಳಾರಿಯಲ್ಲಿ ಸಂಭವಿಸಿದ ಬಾಣಂತಿಯರ ಸಾವಿನ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಇದರಲ್ಲಿ ತಪ್ಪಿತಸ್ಥರಾದವರನ್ನು ಸುಮ್ಮನೆ ಬಿಡುವುದಿಲ್ಲ. ಮುಖ್ಯಮಂತ್ರಿ ಜೊತೆ ಚರ್ಚಿಸಿ, ಬಾಣಂತಿಯರ ಸಾವಿನ ಕುರಿತು ನ್ಯಾಯಮೂರ್ತಿಗಳ ನೇತೃತ್ವದಲ್ಲಿ ತನಿಖೆ ನಡೆಸಲಾಗುವುದು. ಒಂದು ವೇಳೆ ನಾನು ತಪ್ಪಿತಸ್ಥನೆಂದು ತಿಳಿದು ಬಂದರೆ, ಯಾವುದೇ ಮುಲಾಜು ಇಲ್ಲದೇ, ನನ್ನ ಮೇಲಿನ ಕ್ರಮಕ್ಕೂ ಸಿದ್ಧ" ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ಅಧಿವೇಶನದಲ್ಲಿ ಪ್ರತಿಪಕ್ಷದ ನಾಯಕ ಆರ್.ಅಶೋಕ್ ಅವರು ನಿಯಮ 69 ಅಡಿ ಬಾಣಂತಿಯರ ಸಾವಿನ ಕುರಿತು ಪ್ರಸ್ತಾಪಿಸಿದ್ದ ವಿಚಾರಗಳಿಗೆ ಉತ್ತರಿಸಿ, "ಕಳೆದ ನವೆಂಬರ್ ತಿಂಗಳ 9, 10 ಹಾಗೂ 11 ತಾರೀಖಿನಂದು ಬಳ್ಳಾರಿ ಆಸ್ಪತ್ರೆಯಲ್ಲಿ 34 ಸಿಜೇರಿಯನ್ ಹೆರಿಗೆ ಮಾಡಲಾಗಿದೆ. ಈ ಪೈಕಿ 7 ಬಾಣಂತಿಯರು ಹೆರಿಗೆ ನಂತರ ತೀವ್ರ ತರನಾಗಿ ಅಸ್ವಸ್ಥಗೊಂಡರು. ಇದರಲ್ಲಿ 5 ಬಾಣಂತಿಯರು ಸಾವನಪ್ಪಿದರೆ, ಇಬ್ಬರು ಸಾವಿನಿಂದ ಪಾರಾದರು. ಘಟನೆ ತಿಳಿದ ತಕ್ಷಣವೇ, ಸಾವಿನ ಕಾರಣ ತಿಳಿಯಲು ಬೆಂಗಳೂರಿನ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ವೈದ್ಯರ ತಂಡ ರಚಿಸಿ ಬಳ್ಳಾರಿಗೆ ಕಳುಹಿಸಿಕೊಡಲಾಯಿತು." ಎಂದು ತಿಳಿಸಿದರು.

"ಈ ತಂಡ ನವೆಂಬರ್ 12 ಹಾಗೂ 13 ರಂದು ಕೂಲಂಕಷವಾಗಿ ಅಧ್ಯಯನ ನಡೆಸಿ, ನವೆಂಬರ್ 14 ರಂದು ವರದಿ ನೀಡಿದೆ. ಇದರಲ್ಲಿ ವೈದ್ಯರು ಶಸ್ತ್ರಚಿಕಿತ್ಸೆಯ ಎಲ್ಲ ಶಿಷ್ಟಾಚಾರ ನಿಯಮಗಳನ್ನು ಪಾಲಿಸಿದ್ದಾರೆ. ವೈದ್ಯರಿಂದ ಲೋಪವಾಗಿಲ್ಲ, ಬದಲಾಗಿ ಸಿಜೇರಿಯನ್ ನಂತರ ಬಾಣಂತಿಯರಿಗೆ ನೀಡಿದ ರಿಂಗರ್ ಲ್ಯಾಕ್ಟೇಟ್ ಐವಿ ದ್ರಾವಣದ ಪ್ರತಿಕೂಲ ಪರಿಣಾಮದಿಂದ ಸಾವು ಸಂಭವಿಸಿರುವುದಾಗಿ ವರದಿ ನೀಡಿದರು. ಇದರ ಆಧಾರದಲ್ಲಿ ಪಶ್ಚಿಮ್ ಬಂಗಾ ಕಂಪನಿ ಪೂರೈಸಿದ ರಿಂಗರ್ ಲ್ಯಾಕ್ಟೇಟ್ ಐವಿ ದ್ರಾವಣವನ್ನು ಪರೀಕ್ಷೆಗಾಗಿ ಲ್ಯಾಬಿಗೆ ಕಳುಹಿಸಿಕೊಟ್ಟಾಗ ಕಳಪೆ ಗುಣಮಟ್ಟದ್ದು ಎಂದು ಪತ್ತೆಯಾಗಿದೆ. ಹೈದರಾಬಾದ್ ಲ್ಯಾಬ್‌ನಲ್ಲಿ ನಡೆಸಿದ ಪರೀಕ್ಷೆಯಲ್ಲಿ ರಿಂಗರ್ ಲ್ಯಾಕ್ಟೇಟ್ ಐವಿಯಲ್ಲಿ ಎಂಡೋ ಟಾಕ್ಸಿಕ್ ಅಂಶ ಇರುವುದಾಗಿ ತಿಳಿದು ಬಂದಿದೆ" ಎಂದು ಮಾಹಿತಿ ನೀಡಿದರು.

ಬಾಣಂತಿಯರ ಸಾವಿನ ಲೆಕ್ಕ ಪರಿಶೋಧನೆ: "ಪಶ್ಚಿಮ್ ಬಂಗಾ ಕಂಪನಿ ಪೂರೈಸಿದ ರಿಂಗರ್ ಲ್ಯಾಕ್ಟೇಟ್ ಐವಿ ದ್ರಾವಣವನ್ನು ರಾಜ್ಯದ ಇತರೆ ಆಸ್ಪತ್ರೆಗಳಿಗೂ ಪೂರೈಸಲಾಗಿದೆ, ಈ ಹಿನ್ನಲೆಯಲ್ಲಿ ರಾಜ್ಯಾದ್ಯಂತ ಸಂಭವಿಸಿದ ಬಾಣಂತಿಯರ ಸಾವಿನ ಲೆಕ್ಕ ಪರಿಶೋಧನೆಗೂ ಸೂಚನೆ ನೀಡಿದ್ದೇನೆ. ಮುಖ್ಯಮಂತ್ರಿಗಳು ಈಗಾಗಲೇ ಅಭಿವೃದ್ಧಿ ಆಯುಕ್ತರನ್ನು ಪ್ರಕರಣದ ಪರಿಶೀಲನೆ ನಡೆಸಿ ವರದಿ ನೀಡಲು ನೇಮಿಸಿದ್ದಾರೆ. ತಜ್ಞ ವೈದ್ಯರಿಂದಲೂ ತನಿಖೆ ನಡೆಯುತ್ತಿದೆ. ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮ ನಿಯಮಿತ ಆಡಳಿತದಲ್ಲಿ ಸುಧಾರಣೆಗೆ ವರದಿ ನೀಡಲು ಹಿರಿಯ ಐ.ಎ.ಎಸ್ ಅಧಿಕಾರಿಯನ್ನು ಸಹ ನೇಮಿಸಲಾಗಿದೆ" ಎಂದು ಹೇಳಿದರು.

ಕಳಪೆ ಐವಿ ದ್ರಾವಣ ಪೂರೈಕೆ ಹೇಗೆ?: ಪಶ್ಚಿಮ್ ಬಂಗಾ ಕಂಪನಿ ಪೂರೈಸಿದ ರಿಂಗರ್ ಲ್ಯಾಕ್ಟೇಟ್ ಐವಿ ದ್ರಾವಣ ಕಳಪೆ ಗುಣಮಟ್ಟದ್ದು ಎಂದು ಪತ್ತೆಯಾದ ಮೇಲೂ ಐವಿ ದ್ರಾವಣ ಪೂರೈಕೆ ಹೇಗೆ ಆಯಿತು ಎನ್ನವುದರ ಕುರಿತು ಸಚಿವ ದಿನೇಶ್ ಗುಂಡೂರಾವ್ ಸದನಕ್ಕೆ ವಿಸ್ತೃತ ಮಾಹಿತಿ ನೀಡಿದರು.

"ಕಳೆದ ಮಾರ್ಚ್ ಹಾಗೂ ಏಪ್ರಿಲ್‌ನಲ್ಲಿಯೇ ಐವಿ ದ್ರಾವಣದ ಗುಣಮಟ್ಟದ ಕುರಿತು ಸರ್ಕಾರಕ್ಕೆ ಮಾಹಿತಿ ದೊರಕಿತ್ತು. ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಯಲ್ಲಿ ಐವಿ ದ್ರಾವಣ ನೀಡಿದವರಿಗೆ ಚಳಿ ಹಾಗೂ ನಡುಕ ಉಂಟಾಗುತಿತ್ತು. ಇದೇ ಮಾದರಿಯಲ್ಲಿ ಗುಂಡ್ಲಪೇಟೆ ಆಸ್ಪತ್ರೆಯಲ್ಲಿಯೂ ರೋಗಿಗಳಿಗೆ ತೊಂದರೆಯಾಗಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿ, ಸರ್ಕಾರ ಎನ್.ಎ.ಬಿ.ಎಲ್ ಹಾಗೂ ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮ ನಿಯಮಿತದ ಲ್ಯಾಬ್‌ಗಳಲ್ಲಿ ಪರೀಕ್ಷೆ ನಡೆಸಿದಾಗ ಐವಿ ದ್ರಾವಣ ಕಳಪೆ ಗುಣಮಟ್ಟದ್ದು ಎಂದು ವರದಿ ಬಂದಿದೆ. ಇದನ್ನು ಆಧರಿಸಿ ಪಶ್ಚಿಮ ಬಂಗಾಳ ಕಂಪನಿಯನ್ನು ಕಪ್ಪು ಪಟ್ಟಿಗೆ ಸೇರಿಸಿ, ಅವರು ಪೂರೈಹಿಸಿದ ರಿಂಗರ್ ಲ್ಯಾಕ್ಟೇಟ್ ಐವಿ ದ್ರಾವಣದ 192 ಬ್ಯಾಚುಗಳ ಸರಬರಾಜನ್ನು ತಡೆ ಹಿಡಿಯಲಾಯಿತು." ಎಂದರು.

"ಇದನ್ನು ವಿರೋಧಿ ಪಶ್ಚಿಮ್ ಬಂಗಾ ಕಂಪನಿ ಕೇಂದ್ರ ಔಷಧ ಲ್ಯಾಬೋರೆಟರಿಯಿಂದ ಗುಣಮಟ್ಟದ ಪರೀಕ್ಷೆಯ ವರದಿ ಆಧರಿಸಿ ನ್ಯಾಯಾಲಯದಲ್ಲಿ ಸರ್ಕಾರ ದಾವೆ ಹೂಡಿದೆ. ಇದರೊಂದಿಗೆ ಎನ್.ಎ.ಬಿ.ಲ್ ಲ್ಯಾಬ್‌ಗಳು ಸಹ ರಿಂಗರ್ ಲ್ಯಾಕ್ಟೇಟ್ ಐವಿ ದ್ರಾವಣದ ಗುಣಮಟ್ಟ ಸರಿಯಿದೆ ಎಂದು ವರದಿ ನೀಡಿದವು. ಜೂನ್ ತಿಂಗಳ ವೇಳೆಗೆ ರಾಜ್ಯದಲ್ಲಿ ಡೆಂಗ್ಯೂ ಹಾಗೂ ಇತರೆ ಶಸ್ತ್ರ ಚಿಕತ್ಸೆ ಮಾಡಿದವರಿಗೆ ರಿಂಗರ್ ಲ್ಯಾಕ್ಟೇಟ್ ಐವಿ ದ್ರಾವಣ ನೀಡಲು ಬೇಡಿಕೆ ಹೆಚ್ಚಾಯಿತು. ಈ ವೇಳೆ ಸರ್ಕಾರ ಪಶ್ಚಿಮ್ ಬಂಗಾ ಕಂಪನಿ ಐವಿ ದ್ರಾವಣದ 192 ಬ್ಯಾಚುಗಳ ಗುಣಮಟ್ಟವನ್ನು ಮತ್ತೊಮ್ಮೆ ಪರಿಶೀಲಿಸಿ, 22 ಬ್ಯಾಚ್‌ಗಳನ್ನು ಕಳಪೆ ಎಂದು ತಡೆಹಿಡಿದು ಉಳಿದ ಬ್ಯಾಚುಗಳ ಐವಿ ದ್ರಾವಣವನ್ನು ಆಸ್ಪತ್ರೆಗಳಿಗೆ ಸರಬರಾಜು ಮಾಡಿದೆ." ಎಂದು ಹೇಳಿದರು.

"ನಂತರ ಆಗಸ್ಟ್, ಸೆಪ್ಟೆಂಬರ್, ಅಕ್ಟೋಬರ್ ತಿಂಗಳಿನಲ್ಲಿ ಐವಿ ದ್ರಾವಣದ ಯಾವುದೇ ಅಡ್ಡ ಪರಿಣಾಮಗಳು ಕಂಡು ಬಂದಿಲ್ಲ. ಈ ಹಿನ್ನೆಯಲ್ಲಿ ನವೆಂಬರ್ 9 ರಂದು ಬಳ್ಳಾರಿ ಆಸ್ಪತ್ರೆಗೆ ಪಶ್ಚಿಮ್ ಬಂಗಾ ಕಂಪನಿ ರಿಂಗರ್ ಲ್ಯಾಕ್ಟೇಟ್ ಐವಿ ದ್ರಾವಣ ಪೂರೈಕೆಯಾಗಿದೆ. ನಂತರ ಸರಣಿ ಬಾಣಂತಿಯರ ಸಾವು ಸಂಭವಿಸಿದೆ. ಕೂಡಲೇ ಈ ಐವಿ ದ್ರಾವಣವನ್ನು 5 ಎನ್.ಎ.ಬಿ.ಎಲ್ ಲ್ಯಾಬ್‌ಗಳಲ್ಲಿ ಪರೀಕ್ಷಿಸಿದಾಗಲೂ ಗುಣಮಟ್ಟ ಸರಿಯಿದೆ ಎಂದೇ ವರದಿ ಬಂದಿದೆ. ಆದರೆ ಹೈದರಾಬಾದ್ ಲ್ಯಾಬ್ ವರದಿಯಲ್ಲಿ ಮಾತ್ರ ಐವಿ ದ್ರಾವಣದಲ್ಲಿ ಎಂಡೋ ಟಾಕ್ಸಿಕ್ ಅಂಶ ಇರುವುದಾಗಿ ಪತ್ತೆಯಾಗಿದೆ" ಎಂದು ವಿಸ್ತೃತವಾಗಿ ಘಟನೆ ಹಿನ್ನಲೆಯನ್ನು ಸದನದಲ್ಲಿ ವಿವರಿಸಿದರು.

ಫಾರ್ಮಾ ಕಂಪನಿಗಳ ಲಾಬಿ: "ಭಾರತದ ಫಾರ್ಮಾ ಕಂಪನಿಗಳು ಪ್ರಪಂಚದಲ್ಲಿಯೇ ಉತ್ತಮ ಹೆಸರು ಹೊಂದಿವೆ. ಭಾರತ ವಿಶ್ವದ ಫಾರ್ಮಾ ಹಬ್ ಎಂದೇ ಪ್ರಸಿದ್ಧಿ ಪಡೆದಿದೆ. ಆದರೆ ಈ ಫಾರ್ಮಾ ಕಂಪನಿಗಳಿಗೆ ಕರಾಳ ಮುಖ ಇದೆ. ವಿದೇಶಗಳಿಗೆ ಸರಬರಾಜು ಮಾಡುವ ಔಷಧಗಳ ತಯಾರಿಕೆಗೆ ಈ ಫಾರ್ಮಾ ಕಂಪನಿಗಳು ಪ್ರತ್ಯೇಕವಾಗಿ ಘಟಕಗಳನ್ನು ಸ್ಥಾಪಿಸಿವೆ. ಈ ಘಟಕಗಳು ಉತ್ತಮ ಗುಣಮಟ್ಟ ಹಾಗೂ ಎಲ್ಲ ಅಂತರಾಷ್ಟ್ರೀಯ ನಿಯಮಗಳನ್ನು ಪಾಲಿಸುತ್ತವೆ. ಆದರೆ ಭಾರತದಲ್ಲಿ ಪೂರೈಸುವ ಔಷದ ಘಟಕಗಳ ಸ್ಥಿತಿ ಶೋಚನೀಯವಾಗಿದೆ. ಕೇಂದ್ರ ಹಾಗೂ ರಾಜ್ಯ ಔಷಧ ನಿಯಂತ್ರಣ ಸಂಸ್ಥೆಗಳನ್ನು ಈ ಫಾರ್ಮಾ ಕಂಪನಿಗಳು ತಮ್ಮ ಪ್ರಭಾವ ಬೀರಿ, ತಮಗೆ ಬೇಕಾದ ಹಾಗೆ ವರದಿ ಪಡೆಯುತ್ತಿವೆ" ಎಂದು ತಿಳಿಸಿದರು.

"ಬಹುತೇಕ ಕಂಪನಿಗಳು ಪೂರ್ವ ಈಶಾನ್ಯ ರಾಜ್ಯಗಳಲ್ಲಿ ಸ್ಥಾಪಿತವಾಗಿದ್ದು, ಇತರೆ ರಾಜ್ಯಗಳಿಗೆ ಅವುಗಳ ಮೇಲೆ ನಿಯಂತ್ರಣವಿಲ್ಲ. ಪಶ್ಚಿಮ್​ ಬಂಗಾ ಕಂಪನಿಯ ಔಷಧ ತಯಾರಿಕಾ ಘಟಕಕ್ಕೆ ಕೇಂದ್ರ, ರಾಜ್ಯ ಹಾಗೂ ಪಶ್ಚಿಮ ಬಂಗಾಳ ರಾಜ್ಯದ ತನಿಖಾ ತಂಡಗಳು ಭೇಟಿ ನೀಡಿದ್ದು, ಕಂಪನಿಯ ಔಷಧ ತಯಾರಿಕೆಗೆ ತಡೆ ಒಡ್ಡಿವೆ. ರಾಜ್ಯ ಸರ್ಕಾರವು ಪಶ್ಚಿಮ್​ ಬಂಗಾ ಕಂಪನಿಯ ಮೇಲೆ ಪ್ರಕರಣ ದಾಖಲಿಸಿದ್ದು, ರಾಜ್ಯದಲ್ಲಿನ ಬಾಣಂತಿಯರ ಸಾವಿಗೆ ಅವರನ್ನು ಹೊಣೆ ಮಾಡಿ, ಭಾದಿತ ಕುಟುಂಬಗಳಿಗೆ ಸೂಕ್ತ ಪರಿಹಾರವನ್ನು ಕೊಡಿಸಲಾಗುವುದು" ಎಂದು ಸಚಿವರು ಹೇಳಿದರು.

ಶುಲ್ಕ ಹೆಚ್ಚಳ ಮಾಡಿಲ್ಲ: ರಾಜ್ಯದ ಜಿಲ್ಲಾ, ತಾಲ್ಲೂಕು, ಸಮುದಾಯ ಹಾಗೂ ಪ್ರಾಥಮಿಕ ಆಸ್ಪತ್ರೆಗಳಲ್ಲಿ ಯಾವುದೇ ಶುಲ್ಕಗಳನ್ನು ಹೆಚ್ಚಳ ಮಾಡಿಲ್ಲ ಎಂದು ಸಚಿವ ದಿನೇಶ್ ಗುಂಡುರಾವ್ ಸ್ಪಷ್ಟನೆ ನೀಡಿದರು.

"ರಾಜ್ಯದಲ್ಲಿ ಕಳೆದ 12 ವರ್ಷಗಳಿಂದ ಬಳಕೆದಾರರ ಶುಲ್ಕಗಳನ್ನು ಹೆಚ್ಚಿಸಿಲ್ಲ. ಈ ಹಿನ್ನಲೆಯಲ್ಲಿ ಪ್ರಾಯೋಗಿಕವಾಗಿ ಬೆಂಗಳೂರಿನ ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ ಮಾತ್ರ ಶುಲ್ಕ ಹೆಚ್ಚಳ ಮಾಡಲಾಗಿದೆ. ರಾಜ್ಯದ ಎಲ್ಲ 108 ಆಂಬ್ಯುಲೆನ್ಸ್ ವಾಹನಗಳಲ್ಲಿ ಜಿ.ಪಿ.ಎಸ್ ಅಳವಡಿಸಲಾಗಿದೆ. ದೇಶದಲ್ಲಿ ಬ್ರೈನ್ ಹೆಲ್ತ್ ಕ್ಲೀನಿಕ್‌ಗಳನ್ನು ಪ್ರಾರಂಭಿಸಿದ ಪ್ರಥಮ ರಾಜ್ಯ ಕರ್ನಾಟಕ, ಈ ಬಗ್ಗೆ ಕೇಂದ್ರ ನೀತಿ ಆಯೋಗವೂ ಮೆಚ್ಚುಗೆ ವ್ಯಕ್ತಪಡಿಸಿದೆ. ಆರೋಗ್ಯ ಇಲಾಖೆ ಎಲ್ಲಾ ವರ್ಗದ ನೌಕರರ ಸೇವಾ ಜೇಷ್ಠತಾ ಪಟ್ಟಿ ಸಿದ್ಧಪಡಿಸಲಾಗಿದೆ. ರಾಷ್ಟ್ರೀಯ ಆರೋಗ್ಯ ಮಿಷನ್ ಶೇ.84 ರಷ್ಟು ಅನುದಾನ, ರಾಜ್ಯದ ಶೇ.97 ರಷ್ಟು ಅನುದಾನವನ್ನು ಬಳಕೆ ಮಾಡಲಾಗಿದೆ. ರಾಜ್ಯದಲ್ಲಿ ಔಷಧಗಳ ಕೊರತೆಯಿಲ್ಲ. 1126 ವಿವಿಧ ಬಗೆಯ ಔಷಧಗಳು ಆಸ್ಪತ್ರೆಗಳಲ್ಲಿ ದೊರಕುತ್ತಿವೆ. ರಾಜ್ಯದ 17 ಜಿಲ್ಲಾ ಆಸ್ಪತ್ರೆ, 164 ತಾಲ್ಲೂಕು ಆಸ್ಪತ್ರೆ, 64 ಸಮುದಾಯ ಆರೋಗ್ಯ ಕೇಂದ್ರಗಳು ಎನ್.ಕ್ಯೂ.ಎ.ಸ್ ಮಾನ್ಯತೆ ಪಡೆದಿವೆ" ಎಂದು ತಿಳಿಸಿದರು.

ಇದನ್ನೂ ಓದಿ: ಬಾಣಂತಿಯರ ಸಾವು ಪ್ರಕರಣ: 'ನನ್ನ ತಪ್ಪಿದ್ದರೆ ರಾಜೀನಾಮೆ ಕೊಡಲೂ ಸಿದ್ಧ': ದಿನೇಶ್ ಗುಂಡೂರಾವ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.