ETV Bharat / health

2024ರ ಹಿನ್ನೋಟ: ಈ ವರ್ಷದಲ್ಲಿ ಭಯ ಉಂಟುಮಾಡಿದ್ದ ರೋಗಗಳು ಯಾವುವು ಗೊತ್ತೇ? - THE DEADLIEST DISEASES OF 2024

ಕೆಲವು ದಿನಗಳಲ್ಲಿ 2024ಕ್ಕೆ ವಿದಾಯ ಹೇಳುವ ಮೂಲಕ 2025ಕ್ಕೆ ಸ್ವಾಗತಿ ಮಾಡುತ್ತೇವೆ. 2024ರಲ್ಲಿ ಅನೇಕ ರೋಗಗಳು ಪ್ರಪಂಚದಾದ್ಯಂತ ಭಯಾನಕ ಪರಿಸ್ಥಿತಿ ಉಂಟುಮಾಡಿದ್ದವು. ಈ ರೋಗಗಳ ಬಗ್ಗೆ ನಿಮಗೆ ತಿಳಿದಿದೆಯೇ? ಇಲ್ಲಿದೆ ಓದಿ ಸಮಗ್ರ ಲೇಖನ.

YEAR ENDER 2024  DEADLY DISEASES 2024  MOST DEADLY DISEASES OF 2024  2024ರ ಮಾರಕ ರೋಗಗಳು
ಸಾಂದರ್ಭಿಕ ಚಿತ್ರ (ETV Bharat)
author img

By ETV Bharat Health Team

Published : 2 hours ago

The deadliest diseases of 2024: 2024ನೇ ವರ್ಷಕ್ಕೆ ವಿದಾಯ ಹೇಳುವುದರೊಂದಿಗೆ 2025ರ ಹೊಸ ವರ್ಷಕ್ಕೆ ಇಡೀ ವಿಶ್ವವೇ ಸ್ವಾಗತಿಸಲು ಸಜ್ಜಾಗಿದೆ. 2024ರ ಕೊನೆಯ ದಿನಗಳು ಸಮೀಪಿಸುತ್ತಿರುವ ಈ ವರ್ಷ ಆರೋಗ್ಯ ಕ್ಷೇತ್ರದಲ್ಲಿ ಏನೆಲ್ಲಾ ಘಟನೆಗಳು ನಡೆದವು ಎಂಬುದನ್ನು ನೋಡೋಣ. 2024ರಲ್ಲಿ ಜಗತ್ತು ಹಲವು ಗಂಭೀರ ಕಾಯಿಲೆಗಳನ್ನು ಎದುರಿಸಿದೆ. ಈ ರೋಗಗಳು ಲಕ್ಷಾಂತರ ಜನರ ಆರೋಗ್ಯದ ಮೇಲೆ ಪರಿಣಾಮ ಬೀರುವುದರ ಜೊತೆಗೆ ಜಾಗತಿಕ ಆರೋಗ್ಯ ವ್ಯವಸ್ಥೆಯ ಮೇಲೆ ಭಾರಿ ಒತ್ತಡವನ್ನು ಉಂಟುಮಾಡಿದ್ದವು. 2024 ವರ್ಷದಲ್ಲಿ ಹೆಚ್ಚು ಭಯದ ಪರಿಸ್ಥಿತಿಯನ್ನು ಉಂಟು ಮಾಡಿದ್ದ ಕಾಯಿಲೆಗಳ ಕುರಿತು ತಿಳಿಯೋಣ.

ಕೋವಿಡ್​-19ನ XBB ​​ರೂಪಾಂತರ:

YEAR ENDER 2024  DEADLY DISEASES 2024  MOST DEADLY DISEASES OF 2024  2024ರ ಮಾರಕ ರೋಗಗಳು
ಕೋವಿಡ್​-19ನ XBB ​​ರೂಪಾಂತ (ETV Bharat)

2024ರಲ್ಲಿ ಕೊರೊನಾ ವೈರಸ್‌ನ ಹೊಸ ರೂಪಾಂತರವಾದ XBB ಪ್ರಪಂಚದಾದ್ಯಂತ ಆರಂತ ಮೂಡಿಸಿತ್ತು. ಕೋವಿಡ್-19ನ XBB ​​ರೂಪಾಂತರವು ಅನೇಕ ಜನರನ್ನು ಬಲಿ ತೆದುಕೊಂಡಿದೆ. ಕೊರೊನಾದ ಈ ರೂಪಾಂತರವು ವೇಗವಾಗಿ ಹರಡಿತು. ಮಕ್ಕಳು ಮತ್ತು ವೃದ್ಧರ ಮೇಲೆ ಹೆಚ್ಚು ಪರಿಣಾಮ ಬೀರಿತ್ತು. ಕೋವಿಡ್-19ರ ಹೊಸ ರೂಪಾಂತರ ಆರ್ಕ್ಟರಸ್ ವೈರಸ್​ ಭಾರತದಲ್ಲಿ ವೇಗವಾಗಿ ಹಬ್ಬಿತ್ತು. ಆರ್ಕ್ಟರಸ್​​ಗೆ ತುತ್ತಾದವರಲ್ಲಿ ಜ್ವರ, ಕಿಬ್ಬೊಟ್ಟೆಯ ಸಮಸ್ಯೆಗಳು, ತಲೆನೋವು, ಕೆಮ್ಮು ಹಾಗೂ ಗಂಟಲು ನೋವು ಇತ್ಯಾದಿ ರೋಗಲಕ್ಷಣಗಳು ಕಾಣಿಸಿಕೊಂಡಿದ್ದವು.

ಮಂಕಿ ಪಾಕ್ಸ್:

ಮಂಕಿ ಪಾಕ್ಸ್ (ETV Bharat)

ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಜೂನ್ 12ರ ಹೊತ್ತಿಗೆ ವಿಶ್ವದಾದ್ಯಂತ 97,281- ಮಂಕಿಪಾಕ್ಸ್ ಪ್ರಕರಣಗಳು ವರದಿಯಾಗಿವೆ. ಅಷ್ಟೇ ಅಲ್ಲ, ವಿಶ್ವಾದ್ಯಂತ 208 ಮಂದಿ ಮಂಗನ ಕಾಯಿಲೆಗೆ ಸಾವನ್ನಪ್ಪಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆಯು ಇದನ್ನು ಸಾಂಕ್ರಾಮಿಕ ರೋಗ ಎಂದು ಘೋಷಣೆ ಮಾಡಿತ್ತು. ಹಲವು ಆಫ್ರಿಕನ್ ದೇಶಗಳಿಗೆ ಸೋಂಕು ತಗುಲಿದ ನಂತರ ಈ ರೋಗವು ಯುರೋಪ್ ಹಾಗೂ ಏಷ್ಯಾಕ್ಕೆ ಹರಡಿತ್ತು. ಹೆಚ್ಚು ಜ್ವರ, ಶೀತ, ನೆಗಡಿ, ಕೆಮ್ಮು, ತಲೆನೋವು, ಮೈಕೈ ನೋವು, ಕೆಲವೊಮ್ಮೆ ಮೈ ನಡುಗುವುದು, ಇಲ್ಲಾಂದ್ರೆ ದೇಹದಲ್ಲಿ ಸೋಂಕು ಹೆಚ್ಚಾದಂತೆ ಮೈಮೇಲೆ ಹಾಗೂ ಮುಖದ ಮೇಲೆ ದದ್ದುಗಳು ಕಾಣಿಸಿಕೊಳ್ಳುವುದು ಸೇರಿದಂತೆ ವಿವಿಧ ರೋಗಲಕ್ಷಣಗಳು ಕಂಡುಬರುತ್ತದೆ.

ಡೆಂಗ್ಯೂ ಜ್ವರ:

YEAR ENDER 2024  DEADLY DISEASES 2024  MOST DEADLY DISEASES OF 2024  2024ರ ಮಾರಕ ರೋಗಗಳು
ಸಾಂದರ್ಭಿಕ ಚಿತ್ರ (ETV Bharat)

2024ರಲ್ಲಿ ಡೆಂಗ್ಯೂ ಜ್ವರ ಏಷ್ಯಾ, ದಕ್ಷಿಣ ಅಮೆರಿಕ, ಆಫ್ರಿಕಾ ಮತ್ತು ಇತರ ದೇಶಗಳಲ್ಲಿ ಹೆಚ್ಚಿನ ಸಂಖ್ಯೆಯ ಜನರಿಗೆ ಸೋಂಕು ತಗುಲಿತ್ತು. ಭಾರೀ ಮಳೆಯಿಂದಾಗಿ ಏಷ್ಯಾ ರಾಷ್ಟ್ರಗಳಲ್ಲಿ ಡೆಂಗ್ಯೂ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದ್ದವು. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಏಪ್ರಿಲ್ 30ರ ವೇಳೆಗೆ 7.6 ಮಿಲಿಯನ್‌ಗಿಂತಲೂ ಹೆಚ್ಚು ಡೆಂಗ್ಯೂ ಪ್ರಕರಣಗಳು ಪತ್ತೆಯಾಗಗಿದ್ದವು. ಡೆಂಗ್ಯೂದಿಂದ 3,000ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದರು.

ಕರ್ನಾಟಕ ರಾಜ್ಯಾದ್ಯಂತ ಡೆಂಗ್ಯೂ ಪ್ರಕರಣಗಳ ಹೆಚ್ಚಳ ಹಿನ್ನೆಲೆ ರಾಜ್ಯ ಸರ್ಕಾರವು 2024ರ ಸೆಪ್ಟೆಂಬರ್ 4ರಂದು ಡೆಂಗ್ಯೂ ಜ್ವರವನ್ನು ಸಾಂಕ್ರಾಮಿಕ ರೋಗ ಎಂದು ಘೋಷಿಸಿತ್ತು. ಈಡಿಸ್ ಈಜಿಪ್ಟಿ ಸೊಳ್ಳೆ ಕಚ್ಚಿದ 4-10 ದಿನಗಳ ಬಳಿಕ ಡೆಂಗ್ಯೂ ಜ್ವರದ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. 1ರಿಂದ 2 ವಾರದವರೆಗೆ ಈ ರೋಗಲಕ್ಷಣಗಳು ಇರುತ್ತವೆ. ಸ್ನಾಯು ಹಾಗೂ ಕೀಲು ನೋವು, ತೀವ್ರ ತಲೆನೋವು, ಅಧಿಕ ಜ್ವರ (ತಾಪಮಾನವು 40 ಸೆಲ್ಸಿಯಸ್ -​ 104 F), ಕಣ್ಣುಗಳಲ್ಲಿ ನೋವು, ದದ್ದುಗಳು, ವಾಂತಿ, ಗ್ರಂಥಿಗಳು ಊದಿಕೊಳ್ಳುವುದು ಡೆಂಗ್ಯೂ ಜ್ವರದ ರೋಗಲಕ್ಷಣಗಳಾಗಿವೆ.

ನಿಫಾ ವೈರಸ್:

ನಿಫಾ ವೈರಸ್ (ETV Bharat)

2024ರಲ್ಲಿ ದಕ್ಷಿಣ ಭಾರತದ ಕೇರಳದಲ್ಲಿ ನಿಫಾ ವೈರಸ್ ಹರಡಿತ್ತು. ನಿಪಾ ವೈರಸ್ ಬಾವಲಿ ಮತ್ತು ಹಂದಿಗಳಿಂದ ಹರಡುತ್ತದೆ. ಕೋವಿಡ್​ವೈರಸ್​ನಂತೆ, ನಿಫಾ ಒಂದು ಸಾಂಕ್ರಾಮಿಕ ಕಾಯಿಲೆಯಾಗಿದ್ದು, ಅದು ಒಬ್ಬರಿಂದ ಇನ್ನೊಬ್ಬರಿಗೆ ವೇಗವಾಗಿ ಹರಡುತ್ತದೆ. ಕೇರಳದಲ್ಲಿ ನಿಫಾ ವೈರಸ್‌ನಿಂದ ಅನೇಕ ಜನರು ಸಾವನ್ನಪ್ಪಿದ್ದಾರೆ. ಸೋಂಕಿಗೆ ಒಳಗಾದವರಲ್ಲಿ ಆರಂಭದಲ್ಲಿ ಜ್ವರ, ವಾಂತಿ, ತಲೆನೋವು, ಗಂಟಲಿನ ನೋವು ಕಂಡುಬರುತ್ತದೆ. ನಂತರ ತಲೆತಿರುಗುವಿಕೆ, ಅರೆನಿದ್ರಾವಸ್ಥೆ, ನರದ ಸಮಸ್ಯೆಗಳು ಕಾಣಿಸುತ್ತವೆ. ಕೆಲವು ಸೋಂಕಿತರಿಗೆ ಮೆದುಳಿನ ಉರಿಯೂತ ಉಂಟಾಗುತ್ತದೆ. ಅಂತಿಮವಾಗಿ ಸೋಂಕಿತರ ದೇಹದಲ್ಲಿ ಸೆಳೆತ ಉಂಟಾಗಿ ಕೋಮಾ ಸ್ಥಿತಿ ತಲುಪಿ ಸಾವನ್ನಪ್ಪಬಹುದು.

ಕ್ಯಾನ್ಸರ್ ಪ್ರಕರಣಗಳು ಹೆಚ್ಚಳ:

2024ರ ವರ್ಷ ಕ್ಯಾನ್ಸರ್ ರೋಗಿಗಳ ಸಂಖ್ಯೆ ಗಣನೀಯವಾಗಿ ಹೆಚ್ಚಿದೆ. ಮುಖ್ಯವಾಗಿ ಸ್ತನ ಕ್ಯಾನ್ಸರ್​ ಪ್ರಕರಣಗಳು ಏರಿಕೆಯಾಗಿವೆ. ಈ ರೋಗದಲ್ಲಿ, ಸ್ತನ ಅಂಗಾಂಶದಲ್ಲಿ ಅಸಹಜ ಜೀವಕೋಶಗಳು ಬೆಳೆಯಲು ಪ್ರಾರಂಭಿಸುತ್ತವೆ. ಇದು ಕಾಲಾನಂತರದಲ್ಲಿ ದೇಹದ ಇತರ ಭಾಗಗಳಿಗೆ ಹರಡಬಹುದು. ಸ್ತನ ಕ್ಯಾನ್ಸರ್‌ನ ಲಕ್ಷಣಗಳೆಂದರೆ ಸ್ತನದಲ್ಲಿ ಗಡ್ಡೆಗಳು, ಸ್ತನದ ಆಕಾರದಲ್ಲಿ ಬದಲಾವಣೆ, ಸ್ತನದ ಸುತ್ತಲೂ ಕೆಂಪು ಮತ್ತು ಎದೆಯಲ್ಲಿ ನೋವು ಹೀಗೆ ಸ್ತನ ಕ್ಯಾನ್ಸರ್ ಲಕ್ಷಣಗಳು ಕಾಣಿಸಿಕೊಂಡ ತಕ್ಷಣ ವೈದ್ಯರನ್ನು ಸಂಪರ್ಕಿಸಿ. ಮ್ಯಾಮೊಗ್ರಫಿ ಎನ್ನುವುದು ಸ್ತನ ಕ್ಯಾನ್ಸರ್ ಅನ್ನು ಪತ್ತೆಹಚ್ಚುವ ಸ್ಕ್ರೀನಿಂಗ್ ಪರೀಕ್ಷೆಯಾಗಿದೆ.

ಮಾರ್ಬರ್ಗ್ ವೈರಸ್:

ಮಾರ್ಬರ್ಗ್ ವೈರಸ್ (ETV Bharat)

ಮಾರ್ಬರ್ಗ್ ವೈರಸ್ (MARV) ಅಪರೂಪದ ಮತ್ತು ಮಾರಣಾಂತಿಕ ವೈರಲ್ ಹೆಮರಾಜಿಕ್ ಜ್ವರ ಇದು ಮುಖ್ಯವಾಗಿ ಸೋಂಕಿತ ದ್ರವಗಳಾದ ರಕ್ತ, ಲಾಲಾರಸ, ಬೆವರು, ಕಲುಷಿತ ವಸ್ತುಗಳು ಸಂಪರ್ಕ, ಮತ್ತು ಏರೋಸೋಲೈಸ್ಡ್ ಕಣಗಳ ಇನ್ಹಲೇಷನ್ ಮೂಲಕ ಹರಡುತ್ತದೆ. ಹಠಾತ್ ಜ್ವರ, ತೀವ್ರ ತಲೆನೋವು, ಸ್ನಾಯು ನೋವು, ಆಯಾಸ, ಅತಿಸಾರ, ಹೊಟ್ಟೆ ನೋವು ಮತ್ತು ರಕ್ತಸ್ರಾವದ ಲಕ್ಷಣಗಳು ಮಾರ್ವ್‌ನ ತಡೆಗಟ್ಟುವ ಕ್ರಮಗಳಲ್ಲಿ ವೈಯಕ್ತಿಕ ರಕ್ಷಣಾ ಸಾಧನಗಳು (ಪಿಪಿಇ), ಸಂಪರ್ಕತಡೆ, ಸಂಪರ್ಕ ಪತ್ತೆಹಚ್ಚುವಿಕೆ, ವ್ಯಾಕ್ಸಿನೇಷನ್ ಮತ್ತು ಉತ್ತಮ ಸೋಂಕು ನಿಯಂತ್ರಣಕ್ಕೆ ಕ್ರಮಗಳಾಗಿವೆ. ಇದರ ಚಿಕಿತ್ಸೆಯು ಮುಖ್ಯವಾಗಿ ದ್ರವ ಚಿಕಿತ್ಸೆ, ಆಮ್ಲಜನಕ ಚಿಕಿತ್ಸೆ ಹಾಗೂ ಉರಿಯೂತದ, ಅತಿಸಾರ-ವಿರೋಧಿ ಔಷಧಿಗಳಂತಹ ರೋಗಲಕ್ಷಣದ ಚಿಕಿತ್ಸೆಯನ್ನು ಒಳಗೊಂಡಿರುವ ಆರೈಕೆಯನ್ನು ಮಾಡಲಾಗುತ್ತದೆ.

ಚಂಡೀಪುರ ವೈರಸ್:

ಚಂಡೀಪುರ ವೈರಸ್ (ETV Bharat)

ಮೊದಲ CHPV (ಚಂಡೀಪುರ ವೈರಸ್) ಅನ್ನು 1965 ರಲ್ಲಿ ಭಾರತದ ಮಹಾರಾಷ್ಟ್ರದ ಚಂಡೀಪುರ ಗ್ರಾಮದಲ್ಲಿ ಗುರುತಿಸಲಾಯಿತು. ಅಂದಿನಿಂದ ಭಾರತದ ಇತರ ಭಾಗಗಳಲ್ಲಿ ಮತ್ತು ಇತರ ದೇಶಗಳಲ್ಲಿ ರೋಗದ ಏಕಾಏಕಿ ವರದಿಯಾಗಿತ್ತು. ಚಂಡೀಪುರ ವೈರಸ್ (CHPV) ಒಂದು ಝೂನೋಟಿಕ್ ವೈರಸ್, ಅಂದರೆ ಇದು ಪ್ರಾಣಿಗಳು ಮತ್ತು ಮನುಷ್ಯರ ನಡುವೆ ಹರಡಬಹುದು. ಈ ರೋಗವು ನೊಣಗಳು, ಸೊಳ್ಳೆಗಳು, ಉಣ್ಣೆ ಮತ್ತು ಇತರ ಕೀಟಗಳ ಕಡಿತದಿಂದ ಹರಡುತ್ತದೆ. ಬಾವಲಿಗಳಂತಹ ಸೋಂಕಿತ ಪ್ರಾಣಿಗಳ ಸಂಪರ್ಕದ ಮೂಲಕವೂ ಇದು ಹರಡಬಹುದು. CHPV ಸೋಂಕಿನ ಲಕ್ಷಣಗಳೆಂದರೆ ಜ್ವರ, ತಲೆನೋವು, ದೇಹದ ನೋವು, ವಾಕರಿಕೆ ಮತ್ತು ವಾಂತಿ, ಹೊಟ್ಟೆ ನೋವು, ಅತಿಸಾರ, ಎನ್ಸೆಫಾಲಿಟಿಸ್, ತೀವ್ರ ಹೆಮರಾಜಿಕ್ ಜ್ವರಕ್ಕೆ ಕಾರಣವಾಗಬಹುದು. CHPV ತಡೆಗಟ್ಟುವಿಕೆ ಮತ್ತು ನಿಯಂತ್ರಣ ಕ್ರಮಗಳೆಂದ್ರೆ, ಕೀಟಗಳ ಕಡಿತದಿಂದ ತಪ್ಪಿಸುವುದು, ಕೀಟನಾಶಕಗಳನ್ನು ಬಳಸುವುದು, ಉದ್ದನೆಯ ತೋಳಿನ ಬಟ್ಟೆಗಳನ್ನು ಧರಿಸುವುದು, ಸೋಂಕಿತ ಪ್ರಾಣಿಗಳೊಂದಿಗೆ ಸಂಪರ್ಕವನ್ನು ಕಡಿಮೆ ಮಾಡುವುದು, ಅಗತ್ಯ ಸುರಕ್ಷತಾ ಕ್ರಮಗಳನ್ನು ಅನುಷ್ಠಾನಗೊಳಿಸುವುದು ಆಗಿದೆ.

ಇವುಗಳನ್ನೂ ಓದಿ:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.