ETV Bharat / state

ಸಿಎಂ, ಡಿಸಿಎಂಗೆ ದಾವಣಗೆರೆ ಜಿಲ್ಲಾ ಉಸ್ತುವಾರಿ ಬದಲಾವಣೆ ಮಾಡಬೇಕೆಂದು ಪತ್ರ ಬರೆದಿದ್ದು ಸತ್ಯ : ಶಾಸಕ ಶಿವಗಂಗಾ - MLA BASAVARAJ SHIVAGANGA

ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಅವರಿಗೆ ನಾನು‌ ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್​.ಎಸ್. ಮಲ್ಲಿಕಾರ್ಜುನ್ ಬದಲಾವಣೆ ಮಾಡಬೇಕೆಂದು ಪತ್ರ ಬರೆದಿದ್ದು ಸತ್ಯ ಎಂದು ಶಾಸಕ ಬಸವರಾಜ ಶಿವಗಂಗಾ ಹೇಳಿದ್ದಾರೆ.

MLA BASAVARAJ SHIVAGANGA
ಶಾಸಕ ಬಸವರಾಜ ಶಿವಗಂಗಾ (ETV Bharat)
author img

By ETV Bharat Karnataka Team

Published : Dec 19, 2024, 2:45 PM IST

ಬೆಳಗಾವಿ: ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್​.ಎಸ್.ಮಲ್ಲಿಕಾರ್ಜುನ್ ಬದಲಾವಣೆ ಮಾಡಬೇಕೆಂದು ಆಗ್ರಹಿಸಿ ನಾನೇ ಬರೆದಿದ್ದೇನೆ ಎಂದು ಚೆನ್ನಗಿರಿ ಕ್ಷೇತ್ರದ ಕಾಂಗ್ರೆಸ್​​ ಶಾಸಕ ಬಸವರಾಜ ಶಿವಗಂಗಾ ಸ್ಪಷ್ಟನೆ ನೀಡಿದ್ಧಾರೆ.

ಬೆಳಗಾವಿಯಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, "ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಅವರಿಗೆ ನಾನು‌ ಪತ್ರ ಬರೆದಿದ್ದು ಸತ್ಯ. ಅದನ್ನು ನಾನೇ ಬರೆದಿದ್ದೇನೆ. ಅವರು ಬಿಜೆಪಿಯ ಜೊತೆಗೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ. ಆದರೆ ನಮಗೆ ಹೊಂದಾಣಿಕೆ ರಾಜಕಾರಣ ಬರುವುದಿಲ್ಲ" ಎಂದು ಕಿಡಿಕಾರಿದರು.

ಕಾಂಗ್ರೆಸ್​​ ಶಾಸಕ ಬಸವರಾಜ ಶಿವಗಂಗಾ (ETV Bharat)

"ಅವರಿಗೆ ಮನವರಿಕೆ ಮಾಡಿ ಹೇಳಿದ್ದೇನೆ. ಉದಾಹರಣೆಗೆ ಚೆನ್ನಗಿರಿಯಲ್ಲಿ ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಒಂದು ಕ್ಯಾಂಡಿಡೇಟ್ ಹಾಕಿದ್ದೆವು. ಆದರೆ ನಮ್ಮ ಪಕ್ಷದ ಅಭ್ಯರ್ಥಿಯ ವಿರುದ್ಧವಾಗಿ ಅವರು ಬೇರೆ ಕ್ಯಾಂಡಿಡೇಟ್​ ನಿಲ್ಲಿಸಿ ಗೆಲ್ಲಿಸಿದರು. ಡಿಸಿಸಿ‌ ಬ್ಯಾಂಕ್ ಚುನಾವಣೆಯಲ್ಲಿ ‌ಗೆದ್ದ ಅವರ ಅಭ್ಯರ್ಥಿಯನ್ನು ಅಪೆಕ್ಸ್ ಬ್ಯಾಂಕ್​ನಲ್ಲಿ ನಿರ್ದೇಶಕರನ್ನಾಗಿ ಮಾಡಲಾಗಿದೆ. ಅಪೆಕ್ಸ್ ಬ್ಯಾಂಕ್​ನಲ್ಲಿ ನಿರ್ದೇಶಕರಾಗಲು ಯಾರು ಗಂಡಸರಿಲ್ಲವಾ?. ಆತನನ್ನೇ ಮಾಡಬೇಕಾ?" ಎಂದು ಆಕ್ರೋಶ ವ್ಯಕ್ತಪಡಿಸಿದರು.

"ಬೇಕಾದರೆ ಇವತ್ತೇ ರಾಜಕೀಯ ಹೋಗಲಿ, ಇಂಥ ರಾಜಕೀಯ ನನಗೆ ಬೇಡ. ಈ ವಿಷಯವಾಗಿ ಸಚಿವರ ಜೊತೆಗೆ ಮಾತನಾಡಲಾಗಿದೆ. ಶಾಂತನಗೌಡರ ಮಗ ಡಿಸಿಸಿ ಬ್ಯಾಂಕ್ ನಿರ್ದೇಶಕರಿದ್ದಾರೆ. ಆತನನ್ನು ಅಫೆಕ್ಸ್ ಬ್ಯಾಂಕ್ ನಿರ್ದೇಶಕನನ್ನಾಗಿ ಮಾಡಬಹುದಿತ್ತು. ಇವರಿಗೆ ತಮ್ಮ ಮನೆಯ ಬೇಳೆಕಾಳು ಮಾತ್ರ ಬೇಯಬೇಕು. ಯಾವ ಪಕ್ಷವೂ ಬೇಕಿಲ್ಲ ಯಾವ ಶಾಸಕರ ಅವಶ್ಯಕತೆ ಇಲ್ಲ" ಎಂದು ವಾಗ್ದಾಳಿ ನಡೆಸಿದರು.

"ಜಿಲ್ಲಾ ಮಟ್ಟದ ಅಧಿಕಾರಿಗಳು ಜಿಲ್ಲಾ ಉಸ್ತುವಾರಿ ಸಚಿವರ ಲೆಟರ್ ಪಡೆದು ಅದರ ಆಧಾರದ ಮೇಲೆ ಪೋಸ್ಟಿಂಗ್ ಪಡೆಯುತ್ತಾರೆ. ಇನ್ನೂ ಯಾವುದೇ ಅಧಿಕಾರಿಗಳನ್ನು‌ ತಂದರೂ ಶಾಸಕರ ಶಿಫಾರಸ್ಸನ್ನೂ ಪಡೆಯಬೇಕು. ಇದನ್ನು ಸಿಎಂ ಪರಿಗಣಿಸಬೇಕೆಂದು ನಿನ್ನೆ ಪತ್ರ ಬರೆದಿದ್ದೇನೆ. ಇಲ್ಲಿಯವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಮಲ್ಲಿಕಾರ್ಜುನ ತಮ್ಮ ವಿರುದ್ದವೇ ಚುನಾವಣೆ ಮಾಡಿದವರ ಜೊತೆಗೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ. ಈ ರೀತಿ ಬಕೆಟ್ ಹಿಡಿಕೊಂಡು ನಾನು‌ ಹೋಗುವುದಿಲ್ಲ" ಎಂದು ಶಿವಗಂಗಾ ಗುಡುಗಿದರು.

"ನಾನು ರಾಜಕೀಯ ಬಿಟ್ಟರೂ ಪರವಾಗಿಲ್ಲ. ಆದರೆ ಎಸ್​.ಎಸ್​.ಮಲ್ಲಿಕಾರ್ಜುನ ಅವರಿಂದ ಪಕ್ಷಕ್ಕೆ ಅನುಕೂಲ ಆಗಲ್ಲ. ಅದಕ್ಕಾಗಿ ಜಿಲ್ಲಾ‌ ಉಸ್ತುವಾರಿ ಬದಲಾವಣೆ ಮಾಡಿ ಮುಂಬರುವ ಜಿಲ್ಲಾಪಂ‌ಚಾಯತ್ ತಾಲೂಕು ಪಂಚಾಯತ್ ಚುನಾವಣೆಗಳಲ್ಲಿ ಸಮಸ್ಯೆಯಾಗುತ್ತದೆ. ನಮ್ಮ‌‌ ಜಿಲ್ಲಾ ಉಸ್ತುವಾರಿ ಸಚಿವರದ್ದು ಬಿಜೆಪಿಯೊಂದಿಗೆ ಹೊಂದಾಣಿಕೆ ರಾಜಕೀಯ ನಡೆಯುತ್ತಿದೆ. ಆದರೆ ಸಿಎಂ‌ ನಮ್ಮ ಪರವಾಗಿದ್ದಾರೆಂದು ಪತ್ರ ಬರೆದಿದ್ದೇವೆ" ಎಂದು ಶಾಸಕ ಶಿವಗಂಗಾ ಹೇಳಿದರು.

ಇದನ್ನೂ ಓದಿ: ಹೆಬ್ಬಾಳ್ಕರ್ ಬಗ್ಗೆ ಸಿಟಿ ರವಿ ಆಕ್ಷೇಪಾರ್ಹ ಪದ ಬಳಕೆ ಆರೋಪ: ಪರಿಷತ್​ನಲ್ಲಿ‌ ಗದ್ದಲ, ಸಭಾಪತಿಗೆ ದೂರು ಕೊಡಲು ಮುಂದಾದ ಕೈ ಸದಸ್ಯರು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.