ಹೈದರಾಬಾದ್: ಪ್ರತಿ ನೂರರಲ್ಲಿ 23 ಮಂದಿ ಪುರುಷರು ಬಹು ಕಾಯಿಲೆ ಹೊಂದಿದ್ದರೆ, ಶೇ 27ರಷ್ಟು ಮಹಿಳೆಯರು ಎರಡೆರಡು ರೋಗವನ್ನು ಹೊಂದಿರುತ್ತಾರೆ ಎಂದು ಸಂಶೋಧನೆಯೊಂದು ಬಹಿರಂಗಪಡಿಸಿದೆ. ಗ್ರಾಮೀಣ ಪ್ರದೇಶದಲ್ಲಿ 100 ಜನರಲ್ಲಿ 21 ಮಂದಿ ಬಹು ದೀರ್ಘ ಸಮಸ್ಯೆ ಹೊಂದಿದ್ದರೆ, ನಗರ ಪ್ರದೇಶದಲ್ಲಿ ಈ ಸಂಖ್ಯೆ 35 ಆಗಿದೆ. ಈ ರೀತಿ ಮಧ್ಯವಯಸ್ಸಿನಲ್ಲಿ ಕಾಡುವ ಆರೋಗ್ಯ ಸಮಸ್ಯೆಗೆ ಮೂಲ ಬಾಲ್ಯದಲ್ಲಿನ ನಿಮ್ಮ ಅನಾರೋಗ್ಯ ಎಂಬುದನ್ನು ಅಧ್ಯಯನವು ಬಹಿರಂಗಪಡಿಸಿದೆ.
ಮಕ್ಕಳಿದ್ದಾಗ ಪದೇ ಪದೆ ಹುಷಾರು ತಪ್ಪುತ್ತಿದ್ದು, ಆರೋಗ್ಯ ಸಮಸ್ಯೆಯಿಂದ ತಿಂಗಳುಗಟ್ಟಲೆ ಶಾಲೆಗೆ ಹೋಗಲು ಸಾಧ್ಯವಾಗದೇ ಇರುವುದು ತಮ್ಮ ಮಧ್ಯ ವಯಸ್ಸಿನಲ್ಲಿ ಬಹು ರೋಗದ ದೀರ್ಘ ಸಮಸ್ಯೆಗೆ ಗುರಿಯಾಗುವ ಸಾಧ್ಯತೆ ಇರುತ್ತದೆ. ಬಾಲ್ಯದಲ್ಲಿ ರೋಗಗಳಿಂದ ಬಳಲಿದ ಶೇ 25ರಷ್ಟು ಮಂದಿ ಮಧ್ಯವಯಸ್ಸಿನಲ್ಲಿ ದೀರ್ಘ ಅನಾರೋಗ್ಯ ಸಮಸ್ಯೆಗೆ ಗುರಿಯಾಗುತ್ತಾರೆ ಎಂಬುದು ಅಧ್ಯಯನವು ತೋರಿಸಿದೆ. ಅಧಿಕ ರಕ್ತದೊತ್ತಡ, ಮಧುಮೇಹ, ಹೃದಯ ಸಮಸ್ಯೆ, ಕ್ಯಾನ್ಸರ್, ಪಾರ್ಶ್ವವಾಯು, ಮಾನಸಿಕ ಅಸ್ವಸ್ಥತೆ, ದೀರ್ಘ ಉಸಿರಾಟದ ಸಮಸ್ಯೆ, ಕ್ಷಯ, ಮೂಳೆಗಳ ದುರ್ಬಲತೆ, ಅಧಿಕ ಕೊಲೆಸ್ಟ್ರಾಲ್, ದೀರ್ಘ ಕಿಡ್ನಿ ವೈಫಲ್ಯ ಮತ್ತು ದೀರ್ಘ ಬಾಯಿ ಸಮಸ್ಯೆಗಳು ಸುದೀರ್ಘ ಅವಧಿಯ ರೋಗದ ಸಮಸ್ಯೆಗಳಾಗಿವೆ.
ಪುರುಷರಿಗಿಂತ ಮಹಿಳೆಯರು ಈ ರೋಗದ ಸಂತ್ರಸ್ತರಾಗುವುದು ಹೆಚ್ಚಿದೆ. ಈ ವಿಚಾರವನ್ನು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ನಡೆಸಿದ ಬಾಲ್ಯಾವಸ್ಥೆಯ ಅನಾರೋಗ್ಯದ ವಿಚಾರವಾಗಿ ಕೈಗೊಂಡ ಸಂಶೋಧನೆಯಲ್ಲಿ ಬಯಲಾಗಿದೆ. ಈ ಅಧ್ಯಯನವನ್ನು ಇತ್ತೀಚೆಗೆ ಬ್ರಿಟಿಷ್ ಮೆಡಿಕಲ್ ಜರ್ನಲ್ನಲ್ಲಿ ಪ್ರಕಟಿಸಲಾಗಿದೆ.
ಹೇಗಿತ್ತು ಗೊತ್ತಾ ಅಧ್ಯಯನ?:ಈ ಅಧ್ಯಯನವನ್ನು ದೇಶದೆಲ್ಲೆಡೆ ನಡೆಸಲಾಗಿದೆ. ಸಂಶೋಧಕರು ಅಧ್ಯಯನಕ್ಕಾಗಿ 50 ವರ್ಷ ದಾಟಿದ 541,481 ಮಂದಿಯನ್ನು ಆಯ್ಕೆ ಮಾಡಿಕೊಂಡಿದ್ದರು. ಇದರಲ್ಲಿ ಶೇ 28.53 ಅಂದರೆ 19,835 ಮಂದಿ 50 -59 ವರ್ಷದ ಮಧ್ಯವಯಸ್ಸಿನ ಗುಂಪಿನವರಾಗಿದ್ದರು. 60-69 ವರ್ಷದ ಗುಂಪಿನವರು 18,807 ಅಂದರೆ ಶೇ36.53 ರಷ್ಟು ಇದ್ದರು. ಇನ್ನು 70 ವರ್ಷ ಮೇಲ್ಪಟ್ಟವರು 24.94 ರಷ್ಟು ಅಂದರೆ 12,839 ಮಂದಿ ಆಗಿದ್ದಾರೆ. ಇನ್ನು ಶೇ 46.51 ಅಂದರೆ 23,942 ಮಂದಿ ಪುರುಷರಾದರೆ, ಶೇ 53.49ರಷ್ಟು ಅಂದರೆ 27,539 ಮಂದಿ ಮಹಿಳೆಯರಾಗಿದ್ದಾರೆ.
ಅಧ್ಯಯನದಲ್ಲಿ ಭಾಗಿಯಾದವರಿಗೆ ಬಾಲ್ಯದ ನೀವು ಅನಾರೋಗ್ಯಕ್ಕೆ ಒಳಗಾಗಿದ್ದೀರಾ ಎಂದು ಕೇಳಲಾಗಿತ್ತು. ಅನಾರೋಗ್ಯದಿಂದಾಗಿ ಎಷ್ಟು ದಿನ ಶಾಲೆಯನ್ನು ಬಿಟ್ಟಿದ್ದಿರಿ ಎಂದು ಪ್ರಶ್ನಿಸಲಾಗಿತ್ತು. ಜೊತೆಗೆ ಅವರ ಪ್ರಸ್ತುತ ಮತ್ತು ಬಾಲ್ಯಾವಸ್ಥೆಯ ಆರ್ಥಿಕ ಸ್ಥಿತಿಗಳ ಕುರಿತೂ ಪ್ರಶ್ನೆಗಳನ್ನು ಎತ್ತಲಾಗಿತ್ತು. ಆ ಬಳಿಕ ಎಲ್ಲ ಪ್ರಶ್ನೆಗಳಿಗೆ ಬಂದ ಉತ್ತರಗಳ ನಡುವಣ ಸಾಮ್ಯತೆ ಮತ್ತು ಭಿನ್ನತೆಗಳನ್ನು ವಿಶ್ಲೇಷಣೆಗಳಿಗೆ ಒಳಪಡಿಸಲಾಗಿತ್ತು.
ಆಟವನ್ನ ಕಡಿಮೆ ಮಾಡಿದರೂ ಅಪಾಯ:ಬಾಲ್ಯಾವಸ್ಥೆಯ ಜೀವನಶೈಲಿ ವಯಸ್ಕರರಾದ ಬಳಿಕ ಕಾಡುವ ರೋಗಕ್ಕೆ ಕಾರಣ ಎಂಬ ಅಂಶ ಅಧ್ಯಯನದಲ್ಲಿ ಸ್ಪಷ್ಟವಾಗಿದೆ. ಶೇ 33ರಷ್ಟು ಮಂದಿ ಬಾಲ್ಯದಲ್ಲಿ ಆರ್ಥಿಕವಾಗಿ ಉತ್ತಮ ಆಗಿರುವವರು, 50 ವರ್ಷದವರಾದ ಬಳಿಕ ಜೀವನಶೈಲಿಗೆ ಸಂಬಂಧಿಸಿದ ರೋಗಗಳಿಗೆ ತುತ್ತಾಗಿರುವುದು ಅಧ್ಯಯನದ ವೇಳೆ ಕಂಡು ಬಂದಿದೆ. ಅಧ್ಯಯನದ ವೇಳೆ ಕಂಡುಕೊಂಡ ಅಂಶಗಳನ್ನು ವಿಶ್ಲೇಷಿಸಿದಾಗ, ಬಾಲ್ಯಾವಸ್ಥೆಯಲ್ಲಿದ್ದಾಗ ನಡೆಯುವುದು, ಓಟ, ಮತ್ತು ಇತರ ದೈಹಿಕ ಚಟುವಟಿಕೆಗಳಿಂದ ದೂರು ಉಳಿದಿದ್ದರೆ, ಅವರು ದೊಡ್ಡವರಾದ ಬಳಿಕ ದೀರ್ಘ ಕಾಯಿಲೆಗೆ ತುತ್ತಾಗುತ್ತಿರುವುದು ಗೊತ್ತಾಗಿದೆ. ಬಡತನದಲ್ಲಿದ್ದ ಶೇ 21ರಷ್ಟು ಮಕ್ಕಳು ತಮ್ಮ 50ನೇ ವಯಸ್ಸಿನ ಬಳಿಕ ಬಹುರೋಗದ ಸೋಂಕಿಗೆ ತುತ್ತಾಗಿರುವುದು ಅಧ್ಯಯನದ ದತ್ತಾಂಶಗಳಿಂದ ತಿಳಿದು ಬಂದಿದೆ. ಉತ್ತಮ ಆರ್ಥಿಕ ಪರಿಸ್ಥಿತಿ ಹೊಂದಿದವರು ಕೂಡ ದೀರ್ಘ ಕಾಯಿಲೆ ಸಮಸ್ಯೆಗೆ ಒಳಪಟ್ಟಿರುವುದು ಗೊತ್ತಾಗಿದೆ.
ಅಧ್ಯಯನದ ಫಲಿತಾಂಶಗಳ ಪ್ರಮುಖ ಅಂಶಗಳು ಹೀಗಿವೆ;
50 ವರ್ಷ ಮೇಲ್ಪಟ್ಟ ವಯಸ್ಸಿನವರಲ್ಲಿ ಈ ಸಮಸ್ಯೆಗಳು ಕಂಡು ಬಂದಿವೆ.
- ಶೇ 45ರಷ್ಟು ಮಂದಿ ದೀರ್ಘ ಸಮಸ್ಯೆ ಹೊಂದಿದ್ದಾರೆ.
- ಶೇ 30ರಷ್ಟು ಮಂದಿ ಒಂದೇ ದೀರ್ಘ ಸಮಸ್ಯೆ ಹೊಂದಿದ್ದರೆ, ಶೇ 25ರಷ್ಟು ಮಂದಿ ಬಹು ರೋಗ ಸಮಸ್ಯೆ ಹೊಂದಿದ್ದಾರೆ.
- ಶೇ 53ರಷ್ಟು ಮಂದಿ ಬಾಲ್ಯದಲ್ಲಿ ಅನಾರೋಗ್ಯದಿಂದ ತಿಂಗಳುಗಳ ಕಾಲ ಶಾಲೆಗೆ ರಜೆ ಹಾಕಿದ್ದಾರೆ.
- ಇದರಲ್ಲಿ 50 ವರ್ಷದ ಬಳಿಕ ಶೇ 35ರಷ್ಟು ಮಂದಿ ದೀರ್ಘ ಬಾಲ್ಯ ಅನಾರೋಗ್ಯ ಹೊಂದಿದ್ದಾರೆ.
- ಬಾಲ್ಯದಲ್ಲಿ ಉತ್ತಮ ಆರೋಗ್ಯ ಹೊಂದಿರುವ ಶೇ 24 ಮಂದಿ ಕೂಡ ತಮ್ಮ 50ನೇ ವಯಸ್ಸಿನಲ್ಲಿ ದೀರ್ಘ ಆರೋಗ್ಯ ಸಮಸ್ಯೆ ಹೊಂದಿದ್ದಾರೆ.
- ಶೇ 24ರಷ್ಟು ವಿವಾಹಿತ ಜನರು ಮತ್ತು ಶೇ 27ರಷ್ಟು ಅವಿವಾಹಿತ ಮಂದಿ ಬಹು ರೋಗ ಸಮಸ್ಯೆ ಹೊಂದಿರುವುದು ಅಧ್ಯಯನದಿಂದ ಬಯಲು.
- ಯಾವುದೇ ಕೆಲಸ ಮಾಡದೇ ಮನೆಯಲ್ಲಿ ಇರುವ ಮಂದಿ ಹೆಚ್ಚು ರೋಗಕ್ಕೆ ಒಳಗಾಗುತ್ತಾರೆ. ಪ್ರಸ್ತುತ 17ರಷ್ಟು ಮಂದಿ ವೃತ್ತಿನಿರತರು, ಶೇ 31.8ರಷ್ಟು ಕೆಲಸ ಮಾಡದೇ ಇರುವ ಮಂದಿ ಅನಾರೋಗ್ಯ ಹೊಂದಿದ್ದಾರೆ.
- ತೀವ್ರ ಬಡತನ ಹೊಂದಿರುವ ಶೇ 18ರಷ್ಟು ಮಂದಿ, ಬಡತನದಲ್ಲಿರುವ ಶೇ 21ರಷ್ಟು, ಮಧ್ಯಮ ವರ್ಗದ ಶೇ 25ರಷ್ಟು, ಶ್ರೀಮಂತ ಕುಟುಂಬದ ಶೇ 28, ಅತಿ ಸಿರಿವಂತ ಶೇ 36ರಷ್ಟು ಮಂದಿ ಎರಡು ಮತ್ತು ಅಧಿಕ ರೋಗದ ಸಮಸ್ಯೆ ಹೊಂದಿದ್ದಾರೆ.
ಬಾಲ್ಯದಲ್ಲಿನ ಆರೋಗ್ಯ ನಿರ್ವಹಣೆ ಅತಿ ಮುಖ್ಯ:ಬಾಲ್ಯದಲ್ಲಿ ಆರೋಗ್ಯವು ಅತ್ಯಗತ್ಯ ಕಾಳಜಿ ವಿಚಾರವಾಗಿದೆ ಎಂಬುದನ್ನು ಈ ಸಂಶೋಧನೆ ಸ್ಪಷ್ಟಪಡಿಸಿದೆ. ವಿಶ್ವ ಆರೋಗ್ಯ ಸಂಸ್ಥೆ ನಿರ್ದೇಶಿಸಿದಂತೆ 18 ವರ್ಷದೊಳಗಿನ ಮಕ್ಕಳು ವಾರದ ಐದು ದಿನದಲ್ಲಿ ಒಟ್ಟಾರೆ 150 ನಿಮಿಷದ ವ್ಯಾಯಾಮ ನಡೆಸುವುದು ಅಗತ್ಯವಾಗಿದೆ. ಆದರೆ, ಇಂದು ದೇಶದ ಶೇ 80 ರಷ್ಟು ಮಕ್ಕಳು ಇದನ್ನು ನಡೆಸುವುದಿಲ್ಲ. ಬಾಲ್ಯದಲ್ಲಿನ ಕಡಿಮೆ ದೈಹಿಕ ಚಟುವಟಿಕೆ ಹೊಂದಿರುವ ಮಕ್ಕಳು ಭವಿಷ್ಯದಲ್ಲಿ ದೀರ್ಘ ರೋಗದ ಸಮಸ್ಯೆ ಹೊಂದುವ ಸಾಧ್ಯತೆ ಹೆಚ್ಚಿದೆ. ಬಡತನದಲ್ಲಿರುವ ಮಕ್ಕಳು ನೈಸರ್ಗಿಕವಾಗಿ ಕನಿಷ್ಠ ಕೆಲಸ ಮಾಡುವ ಹಿನ್ನೆಲೆ ಅವರು ವಯಸ್ಕರಾದ ಬಳಿಕ ಈ ರೀತಿ ದೀರ್ಘ ಸಮಸ್ಯೆಗೆ ತುತ್ತಾಗುವುದು ಕಡಿಮೆ ಆಗಿದೆ ಎಂದು ನಿಜಾಮಾಬಾದ್ನ ಸರ್ಕಾರಿ ವೈದ್ಯಕೀಯ ಕಾಲೇಜಿನ ಕ್ರಿಟಿಕಲ್ ಕೇರ್ ವಿಭಾಗದ ಮುಖ್ಯಸ್ಥ ಡಾ ಕಿರಣ್ ಮಡಲಾ ತಿಳಿಸಿದ್ದಾರೆ.
ಹೆಚ್ಚಿನ ಆದಾಯ ಹೊಂದಿರುವ ಕುಟುಂಬಗಳಲ್ಲಿ ಮಕ್ಕಳು ಕಡಿಮೆ ವ್ಯಾಯಾಮ ಚಟುವಟಿಕೆಯಲ್ಲಿ ತೊಡಗುವುದರಿಂದ ಅವರು ನಂತರದ ಜೀವನದಲ್ಲಿ ದೀರ್ಘ ಸಮಸ್ಯೆಗೆ ತುತ್ತಾಗುವ ಸಾಧ್ಯತೆ ಹೆಚ್ಚಿದೆ. ಬಡತನದ ಅಪೌಷ್ಟಿಕತೆಯು ಕೂಡ ಕೆಲವು ಬಾರಿ ಅನಾರೋಗ್ಯಕ್ಕೆ ಕಾರಣವಾಗುತ್ತದೆ. ಆಹಾರ, ಲಸಿಕೆ ಮತ್ತು ಆರೋಗ್ಯ ಕಾಳಜಿ ಮುಖ್ಯವಾಗುತ್ತದೆ. ಅದು ಮಗು ಹುಟ್ಟಿದ 1000 ದಿನದ ಆರೋಗ್ಯವೂ ಮುಂದಿನ ಜೀವನದ ಮೇಲೆ ಪರಿಣಾಮವನ್ನು ಹೊಂದಿದೆ. ಜೊತೆಗೆ ಶುಚಿತ್ವವೂ ಕೂಡ ಬಾಲ್ಯವಸ್ಥೆಯಲ್ಲಿ ಪ್ರಮುಖ ಪರಿಣಾಮ ಬೀರುತ್ತದೆ.
ಇದನ್ನೂ ಓದಿ:ಸಂಬಂಧಗಳಲ್ಲೇ ಮದುವೆ ಆಗೋದರಿಂದ ಹುಟ್ಟುವ ಮಕ್ಕಳಲ್ಲೂ ಕಣ್ಣಿನ ಸಮಸ್ಯೆ: ಅಧ್ಯಯನದಲ್ಲಿ ಬಹಿರಂಗ