ಕರ್ನಾಟಕ

karnataka

ETV Bharat / health

ಕೊಲೆಸ್ಟ್ರಾಲ್​ ನಿಯಂತ್ರಿಸುವ ಔಷಧಿ ತಯಾರಿಸಿದ ಐಐಟಿ ಕಾನ್ಪುರ್​ ಸಂಶೋಧಕರು

IIT Kanpur: ಈ ಹಿಂದೆ ಕೊಲೆಸ್ಟ್ರಾಲ್​ ಕಡಿಮೆ ಮಾಡಲು ಬಳಕೆ ಮಾಡುತ್ತಿದ್ದ ಔಷಧಗಳು ಅಡ್ಡಪರಿಣಾಮವನ್ನು ಹೊಂದಿದ್ದವು. ಆದ್ರೆ ಐಐಟಿ ಕಾನ್ಪುರ್​ ಸಂಶೋಧಕರು ಅಡ್ಡಪರಿಣಾಮಗಳಿಲ್ಲದೆ ಕೊಲೆಸ್ಟ್ರಾಲ್​ ನಿಯಂತ್ರಿಸುವ ಔಷಧಿಯನ್ನು ಕಂಡು ಹಿಡಿದಿದ್ದಾರೆ.

IIT Kanpur researchers  developed a drug that reduce cholesterol without side effects
IIT Kanpur researchers developed a drug that reduce cholesterol without side effects

By ETV Bharat Karnataka Team

Published : Mar 14, 2024, 1:41 PM IST

ಕಾನ್ಪುರ್​​: ಐಐಟಿ ಕಾನ್ಪುರ್​​ನ ಜೈವಿಕ ವಿಜ್ಞಾನ ಮತ್ತು ಜೈವಿಕ ಇಂಜಿನಿಯರಿಂಗ್​​ ವಿಭಾಗದ ಸಂಶೋಧಕರು ಕೊಲೆಸ್ಟ್ರಾಲ್​​ ಅನ್ನು ಕಡಿಮೆ ಮಾಡುವ ಔಷಧವನ್ನು ಅಭಿವೃದ್ಧಿಪಡಿಸಿದ್ದಾರೆ. ನಿಯಸಿನ್​ ಎಂಬ ಈ ಔಷಧವನ್ನು ಈ ಚಿಕಿತ್ಸೆಗೆ ಬಳಕೆ ಮಾಡಲಾಗುತ್ತಿದೆ. ಇದಕ್ಕೆ ಕ್ರೈ-ಎಂ ಟೆಕ್ನಾಲಾಜಿ ಬಳಕೆ ಮಾಡಲಾಗಿದೆ. ನಿಯಾಸಿನ್​ ಎಂಬ ಕೊಲೆಸ್ಟ್ರಾಲ್​ ಕಡಿಮೆ ಮಾಡುವ ಔಷಧಗಳು ಅಣ್ವಿಕ ಮಟ್ಟದಲ್ಲಿ ಕಾರ್ಯ ನಿರ್ವಹಿಸುತ್ತದೆ ಎಂದು ಅರ್ಥೈಸಿಕೊಳ್ಳುವುದರ ಕುರಿತು ಹೊಸ ನೋಟ ನೀಡಿದೆ.

ಪ್ರೊ ಅರುಣ್​​ ಕೆ ಶುಕ್ಲಾ ನೇತೃತ್ವದಲ್ಲಿ ತಂಡವು ಈ ಸಂಶೋಧನೆ ನಡೆಸಿದ್ದು, ನಿಯಾಸಿನ್​​ನಿಂದ ಕಾರ್ಯಚಾಲಿತವಾಗುವ ಅಣ್ವಿಕ ಗ್ರಾಹಕವನ್ನು ಪ್ರಮುಖ ಗುರಿಯಾಗಿಸಿ ದೃಶ್ಯೀಕರಿಸಲಾಗಿದೆ. ಈ ನಿಯಾಸಿನ್​ ಅಣ್ವಿಕ ಮಟ್ಟದಲ್ಲಿ ಕೆಲಸ ಮಾಡುತ್ತದೆ ಎಂದಿದ್ದಾರೆ. ಈ ಅಧ್ಯಯನವನ್ನು ನೇಚರ್​ ಕಮ್ಯೂನಿಕೇಷನ್​ ಜರ್ನಲ್​ನಲ್ಲಿ ಪ್ರಕಟಿಸಲಾಗಿದೆ. ಈ ಅಣ್ವಿಕವನ್ನು ತಯಾರಿಸಿದ ಬಳಿಕ ಇಲಿಗಳ ಮೇಲೆ ಪ್ರಯೋಗ ನಡೆಸಲಾಗಿದ್ದು, ಬಳಿಕ ಮಾರುಕಟ್ಟೆಗೆ ತರಲಾಗಿದೆ.

ಯಾವುದೇ ಅಡ್ಡ ಪರಿಣಾಮ ಇಲ್ಲ:ನಿಯಾಸಿನ್ ಮತ್ತು ಇತರ ಸಂಬಂಧಿತ ಔಷಧಿಗಳಿಂದ ಸಕ್ರಿಯಗೊಳಿಸಲಾದ ಪ್ರಮುಖ ಗುರಿ ಅಣ್ವಿಕವಾಗಿ ದೃಶ್ಯೀಕರಿಸಲಾಗಿದೆ. ನಿಯಾಸಿನ್​ ಸಾಮಾನ್ಯವಾಗಿ ಕಡಿಮೆ ಮಟ್ಟದಲ್ಲಿ ಕೆಟ್ಟ ಕೊಲೆಸ್ಟ್ರಾಲ್​​ಗೆ ಬಳಕೆ ಮಾಡಲಾಗುತ್ತದೆ. ಟ್ರೈಗ್ಲೇಸಿರಿಯಡ್​​ಗಳು ಉತ್ತಮ ಕೊಲೆಸ್ಟ್ರಾಲ್​ ಅನ್ನು ಹೆಚ್ಚಿಸುತ್ತದೆ. ಬಹುತೇಕ ರೋಗಿಗಳಲ್ಲಿ ಕೊಲೆಸ್ಟ್ರಾಲ್​​ ಔಷಧಗಳು ಕೆರೆತ, ಚರ್ಚದ ದದ್ದಿನಂತಹ ಸಮಸ್ಯೆಗೆ ಕಾರಣವಾಗುತ್ತವೆ. ಇದರಿಂದಾಗುವ ಅಡ್ಡ ಪರಿಣಾಮವನ್ನು ತಡೆಯಲು ರೋಗಿಗಳು ಚಿಕಿತ್ಸೆಯನ್ನು ನಿಲ್ಲಿಸುವುದರಿಂದ ಕೊಲೆಸ್ಟ್ರಾಲ್​ ಮಟ್ಟ ಹೆಚ್ಚುತ್ತದೆ.

ಆದರೆ ಇದೀಗ ಆಣ್ವಿಕ ಮಟ್ಟದಲ್ಲಿ ನಿಯಾಸಿನ್‌ನೊಂದಿಗೆ ಗ್ರಾಹಕ ಅಣುವಿನ ಜಿಪಿಆರ್​​109ಎ ನ ಪರಸ್ಪರ ಕ್ರಿಯೆಯ ದೃಶ್ಯೀಕರಣವು ಹೊಸ ಔಷಧಿಗಳ ಸೃಷ್ಟಿಗೆ ಆಧಾರವಾಗಿದೆ. ಅನಪೇಕ್ಷಿತ ಪ್ರತಿಕ್ರಿಯೆಗಳನ್ನು ಕಡಿಮೆ ಮಾಡುವಾಗ ಔಷಧವು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಿದೆ. ಈ ಅಧ್ಯಯನದ ಫಲಿತಾಂಶಗಳು ಕೊಲೆಸ್ಟ್ರಾಲ್ ಮತ್ತು ಮಲ್ಟಿಪಲ್ ಸ್ಕ್ಲೆರೋಸಿಸ್‌ನಂತಹ ಇತರ ಪರಿಸ್ಥಿತಿಗಳಿಗೆ ಸಂಬಂಧಿಸಿದ ಔಷಧಿಗಳನ್ನು ಅಭಿವೃದ್ಧಿಪಡಿಸುವಲ್ಲಿ ಸಹಾಯ ಮಾಡುತ್ತದೆ.

ಐಐಟಿ ಕಾನ್ಪುರ್ ಪ್ರೊಫೆಸರ್​

ಐಐಟಿ ಕಾನ್ಫುರ್​​ ನಿರ್ದೇಶಕ ಪ್ರೊ. ಎಸ್​ ಗಣೇಶ್ ಮಾತನಾಡಿ, ​​ಔಷಧಗಳ ಗ್ರಾಹಕಗಳ ಪ್ರತಿಕ್ರಿಯೆಗಳನ್ನು ಅರ್ಥೈಸಿಕೊಳ್ಳುವುದರ ಮೇಲೆ ಇದು ಅವಲಂಬಿತವಾಗಿದೆ. ಇದು ಹೊಸ ಚಿಕಿತ್ಸೆಯ ಏಜೆಂಟ್​ ಅನ್ನು ವಿನ್ಯಾಸ ಮಾಡಲು ಹೊಸ ಅವಕಾಶವನ್ನು ನೀಡುತ್ತದೆ. ಈ ಸಾಧನೆಯು ವಿಶ್ವದ ಆರೋಗ್ಯ ಸವಾಲುಗಳನ್ನು ಆವಿಷ್ಕಾರ ಮತ್ತು ಸಂಶೋಧನೆಯ ಪ್ರಬುದ್ಧತೆಯಿಂದ ಪರಿಹರಿಸುವುದಕ್ಕೆ ಕೊಡುಗೆ ನೀಡಿದೆ ಎಂದರು.

ಇದನ್ನೂ ಓದಿ:ಎಲ್​ಡಿಎಲ್​ ಹೊಂದಿರುವವರು ಏಕಾಏಕಿ ಸ್ಟಾಟಿನ್ಸ್​​ಗಳನ್ನು ನಿಲ್ಲಿಸುವುದು ಅಪಾಯಕಾರಿ!

ABOUT THE AUTHOR

...view details