Hypochondriasis Disorder Symptoms:ಕೆಲವರಿಗೆ ಯಾವುದೇ ಕಾಯಿಲೆ ಇಲ್ಲದಿದ್ದರೂ ಕೂಡ ಅವರು ಯಾವುದೋ ಕಾಯಿಲೆಯಿಂದ ಬಳಲುತ್ತಿದ್ದೇವೆ ಎಂದು ಅಂದುಕೊಳ್ಳುತ್ತಾರೆ. ಅವರು ಆಸ್ಪತ್ರೆಗಳಿಗೆ ತೆರಳಿ ಹೋಗಿ ಎಲ್ಲ ರೀತಿಯ ಪರೀಕ್ಷೆಗಳನ್ನು ಮಾಡಿಸಿಕೊಳ್ಳುತ್ತಾರೆ. ವರದಿಗಳು ಸಾಮಾನ್ಯವಾಗಿದ್ದರೂ ವೈದ್ಯರು ಅವರ ಅನಾರೋಗ್ಯವನ್ನು ಪತ್ತೆಹಚ್ಚಲು ಸಾಧ್ಯವಿಲ್ಲ ಎಂದು ತಾವೇ ಭಾವಿಸುತ್ತಾರೆ. ಇದರಿಂದಾಗಿ ಅವರು ಪದೇ ಪದೇ ಆಸ್ಪತ್ರೆಗಳು ಹಾಗೂ ವೈದ್ಯರನ್ನು ಬದಲಾಯಿಸುತ್ತಾರೆ. ಈ ರೀತಿ ಏಕೆ ಆಗುತ್ತದೆ? ಇದಕ್ಕೆ ಪ್ರಮುಖ ಕಾರಣಗಳೇನು ಎಂಬುದನ್ನು ತಿಳಿದುಕೊಳ್ಳೋಣ.
ಸಂಶೋಧನೆ ಹೀಗೆ ತಿಳಿಸುತ್ತೆ:ನಮ್ಮಲ್ಲಿ ಹಿಂದಿನದಕ್ಕೆ ಹೋಲಿಸಿದರೆ ನಮ್ಮ ಸಮಾಜದಲ್ಲಿ ಆರೋಗ್ಯದ ಬಗ್ಗೆ ಜಾಗೃತಿ ತುಂಬಾ ಹೆಚ್ಚಾಗಿದೆ. ಟಿವಿ ಹಾಗೂ ನಿಯತಕಾಲಿಕೆಗಳಲ್ಲಿ ಆರೋಗ್ಯ ಲೇಖನಗಳನ್ನು ಓದುವುದು ಮಾತ್ರವಲ್ಲದೇ, ಅವುಗಳನ್ನು ಉಳಿಸುವವರೂ ಅನೇಕರು ಇದ್ದಾರೆ. ಈ ಹಿನ್ನೆಲೆಯಲ್ಲಿಯೇ ಅವರು ಓದುವ ಪ್ರತಿಯೊಂದು ಅನುಮಾನಾಸ್ಪದ ಗುಣಲಕ್ಷಣಗಳನ್ನು ತಮ್ಮ ಮೇಲೆ ಆಗುತ್ತವೆಯೇ ಎಂಬ ಬಗ್ಗೆ ಅವರಿಗೆ ಅನುಮಾನವಿರುತ್ತದೆ.
ಪರಿಣಾಮವಾಗಿ ಜನರು ಯಾವುದೇ ರೀತಿಯ ಕಾಯಿಲೆ ಇಲ್ಲದಿದ್ದರೂ ಸಹ ಯಾವುದೋ ರೀತಿಯ ಕಾಯಿಲೆ ಇರುವ ಕುರಿತು ಯೋಚಿಸುತ್ತಾರೆ. ಈ ರೀತಿಯ ಮಾನಸಿಕ ಸ್ಥಿತಿಯನ್ನು ಹೈಪೋಕಾಂಡ್ರಿಯಾ ಎಂದು ತಿಳಿಸುಲಾಗುತ್ತದೆ ಎನ್ನುತ್ತಾರೆ ತಜ್ಞರು. 2018ರಲ್ಲಿ ಜರ್ನಲ್ ಆಫ್ ಕ್ಲಿನಿಕಲ್ ಸೈಕಾಲಜಿಯಲ್ಲಿ ಪ್ರಕಟವಾದ (Journal of Clinical Psychology) 'ಹೈಪೋಕಾಂಡ್ರಿಯಾಸಿಸ್: ಎ ರಿವ್ಯೂ ಆಫ್ ದಿ ಲಿಟರೇಚರ್' (Hypochondriasis: A Review of the Literature) ಎಂಬ ಅಧ್ಯಯನ ತಿಳಿಸುತ್ತದೆ (ಸಂಶೋಧನಾ ವರದಿಗಾಗಿ ಇಲ್ಲಿ ಕ್ಲಿಕ್ ಮಾಡಿ).
ಖಿನ್ನತೆಗೆ ಒಳಗಾಗುತ್ತಾರೆ:ಕುಟುಂಬದಲ್ಲಿ ಯಾರಾದರೂ ಕ್ಯಾನ್ಸರ್‌ನಂತಹ ಅಪಾಯಕಾರಿ ಕಾಯಿಲೆಯಿಂದ ಸತ್ತಾಗ, ತಮಗೂ ಅದೇ ಕಾಯಿಲೆಗಳು ಬರುತ್ತವೆ ಎಂದು ಅವರು ಭಯಪಡುತ್ತಾರೆ. ಅವರು ತಮ್ಮ ದೇಹದಲ್ಲಿ ಕಾಣುವ ಪ್ರತಿಯೊಂದು ಸಣ್ಣ ದೋಷದ ಬಗ್ಗೆಯೂ ಹೆಚ್ಚು ಚಿಂತಿಸುತ್ತಾರೆ. ಅವರು ತಜ್ಞ ವೈದ್ಯರನ್ನು ಭೇಟಿ ಮಾಡಲು ಹೋಗುತ್ತಾರೆ. ಈ ಅನುಮಾನಗಳನ್ನು ನಿವಾರಿಸಲು ದುಬಾರಿ ಪರೀಕ್ಷೆಗಳಿಗೆ ಕೂಡ ಒಳಗಾಗುತ್ತಾರೆ. ಅವರು ಖಿನ್ನತೆಗೆ ಒಳಗಾಗುತ್ತಾರೆ ಹಾಗೂ ತಮ್ಮನ್ನು ಮಾತ್ರವಲ್ಲದೇ ತಮ್ಮ ಕುಟುಂಬ ಸದಸ್ಯರಿಗೂ ನೋವುಂಟು ಮಾಡುತ್ತಾರೆ.