ಕರ್ನಾಟಕ

karnataka

ETV Bharat / health

ಅತ್ಯಂತ ಸರಳ ಮತ್ತು ಸಖತ್​ ಟೇಸ್ಟಿಯಾಗಿ ಮಟರ್ ಪನೀರ್ ಗ್ರೇವಿ ಮಾಡೋದು ಹೇಗೆ? - How to Make Matar Paneer Gravy

Matar Paneer Gravy Recipe in Kannada: ಪನೀರ್ ಕರಿಗಳನ್ನು ಅನೇಕ ಜನರು ಇಷ್ಟಪಡುತ್ತಾರೆ. ಅದಕ್ಕಾಗಿಯೇ ನಾವು ಹಸಿರು ಬಟಾಣಿಗಳಿಂದ ತಯಾರಿಸಲಾಗುವ ಮಟರ್ ಪನೀರ್ ಗ್ರೇವಿಯನ್ನು ಈ ಬಾರಿ ನಿಮ್ಮ ಮುಂದೆ ತಂದಿದ್ದೇವೆ. ಒಮ್ಮೆ ಈ ರೆಸಿಪಿ ಟ್ರೈ ಮಾಡಿ ನೋಡಿ. ರುಚಿಯೂ ಕೂಡ ಸಖತ್​ ಆಗಿರುತ್ತದೆ. ಮಟರ್ ಪನೀರ್ ಗ್ರೇವಿ ತಯಾರಿಸುವುದು ಎಂಬುದನ್ನು ಈ ಸ್ಟೋರಿಯಲ್ಲಿ ತಿಳಿಯೋಣ.

MATAR PANEER GRAVY RECIPE  HOW TO PREPARE MATAR PANEER GRAVY  MATAR PANEER GRAVY PREPARATION  HOW TO MAKE MATAR PANEER GRAVY
ಸಖತ್​ ಟೇಸ್ಟಿಯಾಗಿ ಮಟರ್ ಪನೀರ್ ಗ್ರೇವಿ (ETV Bharat)

By ETV Bharat Health Team

Published : Sep 24, 2024, 5:22 PM IST

Matar Paneer Gravy Recipe in Kannada:ಪನೀರ್ ಎಂಬ ಪದವು ಅನೇಕರ ಬಾಯಿಯಲ್ಲಿ ನೀರು ತರಿಸುತ್ತದೆ. ಪನೀರ್ ಅನ್ನು ಸರಿಯಾಗಿ ಬೇಯಿಸಿದರೆ, ಅದನ್ನು ನಿಮ್ಮ ಬಾಯಿಯಲ್ಲಿ ಇಟ್ಟರೆ ತನ್ನಿಂದ ತಾನೆ ಕರಗಿ ಹೋಗುತ್ತದೆ. ಬಟಾಣಿಯ ಹೊರತಾಗಿ ಪಾಲಕ್ ಪನೀರ್, ಕಡಾಯಿ ಪನೀರ್, ಟಿಕ್ಕಾ, ಪನೀರ್ ಬಟರ್ ಮಸಾಲಾ ಹೀಗೆ ಹಲವು ಬಗೆಯ ಖಾದ್ಯಗಳನ್ನು ಮಾಡುತ್ತಾರೆ. ಇದಲ್ಲದೇ, ಅನೇಕ ಜನರು ಸಿಹಿತಿಂಡಿಗಳು ಮತ್ತು ಅವುಗಳಿಂದ ಮಾಡಿದ ತಿಂಡಿಗಳನ್ನು ತಿನ್ನಲು ಇಷ್ಟಪಡುತ್ತಾರೆ. ಆದರೆ, ಈ ಬಾರಿ 'ಮಟರ್ ಪನೀರ್ ಗ್ರೇವಿ' ಸಿದ್ಧಪಡಿಸೋಣ. ಮತ್ತೇಕೆ ತಡ? ಅಗತ್ಯವಿರುವ ಪದಾರ್ಥಗಳು ಯಾವುವು? ಈ ರೆಸಿಪಿ ಸಿದ್ಧಪಡಿಸುವುದು ಹೇಗೆ ಎಂಬುದನ್ನು ತಿಳಿಯೋಣ.

ಗ್ರೇವಿಗೆ ಬೇಕಾದ ಪದಾರ್ಥಗಳೇನು?:

  • 2 ಚಮಚ ತುಪ್ಪ
  • ಒಂದು ಟೀ ಚಮಚ ಎಣ್ಣೆ
  • 2 ಲವಂಗ
  • ಒಂದು ಇಂಚು ದಾಲ್ಚಿನ್ನಿ
  • 2 ಬಿರಿಯಾನಿ ಎಲೆಗಳು
  • ಅರ್ಧ ಇಂಚು ಶುಂಠಿ
  • ಬೆಳ್ಳುಳ್ಳಿಯ 7 ಎಸಳು
  • 2 ಈರುಳ್ಳಿ
  • 3 ಟೊಮೇಟೊ
  • 5 ಬಾದಾಮಿ
  • 8 ಪಿಸ್ತಾ
  • ರುಚಿಗೆ ತಕ್ಕಷ್ಟು ಉಪ್ಪು
  • ಕಾಲು ಟೀಚಮಚ ಅರಿಶಿನ

ತಯಾರಿಸುವ ವಿಧಾನ:

  • ಮೊದಲು ಸ್ಟವ್ ಆನ್ ಮಾಡಿ ಮತ್ತು ಒಂದು ಪಾತ್ರೆಯಲ್ಲಿ ತುಪ್ಪ ಮತ್ತು ಎಣ್ಣೆಯನ್ನು ಬಿಸಿ ಮಾಡಿ.
  • ಅದರ ನಂತರ ಲವಂಗ, ದಾಲ್ಚಿನ್ನಿ, ಬಿರಿಯಾನಿ ಎಲೆಗಳು, ಶುಂಠಿ, ಬೆಳ್ಳುಳ್ಳಿ ಎಸಳು ಮತ್ತು ಈರುಳ್ಳಿ ತುಂಡುಗಳನ್ನು ಹಾಕಿ ಸ್ವಲ್ಪ ಫ್ರೈ ಮಾಡಿ.
  • ಬಳಿಕ ಟೊಮೆಟೊ ಚೂರುಗಳನ್ನು ಹಾಕಿ, ನಂತರ ನೆನೆಸಿದ ಬಾದಾಮಿ ಮತ್ತು ಪಿಸ್ತಾ ಸೇರಿಸಿ ಮತ್ತು ಮಿಶ್ರಣ ಮಾಡಿ.
  • ಅದರ ನಂತರ ರುಚಿಗೆ ಬೇಕಾದಷ್ಟು ಉಪ್ಪು ಮತ್ತು ಅರಿಶಿನ ಪುಡಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ, ಮತ್ತು ಸುಮಾರು 8 ನಿಮಿಷಗಳ ಕಾಲ ಮುಚ್ಚಿ ಬೇಯಿಸಿ.
  • ಈಗ ಸ್ಟವ್ ಆಫ್ ಮಾಡಿ ಸ್ವಲ್ಪ ಹೊತ್ತು ತಣ್ಣಗಾಗಲು ಬಿಡಿ. ಅದರ ನಂತರ ಮುಚ್ಚಳವನ್ನು ತೆಗೆದಿಡಿ ಮತ್ತು ಅದರಿಂದ ಬಿರಿಯಾನಿ ಎಲೆಗಳು ಮತ್ತು ದಾಲ್ಚಿನ್ನಿ ಕಡ್ಡಿಯನ್ನು ತೆಗೆದುಹಾಕಿ.
  • ನಂತರ ಈ ಮಿಶ್ರಣವನ್ನು ಮಿಕ್ಸಿಗೆ ಹಾಕಿ ಚೆನ್ನಾಗಿ ರುಬ್ಬಿಕೊಂಡು ಪಕ್ಕಕ್ಕೆ ಇಡಿ.

ಪನೀರ್​ಗೆ ಬೇಕಾಗುವ ಪದಾರ್ಥಗಳು:

  • 2 ಟೇಬಲ್​​ ಸ್ಪೂನ್​ ಎಣ್ಣೆ
  • 200 ಗ್ರಾಂ ಪನೀರ್
  • 2 ಹಸಿ ಮೆಣಸಿನಕಾಯಿ
  • ಅರ್ಧ ಟೀಚಮಚ ಧನಿಯಾ ಪುಡಿ
  • ಜೀರಿಗೆ ಪುಡಿ ಅರ್ಧ ಚಮಚ
  • ಕಾಲು ಚಮಚ ಗರಂ ಮಸಾಲ
  • ಖಾರದ ಪುಡಿ ಒಂದು ಟೀಚಮಚ
  • ಅರ್ಧ ಕಪ್ ಬಟಾಣೆ(ನೆನೆಸಿದ)
  • ಕಸೂರಿ ಮೇಥಿ ಒಂದು ಟೀಚಮಚ
  • ಕಾಲು ಟೀಚಮಚ ಸಕ್ಕರೆ (ಐಚ್ಛಿಕ)
  • ಸ್ವಲ್ಪ ಕೊತ್ತಂಬರಿ ಸೊಪ್ಪು
  • ನಿಂಬೆ ರಸದ ಅರ್ಧ ಟೀಚಮಚ
  • ರುಚಿಗೆ ತಕ್ಕಷ್ಟು ಉಪ್ಪು

ಸಿದ್ಧಪಡಿಸುವ ಪ್ರಕ್ರಿಯೆ:

  • ಈಗ ಒಲೆ ಆನ್ ಮಾಡಿ ಮತ್ತು ಒಂದು ಪಾತ್ರೆ ಇಡಿ, ಎಣ್ಣೆ ಹಾಕಿ ಬಿಸಿ ಮಾಡಿ.
  • ಅದರ ನಂತರ ಪನೀರ್ ಹಾಕಿ ಮತ್ತು ಎಲ್ಲ ಕಡೆ ಸುಮಾರು 2 ನಿಮಿಷಗಳ ಕಾಲ ಫ್ರೈ ಮಾಡಿ ಮತ್ತು ಪಕ್ಕಕ್ಕೆ ಇರಿಸಿ.
  • ಇದಕ್ಕೆ ಹಸಿ ಮೆಣಸಿನಕಾಯಿ ಹಾಕಿ ಹುರಿದುಕೊಳ್ಳಿ.
  • ಅದರ ನಂತರ ಧನಿಯಾ ಪುಡಿ, ಜೀರಿಗೆ ಪುಡಿ, ಗರಂ ಮಸಾಲ ಮತ್ತು ಖಾರದ ಪುಡಿಯನ್ನು ಹಾಕಿ ಸ್ವಲ್ಪ ಫ್ರೈ ಮಾಡಿ.
  • ಅದರ ನಂತರ, ಹಸಿರು ಬಟಾಣಿ ಸೇರಿಸಿ ಮತ್ತು ರುಬ್ಬಿದ ಮಸಾಲೆ ಮಿಶ್ರಣ ಸೇರಿಸಿ ಮತ್ತು ಚೆನ್ನಾಗಿ ಮಿಶ್ರಣ ಮಾಡಿ.
  • ಈಗ ಅಗತ್ಯವಿರುವಷ್ಟು ಸ್ವಲ್ಪ ನೀರು ಸೇರಿಸಿ ಮತ್ತು 5 ನಿಮಿಷಗಳ ಕಾಲ ಕುದಿಸಲು ಬಿಡಿ.
  • ಅದರ ನಂತರ, ಮುಚ್ಚಳವನ್ನು ತೆಗೆದುಹಾಕಿ ಮತ್ತು ಹುರಿದ ಪನೀರ್ ತುಂಡುಗಳು, ಕಸೂರಿ ಮೇಥಿ ಮತ್ತು ಚೆನ್ನಾಗಿ ಮಿಶ್ರಣ ಮಾಡಿ. (ನೀವು ಬಯಸಿದಲ್ಲಿ ಈಗ ಸಕ್ಕರೆ ಸೇರಿಸಬಹುದು)
  • ಸ್ವಲ್ಪ ಹೊತ್ತಿನ ನಂತರ ಕೊತ್ತಂಬರಿ ಸೊಪ್ಪು ಅದರ ಮೇಲೆ ಉದುರಿಸಿ ಮತ್ತು ನಿಂಬೆರಸ ಹಾಕಿ ಸ್ಟವ್ ಆಫ್ ಮಾಡಿದರೆ ಸೂಪರ್ ಟೇಸ್ಟಿಯಾದ ಮಟರ್ ಪನೀರ್ ಗ್ರೇವಿ ರೆಡಿ!

ಇದನ್ನೂ ಓದಿ:

ABOUT THE AUTHOR

...view details