ಕರ್ನಾಟಕ

karnataka

ETV Bharat / health

ಮತ್ತೆ ಮತ್ತೆ ತಿನ್ನಬೇಕೆನಿಸುವ ಆಂಧ್ರ ಸ್ಪೆಷಲ್​ 'ದಿಬ್ಬರೊಟ್ಟಿ': ಇದು ಆರೋಗ್ಯಕರ ಮತ್ತು ಟೇಸ್ಟಿ ಬ್ರೇಕ್​ಫಾಸ್ಟ್! - DIBBA ROTTI

ಯಾವಾಗಲೂ ಒಂದೆ ರೀತಿಯ ತಿಂಡಿ ತಿಂದು ತಿಂದು ಬೋರ್​ ಆಗಿದೆಯಾ?. ಹಾಗಾದರೆ ಆರೋಗ್ಯಕರ ಮತ್ತು ರುಚಿಕರವಾದ ದಿಬ್ಬರೊಟ್ಟಿಯನ್ನು ನಿಮ್ಮ ಬ್ರೇಕ್​ಫಾಸ್ಟ್​ ಮೆನುಗೆ ಸೇರಿಸಿಕೊಳ್ಳಿ. ಈ ದಿಬ್ಬರೊಟ್ಟಿ ತಯಾರಿಯ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

ದಿಬ್ಬರೊಟ್ಟಿ
ದಿಬ್ಬರೊಟ್ಟಿ (ETV Bharat)

By ETV Bharat Karnataka Team

Published : Nov 5, 2024, 10:58 PM IST

ಟಿಫನ್ ಎಂದಾಕ್ಷಣ ನಮಗೆಲ್ಲ ನೆನಪಾಗುವುದು ಇಡ್ಲಿ, ದೋಸೆ, ವಡೆ ಆದರೆ, ಹಿಂದಿನ ಕಾಲದಲ್ಲಿ ಇಷ್ಟು ಬಗೆಯ ಉಪಹಾರಗಳು ಇರಲಿಲ್ಲ. ಹೀಗಾಗಿ ಬಹುತೇಕ ಮನೆಗಳಲ್ಲಿ ಉದ್ದಿನ ಹಿಟ್ಟಿನಿಂದ ತುಂಬಾ ರುಚಿಕರವಾದ ದಿಬ್ಬರೊಟ್ಟಿ ಮಾಡಿ ತಿನ್ನುತ್ತಿದ್ದರು. ಈ ದಿಬ್ಬರೊಟ್ಟಿ ನೋಡುವುದಕ್ಕೆ ಕೆಂಪಾಗಿ, ಹೊರಭಾಗದಲ್ಲಿ ಗರಿಗರಿಯಾಗಿ ಬಾಯಲ್ಲಿ ನೀರೂರಿಸುವಂತೆ ಇರುತ್ತದೆ. ಮತ್ತೇಕೆ ತಡ ಸಿಂಪಲ್ ಆಗಿ ತುಂಬಾ ರುಚಿಕರವಾದ ದಿಬ್ಬರೊಟ್ಟಿಯನ್ನು ಹೇಗೆ ಮಾಡುವುದೆಂದು ಈ ಸ್ಟೋರಿಯಲ್ಲಿ ತಿಳಿದುಕೊಳ್ಳೋಣ.

ದಿಬ್ಬರೊಟ್ಟೆ ಹಿಟ್ಟನ್ನು ತಯಾರಿಸಿ ಫ್ರಿಡ್ಜ್ ನಲ್ಲಿಟ್ಟು ಮೂರು ದಿನಗಳ ವರೆಗೆ ರುಚಿಕರವಾದ ಮತ್ತು ಆರೋಗ್ಯಕರ ಬ್ರೇಕ್​ಫಾಸ್ಟ್​ ಮಾಡಬಹುದು. ಈ ರೆಸಿಪಿ ಮಕ್ಕಳ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಜೊತೆಗೆ ಸಕ್ಕರೆ ಕಾಯಿಲೆಯಿಂದ ಬಳಲುತ್ತಿರುವವರು ಕೂಡ ಈ ದಿಬ್ಬರೊಟ್ಟಿಯನ್ನು ಸವಿಯಬಹುದು.

ಬೇಕಾಗುವ ಪದಾರ್ಥಗಳು:

  • ಉದ್ದಿನ ಬೆಳೆ -ಕಪ್
  • ಜೋಳದ ರವೆ - 3 ಕಪ್
  • ಉಪ್ಪು - ರುಚಿಗೆ ತಕ್ಕಷ್ಟು
  • ಎಣ್ಣೆ - ಅಗತ್ಯಕ್ಕೆ ತಕ್ಕಷ್ಟು

ತಯಾರಿಸುವ ವಿಧಾನ:

  • ಮೊದಲು ಉದ್ದಿನ ಬೆಳೆಯನ್ನು ಚೆನ್ನಾಗಿ ತೊಳೆದು 5 ಗಂಟೆ ನೆನೆಸಿಡಬೇಕು.
  • ಹಾಗೆಯೇ ಇನ್ನೊಂದು ಪಾತ್ರೆಯಲ್ಲಿ ಜೋಳದ ರವೆಯನ್ನು 5 ಗಂಟೆ ನೆನೆಸಿಡಬೇಕು.
  • ನಂತರ ಮಿಕ್ಸಿ ಜಾರ್​ಗೆ ಉದ್ದಿನ ಬೆಳೆಯನ್ನು ಹಾಕಿ ಜೊತೆಗೆ ನೀರು ಸೇರಿಸುತ್ತಾ ಮೃದುವಾಗಿ ರುಬ್ಬಿಕೊಂಡು ಒಂದು ಪಾತ್ರಗೆ ಹಾಕಿ ಇಟ್ಟುಕೊಳ್ಳಿ.
  • ಬಳಿಕ ನೆನೆಸಿಟ್ಟಿದ್ದ ಜೋಳದ ರವೆಯನ್ನು ನೀರು ಉಳಿಯದಂತೆ ಕೈಯಿಂದ ಹಿಂಡಬೇಕು. ನಂತರ ಗ್ರೈಂಡ್​​​ ಮಾಡಿಕೊಂಡ ಉದ್ದಿನ ಹಿಟ್ಟಿನ ಜೊತೆ ಬೆರೆಸಬೇಕು.
  • ಹಿಟ್ಟನ್ನು ಚೆನ್ನಾಗಿ ಮಿಶ್ರಣ ಮಾಡಿ ನಂತರ ಪಾತ್ರೆಯನ್ನು ಪ್ಲೇಟ್​ನಿಂದ ಮುಚ್ಚಿ ಇಡೀ ರಾತ್ರಿ ಹುದುಗಲು ಬಿಡಬೇಕು.
  • ಬೆಳಗ್ಗೆ ದಿಬ್ಬರೊಟ್ಟಿ ಹಿಟ್ಟಿಗೆ ರುಚಿಕಿ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಕಲಸಬೇಕು.
  • ಈಗ ಸ್ಟವ್​ ಮೇಲೆ ತವಾ ಅಥವಾ ದೋಸೆ ಹಂಚು ಇಟ್ಟು. ಇದಕ್ಕೆ ಟೇಬಲ್ ಸ್ಪೂನ್ ಎಣ್ಣೆ ಹಾಕಬೇಕು.
  • ದೋಸೆ ಹಂಚು ಬಿಸಿಯಾದಾಗ ಸೌಟ್​ನಿಂದ ಹಿಟ್ಟು ಹಾಕಿ
  • ಸ್ಟವ್​ಅನ್ನು ಮೀಡಿಯಂ ಫ್ಲೆಮ್‌ನಲ್ಲಿ ಇರಿಸಿ ದಿಬ್ಬರೊಟ್ಟಿ ಕೆಂಪಗೆ ಕ್ರಿಸ್ಪಿಯಾಗಿ ಬೇಯಿಸಿ
  • ಈಗ ಸ್ಟವ್​ ಮೇಲೆ ತವಾ ಅಥವಾ ದೋಸೆ ಹಂಚು ಇಟ್ಟು. ಇದಕ್ಕೆ ಟೇಬಲ್ ಸ್ಪೂನ್ ಎಣ್ಣೆ ಹಾಕಬೇಕು.
  • ದೋಸೆ ಹಂಚು ಬಿಸಿಯಾದಾಗ ಸೌಟ್​ನಿಂದ ಹಿಟ್ಟು ಹಾಕಿ
  • ಸ್ಟವ್​ಅನ್ನು ಮೀಡಿಯಂ ಫ್ಲೆಮ್‌ನಲ್ಲಿ ಇರಿಸಿ ದಿಬ್ಬರೊಟ್ಟಿ ಕೆಂಪಗೆ ಕ್ರಿಸ್ಪಿಯಾಗಿ ಬೇಯಿಸಿ
  • ದಿಬ್ಬರೊಟ್ಟಿ ಎರಡು ಕಡೆ ಚೆನ್ನಾಗಿ ಬೆಂದ ನಂತರ ಒಂದು ಪ್ಲೇಟ್‌ಗೆ ಹಾಕಿಕೊಳ್ಳಿ. ಇಷ್ಟೆ ತುಂಬಾ ರುಚಿಯಾದ ಮತ್ತು ಆರೋಗ್ಯಕರವಾದ ದಿಬ್ಬರೊಟ್ಟಿ ರೆಡಿ. ಈ ದಿಬ್ಬರೊಟ್ಟಿಯನ್ನು ಶೇಂಗಾ ಚಟ್ನಿ, ಟೊಮೊಟೊ ಚಟ್ನಿ ಜೊತೆ ತಿನ್ನಬಹುದು.

ಇದನ್ನೂ ಓದಿ:ಸ್ಪಂಜಿನಂತೆ ಮೃದುವಾದ ಇಡ್ಲಿಯನ್ನು ಮನೆಯಲ್ಲೇ ತಯಾರಿಸಿ; ಈ ಟಿಪ್ಸ್​ ಪಾಲಿಸಿ

ABOUT THE AUTHOR

...view details