How to Identify Fake Paneer:ಪನ್ನೀರ್ನಿಂದ ಮಾಡಿದ ಬಗೆಬಗೆಯ ಖಾದ್ಯಗಳನ್ನು ಮನೆಯಲ್ಲೇ ತಯಾರಿಸಿ ಸವಿಯುವ ಜನರು ಅನೇಕರು ನಮ್ಮ ನಡುವೆಯೇ ಇದ್ದಾರೆ. ಆದರೆ, ನೀವು ಮಾರುಕಟ್ಟೆಯಿಂದ ಖರೀದಿಸುವ ಪನೀರ್ ಅಸಲಿಯೋ ಅಥವಾ ನಕಲಿಯೋ ಎಂಬುದನ್ನು ಹೇಗೆ ಕಂಡುಹಿಡಿಯುವುದು? ತಜ್ಞರು ತಿಳಿಸುವ ಪ್ರಕಾರ, ಮಾರುಕಟ್ಟೆಯಲ್ಲಿ ದೊರೆಯುವ ನಕಲಿ ಪನೀರ್ನ್ನು ಹೇಗೆ ಪತ್ತೆ ಮಾಡುವುದು ಎನ್ನುವುದು ಇಲ್ಲಿ ತಿಳಿಯೋಣ.
ಮಾರುಕಟ್ಟೆಯಲ್ಲಿರುವ ಅನೇಕರು ಸುಲಭವಾಗಿ ಹಣ ಗಳಿಸುವ ಉದ್ದೇಶದಿಂದ ಜನರಿಗೆ ಆಹಾರದ ಹೆಸರಿನಲ್ಲಿ ವಿಷವನ್ನು ಪೂರೈಸುತ್ತಿದ್ದಾರೆ. ಜನರು ಇದನ್ನು ಪ್ರತಿದಿನ ಖರೀದಿಸುತ್ತಿದ್ದಾರೆ. ನಂತರ ಇದನ್ನು ಹಲವರು ವಿವಿದ ಕಾಯಿಲೆಗಳಿಂದ ಬಳಲುಬೇಕಾಗುತ್ತದೆ. ಆದ್ದರಿಂದ, ನಾವು ಪನೀರ್ ಖರೀದಿಸುವ ಮುನ್ನ ಇದನ್ನು ಸಂಪೂರ್ಣವಾಗಿ ಪರಿಶೀಲಿಸಬೇಕು.
ಸಾಮಾನ್ಯವಾಗಿ ನಾವು ಪನೀರ್ ಅನ್ನು ಸರಿಯಾಗಿ ಪರಿಶೀಲಿಸದೆ ಮಾರುಕಟ್ಟೆಯಿಂದ ಖರೀದಿಸುತ್ತೇವೆ. ತಿಂದ ನಂತರ ನಾವು ನಮ್ಮ ದೇಹಕ್ಕೆ ಅನೇಕ ರೋಗಗಳನ್ನು ಆಹ್ವಾನಿಸುತ್ತೇವೆ. ಆದ್ದರಿಂದ ಇಂದಿನಿಂದ ಪನೀರ್ ಖರೀದಿಸುವ ಮೊದಲು, ಈ ಪನೀರ್ ಅಸಲಿಯೋ ಅಥವಾ ನಕಲಿಯೋ ಎಂಬುದನ್ನು ಗುರುತಿಸಲು ಈ ಟಿಪ್ಸ್ ಅನುಸರಿಸಿ.
ಒತ್ತಡ ಪರೀಕ್ಷೆ:ಒಂದು ತಟ್ಟೆಯಲ್ಲಿ ಮಾರುಕಟ್ಟೆಯಿಂದ ತಂದಿರುವ ಪನೀರ್ ಹಾಕಿ ತುಂಬಾ ಹಗುರವಾದ ಒತ್ತಡದಿಂದ ಕೈಯಿಂದ ಪುಡಿಮಾಡಲು ಪ್ರಯತ್ನಿಸಿ. ಅದು ಮೃದುವಾಗಿ ಹರಡಿದರೆ ಯಾವುದೇ ಮಾಲಿನ್ಯವಿಲ್ಲ ಎಂದರ್ಥ. ಹಾಗಾಗದೇ ಇದ್ದರೆ ಕಲಬೆರಕೆಯಾಗುವ ಸಾಧ್ಯತೆ ಇದೆ. ವಾಸ್ತವವಾಗಿ, ನಕಲಿ ಪನೀರ್ಗೆ ಸೇರಿಸಲಾದ ಅಂಶಗಳು ಹಾಲಿನ ಗುಣಲಕ್ಷಣಗಳನ್ನು ನಾಶಮಾಡುತ್ತವೆ. ಮತ್ತು ಅದನ್ನು ಗಟ್ಟಿಯಾಗಿಸುತ್ತದೆ ಮತ್ತು ಹರಡುವುದನ್ನು ತಡೆಯುತ್ತದೆ.