ಕರ್ನಾಟಕ

karnataka

ETV Bharat / health

ಆಲ್ಕೋಹಾಲ್ ಆರೋಗ್ಯಕ್ಕೆ ಒಳ್ಳೆಯದೋ ಕೆಟ್ಟದ್ದೋ?: ಈ ಬಗ್ಗೆ ವೈದ್ಯರು ಹೇಳೋದೇನು? - ALCOHOL GOOD FOR HEALTH OR NOT

Alcohol: ಮದ್ಯಪಾನ ಮಾಡುವುದರಿಂದ ಆರೋಗ್ಯ ಪ್ರಯೋಜನಗಳಿವೆಯೇ?. ಈ ಬಗ್ಗೆ ವೈದ್ಯರು ಮಾತು ಕೇಳಿ.

ALCOHOL GOOD FOR HEALTH OR NOT  HOW MUCH ALCOHOL IS GOOD FOR HEALTH  HOW MUCH ALCOHOL IS SAFE PER DAY  ಆಲ್ಕೋಹಾಲ್ ಒಳ್ಳೆಯದಾ ಕೆಟ್ಟದ್ದಾ
ಸಾಂದರ್ಭಿಕ ಚಿತ್ರ (ETV Bharat)

By ETV Bharat Health Team

Published : 7 hours ago

Alcohol:ಹೆಚ್ಚಿನ ಪ್ರಮಾಣದಲ್ಲಿ ಮದ್ಯ ಸೇವಿಸಿದರೆ, ವ್ಯಸನಕಾರಿ ಆಗುತ್ತದೆ. ಇದರಿಂದ ಹಲವಾರು ರೋಗಗಳು ಬರುತ್ತವೆ ಎಂದು ಆರೋಗ್ಯ ತಜ್ಞರು ತಿಳಿಸುತ್ತಾರೆ. ಹಾಗಾದರೆ, ಮದ್ಯಪಾನ ಮಾಡುವುದರಿಂದ ಆರೋಗ್ಯದ ಪ್ರಯೋಜನಗಳು ಲಭಿಸುತ್ತವೆಯೇ? ಯಾವ ಪ್ರಮಾಣದಲ್ಲಿ ಸೇವಿಸಿದರೆ ಆರೋಗ್ಯಕ್ಕೆ ಒಳ್ಳೆಯದು ಎಂಬುದರ ಬಗ್ಗೆ ಹಲವರಿಗೆ ಪ್ರಶ್ನೆ ಮೂಡುತ್ತವೆ. ಮಿತವಾಗಿ ಮದ್ಯ ಸೇವನೆ ಹೃದಯಕ್ಕೆ ಒಳ್ಳೆಯದು ಎಂಬ ನಂಬಿಕೆ ಎಷ್ಟು ಸತ್ಯ ಎಂಬುದರ ಕುರಿತು ತಜ್ಞರ ಸಲಹೆ ಇಲ್ಲಿದೆ ನೋಡಿ.

ಖ್ಯಾತ ಹೃದ್ರೋಗ ತಜ್ಞ ಡಾ.ರಮೇಶ ಗುಡಪಾಟಿ ಪ್ರತಿಕ್ರಿಯಿಸಿ, 'ಕಡಿಮೆ ಪ್ರಮಾಣದಲ್ಲಿ ಮದ್ಯ ಸೇವನೆ ಮಾಡುವುದರಿಂದ ದೇಹಕ್ಕೆ ಒಂದಿಷ್ಟು ಒಳ್ಳೆಯ ಲಾಭಗಳು ದೊರೆಯುತ್ತದೆ. ಆದರೆ, ಒಂದಕ್ಕಿಂತ ಹೆಚ್ಚು ಪೆಗ್​ ತೆಗೆದುಕೊಳ್ಳುವುದರಿಂದ ಅದೇ ದೇಹಕ್ಕೆ ಹಾನಿ ಉಂಟಾಗುತ್ತದೆ. ಕಡಿಮೆ ಆಲ್ಕೋಹಾಲ್ ಸೇವನೆಯಿಂದ ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆಯಾಗಿ ಒಳ್ಳೆಯ ಕೊಲೆಸ್ಟ್ರಾಲ್ ಹೆಚ್ಚಾಗುತ್ತದೆ. ರಕ್ತದೊತ್ತಡವೂ ಕಡಿಮೆಯಾಗುತ್ತದೆ. ಅತಿಯಾದ ಮದ್ಯ ಸೇವನೆಯು ದೇಹಕ್ಕೆ ಹಾನಿಯನ್ನು ಉಂಟು ಮಾಡುತ್ತದೆ' ಎಂದು ಅವರು ತಿಳಿಸಿದ್ದಾರೆ.

ಲಿಮಿಟ್​​​ಗಿಂತ ಹೆಚ್ಚು ಮದ್ಯ ಸೇವನೆಯಿಂದ ಆರೋಗ್ಯಕ್ಕೆ ಅಪಾಯ:ಅತಿಹೆಚ್ಚು ಮದ್ಯ ಸೇವನೆಯಿಂದ ತೂಕ, ಬಿಪಿ, ಶುಗರ್ ಲೆವೆಲ್ ಹೆಚ್ಚಾಗಲಿದೆ. ಹೃದಯದ ರಕ್ತನಾಳಗಳಲ್ಲಿ ಹೆಪ್ಪುಗಟ್ಟುವಿಕೆ ಉಂಟಾಗಿ ಹೃದಯಾಘಾತವಾಗುವ ಸಾಧ್ಯತೆಗಳಿವೆ. ಅತಿಯಾಗಿ ಮದ್ಯ ಸೇವಿಸುವವರಲ್ಲಿ ಹೃದಯ ಸ್ನಾಯುಗಳು ದುರ್ಬಲಗೊಳ್ಳುತ್ತವೆ ಹಾಗೂ ದಕ್ಷತೆಯು ಕಡಿಮೆಯಾಗುತ್ತದೆ ಎಂದು ವೈದ್ಯರು ಎಚ್ಚರಿಕೆ ನೀಡಿದ್ದಾರೆ.

"ಆಲ್ಕೋಹಾಲ್​ನಲ್ಲಿ ವಿಸ್ಕಿ, ಬ್ರಾಂಡಿ, ವೈನ್, ಬಿಯರ್​ನಂತಹ ವಿವಿಧ ಪ್ರಕಾರಗಳನ್ನು ಹೊಂದಿದೆ. ಇವೆಲ್ಲವೂ ವಿಭಿನ್ನ ಪ್ರಮಾಣದ ಆಲ್ಕೋಹಾಲ್ ಅನ್ನು ಹೊಂದಿರುತ್ತದೆ. ವಿಸ್ಕಿಯಲ್ಲಿ 40 ಪ್ರತಿಶತ ಆಲ್ಕೋಹಾಲ್ ಇರುತ್ತದೆ. ಅದೇ ವೈನ್‌ನಲ್ಲಿ ಶೇಕಡಾ 14ರಿಂದ 16 ಆಲ್ಕೋಹಾಲ್ ಹಾಗೂ ಬಿಯರ್‌ನಲ್ಲಿ ಶೇಕಡಾ 7ರಿಂದ 8 ಆಲ್ಕೋಹಾಲ್ ಇರುತ್ತದೆ. ಸರಾಸರಿ ದೈನಂದಿನ ಆಲ್ಕೊಹಾಲ್ ಸೇವನೆಯು ಮಹಿಳೆಯರಿಗೆ 45 ಮಿಲಿ ಮತ್ತು ಪುರುಷರಿಗೆ 90 ಮಿಲಿ ದೇಹಕ್ಕೆ ಹೆಚ್ಚು ಹಾನಿಯಾಗುವುದಿಲ್ಲ.

-ಡಾ.ರಮೇಶ ಗುಡಪಾಟಿ, ಹಿರಿಯ ಹೃದ್ರೋಗ ತಜ್ಞ

ರೆಡ್ ವೈನ್ ಹೃದಯಕ್ಕೆ ಒಳ್ಳೆಯದಾ?:ವೈನ್ ಅದರಲ್ಲೂ ರೆಡ್ ವೈನ್​ನಲ್ಲಿ ಪಾಲಿಫಿನಾಲ್​ಗಳು ಹೇರಳವಾಗಿವೆ ಎನ್ನುತ್ತಾರೆ ತಜ್ಞರು. ಇದು ಉತ್ಕರ್ಷಣ ನಿರೋಧಕ ಹಾಗೂ ಉರಿಯೂತದ ಗುಣಲಕ್ಷಣಗಳನ್ನು ಹೊಂದಿದೆ. ಇದು ರಕ್ತನಾಳಗಳಲ್ಲಿ ಹೆಪ್ಪುಗಟ್ಟುವುದನ್ನು ತಡೆಯಲು ಸಹಾಯ ಮಾಡುತ್ತದೆ ಎಂದು ವಿವರಿಸಲಾಗಿದೆ. ಈ ಪಾಲಿಫಿನಾಲ್‌ಗಳು ಇತರ ಆಲ್ಕೋಹಾಲ್‌ಗಳಲ್ಲಿ ಕಡಿಮೆ ಇದೆ. ಆದ್ದರಿಂದಲೇ ಇತರರಿಗೆ ಹೋಲಿಸಿದರೆ ರೆಡ್ ವೈನ್ ಆರೋಗ್ಯಕ್ಕೆ ಸ್ವಲ್ಪ ಉತ್ತಮ ಎಂದು ತಜ್ಞರು ಹೇಳುತ್ತಾರೆ.

ಕಡಿಮೆ ಪ್ರಮಾಣದಲ್ಲಿ ಆಲ್ಕೋಹಾಲ್ ಸೇವಿಸುವುದರಿಂದ ಪ್ರಯೋಜನಗಳನ್ನು ಪಡೆಯಬಹುದು. ಇದರ ಜೊತೆಗೆ ಸರಿಯಾದ ಆಹಾರ, ವ್ಯಾಯಾಮದಿಂದಲೂ ಉತ್ತಮ ಲಾಭಗಳನ್ನು ಪಡೆಯಬಹುದು. ಹಾಗಾಗಿ ಅತಿ ಹೆಚ್ಚು ಮದ್ಯಪಾನ ಮಾಡುವುದು ಒಳ್ಳೆಯದಲ್ಲ. ಅದಕ್ಕಾಗಿಯೇ ಮದ್ಯದ ಚಟವಿಲ್ಲದ ಜನರು ಯಾವುದೇ ಸಂದರ್ಭದಲ್ಲಿ ಮದ್ಯಪಾನ ಮಾಡಲು ಪ್ರಾರಂಭಿಸಬಾರದು. ಒಂದು ವೇಳೆ ನೀವು ಆಲ್ಕೋಹಾಲ್​ಗೆ ವ್ಯಸನಿಗಳಾಗಿದ್ದರೆ, ಕಡಿಮೆ ಪ್ರಮಾಣದಲ್ಲಿ ತೆಗೆದುಕೊಳ್ಳಬೇಕು. ಆಲ್ಕೋಹಾಲ್ ಹೃದಯದ ಆರೋಗ್ಯದ ಮೇಲೆ ಮಾತ್ರವಲ್ಲದೇ ದೇಹದ ಅನೇಕ ಅಂಗಗಳ ಮೇಲೂ ಪರಿಣಾಮ ಬೀರುತ್ತದೆ ಎಂದು ವೈದ್ಯರು ಸಲಹೆ ನೀಡುತ್ತಾರೆ.

ಓದುಗರಿಗೆ ಪ್ರಮುಖ ಸೂಚನೆ:ಈ ಲೇಖನದಲ್ಲಿ ನಿಮಗೆ ನೀಡಿರುವ ಎಲ್ಲ ಆರೋಗ್ಯ ಮಾಹಿತಿ, ಸಲಹೆಗಳು ನಿಮ್ಮ ತಿಳಿವಳಿಕೆಗಾಗಿ ಮಾತ್ರ. ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯನ್ನು ಆಧರಿಸಿ ನಾವು ಈ ಮಾಹಿತಿಯನ್ನು ಒದಗಿಸುತ್ತಿದ್ದೇವೆ. ಮದ್ಯಪಾನ ಆರೋಗ್ಯಕ್ಕೆ ಹಾನಿಕಾರಕ.

ಇದನ್ನೂ ಓದಿ:ಶೀತ, ಕೆಮ್ಮು, ಕಫದ ಸಮಸ್ಯೆಯೇ?: ಅಜವಾನ ಎಲೆ ಕಷಾಯದ ಪ್ರಯೋಜನಗಳೇನು ಅಂತಾ ಇಲ್ಲಿ ತಿಳಿಯಿರಿ!

ABOUT THE AUTHOR

...view details