ಹೈದರಾಬಾದ್: ಸಾಮಾನ್ಯವಾಗಿ ಪುರುಷರಿಗಿಂತ ಕಡಿಮೆ ಪ್ರಮಾಣದಲ್ಲಿ ಮಹಿಳೆಯರು ಹೃದಯ ರೋಗ ಸಮಸ್ಯೆಗೆ ಒಳಗಾಗುತ್ತಾರೆ. ಇದಕ್ಕೆ ಕಾರಣ ಋತುಚಕ್ರದ ಹಾರ್ಮೋನ್ಗಳು. ಆದಾಗ್ಯೂ ಇತ್ತೀಚಿನ ಅಧ್ಯಯನದ ಪ್ರಕಾರ, ಪುರುಷರಗಿಂತ ಮಹಿಳೆಯರು ಹೃದ್ರೋಗದ ಅಪಾಯದಿಂದ ಬಳಲುತ್ತಿದ್ದಾರೆ. ಇದಕ್ಕೆ ಕಾರಣ ಜೀವನಶೈಲಿಯಲ್ಲಿ ಆಗುತ್ತಿರುವ ಬದಲಾವಣೆ. ಮಹಿಳೆಯರಲ್ಲಿ ಹೃದಯಾಘಾತದ ಚಿಹ್ನೆಗಳು ವಿಭಿನ್ನವಾಗಿರುತ್ತದೆ. ಈ ಕುರಿತು ಸ್ವೀಡನ್‌ನ ಕರೋಲಿನ್‌ಸ್ಕಾ ಇನ್‌ಸ್ಟಿಟ್ಯೂಟ್ ಮತ್ತು ಡ್ಯಾಂಡರಿಡ್ ಆಸ್ಪತ್ರೆ ಜಂಟಿಯಾಗಿ ಅಧ್ಯಯನ ನಡೆಸಿದೆ. ಇದನ್ನು ಜರ್ನಲ್ ಆಫ್ ಸರ್ಕ್ಯುಲೇಷನ್ನಲ್ಲಿ ಪ್ರಕಟಿಸಲಾಗಿದೆ.
1991 ರಿಂದ 2022ರವರೆಗೆ ಮೊದಲ ಬಾರಿ ಹೃದಯಾಘಾತಕ್ಕೆ ಒಳಗಾದ 3,35,000 ಮಹಿಳೆಯರು ಮತ್ತು ಪುರುಷರನ್ನು ಆಧ್ಯಯನದ ಭಾಗವಾಗಿಸಲಾಗಿದೆ. ಅವರ ಆರೋಗ್ಯ ಮತ್ತು ಜೀವಿತಾವಧಿ ಆರೋಗ್ಯವಂತರಾಗಿರುವ 16 ಲಕ್ಷ ಜನರೊಂದಿಗೆ ಹೋಲಿಕೆ ಮಾಡಲಾಗಿದೆ. ಈ ದತ್ತಾಂಶ ವಿಶ್ಲೇಷಣೆ ಮೇಲೆ ಹೊಸ ವೈದ್ಯಕೀಯ ದಾಖಲೆಗಳನ್ನು ಸೃಷ್ಟಿಸಲಾಗಿದೆ.
ಭಾರತೀಯ ಮಹಿಳೆಯರಲ್ಲಿ ಹೃದಯಾಘಾತಕ್ಕೆ ಅನೇಕ ಅಂಶಗಳು ಕಾರಣವಾಗಿದೆ. ಜೀವನಶೈಲಿ ಬದಲಾವಣೆ, ಕಡಿಮೆ ದೈಹಿಕ ಚಟುವಟಿಕೆ, ಅನಾರೋಗ್ಯಕರ ತಿನ್ನುವ ಅಭ್ಯಾಸ, ಹೆಚ್ಚಿನ ಒತ್ತಡ, ಮಧುಮೇಹ ಮತ್ತು ಅಧಿಕ ಕೊಲೆಸ್ಟ್ರಾಲ್ಗಳು ಸಣ್ಣ ವಯಸ್ಸಿನಲ್ಲಿ ಅಪಾಯ ಹೆಚ್ಚಿಸುತ್ತದೆ. ಜನಸಂಖ್ಯಾ ಮತ್ತು ಆರೋಗ್ಯ ಸಮೀಕ್ಷೆ ಕಾರ್ಯಕ್ರಮ, ಅಂತಾರಾಷ್ಟ್ರೀಯ ಮಧುಮೇಹ ಒಕ್ಕೂಟದ ಪ್ರಕಾರ, ಜಗತ್ತಿನ ಇತರ ಮಹಿಳೆಯರಿಗೆ ಹೋಲಿಕೆ ಮಾಡಿದರೆ, ಭಾರತದ ಮಹಿಳೆಯರಲ್ಲಿ ಮಧುಮೇಹ ಹೆಚ್ಚಿದೆ. ಜಾಗತಿಕವಾಗಿ ಸರಾಸರಿ ಶೇ 9ರಷ್ಟಿದ್ದರೆ, ಭಾರತೀಯ ಮಹಿಳೆಯರಲ್ಲಿ ಶೇ 12ರಷ್ಟಿದೆ.
ಇದರ ಜೊತೆಗೆ ಅನೇಕ ಕಾರಣದಿಂದ ಗರ್ಭಕೋಶ ತೆಗೆಯಲಾಗುತ್ತಿದ್ದು, ಮೆನೋಪಾಸ್ ಕೂಡ ಬೇಗವಾಗಿ ಬರುತ್ತಿದೆ. ಪರಿಣಾಮ ಹಾರ್ಮೋನ್ ಅಸಮತೋಲನಕ್ಕೆ ಕಾರಣವಾಗುತ್ತಿದೆ. ಇದರಿಂದ ಹೃದಯಾಘಾತದ ಅಪಾಯವೂ ಹೆಚ್ಚುತ್ತಿದೆ. ಗರ್ಭನಿರೋಧಕ ಮಾತ್ರೆ ಕೂಡ ಥ್ರಂಬೊಸಿಸ್ಗೆ ಕಾರಣವಾಗುತ್ತದೆ. ಐವಿಎಫ್ ಚಿಕಿತ್ಸೆ ಭಾಗವಾಗಿ ಹಾರ್ಮೋನ್ ಚಿಕಿತ್ಸೆ ನೀಡಲಾಗುತ್ತಿದ್ದು, ಇದು ಹೃದಯ ಸಮಸ್ಯೆಗೆ ಪರಿಣಾಮ ಬೀರುತ್ತದೆ. ಧೂಮಪಾನ ಮತ್ತು ಆಲ್ಕೋಹಾಲ್ಗಳು ಪುರುಷರಿಗಿಂತ ಮಹಿಳೆಯರಿಗೆ ಹಾನಿಕಾರಕ ಅಭ್ಯಾಸವಾಗಿದೆ. ಇತ್ತೀಚಿನ ಅಧ್ಯಯನದ ಪ್ರಕಾರ, ಹೃದಯಾಘಾತದಿಂದ ಪುರುಷರಿಗಿಂತ ಮಹಿಳೆಯರು ಹೆಚ್ಚಿನ ವರ್ಷ ಕಳೆದುಕೊಳ್ಳುತ್ತಾರೆ.
ಗುಣಲಕ್ಷಣಗಳ ವ್ಯತ್ಯಾಸ: ಹೃದಯಾಘಾತದ ಕೆಲವು ಲಕ್ಷಣಗಳು ಮಹಿಳೆಯರಲ್ಲಿ ಭಿನ್ನವಾಗಿದೆ. ಪುರುಷರು ಸಾಮಾನ್ಯವಾಗಿ ಎಡ ಬದಿ ಎದೆಯಲ್ಲಿ ನೋವು, ಕೈ ಸೆಳೆಯುವಿಕೆ, ಉಸಿರಾಟ ಸಮಸ್ಯೆ, ಬೆವರಿನ ಲಕ್ಷಣ ಅನುಭವಿಸುತ್ತಾರೆ. ಆದರೆ, ಮಹಿಳೆಯರು ಆಯಾಸ, ಆಲಸ್ಯ, ತಲೆ ಸುತ್ತುವಿಕೆ, ಅಸಿಡಿಟಿ, ಹೊಟ್ಟೆ ನೋವು, ಕುತ್ತಿಗೆ ಭಜದಲ್ಲಿ ಆಗಾಗ ನೋವು ಅನುಭವಿಸುತ್ತಾರೆ. ಇವುಗಳನ್ನು ಅನೇಕ ಬಾರಿ ಗಂಭೀರವಾಗಿ ಪರಿಗಣಿಸುವುದಿಲ್ಲ. ಇವುಗಳನ್ನು ಅನೇಕ ಬಾರಿ ಹೃದಯಾಘಾತದ ಚಿಹ್ನೆ ಎಂದು ಗುರುತಿಸುವುದಿಲ್ಲ, ಇತರ ಕಾರಣದಿಂದಲೂ ಇವುಗಳ ಪತ್ತೆ ಅಸಾಧ್ಯವಾಗುತ್ತದೆ. ಅಲ್ಲದೇ, ಮಹಿಳೆಯರು ಮಕ್ಕಳು ಮತ್ತು ಗಂಡನ ಆರೋಗ್ಯಕ್ಕೆ ತೋರುವ ಕಾಳಜಿ ತಮ್ಮ ಆರೋಗ್ಯಕ್ಕೆ ತೋರುವುದಿಲ್ಲ. ಇದು ಸಮಸ್ಯೆ ಪತ್ತೆ ಮತ್ತು ಚಿಕಿತ್ಸೆ ವಿಳಂಬಕ್ಕೆ ಕಾರಣವಾಗುತ್ತದೆ. ಇದರ ಫಲಿತಾಂಶವೂ ಕಳಪೆ, ಸಾವಿನ ದರ ಹೆಚ್ಚಳಕ್ಕೆ ಕಾರಣವಾಗುತ್ತದೆ.
ಜರ್ನಲ್ ಆಫ್ ದಿ ಅಮೆರಿಕನ್ ಕಾಲೇಜ್ ಆಫ್ ಕಾರ್ಡಿಯಾಲಾಜಿಯಲ್ಲಿ ಪ್ರಕಟವಾದ ಅಧ್ಯಯನದ ಅನುಸಾರ, ಭಾರತೀಯ ಮಹಿಳೆಯರ ವಯಸ್ಸಿಗೆ ಅನುಗುಣವಾಗಿ ಹೃದಯದ ಸಮಸ್ಯೆಗಳು 3 ರಿಂದ 13ರಷ್ಟಿರುತ್ತದೆ. 2000ಕ್ಕೆ ಹೋಲಿಕೆ ಮಾಡಿದಾಗ 2015ರಲ್ಲಿ ಹೃದಯಾಘಾತದ ಅಪಾಯವು ಶೇ 1.1ರಿಂದ 2.6ಕ್ಕೆ ಹೆಚ್ಚಳಗೊಂಡಿದೆ. ಭಾರತೀಯ ಮಹಿಳೆಯರ ಹೃದಯಾಘಾತದ ಸರಸಾರಿ ವಯೋಮಾನ 59ವರ್ಷ ಆಗಿದೆ ಎಂದು ಕಿಮ್ಸ್ ಆಸ್ಪತ್ರೆಯ ಹೃದ್ರೋಗ ತಜ್ಞ ಡಾ ರಘುಕಿಶೋರ್ ಗಲ್ಲಾ ತಿಳಿಸಿದ್ದಾರೆ.
ಕ್ಯಾನ್ಸರ್ಗಿಂತ ಹೆಚ್ಚಿನ ಸಾವು: ಜಾಗತಿಕ ರೋಗದ ಹೊರೆ ಅಧ್ಯಯನದ ಪ್ರಕಾರ, ಹೃದಯ ಕಾಯಿಲೆಯ ಹೊರೆ ಭಾರತೀಯ ಮಹಿಳೆಯರಲ್ಲಿ ಶೇ 18ರಷ್ಟಿದೆ. ಇದರ ಸಾವಿನ ದರವೂ ಸ್ತನ ಸೇರಿದಂತೆ ಇತರ ಕ್ಯಾನ್ಸರ್ಗಿಂತ ಹೆಚ್ಚಿದೆ. ಹೃದಯದ ಮುಖ್ಯ ರಕ್ತನಾಳದಲ್ಲಿನ ರಕ್ತಹೆಪ್ಪುಗಟ್ಟುವಿಕೆಯಿಂದ ಹೃದಯಾಘಾತ ಉಂಟಾಗುತ್ತದೆ. ಆದಾಗ್ಯೂ ಕೆಲವು ಮಹಿಳೆಯರಲ್ಲಿ ಸಣ್ಣ ರಕ್ತನಾಳದಲ್ಲೂ ಬ್ಲಾಕ್ ಇರುತ್ತದೆ. ಅಂಜಿಯೋಗ್ರಾಂನದಲ್ಲಿ ಪ್ರಮುಖ ಹೃದಯ ಕವಚಗಳು ಸರುಕ್ಷಿತ ಎಂದರೂ ಅವರು ಸಮಸ್ಯೆ ಹೊಂದಿರುತ್ತಾರೆ. ಇದು ಕೂಡ ಹೃದಯಾಘಾತದ ತಪ್ಪು ಚಿಹ್ನೆಯನ್ನು ಬಿಂಬಿಸುತ್ತದೆ. ಅನೇಕ ಬಾರಿ ಅಂಜಿಯೋಗ್ರಾಮ್ನಲ್ಲಿ ಸಮಸ್ಯೆ ಪತ್ತೆಯಾಗುವುದಿಲ್ಲ. ಇದು ಚಿಕಿತ್ಸೆ ವಿಳಂಬಕ್ಕೆ ಕಾರಣವಾಗುತ್ತದೆ.
ಇದನ್ನು ನಿಯಂತ್ರಣ ಮಾಡುವುದು ಹೇಗೆ?
- ಮಹಿಳೆಯರಲ್ಲಿ ಹೆಚ್ಚುತ್ತಿರುವ ಹೃದ್ರೋಗದ ಸಮಸ್ಯೆಯನ್ನು ನಿಯಂತ್ರಿಸಲು ಬಹುಮುಖ ವಿಧಾನದ ಅಗತ್ಯವಿದೆ
- ನಿಯಮಿತ ವ್ಯಾಯಾಮ ಮತ್ತು ಆರೋಗ್ಯಯುತ ತಿನ್ನುವ ಅಭ್ಯಾಸ
- ಮಹಿಳೆಯರಲ್ಲಿ ಮತ್ತು ಅವರ ಕುಟುಂಬದಲ್ಲಿ ಹೃದಯ ರೋಗದ ಜಾಗೃತಿ ಮೂಡಿಸಬೇಕಿದೆ.
- ಯೋಗ ಮತ್ತು ಧ್ಯಾನದಂತಹ ಅಭ್ಯಾಸದ ಮೂಲಕ ಒತ್ತಡ ನಿಯಂತ್ರಣ
- ತಂಬಾಕು, ಧೂಮಪಾನದ ಅಭ್ಯಾಸ ನಿಲ್ಲಿಸುವುದು.
- ನಿಯಮಿತ ವೈದ್ಯಕೀಯ ತಪಾಸಣೆಗೆ ಒಳಗಾಗುಗುವುದು.
ಇದನ್ನೂ ಓದಿ: ಭಾರತ ಸೇರಿ ಆಗ್ನೇಯ ಏಷ್ಯಾದ 294 ಮಿಲಿಯನ್ ಜನರಲ್ಲಿ ಅಧಿಕ ರಕ್ತದೊತ್ತಡ! ಕಾರಣವೇನು? ನಿಯಂತ್ರಣ ಹೇಗೆ ಗೊತ್ತೇ?