ನವದೆಹಲಿ:ಭಾರತದ ಆರೋಗ್ಯವಲಯ ಡಿಜಿಟಲೀಕರಣಕ್ಕೆ ಒಳಗಾಗುತ್ತಿದ್ದು ರೋಗಿಗಳ ಮಾಹಿತಿ ಬೆರಳ ತುದಿಯಲ್ಲೇ ಸಿಗಲಿದೆ. ಇನ್ನೊಂದೆಡೆ, ಆರೋಗ್ಯ ವಲಯವು ರೋಬೋಟಿಕ್, ಟೆಲಿಹೆಲ್ತ್, ಕೃತಕ ಬುದ್ಧಿಮತ್ತೆ (ಎಐ)ಯಂತಹ ತಂತ್ರಜ್ಞಾನ ಅಳವಡಿಕೆಯಿಂದ ಗುರುತರ ಬದಲಾವಣೆಗೆ ಸಾಕ್ಷಿಯಾಗಲಿದೆ ಎಂದು ಡೆಲಾಯ್ಟ್ ವರದಿ ತಿಳಿಸಿದೆ.
ಸರ್ಕಾರ ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್ (ಎಬಿಡಿಎಂ), ಇ-ಸಂಜೀವಿನಿಯಂತಹ ಪ್ರಮುಖ ಉಪಕ್ರಮಗಳನ್ನು ಜಾರಿಗೆ ತಂದಿದೆ. ಇದು ಆರೋಗ್ಯವಲಯದ ಡಿಜಿಟಲೀಕರರಣ ಪರಿಸರ ಅಭಿವೃದ್ಧಿಯಲ್ಲಿ ಮಹತ್ವದ ಹೆಜ್ಜೆ. ಇನ್ನು ಖಾಸಗಿ ಆರೋಗ್ಯ ವಲಯದಲ್ಲೂ ಕೂಡ ಈಗಾಗಲೇ ರೊಬೋಟಿಕ್ಸ್, ಟೆಲಿಹೆಲ್ತ್ ಮತ್ತು ಎಐ ತಂತ್ರಜ್ಞಾನದ ಬಳಕೆ ಆರಂಭವಾಗಿದೆ.
ರೋಗಿಗಳಿಗೆ ಮತ್ತು ಆರೋಗ್ಯ ವಲಯದಲ್ಲಿ ಟೆಕ್ ಆಧಾರಿತ ಬೆಂಬಲ ನೀಡಲು ಖಾಸಗಿ ಘಟಕಗಳು 5ಜಿ ಅಳವಡಿಕೆಯನ್ನು ಹೆಚ್ಚಿಸಿರುವುದನ್ನು ದತ್ತಾಂಶದಲ್ಲಿ ಕಾಣಬಹುದು. ಈ ಮೂಲಕ ಆರೋಗ್ಯ ವಲಯದಲ್ಲಿನ ವೇಗದ ಸಂಪರ್ಕದ ಲಭ್ಯತೆ ಹೆಚ್ಚಳದ ಬೆಳವಣಿಗೆಯನ್ನು ವರದಿ ಸೂಚಿಸಿದೆ.
ಭಾರತ ಡಿಜಿಟಲ್ ಆರ್ಥಿಕತೆ ವೇಗವಾಗಿ ಬೆಳೆಯುತ್ತಿದೆ. 2021ರಲ್ಲಿ 75 ಮಿಲಿಯನ್ 5ಜಿ ಫಿಕ್ಸಡ್ ವೈರ್ಲೆಸ್ ಅಕ್ಸೆಸ್ ಬ್ರಾಂಡ್ಬಾಡ್ ಚಂದಾದಾರಿಕೆ ಪಡೆದಿದೆ. 2030ರಲ್ಲಿ ಈ ಯೋಜನೆ 460 ಮಿಲಿಯನ್ ಜನರಿಗೆ ತಲುಪಿದೆ. ಈ ನಡುವೆ 5ಜಿ ಗಮನಾರ್ಹ ಬೆಳವಣಿಗೆಯನ್ನು ಕಾಣುತ್ತಿದ್ದೇವೆ. ವಿಶೇಷವಾಗಿ ಇದು ಗ್ರಾಮೀಣ ಪ್ರದೇಶದಲ್ಲಿ ಹೆಚ್ಚು ನಿರ್ಣಾಯಕವಾಗಿದೆ ಎಂದು ಡೆಲಾಯ್ಟ್ ಟಚ್ ತೋಮಟ್ಸು ಇಂಡಿಯಾದ ಜೊಯ್ದೀಪ್ ಘೋಷ್ ಹೇಳಿದ್ದಾರೆ. (ಐಎಎನ್ಎಸ್)
ಇದನ್ನೂ ಓದಿ:ಕೋವಿಡ್ ನಂತರ ಆನ್ಲೈನ್ ವೈದ್ಯಕೀಯ ಕನ್ಸಲ್ಟೇಶನ್ 4 ಪಟ್ಟು ಹೆಚ್ಚಳ