ಕರ್ನಾಟಕ

karnataka

ETV Bharat / health

ಆರೋಗ್ಯಕ್ಕೆ ಅಮೃತ ಪೇರಲ ಎಲೆಯ ಚಹಾ; ಇದರ ಸೇವನೆಯಿಂದ ಹಲವು ಪ್ರಯೋಜನ - Guava Leaf Tea Health Benefits

Guava Leaf Tea Health Benefits: ಪೇರಲ ಗಿಡದ ಎಲೆಗಳಿಂದ ಚಹಾ ತಯಾರಿಸಬಹುದೆಂದು ಅನೇಕರಿಗೆ ತಿಳಿದಿಲ್ಲ. ಉತ್ಕರ್ಷಣ ನಿರೋಧಕಗಳು ಮತ್ತು ವಿಟಮಿನ್-ಸಿ ಸಮೃದ್ಧವಾಗಿರುವ ಈ ಚಹಾವನ್ನು ನೀವು ಪ್ರತಿದಿನ ಸೇವಿಸಿದರೆ ಅದ್ಭುತ ಪ್ರಯೋಜನಗಳು ದೊರೆಯುತ್ತದೆ ಎಂದು ತಜ್ಞರು ಹೇಳುತ್ತಾರೆ. ಸಂಪೂರ್ಣ ವಿವರ ಈ ಸ್ಟೋರಿಯಲ್ಲಿದೆ.

HEALTH BENEFITS OF GUAVA LEAF TEA  GUAVA LEAVES TEA BENEFITS  GUAVA USES AND SIDE EFFECTS  GUAVA LEAF TEA NUTRITION AND RISKS
ಪೇರಲ ಎಲೆಯ ಚಹಾ (ETV Bharat)

By ETV Bharat Health Team

Published : Sep 14, 2024, 1:45 PM IST

Guava Leaf Tea Health Benefits:ಪೇರಲ ಹಣ್ಣು ತಿನ್ನಬಹುದು, ಪೇರಲ ಹಣ್ಣಿನ ಜ್ಯೂಸ್​ನ್ನು ಕುಡಿಯಬಹುದು. ಆದರೆ ನೀವು ಪೇರಲ ಎಲೆಗಳನ್ನು ತಿನ್ನಬಹುದು ಎಂದು ನಿಮ್ಮಲ್ಲಿ ಎಷ್ಟು ಜನರಿಗೆ ತಿಳಿದಿದೆ? ಕೆಲವರು ಪೇರಲ ಎಲೆಗಳನ್ನು ನೇರವಾಗಿ ತಿಂದರೆ, ಇನ್ನು ಕೆಲವರು ಸ್ವಲ್ಪ ಹುಣಸೆ ಹಣ್ಣಿನೊಂದಿಗೆ ತಿನ್ನುತ್ತಾರೆ. ಇದಲ್ಲದೆ, ಪೇರಲ ಎಲೆಗಳಿಂದ ಚಹಾವನ್ನು ಕೂಡ ತಯಾರಿಸಬಹುದು ಎಂದು ಕೆಲವೇ ಕೆಲವು ಜನರಿಗೆ ಮಾತ್ರ ತಿಳಿದಿದೆ. ಪೇರಲ ಹಣ್ಣುಗಳನ್ನು ನೇರವಾಗಿ ತಿಂದರೆ ಅದರಲ್ಲಿರುವ ಪೌಷ್ಟಿಕಾಂಶ ಎಷ್ಟು ಪ್ರಯೋಜನಕಾರಿಯೋ, ಅದರ ಎಲೆಗಳಿಂದ ತಯಾರಿಸಿದ ಚಹಾವೂ ದೇಹಕ್ಕೆ ಅಷ್ಟೇ ಪ್ರಯೋಜನಕಾರಿಯಾಗಿದೆ ಎಂದು ತಜ್ಞರು ಹೇಳುತ್ತಾರೆ.

ಪೇರಲ ಎಲೆಗಳಲ್ಲಿ ಉತ್ಕರ್ಷಣ ನಿರೋಧಕಗಳು, ವಿಟಮಿನ್-ಸಿ ಮತ್ತು ಲೈಕೋಪೀನ್ ಹೆಚ್ಚಿನ ಪ್ರಮಾಣದಲ್ಲಿದ್ದು, ಚರ್ಮವನ್ನು ರಕ್ಷಿಸುತ್ತದೆ. ಈ ಎಲೆಗಳಲ್ಲಿ ಪೊಟ್ಯಾಸಿಯಮ್ ಕೂಡ ಇದ್ದು, ಇದು ಬಿಪಿ ಮಟ್ಟವನ್ನು ಸ್ಥಿರವಾಗಿರಿಸುತ್ತದೆ ಎಂದು ತಜ್ಞರು ಹೇಳುತ್ತಾರೆ. 80 ಪ್ರತಿಶತದಷ್ಟು ನೀರನ್ನು ಹೊರತುಪಡಿಸಿ, ಪೇರಲವು ಹೆಚ್ಚಿನ ಪ್ರಮಾಣದ ಫೈಬರ್ ಅನ್ನು ಹೊಂದಿರುತ್ತದೆ. ಇದು ತೂಕವನ್ನು ಕಡಿಮೆ ಮಾಡಲು ಮತ್ತು ಮಾನವ ದೇಹದಲ್ಲಿ ಚಯಾಪಚಯ ಸುಧಾರಿಸಲು ಸಹಾಯ ಮಾಡುತ್ತದೆ ಎಂದು ತಜ್ಞರು ಸಲಹೆ ನೀಡುತ್ತಾರೆ.

ಪೇರಲ ಎಲೆಯ ಚಹಾದ ಪ್ರಯೋಜನಗಳೇನು?:

ಮಧುಮೇಹ:ಜಪಾನಿನ ಅನೇಕ ಜನರು ತಮ್ಮ ರಕ್ತದಲ್ಲಿನ ಸಕ್ಕರೆಯ ಮಟ್ಟವು ತುಂಬಾ ಹೆಚ್ಚಾಗುವುದನ್ನು ಮತ್ತು ಮಧುಮೇಹವನ್ನು ತಡೆಯಲು ಪೇರಲ ಗಿಡದ ಎಲೆಯ ಚಹಾವನ್ನು ಕುಡಿಯುತ್ತಾರೆ. ಇದನ್ನು ವಿಶೇಷವಾಗಿ ಆಹಾರ ಸೇವಿಸಿದ ನಂತರ ತೆಗೆದುಕೊಳ್ಳಲಾಗುತ್ತದೆ. ಏಕೆಂದರೆ ಪೇರಲ ಎಲೆಗಳು ಸಕ್ಕರೆಯಲ್ಲಿರುವ ಸುಕ್ರೋಸ್ ಮತ್ತು ಮಾಲ್ಟೋಸ್ ಅನ್ನು ಹೀರಿಕೊಳ್ಳುವ ಸಾಮರ್ಥ್ಯವನ್ನು ಹೊಂದಿವೆ. ಮತ್ತು ಅವುಗಳಲ್ಲಿರುವ ವಿಶೇಷ ಕಿಣ್ವಗಳು ಜೀರ್ಣಾಂಗದಲ್ಲಿರುವ ಕಾರ್ಬೋಹೈಡ್ರೇಟ್‌ಗಳನ್ನು ಗ್ಲೂಕೋಸ್ ಆಗಿ ಪರಿವರ್ತಿಸುತ್ತವೆ.

ಕೆಟ್ಟ ಕೊಲೆಸ್ಟ್ರಾಲ್:ಈ ಪೇರಲದ ಚಹಾವು ದೇಹದಲ್ಲಿ ಸಂಗ್ರಹವಾದ ಕೆಟ್ಟ ಕೊಬ್ಬನ್ನು ಕಡಿಮೆ ಮಾಡುತ್ತದೆ. ಹೃದಯ ಕಾಯಿಲೆಗಳು ಮತ್ತು ಇತರ ಸಮಸ್ಯೆಗಳನ್ನು ತಡೆಯುತ್ತದೆ. ನೀವು 8 ರಿಂದ 9 ವಾರಗಳವರೆಗೆ ನಿಯಮಿತವಾಗಿ ಈ ಚಹಾವನ್ನು ಸೇವಿಸಿದರೆ ಖಂಡಿತವಾಗಿಯೂ ನೀವು ಈ ಪ್ರಯೋಜನವನ್ನು ಪಡೆಯಬಹುದು.

ತ್ವಚೆಯ ಆರೋಗ್ಯ:ಈ ಟೀ ತ್ವಚೆಗೂ ತುಂಬಾ ಒಳ್ಳೆಯದು. ವಿಟಮಿನ್-ಸಿ ಸಮೃದ್ಧವಾಗಿರುವ ಇದು ಮುಖದ ಮೇಲಿನ ಕಲೆಗಳನ್ನು ಕಡೆಮೆ ಮಾಡುತ್ತದೆ. ಮತ್ತು ಚರ್ಮವನ್ನು ಕಾಂತಿಯುತಗೊಳಿಸುತ್ತದೆ ಎಂದು ತಜ್ಞರು ಹೇಳುತ್ತಾರೆ.

ಕೂದಲು:ಪೇರಲ ಎಲೆಯ ಚಹಾವು ಕೂದಲು ಉದುರುವಿಕೆಯನ್ನು ಕಡಿಮೆ ಮಾಡುತ್ತದೆ. ಮತ್ತು ಇತರ ಸಮಸ್ಯೆಗಳನ್ನು ತಡೆಯುತ್ತದೆ. ಪೇರಲ ಎಲೆಗಳನ್ನು ನೀರಿನಲ್ಲಿ ಕುದಿಸಿ ಮತ್ತು ಕೂದಲಿನ ಬುಡಕ್ಕೆ ನೀರನ್ನು ಮಸಾಜ್ ಮಾಡಿ. ಪೇರಲ ಎಲೆಗಳನ್ನು ನೀರಿನಲ್ಲಿ ಕುದಿಸಿ, ಅದೇ ನೀರನ್ನು ಕುಡಿಯಬಹುದು. ಇದು ಆಂತರಿಕ ಶಕ್ತಿಯನ್ನು ನೀಡುವ ಮೂಲಕ ಕೂದಲಿನ ಕಿರುಚೀಲಗಳನ್ನು ಬಲಪಡಿಸುತ್ತದೆ.

ಅತಿಸಾರ:ಇದು ದೇಹದಲ್ಲಿ ಅತಿಸಾರವನ್ನು ಉಂಟುಮಾಡುವ ಸ್ಟ್ಯಾಫಿಲೋಕೊಕಸ್ ಆರಾಸ್ ಬ್ಯಾಕ್ಟೀರಿಯಾದ ಬೆಳವಣಿಗೆಯನ್ನು ತಡೆಯುತ್ತದೆ. ಅತಿಸಾರದಿಂದ ಬಳಲುತ್ತಿರುವ ಯಾವುದೇ ವ್ಯಕ್ತಿಗೆ ನೀರಿನಂಶದ ಭೇದಿಯನ್ನು ನಿಲ್ಲಿಸಲು ಮತ್ತು ಹೊಟ್ಟೆ ನೋವನ್ನು ಕಡಿಮೆ ಮಾಡಲು ಸಾಮಾನ್ಯ ಔಷಧದೊಂದಿಗೆ ಪೇರಲ ಎಲೆಗಳೊಂದಿಗೆ ಚಹಾವನ್ನು ಕುಡಿಯಬಹುದು.

ಶೀತ, ಕೆಮ್ಮು:ಪೇರಲ ಎಲೆಯ ಚಹಾವು ವಿಟಮಿನ್-ಸಿ ಮತ್ತು ಕಬ್ಬಿಣದ ಹೆಚ್ಚಿನ ಅಂಶ ಹೊಂದಿರುವುದರಿಂದ ಶೀತ ಮತ್ತು ಕೆಮ್ಮಿನಿಂದ ರಕ್ಷಿಸುತ್ತದೆ. ಬಿಸಿಯಾಗಿರುವಾಗ ಸೇವಿಸುವುದರಿಂದ ಕಫವೂ ಕಡಿಮೆಯಾಗುತ್ತದೆ.

ಗಂಟಲು ಮತ್ತು ಶ್ವಾಸಕೋಶವನ್ನು ಸ್ವಚ್ಛಗೊಳಿಸುತ್ತದೆ. ಮತ್ತು ಶೀತ ಮತ್ತು ಕೆಮ್ಮಿನಿಂದ ತ್ವರಿತವಾಗಿ ಚೇತರಿಸಿಕೊಳ್ಳಲು ಸಹಾಯ ಮಾಡುತ್ತದೆ. ಪೇರಲ ಎಲೆಗಳಿಂದ ಚಹಾ ಕುದಿಸಿದರೆ ಇಷ್ಟೆಲ್ಲಾ ಪ್ರಯೋಜನಗಳನ್ನು ಪಡೆಯಬಹುದು ಎಂದುಕೊಂಡರೆ, ಮೆಕ್ಸಿಕೋ, ದಕ್ಷಿಣ ಅಮೆರಿಕದಂತಹ ದೇಶಗಳಲ್ಲಿ ಪೇರಲ ಎಲೆಗಳನ್ನು ಆಯುರ್ವೇದದ ಚಿಕಿತ್ಸೆಗೂ ಬಳಸುತ್ತಾರೆ.

ಪ್ರಮುಖ ಸೂಚನೆ:ಇಲ್ಲಿ ನಿಮಗೆ ನೀಡಿರುವ ಎಲ್ಲ ಆರೋಗ್ಯ ಮಾಹಿತಿ ಮತ್ತು ವೈದ್ಯಕೀಯ ಸಲಹೆಗಳು ನಿಮ್ಮ ತಿಳುವಳಿಕೆಗಾಗಿ ಮಾತ್ರ. ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯನ್ನು ಆಧರಿಸಿ ನಾವು ಈ ಮಾಹಿತಿ ನಿಮಗೆ ನೀಡಿದ್ದೇವೆ. ಆದರೆ, ಇವುಗಳನ್ನು ಅನುಸರಿಸುವ ಮೊದಲು ಪರಿಣಿತ ವೈದ್ಯರ ಸಲಹೆಯನ್ನು ತೆಗೆದುಕೊಳ್ಳುವುದು ಉತ್ತಮ.

ಇದನ್ನೂ ಓದಿ:

ABOUT THE AUTHOR

...view details