BENEFITS OF DRINKING GINGER WATER:ಚಳಿಗಾಲದಲ್ಲಿ ಶುಂಠಿ ಸೇವಿಸುವುದು ಆರೋಗ್ಯಕ್ಕೆ ಉತ್ತಮವಾಗಿದೆ. ಬ್ಯಾಕ್ಟೀರಿಯಾ ವಿರೋಧಿ ಹಾಗೂ ಉರಿಯೂತ ನಿವಾರಕ ಗುಣಗಳು ಶುಂಠಿಯಲ್ಲಿ ಅಡಕವಾಗಿದೆ. ದೇಹಕ್ಕೆ ಹೆಚ್ಚು ಆರೋಗ್ಯದ ಲಾಭಗಳು ಲಭಿಸುತ್ತದೆ. ಆಯುರ್ವೇದ ವೈದ್ಯರು ತಿಳಿಸುವ ಪ್ರಕಾರ, ಶುಂಠಿ ಬೆರೆಸಿದ ಬಿಸಿನೀರನ್ನು ಕುಡಿಯುವುದರಿಂದ ಹಲವು ಆರೋಗ್ಯದ ಪ್ರಯೋಜನಗಳಿವೆ. ಒಂದು ತಿಂಗಳು ನಿಯಮಿತವಾಗಿ ಶುಂಠಿ ನೀರು ಕುಡಿಯುವುದರಿಂದ ಏನೆಲ್ಲಾ ಲಾಭಗಳು ಲಭಿಸುತ್ತದೆ ಎಂಬುದನ್ನು ತಿಳಿಯೋಣ.
ಶುಂಠಿಯು ನೈಸರ್ಗಿಕವಾಗಿ ಲಭಿಸುವ ಔಷಧವಾಗಿದೆ. ಶುಂಠಿಯನ್ನು ಶತಮಾನಗಳಿಂದ ವಿವಿಧ ಆರೋಗ್ಯದ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲು ಬಳಕೆ ಮಾಡಲಾಗುತ್ತದೆ. ಆಯುರ್ವೇದದ ಗ್ರಂಥಗಳಲ್ಲೂ ಶುಂಠಿಗೆ ಅತ್ಯಂತ ಪ್ರಮುಖ ಗಿಡಮೂಲಿಕೆಗಳಲ್ಲಿ ಒಂದಾಗಿದೆ. ಅನೇಕ ಜನರು ತಾವು ಸೇವಿಸುವಂತಹ ದೈನಂದಿನ ಚಹಾದಲ್ಲಿ ಶುಂಠಿ ಸೇರಿಸಿ ಕುಡಿಯುತ್ತಾರೆ. ಈ ರೀತಿ ಮಾಡುವುದರಿಂದ ಚಹಾದ ರುಚಿ ಹೆಚ್ಚಾಗುತ್ತದೆ. ಜೊತೆಗೆ ಗಂಟಲು ನೋವಿನಂತಹ ಸಮಸ್ಯೆಗಳಿಂದ ಪರಿಹಾರ ದೊರೆಯುತ್ತದೆ. ಭಾರತದಲ್ಲಿ ಹೆಚ್ಚಿನ ಜನರು ವಿವಿಧ ಪ್ರಕಾರದ ಖಾದ್ಯಗಳನ್ನು ರೆಡಿ ಮಾಡಲು ಶುಂಠಿ ಬಳಕೆ ಮಾಡುತ್ತಾರೆ. ಖಾದ್ಯಗಳ ರುಚಿ ಹೆಚ್ಚಿಸಲು ಮಸಾಲೆ ಪದಾರ್ಥವಾಗಿ ಬಳಿಸುವ ಶುಂಠಿಗೆ ಹೆಚ್ಚಿನ ಪ್ರಾಮುಖ್ಯತೆಯಿದೆ.
ಪ್ರತಿದಿನ ಶುಂಠಿ ನೀರಿನಿಂದ ದೊರೆಯುವ ಪ್ರಯೋಜನಗಳೇನು?:ಉತ್ಕರ್ಷಣ ನಿರೋಧಕಗಳಂತಹ ಪೋಷಕಾಂಶಗಳು ಶುಂಠಿಯಲ್ಲಿ ಇವೆ. ಒಂದು ತಿಂಗಳವರೆಗೆ ಪ್ರತಿದಿನ ಶುಂಠಿ ನೀರನ್ನು ಕುಡಿಯುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಶುಂಠಿಯಲ್ಲಿರುವ ಉತ್ಕರ್ಷಣ ನಿರೋಧಕ ಹಾಗೂ ಉರಿಯೂತ ನಿವಾರಕ ಗುಣಗಳು ಜೀರ್ಣಾಂಗ ವ್ಯವಸ್ಥೆಯ ಆರೋಗ್ಯಕ್ಕೆ ಉತ್ತಮವಾಗಿದೆ. ಅಜೀರ್ಣ, ಹೊಟ್ಟೆ ನೋವು, ತೇಗುವಿಕೆ ಸಮಸ್ಯೆ ಹಾಗೂ ವಾಕರಿಕೆಯಿಂದ ಬಳಲುತ್ತಿರುವ ಜನರು ಶುಂಠಿ ಸೇವಿಸಿದರೆ ಪರಿಹಾರ ಸಿಗುತ್ತದೆ. ಒತ್ತಡ, ಉದ್ವೇಗದ ಭಾವನೆಗಳನ್ನು ನಿವಾರಿಸುವ ಶಕ್ತಿ ಶುಂಠಿಗೆ ಇದೆ. ಜೊತೆಗೆ ಮಾನಸಿಕ ಆರೋಗ್ಯ ಸುಧಾರಿಸಲು ಸಹಾಯ ಮಾಡುತ್ತದೆ ಎಂದು ಆರೋಗ್ಯ ತಜ್ಞರು ತಿಳಿಸುತ್ತಾರೆ.
ಉತ್ಕರ್ಷಣ ನಿರೋಧಕ ಹಾಗೂ ಉರಿಯೂತ ನಿವಾರಕ ಗುಣಗಳನ್ನು ಹೊಂದಿರುವ ಶುಂಠಿ ನೀರನ್ನು ಒಂದು ತಿಂಗಳು ಕುಡಿಯುವುದರಿಂದ ತೂಕ ಇಳಿಸಿಕೊಳ್ಳಲು ಸುಲಭವಾಗುತ್ತದೆ. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಶುಂಠಿ ನೀರು ಕುಡಿಯುವುದರಿಂದ ಚಯಾಪಚಯ ಕ್ರಿಯೆ ಉತ್ತಮವಾಗಿ ನಡೆಯುತ್ತದೆ. ಇದರೊಂದಿಗೆ ಬೊಜ್ಜು ಕಡಿಮೆಯಾಗುತ್ತದೆ. ಜೊತೆಗೆ ಹಸಿವನ್ನೂ ಕಡಿಮೆ ಮಾಡುತ್ತದೆ. ದಿನವಿಡೀ ಅತಿಯಾಗಿ ಆಹಾರ ಸೇವಿಸುವಂತಹ ಸಮಸ್ಯೆಗಳನ್ನು ನಿವಾರಣೆ ಮಾಡುತ್ತದೆ. ಇದರ ಪರಿಣಾಮವಾಗಿ ನಿಮ್ಮ ತೂಕ ಇಳಿಸಿಕೊಳ್ಳಲು ಸಾಧ್ಯವಾಗುತ್ತದೆ.
ಒಳ್ಳೆಯ ಕೊಲೆಸ್ಟ್ರಾಲ್ ಹೆಚ್ಚುತ್ತೆ:ಶುಂಠಿಯಲ್ಲಿರುವ ಗುಣಗಳು ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡಿ ಹಾಗೂ ಒಳ್ಳೆಯ ಕೊಲೆಸ್ಟ್ರಾಲ್ ಹೆಚ್ಚಿಸುತ್ತದೆ. ಶುಂಠಿ ಇಲ್ಲವೇ ಶುಂಠಿ ನೀರು ಹಾಗೂ ಶುಂಠಿ ಟೀ ಸೇವಿಸುವುದರಿಂದ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ. ಶುಂಠಿ ಹೃದಯದ ಆರೋಗ್ಯಕ್ಕೂ ಉತ್ತಮವಾಗಿದೆ. ಶುಂಠಿಯಲ್ಲಿರುವ ಜಿಂಜರಾಲ್ ಪರಿಣಾಮಕಾರಿ ಅಂಶವಾಗಿದ್ದು, ಇದು ಕೀಲು ಮತ್ತು ಸ್ನಾಯು ನೋವು ಕಡಿಮೆಗೊಳಿಸಲು ಸಹಾಯವಾಗುತ್ತದೆ. ಮುಖ್ಯವಾಗಿ ಜಿಂಜರಾಲ್ಗೆ ಉರಿಯೂತ ನಿವಾರಕ ಗುಣವಿದೆ. ಸಂಧಿವಾತ, ಸ್ನಾಯು ನೋವು, ಮುಟ್ಟಿನ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ.