ETV Bharat / health

ಮೊದಲ ಬಾರಿಗೆ ಯಶಸ್ವಿಯಾದ ಕಾರ್ ಟಿ-ಸೆಲ್ ಚಿಕಿತ್ಸೆ: ಯಾವುದಕ್ಕೆ ಈ ಚಿಕಿತ್ಸೆ ನೀಡಲಾಗುತ್ತೆ ಗೊತ್ತಾ? - FIRST CAR T CELL THERAPY

FIRST CAR T CELL THERAPY: ಸಫ್ದರ್ಜಂಗ್ ಆಸ್ಪತ್ರೆಯಲ್ಲಿ ಕ್ಯಾನ್ಸರ್ ರೋಗಿಗೆ CAR -T ಸೆಲ್​ ಚಿಕಿತ್ಸೆ ನೀಡಲಾಗಿದೆ. ಯಾವ ಕಾಯಿಲೆಗೆ CAR-T ಸೆಲ್​ ಚಿಕಿತ್ಸೆ ನೀಡಲಾಗುತ್ತದೆ ಎಂಬುದನ್ನು ಈ ಸ್ಟೋರಿಯಲ್ಲಿ ತಿಳಿಯೋಣ.

FIRST CAR T CELL THERAPY  SAFDARJUNG HOSPITAL IN DELHI  CAR T CELL THERAPY IN DELHI ಕಾರ್ ಟಿ-ಸೆಲ್ ಚಿಕಿತ್ಸೆ
ಸಫ್ದರ್ಜಂಗ್ ಆಸ್ಪತ್ರೆಯಲ್ಲಿ ಮೊದಲ ಬಾರಿಗೆ ಯಶಸ್ವಿಯಾದ ಕಾರ್ ಟಿ-ಸೆಲ್ ಚಿಕಿತ್ಸೆ (ETV Bharat)
author img

By ETV Bharat Health Team

Published : Jan 25, 2025, 5:10 PM IST

ನವದೆಹಲಿ: ಸಫ್ದರ್ಜಂಗ್ ಆಸ್ಪತ್ರೆಯಲ್ಲಿ ಮೊದಲ ಬಾರಿಗೆ ರಕ್ತ ಕ್ಯಾನ್ಸರ್ ರೋಗಿಗೆ ಯಶಸ್ವಿಯಾಗಿ ಚಿಕಿತ್ಸೆ ಕೊಡಲಾಗಿದೆ. ಪಿಜಿಐ ಚಂಡೀಗಢ ಹಾಗೂ ದೆಹಲಿ ಏಮ್ಸ್ ನಂತರ CAR-T ಸೆಲ್​ ಚಿಕಿತ್ಸೆಯೊಂದಿಗೆ ಕ್ಯಾನ್ಸರ್​ಗೆ ಚಿಕಿತ್ಸೆ ನೀಡುವ ದೇಶದ ಮೂರನೇ ಆಸ್ಪತ್ರೆ ಸಫ್ದರ್ಜಂಗ್ ಆಗಿದೆ. ಲಿಂಫೋಮಾ ಹಾಗೂ ರಕ್ತ ಕ್ಯಾನ್ಸರ್ ಚಿಕಿತ್ಸೆಗಾಗಿ ಸಫ್ದರ್ಜಂಗ್ ಆಸ್ಪತ್ರೆಯು ಮೊದಲ CAR-T ಸೆಲ್​ ಚಿಕಿತ್ಸೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಪ್ರೊಫೆಸರ್ ಸಂದೀಪ್ ಬನ್ಸಾಲ್ ಅವರ ನೇತೃತ್ವದಲ್ಲಿ ಈ ಚಿಕಿತ್ಸೆಯು ಲಿಂಫೋಮಾ ಹಾಗೂ ರಕ್ತ ಕ್ಯಾನ್ಸರ್‌ಗೆ ವಿನೂತನವಾದ ಚಿಕಿತ್ಸೆಯಾಗಿದೆ.

ಆಸ್ಪತ್ರೆಯ ವಕ್ತಾರೆ ಪೂನಂ ಧಂಡಾ ಪ್ರತಿಕ್ರಿಯಿಸಿ, ವಿಭಾಗದ ಮುಖ್ಯಸ್ಥ ಡಾ. ಕೌಶಲ್ ಕಲ್ರಾ ಅವರ ನೇತೃತ್ವದಲ್ಲಿ ವೈದ್ಯಕೀಯ ಆಂಕೊಲಾಜಿ ವಿಭಾಗದ ಸಮರ್ಪಣೆ ಹಾಗೂ ಪರಿಣತಿಯಿಂದಾಗಿ ಮಹತ್ವದ ಸಾಧನೆ ಮಾಡಲು ಸಾಧ್ಯವಾಗಿದೆ. CAR-T ಸೆಲ್​ ಚಿಕಿತ್ಸೆಯು ಒಂದು ಮುಂದುವರಿದ ಇಮ್ಯುನೊಥೆರಪಿಯಾಗಿದೆ. ಇದು ರೋಗಿಯ ಸ್ವಂತ ರೋಗನಿರೋಧಕ ಕೋಶಗಳ ಶಕ್ತಿಯನ್ನು ನಿರ್ದಿಷ್ಟವಾಗಿ ಟಿ-ಕೋಶಗಳನ್ನು ಕ್ಯಾನ್ಸರ್ ವಿರುದ್ಧ ಹೋರಾಡಲು ಬಳಕೆ ಮಾಡಿಕೊಳ್ಳತ್ತದೆ.

CAR-T ಸೆಲ್​ ಚಿಕಿತ್ಸೆ: ಟಿ-ಸೆಲ್​ಗಳನ್ನು ತಳೀಯವಾಗಿ ಮಾರ್ಪಡು ಮಾಡಲಾಗಿದೆ. ಅವು ದೇಹದ ನೈಸರ್ಗಿಕ ಪ್ರತಿರಕ್ಷಣಾ ಪ್ರತಿಕ್ರಿಯೆಗಿಂತ ಹೆಚ್ಚು ಪರಿಣಾಮಕಾರಿಯಾಗಿ ಕ್ಯಾನ್ಸರ್ ಕೋಶಗಳನ್ನು ಗುರಿಯಾಗಿಸಿಕೊಂಡು ನಾಶಪಡಿಸುತ್ತವೆ. ಈ ಚಿಕಿತ್ಸೆಯು ಹಾಡ್ಗ್ಕಿನ್ ಅಲ್ಲದೇ ಇರುವ ಲಿಂಫೋಮಾದಂತಹ ಕ್ಯಾನ್ಸರ್‌ಗಳಿಂದ ಬಳಲುತ್ತಿರುವ ರೋಗಿಗಳಿಗೆ ದಿಕ್ಕನ್ನೇ ಬದಲಾಯಿಸುವ ಗುಣ ಹೊಂದಿದೆ ಎಂಬುದನ್ನು ಸಾಬೀತು ಮಾಡಿದೆ. ಸಫ್ದರ್ಜಂಗ್ ಆಸ್ಪತ್ರೆಯಲ್ಲಿ ಮೊದಲ CAR-T ಸೆಲ್​​ ಚಿಕಿತ್ಸೆ ರಿಫ್ರ್ಯಾಕ್ಟರಿ ಅಲ್ಲದ ಹಾಡ್ಗ್ಕಿನ್ ಲಿಂಫೋಮಾ, ಒಂದು ರೀತಿಯ ರಕ್ತದ ಕ್ಯಾನ್ಸರ್​ನಿಂದ ಬಳಲುತ್ತಿರುವ ರೋಗಿಗೆ ನೀಡಲಾಗಿದೆ.

ದೇಶದ 3ನೇ ಸೆಂಟ್ರಲ್​ ಸರ್ಕಾರಿ ಆಸ್ಪತ್ರೆ: ರೋಗಿಯು ಚಿಕಿತ್ಸೆ ಚೆನ್ನಾಗಿ ಸ್ಪಂದಿಸಿದ್ದಾರೆ. ಇದು ರೋಗಿಗೆ ಮತ್ತು ವೈದ್ಯಕೀಯ ತಂಡಕ್ಕೆ ಪ್ರೋತ್ಸಾಹದಾಯಕ ಫಲಿತಾಂಶ ಲಭಿಸಿದೆ. ಈ ಯಶಸ್ವಿಗೆ ಆಸ್ಪತ್ರೆ ಅತ್ಯಾಧುನಿಕ ಕ್ಯಾನ್ಸರ್ ಆರೈಕೆ ಒದಗಿಸುವ ನಿರಂತರ ಪ್ರಯತ್ನಗಳಲ್ಲಿ ಒಂದು ಪ್ರಮುಖ ಮೈಲಿಗಲ್ಲು ಸಾಧಿಸಿದೆ. ಸಫ್ದರ್ಜಂಗ್ ಆಸ್ಪತ್ರೆಯು ಭಾರತದಲ್ಲಿ ಅತ್ಯಂತ ವಿಶೇಷ ಹಾಗೂ ಚಿಕಿತ್ಸಾ ಆಯ್ಕೆಯಾದ CAR-T ಸೆಲ್​ ಚಿಕಿತ್ಸೆಯನ್ನು ನೀಡುವ 3ನೇ ಸೆಂಟ್ರಲ್​ ಸರ್ಕಾರಿ ಆಸ್ಪತ್ರೆಯಾಗಿದೆ ಎಂದು ಡಾ.ಕೌಶಲ್ ಕಲ್ರಾ ಮೆಚ್ಚುಗೆ ವ್ಯಕ್ತಪಡಿಸಿದರು. ಈ ಸಾಧನೆಯ ಕುರಿತು ಸಂತೋಷ ವ್ಯಕ್ತಪಡಿಸಿದ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಸಂದೀಪ್ ಬನ್ಸಾಲ್ ಅವರು, ದೇಶಾದ್ಯಂತ ರೋಗಿಗಳಿಗೆ ಸುಧಾರಿತ ವೈದ್ಯಕೀಯ ಚಿಕಿತ್ಸೆಗಳನ್ನು ಒದಗಿಸುವ ಸಂಸ್ಥೆಯ ಬದ್ಧತೆಯನ್ನು ಈ ಕಾರ್ಯವು ಒತ್ತಿಹೇಳುತ್ತದೆ ಎಂದು ತಿಳಿಸಿದರು.

ಉತ್ತರ ಭಾರತದ ಇತರ ಎರಡು ಸರ್ಕಾರಿ ಸಂಸ್ಥೆಗಳಾದ ಪಿಜಿಐ ಚಂಡೀಗಢ ಮತ್ತು ಏಮ್ಸ್ ನವದೆಹಲಿ ಮಾತ್ರ ಈ ಹಿಂದೆ ಸಿಎಆರ್ ಟಿ ಸೆಲ್​ ಚಿಕಿತ್ಸೆಯನ್ನು ನೀಡುತ್ತವೆ. ಈ ಸಾಧನೆಯು ಸಫ್ದರ್ಜಂಗ್ ಆಸ್ಪತ್ರೆಯು ಪ್ರಮುಖ ಆರೋಗ್ಯ ಸಂಸ್ಥೆಯಾಗಿ ಅದರ ಖ್ಯಾತಿಯನ್ನು ಹೆಚ್ಚಿಸುವುದರ ಜೊತೆಗೆ, ಸಾರ್ವಜನಿಕ ಆರೋಗ್ಯ ವ್ಯವಸ್ಥೆಯಲ್ಲಿ ರೋಗಿಗಳಿಗೆ ಈ ಜೀವ ಉಳಿಸಲು ಈ ಚಿಕಿತ್ಸೆಯ ಮಹತ್ವದ್ದಾಗಿದೆ. ಈ ಸಾಧನೆಯು ಕ್ಯಾನ್ಸರ್ ರೋಗಿಗಳಿಗೆ ಚಿಕಿತ್ಸೆ ನೀಡಲು ಕಷ್ಟಕರವಾದ ರಕ್ತದ ಕ್ಯಾನ್ಸರ್ ಇರುವವರಿಗೆ ಆಶಾಕಿರಣವಾಗಿದೆ. ಭಾರತದ ಇತರ ಸಾರ್ವಜನಿಕ ಆಸ್ಪತ್ರೆಗಳು ಇಂತಹ ಚಿಕಿತ್ಸೆಯನ್ನು ಒದಗಿಸಲು ಹೊಸ ಮಾನದಂಡವನ್ನು ಸ್ಥಾಪಿಸುತ್ತದೆ ಎಂದು ಡಾ.ಸಂದೀಪ್ ಬನ್ಸಾಲ್ ಹೇಳಿದ್ದಾರೆ.

ಏನಿದು CAR T ಸೆಲ್ ಚಿಕಿತ್ಸೆ?: ಆರೋಗ್ಯ ತಜ್ಞರ ಪ್ರಕಾರ, CAR-T ಸೆಲ್ ಥೆರಪಿ (ಕೈಮೆರಿಕ್ ಆಂಟಿಜೆನ್ ರಿಸೆಪ್ಟರ್) ಕ್ಯಾನ್ಸರ್ ವಿರುದ್ಧ ಹೋರಾಡಲು ನಿಟ್ಟಿನಲ್ಲಿ ಮುಂದುವರಿದ ಚಿಕಿತ್ಸೆಯಾಗಿದೆ. ರೋಗಿಯ ದೇಹದಲ್ಲಿರುವ ಕ್ಯಾನ್ಸರ್ ಕೋಶಗಳ ವಿರುದ್ಧ ಟಿ-ಸೆಲ್​ಗಳನ್ನು ಹೋರಾಡಿ ಅವು ತೆಗೆದುಹಾಕಲಾಗುತ್ತದೆ. ಈ ಕೋಶಗಳನ್ನು ಕ್ಯಾನ್ಸರ್ ವಿರುದ್ಧ ಹೋರಾಡಲು ಪ್ರಯೋಗಾಲಯದಲ್ಲಿ ವಿನ್ಯಾಸಗೊಳಿಸಲಾಗಿದೆ, ಮಾರ್ಪಡಿಸಲಾಗಿದೆ. ಟಿ-ಸೆಲ್ಸ್​ ಕ್ಯಾನ್ಸರ್ ಕೋಶಗಳ ವಿರುದ್ಧ ಹೋರಾಡುವಲ್ಲಿ ಹೆಚ್ಚು ಶಕ್ತಿಶಾಲಿಯಾಗಿದೆ. ನಂತರ ಈ ಕೋಶಗಳನ್ನು ದೇಹಕ್ಕೆ ಸೇರಿಸಲಾಗುತ್ತದೆ. ಈ ಜೀವಕೋಶಗಳು ಕ್ಯಾನ್ಸರ್ ನಾಶಮಾಡುತ್ತವೆ. ಈ ಚಿಕಿತ್ಸೆಯನ್ನು ರಕ್ತದ ಕ್ಯಾನ್ಸರ್, ಲಿಂಫೋಸೈಟಿಕ್ ಲ್ಯುಕೇಮಿಯಾ ಹಾಗೂ ಬಿ-ಸೆಲ್ ಲಿಂಫೋಮಾದಂತಹ ಗಂಭೀರ ಕ್ಯಾನ್ಸರ್‌ಗಳಿಗೂ ಚಿಕಿತ್ಸೆ ನೀಡಲು ಬಳಕೆ ಮಾಡಲಾಗುತ್ತದೆ. ಪ್ರಸ್ತುತ ಈ ಸೌಲಭ್ಯ ದೇಶದಲ್ಲಿ ಕೆಲವೇ ಆಸ್ಪತ್ರೆಗಳಲ್ಲಿ ಮಾತ್ರ ದೊರೆತ್ತದೆ.

ಖಾಸಗಿ ಆಸ್ಪತ್ರೆಗಳಲ್ಲಿ ಈ ಚಿಕಿತ್ಸೆ ದುಬಾರಿ: ವೈದ್ಯರು ತಿಳಿಸುವ ಪ್ರಕಾರ, ಖಾಸಗಿ ಆಸ್ಪತ್ರೆಗಳಲ್ಲಿ CAR-T ಸೆಲ್ ಥೆರಪಿ ಚಿಕಿತ್ಸೆ ದುಬಾರಿಯಾಗಿದೆ. ದೇಶದಲ್ಲಿ ಮೂರು ಸರ್ಕಾರಿ ಆಸ್ಪತ್ರೆಗಳನ್ನು ಹೊರತುಪಡಿಸಿದರೆ, ಈ ಚಿಕಿತ್ಸೆಯು ಕೆಲವೇ ಕೆಲವು ದೊಡ್ಡ ಖಾಸಗಿ ಆಸ್ಪತ್ರೆಗಳಲ್ಲಿ ದೊರೆಯುತ್ತದೆ. ಈ ಖಾಸಗಿ ಆಸ್ಪತ್ರೆಗಳಲ್ಲಿ CAR-T ಸೆಲ್ ಚಿಕಿತ್ಸೆಗೆ ಲಕ್ಷಾಂತರ ರೂಪಾಯಿ ವೆಚ್ಚವಾಗುತ್ತದೆ. ಹಲವು ಶ್ರೀಮಂತರು ಅಮೆರಿಕಕ್ಕೆ ತೆರಳಿ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಈ ಚಿಕಿತ್ಸೆ ಪಡೆದುಕೊಳ್ಳುತ್ತಾರೆ. ಆದರೆ, ಸಫ್ದರ್ಜಂಗ್ ಸರ್ಕಾರಿ ಆಸ್ಪತ್ರೆಯಾಗಿರುವುದರಿಂದ ಈ ಸೌಲಭ್ಯವನ್ನು ಉಚಿತವಾಗಿ ಆರಂಭ ಮಾಡಲಾಗಿದೆ. ಆರ್ಥಿಕವಾಗಿ ದುರ್ಬಲ ರೋಗಿಗಳಿಗೆ ಈ ಚಿಕಿತ್ಸೆಯು ಆಶಾಕಿರಣವಾಗಿದೆ.

ಹೆಚ್ಚಿನ ಮಾಹಿತಿಗಾಗಿ ಈ ವೆಬ್​ಸೈಟ್​ಗಳನ್ನು ವೀಕ್ಷಿಸಬಹುದು:

ಓದುಗರಿಗೆ ವಿಶೇಷ ಸೂಚನೆ: ಇಲ್ಲಿ ನಿಮಗೆ ನೀಡಿರುವ ಎಲ್ಲ ಆರೋಗ್ಯ ಮಾಹಿತಿ ಮತ್ತು ಸಲಹೆಗಳು ನಿಮ್ಮ ತಿಳಿವಳಿಕೆಗಾಗಿ ಮಾತ್ರ. ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆ ಆಧರಿಸಿ ನಾವು ಈ ಮಾಹಿತಿ ನಿಮಗೆ ನೀಡಿದ್ದೇವೆ. ಆದರೆ, ಇವುಗಳನ್ನು ಅನುಸರಿಸುವ ಮೊದಲು ವೈದ್ಯರ ಸಲಹೆಯನ್ನು ತೆಗೆದುಕೊಳ್ಳುವುದು ಉತ್ತಮ.

ಇವುಗಳನ್ನೂ ಓದಿ:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.