ಕರ್ನಾಟಕ

karnataka

ETV Bharat / health

ಲಿವರ್, ಶುಗರ್ ನಿಂದ ಹಿಡಿದು ಹೃದಯ ಸಮಸ್ಯೆವರೆಗೆ; ಎಲ್ಲಾ ಕಾಯಿಲೆಗಳಿಗೆ ರಾಮಬಾಣ ಈ ನೇರಳೆಹಣ್ಣು! - Jamun Fruit Health Benefits

ಇದು ಮಳೆಗಾಲ. ಈ ಸಮಯದಲ್ಲಿ ಹಲಸು ಮತ್ತು ನೇರಳೆ ಹಣ್ಣು ಪ್ರಮುಖವಾಗಿ ಮಾರುಕಟ್ಟೆಗಳಲ್ಲಿ ಕಂಡುಬರುತ್ತವೆ. ಅದರಲ್ಲಿ ನೇರಳೆಹಣ್ಣು ಮಧುಮೇಹ, ಮಲಬದ್ಧತೆ, ಅಜೀರ್ಣದಂತಹ ಸಮಸ್ಯೆಗಳಿಗೆ ರಾಮ ಬಾಣವಾಗಿದೆ. ಇದರ ಸೇವನೆಯಿಂದ ಇನ್ನೂ ಯಾವೆಲ್ಲ ಆರೋಗ್ಯ ಲಾಭಗಳು ಇವೆ ಅನ್ನೋದರ ಮಾಹಿತಿ ಇಲ್ಲಿದೆ..

Health Benefits Of Black Plums
ನೇರಳೆಹಣ್ಣು (ETV Bharat and IANS)

By ETV Bharat Karnataka Team

Published : Jun 20, 2024, 7:36 PM IST

Health Benefits Of Black Plums: ಮಳೆಗಾಲದಲ್ಲಿ ಯಥೇಚ್ಛವಾಗಿ ಸಿಗುವ ನೇರಳೆ ಆರೋಗ್ಯಕ್ಕೆ ದಿವ್ಯ ಔಷಧಿ ಎನ್ನುತ್ತಾರೆ ತಜ್ಞರು. ಅವು ಅನೇಕ ರೋಗಗಳಿಗೆ ನೈಸರ್ಗಿಕ ಪರಿಹಾರವಾಗಿ ಕಾರ್ಯನಿರ್ವಹಿಸುತ್ತವೆ ಎಂದು ಹೇಳಲಾಗುತ್ತದೆ. ಅಷ್ಟೇ ಏಕೆ..ಅವುಗಳು ವ್ಯಾಪಕವಾಗಿ ಸಿಗುವ ದಿನಗಳಲ್ಲಿ ತಿನ್ನದೆ ಇರಬೇಡಿ ಎನ್ನುತ್ತಾರೆ ತಜ್ಞರು. ಈ ನೇರಳೆಹಣ್ಣು ತಿನ್ನುವುದರಿಂದ ಆಗುವ ಆರೋಗ್ಯಕಾರಿ ಲಾಭಗಳ ಮಾಹಿತಿ ತಿಳಿಯೋಣ..

ರೋಗನಿರೋಧಕ ಶಕ್ತಿ ಹೆಚ್ಚುತ್ತದೆ:ನೇರಳೆಹಣ್ಣು ಆರೋಗ್ಯದ ಆಗರ. ಬಣ್ಣದಲ್ಲಿ ಸುಂದರ, ಹೊಳಪು ಮತ್ತು ರುಚಿಕರವಾಗಿರುತ್ತದೆ ಎಂದು ತಜ್ಞರು ಹೇಳುತ್ತಾರೆ. ಫೈಟೊಕೆಮಿಕಲ್ಸ್, ಪಾಲಿಫಿನಾಲಿಕ್ ಆಮ್ಲಗಳು, ವಿಟಮಿನ್ ಸಿ ಮತ್ತು ಇತರ ಪೋಷಕಾಂಶಗಳು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ತುಂಬಾ ಸಹಾಯಕವಾಗಿವೆ ಎಂಬುದು ತಜ್ಞರ ಅಭಿಮತ.

ಸೋಂಕು ನಿಯಂತ್ರಣ: ಮಳೆಗಾಲದಲ್ಲಿ ಆಗಾಗ ಸಂಭವಿಸುವ ಎದುರಾಗುವ, ಕಾಲರಾ ಮತ್ತಿತರ ಸೋಂಕುಗಳನ್ನು ನೇರಳೆಹಣ್ಣು ತಡೆಯುತ್ತದೆ ಎಂದು ತಜ್ಞರು ಸಲಹೆ ನೀಡುತ್ತಾರೆ. ಅಲ್ಲದೆ, ಸಿ-ವಿಟಮಿನ್ ಹೆಚ್ಚಿನ ಅಂಶ ಇರುವುದರಿಂದ ದೀರ್ಘಕಾಲದ ಕೆಮ್ಮು ಮತ್ತು ಉಬ್ಬಸಕ್ಕೆ ನೇರಳೆ ಉತ್ತಮ ಔಷಧಿಯಾಗಿ ಕಾರ್ಯನಿರ್ವಹಿಸುತ್ತದೆ ಎಂದು ಹೇಳಲಾಗುತ್ತದೆ. ನಿಯಮಿತವಾಗಿ ತಿಂದರೆ ನಾಯಿಕೆಮ್ಮು ಮತ್ತು ಟಿಬಿ ನಿಯಂತ್ರಣದಲ್ಲಿರುತ್ತದೆ.

2023 ರಲ್ಲಿ 'ಫೈಟೋಥೆರಪಿ ರಿಸರ್ಚ್' ಜರ್ನಲ್‌ನಲ್ಲಿ ಪ್ರಕಟವಾದ ವರದಿಯ ಪ್ರಕಾರ, ನೇರಳೆಹಣ್ಣಿನಲ್ಲಿರುವ ಪಾಲಿಫಿನಾಲಿಕ್ ಆಮ್ಲ ಕೆಲವು ರೀತಿಯ ಬ್ಯಾಕ್ಟೀರಿಯಾ ಮತ್ತು ವೈರಸ್‌ಗಳ ಬೆಳವಣಿಗೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಈ ಸಂಶೋಧನೆಯಲ್ಲಿ ದೆಹಲಿ ವಿಶ್ವವಿದ್ಯಾಲಯದ ಡಾ.ರಾಜ್ ಕುಮಾರ್ ಭಾಗವಹಿಸಿದ್ದರು. ನೆರಳೆ ಹಣ್ಣನ್ನು ತಿನ್ನುವುದರಿಂದ ಇದರಲ್ಲಿರುವ ಪೋಷಕಾಂಶಗಳು ಬ್ಯಾಕ್ಟೀರಿಯಾ, ವೈರಸ್ ಗಳನ್ನು ತಡೆಗಟ್ಟಿ ನಾನಾ ರೋಗಗಳನ್ನು ತಡೆಯುತ್ತದೆ ಎಂದು ತಿಳಿಸಿದ್ದರು.

ಜೀರ್ಣಕ್ರಿಯೆಗೂ ಸಹಕಾರಿ: ಈ ಹಣ್ಣುಗಳನ್ನು ತಿನ್ನುವುದರಿಂದ ನಿಮ್ಮ ಜೀರ್ಣಕ್ರಿಯೆ ಸುಧಾರಿಸುತ್ತದೆ ಎಂದು ಹೇಳಲಾಗುತ್ತದೆ. ಇದರಿಂದ ಮಲಬದ್ಧತೆ, ಗ್ಯಾಸ್ ಟ್ರಬಲ್ ಮತ್ತು ಅಜೀರ್ಣದಂತಹ ಸಮಸ್ಯೆಗಳು ನಿವಾರಣೆಯಾಗುತ್ತವೆ. ಅತಿಯಾದ ಬಾಯಾರಿಕೆ ಮತ್ತು ಅತಿಯಾದ ಮೂತ್ರ ವಿಸರ್ಜನೆಯಂತಹ ರೋಗಲಕ್ಷಣಗಳನ್ನು ಕಡಿಮೆ ಮಾಡುತ್ತದೆ.

ಮಧುಮೇಹ ನಿಯಂತ್ರಣ:ನೇರಳೆಹಣ್ಣು ಸೇವನೆ ಮಧುಮೇಹಿಗಳಿಗೆ ಲಾಭದಾಯಕ ಎನ್ನುತ್ತಾರೆ ತಜ್ಞರು. ಏಕೆಂದರೆ.. ಇದರಲ್ಲಿರುವ ನಾರಿನಂಶವು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಂತ್ರಿಸುತ್ತದೆ ಎನ್ನಲಾಗಿದೆ. ಆದಾಗ್ಯೂ, ವಾರಕ್ಕೆ ಎರಡು ಬಾರಿ ಸ್ವಲ್ಪ ಪ್ರಮಾಣದಲ್ಲಿ ಹಣ್ಣುಗಳನ್ನು ತಿನ್ನುವಂತೆ ಸೂಚಿಸಲಾಗುತ್ತದೆ.

ರಕ್ತಹೀನತೆಯನ್ನು ಕಡಿಮೆ ಮಾಡುತ್ತದೆ:ಈ ಹಣ್ಣಿನಲ್ಲಿ ಕಬ್ಬಿಣದ ಅಂಶ ಹೇರಳವಾಗಿದೆ ಮತ್ತು ಕೆಂಪು ರಕ್ತ ಕಣಗಳನ್ನು ಹೆಚ್ಚಿಸುವ ಮೂಲಕ ರಕ್ತಹೀನತೆಯನ್ನು ಕಡಿಮೆ ಮಾಡುತ್ತದೆ ಎಂದು ತಜ್ಞರು ಹೇಳುತ್ತಾರೆ. ಅದು ಬಾಯಿಯ ಆರೋಗ್ಯವನ್ನು ಸಹ ಕಾಪಾಡುತ್ತದೆ. ಒಸಡುಗಳಲ್ಲಿ ರಕ್ತಸ್ರಾವ ಮತ್ತು ಬಾಯಿಯ ದುರ್ವಾಸನೆಯನ್ನು ಇದು ತಡೆಯುತ್ತದೆ.

ಹೃದಯದ ಆರೋಗ್ಯಕ್ಕೆ ಒಳ್ಳೆಯದು:ನೇರಳೆಯಲ್ಲಿ ಕ್ಯಾಲೋರಿ ಕಡಿಮೆ. ಹಾಗಾಗಿ ತೂಕ ಇಳಿಸಿಕೊಳ್ಳಲು ಬಯಸುವವರಿಗೆ ಇದು ಒಳ್ಳೆಯ ಹಣ್ಣು. ಇದಲ್ಲದೆ, ಇವುಗಳಲ್ಲಿರುವ ಫೈಟೊಕೆಮಿಕಲ್ಸ್ ಹೃದಯದ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ. ಈ ಹಣ್ಣುಗಳನ್ನು ನಿತ್ಯವೂ ತಿನ್ನುವುದರಿಂದ ಇದರಲ್ಲಿರುವ ಪೊಟ್ಯಾಶಿಯಂ ರಕ್ತನಾಳಗಳಲ್ಲಿ ಕ್ಯಾಲ್ಸಿಯಂ ಸಂಗ್ರಹವಾಗುವುದನ್ನು ತಡೆಯುತ್ತದೆ, ಆ ಮೂಲಕ ಹೃದ್ರೋಗವನ್ನು ನಿಯಂತ್ರಿಸುತ್ತದೆ ಎಂದು ಅಧ್ಯಯನಗಳು ತೋರಿಸಿವೆ.

ಹಿಮೊಗ್ಲೋಬಿನ್ ಪ್ರಮಾಣ ಹೆಚ್ಚಾಗುತ್ತೆ: ಇವುಗಳಲ್ಲಿ ವಿಟಮಿನ್ ಸಿ, ಎ ಮತ್ತು ಕಬ್ಬಿಣಾಂಶ ಅಧಿಕವಾಗಿದೆ. ರಕ್ತದಲ್ಲಿನ ಹಿಮೋಗ್ಲೋಬಿನ್​ ಪ್ರಮಾಣವನ್ನು ಹೆಚ್ಚಿಸಲು ಸಹಾಯ ಮಾಡುತ್ತವೆ ಎಂದು ಹೇಳಲಾಗುತ್ತದೆ. ನೇರಳೆಹಣ್ಣು ಚರ್ಮದ ಸೌಂದರ್ಯದ ಜೊತೆಗೆ ಕಣ್ಣಿನ ಆರೋಗ್ಯವನ್ನು ಸುಧಾರಿಸುವ ಗುಣಗಳನ್ನು ಸಹ ಹೊಂದಿವೆ. ಅದೇ ರೀತಿ ಲಿವರ್ ಗೆ ಏನಾದರೂ ಹಾನಿಯಾದರೆ ಚೇತರಿಸಿಕೊಳ್ಳಲು ಈ ಹಣ್ಣುಗಳು ನೆರವಾಗುತ್ತವೆ ಎನ್ನುತ್ತಾರೆ ತಜ್ಞರು.

ಮುಖ್ಯ ಸೂಚನೆ: ಇಲ್ಲಿ ನಿಮಗೆ ನೀಡಲಾದ ಎಲ್ಲಾ ಆರೋಗ್ಯ ಮಾಹಿತಿ ಮತ್ತು ಸೂಚನೆಗಳು ನಿಮ್ಮ ಮಾಹಿತಿಗಾಗಿ ಮಾತ್ರ. ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯನ್ನು ಆಧರಿಸಿ ನಾವು ಈ ಮಾಹಿತಿಯನ್ನು ಒದಗಿಸುತ್ತಿದ್ದೇವೆ. ಅನುಸರಿಸುವ ಮೊದಲು ನಿಮ್ಮ ಕುಟುಂಬ ವೈದ್ಯರ ಸಲಹೆಯನ್ನು ಪಡೆಯುವುದು ಉತ್ತಮ.

ಇದನ್ನೂ ಓದಿ:ನಿಮ್ಮ ದಿನನಿತ್ಯದ ಆಹಾರದಲ್ಲಿ ಪಪ್ಪಾಯಿ ಇದೆಯೇ? ಅರೋಗ್ಯಕ್ಕೆ ಪೂರಕ ಈ ಹಣ್ಣು - Papaya Health Benefits

ABOUT THE AUTHOR

...view details