Benefits Of Ghee Coffee:ಬುಲೆಟ್ ಪ್ರೂಫ್ ಕಾಫಿ ಎಂಬುದನ್ನು ಪ್ರಸ್ತುತ ಅನೇಕರು ಬಳಕೆ ಮಾಡುತ್ತಿದ್ದು, ದೊಡ್ಡ ಮಟ್ಟದ ಟ್ರೆಂಡ್ ಆಗಿ ಬದಲಾಗಿದೆ. ಇತ್ತೀಚೆಗೆ ಅನೇಕ ಸೆಲೆಬ್ರಿಟಿಗಳು ಕೂಡ ಇದನ್ನು ಕುಡಿಯುತ್ತಿದ್ದಾರೆ ಎನ್ನಲಾಗಿದೆ. ಬುಲೆಟ್ ಪ್ರೂಫ್ ಕಾಫಿ ಎಂದರೆ ಕಾಫಿಯೊಂದಿಗೆ ತುಪ್ಪ ಬೆರೆಸಿ ಕುಡಿಯುವುದನ್ನೇ ಈ ಹೆಸರಿನಿಂದ ಕರೆಯಲಾಗುತ್ತಿದೆ. ಹಾಗಾದರೆ ಈ ತುಪ್ಪದ ಕಾಫಿಯನ್ನು ತಯಾರಿಸುವುದು ಹೇಗೆ ಎಂಬುದನ್ನು ನೋಡೋಣ.
ತುಪ್ಪದ ಕಾಫಿ ಕುಡಿಯುವ ಪ್ರಯೋಜನಗಳು: ಇದುರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ - ಕಾಫಿಗೆ ತುಪ್ಪವನ್ನು ಸೇರಿಸುವುದರಿಂದ ದೇಹಕ್ಕೆ ಅಗತ್ಯವಾದ ವಿಟಮಿನ್ ಎ ಮತ್ತು ಇ ಹಾಗೂ ಸಮೃದ್ಧವಾದ ಖನಿಜಗಳು ದೊರೆಯುತ್ತವೆ ಎಂದು ತಜ್ಞರು ಹೇಳುತ್ತಾರೆ. ಈ ಪೋಷಕಾಂಶಗಳು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ ಮತ್ತು ಸೋಂಕುಗಳಿಂದ ನಮ್ಮನ್ನು ರಕ್ಷಿಸುತ್ತವೆ. ಅಷ್ಟೇ ಅಲ್ಲ ಆರೋಗ್ಯವಾಗಿರಲು ಸಹಾಯ ಮಾಡುತ್ತದೆ ಎಂದು ಹೇಳಲಾಗುತ್ತದೆ.
ಜೀರ್ಣಕ್ರಿಯೆ ಸುಧಾರಿಸುತ್ತದೆ: ತುಪ್ಪದಲ್ಲಿ ಬ್ಯುಟ್ರಿಕ್ ಆಮ್ಲವಿದೆ. ಇದು ಜೀರ್ಣಾಂಗದಲ್ಲಿ ಆರೋಗ್ಯಕರ ಬ್ಯಾಕ್ಟೀರಿಯಾದ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಉಬ್ಬುವುದು ಮತ್ತು ಅಜೀರ್ಣದಂತಹ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ ಮತ್ತು ಜೀರ್ಣಕ್ರಿಯೆಯನ್ನು ಸುಧಾರಿಸುವಂತೆ ಮಾಡುತ್ತದೆ ಎನ್ನುವುದು ತಜ್ಞರ ಅಭಿಮತವಾಗಿದೆ. 2021 ರಲ್ಲಿ "ನ್ಯೂಟ್ರಿಷನ್ ಮತ್ತು ಮೆಟಾಬಾಲಿಸಮ್" ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ತುಪ್ಪದೊಂದಿಗೆ ಕಾಫಿ ಕುಡಿಯುವುದರಿಂದ ಜೀರ್ಣಕ್ರಿಯೆ ಸುಧಾರಿಸುತ್ತದೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ. ಯುನೈಟೆಡ್ ಕಿಂಗ್‌ಡಮ್‌ನ ಲೌಬರೋ ವಿಶ್ವವಿದ್ಯಾಲಯದ ಡಾ ಮೈಕೆಲ್ ಗ್ಲೀಸನ್ ಈ ಸಂಶೋಧನೆಯಲ್ಲಿ ಭಾಗವಹಿಸಿ, ಇದರ ಅನುಭವ ಪಡೆದುಕೊಂಡಿದ್ದಾರೆ.
ಮೆದುಳು ಸಕ್ರಿಯತೆ ಹೆಚ್ಚಿಸುತ್ತದೆ:ತುಪ್ಪದಲ್ಲಿರುವ ಸ್ಯಾಚುರೇಟೆಡ್ ಕೊಬ್ಬುಗಳು ಮೆದುಳು ಆರೋಗ್ಯಕರವಾಗಿ ಮತ್ತು ಸಕ್ರಿಯವಾಗಿ ಕಾರ್ಯನಿರ್ವಹಿಸಲು ಸಹಾಯ ಮಾಡುತ್ತದೆ. ಕಾಫಿಗೆ ತುಪ್ಪ ಸೇರಿಸುವುದರಿಂದ ಜ್ಞಾಪಕ ಶಕ್ತಿ ಹೆಚ್ಚುತ್ತದೆ.
ಶಕ್ತಿ ನೀಡುತ್ತದೆ :ತುಪ್ಪವು ಮಧ್ಯಮ ಸರಣಿ ಟ್ರೈಗ್ಲಿಸರೈಡ್‌ಗಳನ್ನು (MCT) ಹೊಂದಿರುತ್ತದೆ. ಅವು ದೇಹಕ್ಕೆ ತ್ವರಿತ ಶಕ್ತಿಯನ್ನು ನೀಡುತ್ತವೆ. ಕಾಫಿಗೆ ತುಪ್ಪವನ್ನು ಸೇರಿಸುವುದರಿಂದ ಶಕ್ತಿಯ ಮಟ್ಟ ಮತ್ತು ತ್ರಾಣ ಮತ್ತಷ್ಟು ಹೆಚ್ಚಾಗುವಂತೆ ಮಾಡುತ್ತದೆ.
ತೂಕ ನಿಯಂತ್ರಣ: ತುಪ್ಪದಲ್ಲಿ ಆರೋಗ್ಯಕರ ಕೊಬ್ಬುಗಳಿವೆ. ಇವು ತೂಕ ಇಳಿಸಲು ಸಹಾಯ ಮಾಡುತ್ತವೆ. ಕಾಫಿಗೆ ತುಪ್ಪವನ್ನು ಮಿತವಾಗಿ ಸೇರಿಸುವುದರಿಂದ ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ ಎಂದು ತಜ್ಞರು ಸಲಹೆ ನೀಡುತ್ತಾರೆ.
ಒಂದು ತಿಂಗಳು ಕಾಫಿ, ಟೀ ಕುಡಿಯದಿದ್ದರೆ ನಿಮ್ಮ ದೇಹಕ್ಕೆ ಏನಾಗುತ್ತೆ?