ಈಗ ಎಲ್ಲರ ಮನೆಯಲ್ಲೂ ಫ್ರಿಡ್ಜ್ (ತಂಗಳು ಪೆಟ್ಟಿಗೆ) ಸಾಮಾನ್ಯವಾಗಿ ಬಳಕೆಯಲ್ಲಿರುವ ಎಲೆಕ್ಟ್ರಾನಿಕ್ ಉಪಕರಣ. ಆದರೆ, ಫ್ರಿಡ್ಜ್ ಸರಿಯಾದ ಬಳಕೆ ಹೇಗೆಂಬುದು ಹಲವರಿಗೆ ತಿಳಿದಿಲ್ಲ. ಅದಕ್ಕಾಗಿಯೇ ತಜ್ಞರು ಹಲವು ಸಲಹೆಗಳನ್ನು ನೀಡಿದ್ದಾರೆ. ಇವುಗಳನ್ನು ಪಾಲಿಸುವುದರಿಂದ ರೆಫ್ರಿಜರೇಟರ್ ಅನ್ನು ನಿಮ್ಮ ಜೀವಿತಾವಧಿವರೆಗೂ ಬಳಸಬಹುದು.
ಪ್ರತಿ 3 ಗಂಟೆಗಳಿಗೊಮ್ಮೆ ಸ್ವಿಚ್ ಆಫ್ ಮಾಡಿ: ಯಾವುದೇ ಎಲೆಕ್ಟ್ರಾನಿಕ್ ವಸ್ತು ಹೆಚ್ಚು ಬಿಸಿಯಾಗುವುದು ಸಾಮಾನ್ಯ. ಈ ಪೈಕಿ ಫ್ರಿಜ್ ಕೂಡ ಸೇರಿದೆ. ಹಾಗಾಗಿ ಫ್ರಿಡ್ಜ್ ಬಳಸುವಾಗ ಆಗಾಗ ಆಫ್ ಮಾಡಿ ಎನ್ನುತ್ತಾರೆ ತಜ್ಞರು. 15 ನಿಮಿಷಗಳ ಕಾಲ ಪ್ರತಿ 3 ಗಂಟೆಗಳಿಗೊಮ್ಮೆ ಸ್ವಿಚ್ ಆಫ್ ಮಾಡಿದರೆ ಒಳ್ಳೆಯದು. ಹೀಗೆ ಮಾಡುವುದರಿಂದ ಕಂಪ್ರೆಸರ್ ಅಧಿಕ ಬಿಸಿಯಾಗುವುದು ಕಡಿಮೆಯಾಗುತ್ತದೆ. ಅದರ ತಾಪಮಾನ ಸೆಟ್ಟಿಂಗ್ ಕೂಡ ಮುಖ್ಯವಾಗುತ್ತದೆ.
ಗೋಡೆ ಮತ್ತು ಫ್ರಿಡ್ಜ್ ನಡುವೆ ಕನಿಷ್ಠ 4 ರಿಂದ 6 ಇಂಚು ಅಂತರವಿರಲಿ: ಫ್ರಿಡ್ಜ್ ಹೆಚ್ಚು ಬಿಸಿಯಾಗದಂತೆ ಗೋಡೆ ಮತ್ತು ಫ್ರಿಡ್ಜ್ ನಡುವೆ ಅಂತರವಿರಬೇಕು ಅನ್ನೋದು ಮತ್ತೊಂದು ಗಮನದಲ್ಲಿಟ್ಟುಕೊಳ್ಳಬೇಕಾದ ಮುಖ್ಯ ವಿಷಯ. ಫ್ರಿಡ್ಜ್ ಮತ್ತು ಗೋಡೆಯ ನಡುವೆ ಅಂತರ ಇರದಿದ್ದರೆ ಗಾಳಿ ಕಂಪ್ರೆಸರ್ ಅನ್ನು ಸರಿಯಾಗಿ ತಲುಪುವುದಿಲ್ಲ. ಕಂಪ್ರೆಸರ್ ಬೇಗನೆ ಬಿಸಿಯಾಗುತ್ತದೆ. ಇಂತಹ ಸಮಯದಲ್ಲಿ ಕಂಪ್ರೆಸರ್ನಲ್ಲಿ ಬೆಂಕಿ ತಗುಲುವ ಸಾಧ್ಯತೆ ಹೆಚ್ಚು. ಅದಕ್ಕಾಗಿಯೇ ರೆಫ್ರಿಜರೇಟರ್ ಮತ್ತು ಗೋಡೆಯ ನಡುವೆ ಖಾಲಿ ಜಾಗವಿದೆಯೇ ಅನ್ನೋದನ್ನು ಮೊದಲು ಖಚಿತಪಡಿಸಿಕೊಳ್ಳಿ. ಕನಿಷ್ಠ 4 ರಿಂದ 6 ಇಂಚುಗಳಷ್ಟು ಫ್ರಿಡ್ಜ್ ಮತ್ತು ಗೋಡೆಯ ನಡುವೆ ಅಂತರ ಇರಬೇಕು.
ಅಧ್ಯಯನ ಏನು ಹೇಳುತ್ತದೆ?: 2019ರಲ್ಲಿ ಅಮೆರಿಕನ್ ಸೊಸೈಟಿ ಆಫ್ ಹೀಟಿಂಗ್, ರೆಫ್ರಿಜರೇಟಿಂಗ್ ಮತ್ತು ಏರ್ ಕಂಡೀಷನಿಂಗ್ ಇಂಜಿನಿಯರ್ಸ್ (ASHRAE) ಅಸೋಸಿಯೇಷನ್ ನಡೆಸಿದ ಅಧ್ಯಯನದಂತೆ, ಫ್ರಿಡ್ಜ್ ಮತ್ತು ಗೋಡೆಯ ನಡುವೆ 4 ರಿಂದ 6 ಇಂಚುಗಳಷ್ಟು ಅಂತರ ಇಟ್ಟುಕೊಳ್ಳುವುದರಿಂದ ಶೇ. 10ರಷ್ಟು ಎಲೆಕ್ಟ್ರಾನಿಕ್ ವಸ್ತುವಿನ ಜೀವಿತಾವಧಿ ಹೆಚ್ಚುತ್ತದೆ. ಇದಲ್ಲದೆ, ವಿದ್ಯುತ್ ಬಳಕೆಯು ಶೇ.5ರಷ್ಟು ಕಡಿಮೆಯಾಗುತ್ತದೆ. ಬೆಂಕಿಯ ಅಪಾಯಗಳೂ ಸಹ ಕಡಿಮೆ. ಈ ಸಂಶೋಧನೆಯಲ್ಲಿ ASHRAE ಪ್ರಧಾನ ಇಂಜಿನಿಯರ್ ಡಾ.ಡೇವಿಡ್ ಡಬ್ಲ್ಯೂ ಜಾನ್ಸನ್ ಭಾಗವಹಿಸಿದ್ದರು. ಇದರ ಹೊರತಾಗಿ ನಿಮ್ಮ ರೆಫ್ರಿಜರೇಟರ್ ಬಗ್ಗೆ ನೀವು ಸರಿಯಾಗಿ ಕಾಳಜಿ ವಹಿಸಿದರೆ, ಯಾವುದೇ ದುರಸ್ತಿ ಇಲ್ಲದೆ ಸುಮಾರು ವರ್ಷಗಳವರೆಗೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ.
ಇದನ್ನೂ ಓದಿ:ನಿಮ್ಮ ರೆಫ್ರಿಜಿರೇಟರ್ ದೀರ್ಘಾವಧಿಯವರೆಗೆ ಬಾಳಿಕೆ ಬರಬೇಕೆ? ಹಾಗಾದ್ರೆ ಈ ಸಲಹೆ ಪಾಲಿಸಿ - REFRIGERATOR SAFETY TIPS