ನವದೆಹಲಿ: ಡಯಟ್ ಸೇರಿದಂತೆ ಮತ್ತಿತ್ತರ ಕಾರಣಗಳಿಂದ ಮಾಡುವ ಉಪವಾಸವೂ ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಅದರಲ್ಲೂ ಕ್ಯಾನ್ಸರ್ ರೋಗಿಗಳಲ್ಲಿ ಇದು ಇನ್ನೂ ಹೆಚ್ಚಿನ ಸಹಾಯ ಮಾಡಲಿದೆ. ಉಪವಾಸವೂ ದೇಹದ ಚಯಾಪಚಯ ಕ್ರಿಯೆಗಳನ್ನು ವೃದ್ಧಿಸಿ, ನೈಸರ್ಗಿಕ ಕೊಲೆಗಾರ ಕೋಶಕ್ಕೆ ಸಹಾಯ ಮಾಡುತ್ತದೆ. ಇದರಿಂದ ಕ್ಯಾನ್ಸರ್ ಕಾರಕ ಗೆಡ್ಡೆಗಳಲ್ಲಿ ಮತ್ತು ಸುತ್ತಲಿನ ಕಠಿಣ ವಾತಾವರಣದಲ್ಲಿ ಉತ್ತಮ ಕೋಶಗಳು ಬದುಕಲು ಸಹಾಯ ಮಾಡುತ್ತದೆ. ಕ್ಯಾನ್ಸರ್ ಹೋರಾಟದ ಸಾಮರ್ಥ್ಯವನ್ನು ಸುಧಾರಿಸುವಲ್ಲಿ ಕೂಡ ಉಪವಾಸವು ಪ್ರಯೋಜನವನ್ನುಂಟು ಮಾಡುತ್ತದೆ ಎಂದು ಅಧ್ಯಯನ ತಿಳಿಸಿದೆ.
ಕ್ಯಾನ್ಸರ್ ರೋಗಿಗಳಲ್ಲಿ ಉಪವಾಸ ಯಾವ ರೀತಿಯ ಪ್ರಯೋಜನ ಬೀರಲಿದೆ ಎಂದು ನ್ಯೂಯಾರ್ಕ್‌ನ ಮೆಮೋರಿಯಲ್ ಸ್ಲೋನ್ ಕೆಟರಿಂಗ್ ಕ್ಯಾನ್ಸರ್ ಸೆಂಟರ್ ಇಲಿಗಳ ಮೇಲೆ ಅಧ್ಯಯನ ನಡೆಸಿದೆ. ಈ ವೇಳೆ ಉಪವಾಸವು ದೇಹವನ್ನು ಕ್ಯಾನ್ಸರ್ ವಿರುದ್ಧ ರಕ್ಷಿಸಲು ಸಹಾಯ ಮಾಡುತ್ತದೆ.
ಕ್ಯಾನ್ಸರ್ ಟ್ಯೂಮರ್ಗಳು ಹಸಿದಿರುತ್ತವೆ. ಅವು ಆಹಾರಗಳಿಂದ ಅಗತ್ಯ ಪೋಷಕಾಂಶವನ್ನು ಪಡೆಯುತ್ತವೆ, ಪ್ರತಿರಕ್ಷಣಾ ಕೋಶಗಳಿಗೆ ಹಾನಿಕಾರಕವಾದ ಲಿಪಿಡ್‌ಗಳಿಂದ ಸಮೃದ್ಧವಾಗಿರುವ ಪ್ರತಿಕೂಲ ವಾತಾವರಣವನ್ನು ಸೃಷ್ಟಿಸುತ್ತವೆ ಎಂದು ಅಧ್ಯಯನದ ಹಿರಿಯ ಲೇಖಕ ಇಮ್ಯುನೊಲೊಜಿಸ್ಟ್ ಜೋಸೆಫ್ ಸನ್ ತಿಳಿಸಿದ್ದಾರೆ.
ಉಪವಾಸ ಕಾರ್ಯದಿಂದ ನೈಸರ್ಗಿಕವಾಗಿ ಕೋಶಗಳನ್ನು ಕೊಲ್ಲಬಹುದು. ಈ ಪರಿಸರವನ್ನು ತೊಡೆದು ಹಾಕುವುದರಿಂದ ಅವುಗಳನ್ನು ಮತ್ತೆ ಪುನರುಜ್ಜೀವನಗೊಳಿಸಬಹುದು ಎಂದು ತಿಳಿಸಿದ್ದಾರೆ. ಈ ಅಧ್ಯಯನವನ್ನು ಇಮ್ಯುನಿಟಿ ಜರ್ನಲ್‌ನಲ್ಲಿ ಪ್ರಕಟಿಸಲಾಗಿದೆ