ಹೈದರಾಬಾದ್: ಇಂದು ಬಹುತೇಕರು ಎದುರಿಸುತ್ತಿರುವ ಸಾಮಾನ್ಯ ಸಮಸ್ಯೆ ಎಂದರೆ ಅದು ತಲೆ ಕೂದಲಿನ ಬೆಳವಣಿಗೆ ಮತ್ತು ಕೂದಲು ಉದುರುವಿಕೆ ಸಮಸ್ಯೆಯಾಗಿದೆ. ಈ ಸಮಸ್ಯೆಗೆ ಮಾರುಕಟ್ಟೆಯಲ್ಲಿ ಲಭ್ಯವಾಗುವ ಎಲ್ಲ ಚಿಕಿತ್ಸೆ ಮತ್ತು ಔಷಧಗಳು ಲಭ್ಯವಿದೆ. ಆದರೆ, ಇದಕ್ಕೆ ಬೇಕಾಗಿರುವುದು ನೈಸರ್ಗಿಕ ಪೋಷಕಾಂಶವಾಗಿದೆ. ಇದು ತಲೆಕೂದಲು ಬೆಳವಣಿಗೆಗೆ ಪರಿಣಾಮಕಾರಿ ಮಾರ್ಗ ಕೂಡ ಹೌದು.
ಮಾರುಕಟ್ಟೆಯಲ್ಲಿ ಕೂದಲ ಬೆಳವಣಿಗೆಗೆ ಲಭ್ಯವಾಗುವ ಉತ್ಪನ್ನಗಳು ಉತ್ತಮವಾಗಿಯೇ ಇದ್ದರೂ, ಅವು ಭವಿಷ್ಯದಲ್ಲಿ ಅಪಾಯಕಾರಿಯಾಗಿವೆ. ಇದೇ ಕಾರಣಕ್ಕೆ ಕೂದಲ ಆರೈಕೆ ಮತ್ತು ಪೋಷಕಾಂಶ ಅಗತ್ಯವಾಗಿದೆ. ಅದಕ್ಕೆ ಮೊಟ್ಟೆ ಉತ್ತಮ ಪರಿಹಾರ ಮಾರ್ಗವಾಗಿದೆ. ಮೊಟ್ಟೆಯಲ್ಲಿ ಪ್ರೋಟಿನ್, ವಿಟಮಿನ್ ಮತ್ತು ಖನಿಜಾಂಶ ಹೆಚ್ಚಿದೆ. ಇದು ಕೂದಲ ಬುಡಕ್ಕೆ ಉತ್ತಮ ಆರೈಕೆ ನೀಡುತ್ತದೆ. ಕೂದಲಿನ ಆಳದಿಂದ ಬಲಗೊಳಿಸಿ ಬೆಳವಣಿಗೆಗೆ ಕಾರಣವಾಗುತ್ತದೆ. ಹಾಗಾದರೆ ಈ ಮೊಟ್ಟೆಯನ್ನು ಕೂದಲಿಗೆ ಬಳಕೆ ಮಾಡುವುದು ಹೇಗೆ, ಇದರ ಶುಚಿತ್ವ ಹೇಗೆ ಎಂಬ ಕುರಿತ ಮಾಹಿತಿ ಇಲ್ಲಿದೆ.
ಮೊಟ್ಟೆಯಲ್ಲಿ ಪ್ರೋಟಿನ್ ಮತ್ತು ಪೋಷಕಾಂಶ ಸಮೃದ್ಧವಾಗಿದ್ದು, ಇದು ಕೂದಲನ್ನು ಅಡಿಯಿಂದ ಮುಡಿವರೆಗೆ ಆರೈಕೆ ಮಾಡುತ್ತದೆ. ಇದರಲ್ಲಿನ ವಿಟಮಿನ್ ಎ, ವಿಟಮಿನ್ ಡಿ ಹಾಗೂ ಇ ಕೂದಲಿನ ಬುಡದ ಆರೋಗ್ಯವನ್ನು ಸುಧಾರಣೆ ಮಾಡಿ, ಕೂದಲ ನಷ್ಟವನ್ನು ತಡೆಯುತ್ತದೆ. ಮೊಟ್ಟೆಯ ಪ್ರೋಟನ್ ಕೂದಲನ್ನು ಮೃದುವಾಗಿ ಹೊಳೆಯುವಂತೆ ಮಾಡುತ್ತದೆ. ಎಣ್ಣೆ ಕೂದಲಿನವರಿಗೆ ಮೊಟ್ಟೆ ಉತ್ತಮವಾಗಿದೆ. ಒಣ ಕೂದಲಿನವರಿಗೆ ಮೊಟ್ಟೆಯ ಹಳದಿ ಭಾಗ ಉತ್ತಮ ಆಯ್ಕೆ. ಇದು ಕೂದಲಿನ ತೇವಾಂಶ ಕಾಪಾಡುವ ಜೊತೆಗೆ ತಲೆಹೊಟ್ಟು ಸಮಸ್ಯೆಯನ್ನು ಕೂಡಾ ನಿವಾರಣೆ ಮಾಡುತ್ತದೆ.