ದೇಹದಲ್ಲಿನ ಸೋಂಕು, ಕೀಲು ನೋವು, ಹೊಟ್ಟೆ ನೋವು, ಮಲಬದ್ಧತೆ, ಶೀತ, ಮುಟ್ಟು ನೋವು, ಅಲರ್ಜಿಯಂತಹ ಮುಗಿಯದ ಆರೋಗ್ಯ ಸಮಸ್ಯೆಗಳಿಗೆ ಬೆಲ್ಲ ಮತ್ತು ಕರಿಮೆಣಸು(ಪೆಪ್ಪರ್) ಬಹಳಾ ಪರಿಣಾಮಕಾರಿ ಔಷಧ. ನೀವು ಬಹಳ ಕಾಲದಿಂದ ಮೇಲೆ ಉಲ್ಲೇಖಿಸಿರುವ ಕಾಯಿಲೆಗಳಿಂದ ಬಳಲುತ್ತಿದ್ದರೆ ಅವುಗಳನ್ನು ಬೆಲ್ಲ ಮತ್ತು ಕಾಳು ಮೆಣಸು ಮತ್ತೆ ಬಾರದಂತೆ ಓಡಿಸುತ್ತದೆ. ಸಂಪೂರ್ಣವಾಗಿ ಫಲಿತಾಂಶ ಕಾಣದಿದ್ದರೂ ಶೇಕಡ 75ರಷ್ಟು ಗುಣಮುಖರಾಗುತ್ತೀರಿ. ಇದು ನಾವು ಹೇಳುತ್ತಿಲ್ಲ.. ತಜ್ಞ ವೈದ್ಯರು ಸಂಶೋಧನೆಯಿಂದ ತಿಳಿಸಿದ್ದಾರೆ.
ನಮ್ಮ ಪೂರ್ವಜರ ಕಾಲದಿಂದಲೂ ಬೆಲ್ಲ ಮತ್ತು ಕರಿಮೆಣಸು ಬಳಕೆ ಸಾಮಾನ್ಯ. ಆದರೆ ಪೀಳಿಗೆ ಬೆಳೆಯುತ್ತಿದ್ದಂತೆ ಆರೋಗ್ಯಯುತ ಆಹಾರಗಳಿಗಿಂತ ಹೊರಗಿನ ಜಂಕ್ ಫುಡ್ಗಳ ಸೇವನೆ ಅಧಿಕ. ಪರಿಣಾಮ ಇಂದು ನಮಗೆ ಸಣ್ಣ ಸಣ್ಣ ಸಮಸ್ಯೆಗಳೂ ಬಂಡೆಕಲ್ಲಿನಂತೆ ಬಗೆಹರಿಸಲಾರದಂತಾಗಿದೆ. ಹೀಗಾಗಿ ಮತ್ತೆ ನಮ್ಮ ವೈದ್ಯಲೋಕ ಹಿರಿಯರ ಆಹಾರ ಪದ್ಧತಿಯನ್ನು ಅನುಸರಿಸುವಂತೆ ಸೂಚಿಸುತ್ತಿದೆ. ಅದರಲ್ಲಿ ಬೆಲ್ಲ ಮತ್ತು ಕಾಳು ಮೆಣಸು ಕೂಡ ಒಂದು.
ಇವುಗಳು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಎರಡೂ ದೇಹವನ್ನು ಬಿಸಿಯಾಗಿಸುವ ಅಂಶ ಹೊಂದಿದೆ. ಅಂದರೆ ಬ್ಯಾಕ್ಟೀರಿಯಾಗಳನ್ನು ತೊಲಗಿಸುತ್ತದೆ. ಶೀತ ಮತ್ತು ಸೋಂಕುಗಳಿಗೆ ರಾಮಬಾಣ. ಆಯುರ್ವೇದದಲ್ಲೂ ಸಹ ಬೆಲ್ಲ ಮತ್ತು ಕರಿಮೆಣಸನ್ನು ಔಷಧಿಯಾಗಿಯೂ ಬಳಸುತ್ತಾರೆ. ಹಾಗಾದರೆ ಬೆಲ್ಲ, ಕಾಳು ಮೆಣಸು ಯಾವ-ಯಾವ ಸಮಸ್ಯೆಯನ್ನು ಹೇಗೆ ಹೊಡೆದೋಡಿಸುತ್ತದೆ ಎಂಬುದರ ಬಗ್ಗೆ ತಿಳಿಯೋಣ..
ಸೋಂಕಿಗೆ ಹೇಳಿ ಗುಡ್ ಬೈ: ಬೆಲ್ಲ ಮತ್ತು ಕಾಳುಮೆಣಸಿನಲ್ಲಿ ಬ್ಯಾಕ್ಟೀರಿಯಾ ವಿರೋಧಿ ಗುಣಗಳಿದ್ದು ಅವುಗಳ ಸೇವನೆಯಿಂದ ಸೋಂಕಿನ ಸಮಸ್ಯೆ ನಿವಾರಣೆಯಾಗುತ್ತದೆ. ನಿಮಗೆ ಸೋಂಕಿದ್ದರೆ ಈಗಲೇ ಎರಡು ಕರಿಮೆಣಸನ್ನು ಒಂದು ಚಮಚ ಬೆಲ್ಲದೊಂದಿಗೆ ಸೇವಿಸುತ್ತಾ ಬನ್ನಿ. ಸೋಂಕಿನ ಸಮಸ್ಯೆ ಖಂಡಿತವಾಗಿಯೂ ದೂರವಾಗುತ್ತದೆ.
ಕೀಲುನೋವಿಗೆ ಪರಿಣಾಮಕಾರಿ ಬೆಲ್ಲ-ಪೆಪ್ಪರ್:ಬೆಲ್ಲ ಮತ್ತು ಕರಿಮೆಣಸು ಸೇವನೆಯಿಂದ ಕೀಲು ನೋವು ಸುಧಾರಣೆ ಕಾಣುತ್ತದೆ. ಏಕೆಂದರೆ ಬೆಲ್ಲದಲ್ಲಿ ಕಬ್ಬಿಣ ಮತ್ತು ಕ್ಯಾಲ್ಸಿಯಂ ಅಂಶ ಸಮೃದ್ಧವಾಗಿದೆ. ಮತ್ತು ಕರಿಮೆಣಸಿನಲ್ಲಿ ಪಾಪರಿನ್ ಎಂಬ ಅಂಶವಿದೆ. ಇದು ಕೀಲು ನೋವು ಹಾಗೇ ಇತರ ಅನೇಕ ಸಮಸ್ಯೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ.
ಮುಟ್ಟು ನೋವಿಗೂ ಪರಿಹಾರ:ನಿಮಗೆ ಋತುಚಕ್ರದ ಸಮಯದಲ್ಲಿ ಅಧಿಕ ನೋವು ಗ್ಯಾಸ್ಟ್ರಿಕ್ ಇದ್ದರೆ ಬೆಲ್ಲ ಮತ್ತು ಕರಿಮೆಣಸು ಸೇವಿಸುವುದರಿಂದ ಎಲ್ಲವೂ ನಿವಾರಣೆಯಾಗುತ್ತದೆ.