Easy Tips to Avoid Cockroaches at Home: ಮನೆಯನ್ನು ಎಷ್ಟೇ ಸ್ವಚ್ಛವಾಗಿಟ್ಟರೂ ಮೂಲೆಗಳಲ್ಲಿ ಅಡಗಿ ಕುಳಿತಿರುತ್ತವೆ. ರಾತ್ರಿ ವೇಳೆಯಲ್ಲಿ ಜಿರಳೆಗಳು ಅಡುಗೆ ಮನೆಗೆ ನುಗ್ಗುತ್ತವೆ. ಇವುಗಳೊಂದಿಗೆ ನೇರ ಅಪಾಯ ಇಲ್ಲದಿದ್ದರೂ, ಅವು ಹಾನಿಕಾರಕ ಸೂಕ್ಷ್ಮಜೀವಿಗಳ ವಾಹಕಗಳಾಗಿ ಕಾರ್ಯನಿರ್ವಹಿಸುತ್ತವೆ. ಹೆಚ್ಚಿನ ಸಂಖ್ಯೆಯ ಜಿರಳೆಗಳು ಮನೆ ಸುತ್ತಲೂ ತಿರುಗಾಡುವುದು ಕಿರಿಕಿರಿಯುಂಟು ಮಾಡುತ್ತದೆ.
ನಾವು ತಿನ್ನುವ ಆಹಾರದಲ್ಲಿ ಆಕಸ್ಮಿಕವಾಗಿ ಬಿದ್ದರೆ, ನಾವು ಅದನ್ನು ತಿನ್ನಲು ಆಗುವುದಿಲ್ಲ. ಗೊತ್ತಿಲ್ಲದೇ ತಿಂದರೆ ಮಾತ್ರ ಕಾಯಿಲೆ ಬರುವುದು ಖಚಿತ. ಅದಕ್ಕಾಗಿಯೇ ಅನೇಕರು ಸ್ಪ್ರೇಗಳನ್ನು ಬಳಸಿ ಜಿರಳೆಗಳನ್ನು ಸಾಯಿಸುತ್ತಾರೆ. ಆದರೆ, ಈ ಸ್ಪ್ರೇಗಳಲ್ಲಿರುವ ಕೆಮಿಕಲ್ಸ್ ಹಲವು ಆರೋಗ್ಯ ಸಮಸ್ಯೆಗಳನ್ನು ತಂದೊಡ್ಡುತ್ತವೆ ಎನ್ನುತ್ತಾರೆ ತಜ್ಞರು. ಅದಕ್ಕಾಗಿಯೇ ಜಿರಳೆಗಳನ್ನು ಹಿಮ್ಮೆಟ್ಟಿಸಲು ಕೆಲವು ನೈಸರ್ಗಿಕ ಟಿಪ್ಸ್ ಸೂಚಿಸಲಾಗುತ್ತದೆ.
ಮನೆಯ ಪ್ರದೇಶಗಳನ್ನು ಸ್ವಚ್ಛವಾಗಿಟ್ಟುಕೊಳ್ಳಿ:ಜಿರಳೆಗಳು ಹೆಚ್ಚು ಬಳಸದ ಮತ್ತು ಹೆಚ್ಚಿನ ಆರ್ದ್ರತೆ ಹೊಂದಿರುವ ಸ್ಥಳಗಳಲ್ಲಿ ಗೂಡುಕಟ್ಟುತ್ತವೆ. ಹಾಗಾಗಿ.. ಬೀರುಗಳು ಮತ್ತು ಅಡುಗೆಮನೆಯ ಸಿಂಕ್ ಪ್ರದೇಶಗಳನ್ನು ಕಾಲಕಾಲಕ್ಕೆ ಸ್ವಚ್ಛಗೊಳಿಸಬೇಕು. ಹಾಗೆಯೇ.. ಮನೆಯಲ್ಲಿ ಎಲ್ಲಿಯಾದರೂ ರಂಧ್ರಗಳು, ಬಿರುಕುಗಳು, ಒಡೆದ ಪೈಪ್‌ಗಳನ್ನು ಮೊದಲು ಮುಚ್ಚಬೇಕು. ಇದರಿಂದಾಗಿ ಜಿರಳೆಗಳು ಅಲ್ಲಿ ನೆಲೆ ಸ್ಥಾಪಿಸುವುದಿಲ್ಲ ಎನ್ನುತ್ತಾರೆ ತಜ್ಞರು.
ಬೇವು: ಜಿರಳೆ ಮತ್ತು ಇತರ ಕೀಟಗಳನ್ನು ಮನೆಯಿಂದ ಹೊರಹಾಕಲು ಬೇವು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಜಿರಳೆಗಳು ಹೆಚ್ಚು ಓಡಾಡುವ ಪ್ರದೇಶದಲ್ಲಿ ಈ ಬೇವಿನ ಎಲೆಗಳನ್ನು ನಿತ್ಯ ಹಾಕಿ ಹಾಗೂ ಅವುಗಳನ್ನು ಆಗಾಗ ಬದಲಾಯಿಸಿ. ಮೂರು ದಿನಗಳಲ್ಲಿ ಉತ್ತಮ ಫಲಿತಾಂಶ ನೋಡಬಹುದು. ಇಲ್ಲವಾದರೆ ರಾತ್ರಿ ಮಲಗುವ ಮುನ್ನ ಜಿರಳೆಗಳು ಓಡಾಡುವ ಸ್ಥಳಗಳಲ್ಲಿ ಬೇವಿನ ಪುಡಿ ಅಥವಾ ಬೇವಿನ ಎಣ್ಣೆಯನ್ನು ಹಚ್ಚಬೇಕು. ಇವುಗಳಿಗೆ ಜಿರಳೆ ಮೊಟ್ಟೆಗಳನ್ನು ಕೊಲ್ಲುವ ಶಕ್ತಿಯಿದೆ. ಬೇವಿನ ಎಣ್ಣೆಗೆ ಸ್ವಲ್ಪ ಬಿಸಿ ನೀರು ಸೇರಿಸಿ ಸಿಂಪಡಿಸಿ.
ವೈಟ್ ವಿನೆಗರ್:ಜಿರಳೆಗಳನ್ನು ಓಡಿಸುವಲ್ಲಿ ವೈಟ್ ವಿನೆಗರ್ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ ಎಂದು ತಜ್ಞರು ಹೇಳುತ್ತಾರೆ. ಇದಕ್ಕಾಗಿ, ಒಂದು ಸ್ಪ್ರೇ ಬಾಟಲಿಯಲ್ಲಿ ಸಮಾನ ಪ್ರಮಾಣದ ನೀರು ಮತ್ತು ವೈಟ್ ವಿನೆಗರ್ ತೆಗೆದುಕೊಂಡು ಮಿಶ್ರಣ ಮಾಡಿ. ನಂತರ ಜಿರಳೆಗಳು ಓಡಾಡುವ ಸ್ಥಳದಲ್ಲಿ ಮಿಶ್ರಣವನ್ನು ಸಿಂಪಡಿಸಿ.