ನ್ಯೂಯಾರ್ಕ್:ಕೋವಿಡ್ 19 ಸಂದರ್ಭದಲ್ಲಿ ಕೋವಿಡೇತರ ಕಾರಣಗಳಿಂದ ಸಾವನ್ನಪ್ಪಿದವರಲ್ಲಿ ಮಧುಮೇಹಿಗಳ ಸಂಖ್ಯೆ ಹೆಚ್ಚಿದೆ. ಮಹಿಳೆಯರು ಮತ್ತು ಮಕ್ಕಳು ಈ ಕುರಿತ ಸಮಸ್ಯೆಗಳಿಂದ ಹೆಚ್ಚು ಬಾಧಿತರಾಗಿದ್ದಾರೆ ಎಂದು ದಿ ಲ್ಯಾನ್ಸೆಟ್ ಡಯಾಬಿಟಿಸ್ ಮತ್ತು ಎಂಡೋಕ್ರೈನೊಲಾಜಿ ಸಂಶೋಧನಾ ವರದಿ ಹೇಳಿದೆ.
ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಎಚ್ಒ) ನಿಯೋಜಿಸಲಾದ 138 ಅಧ್ಯಯನಗಳನ್ನು ಸಂಶೋಧನೆಯಲ್ಲಿ ಗಮನಿಸಲಾಗಿದೆ. ಈ ಅಧ್ಯಯನವನ್ನು ಸಾಂಕ್ರಾಮಿಕತೆ ಅವಧಿಯನ್ನು ಪೂರ್ವ ಸಾಂಕ್ರಾಮಿಕತೆ ಸಮಯಕ್ಕೆ ಹೋಲಿಸಲಾಗಿದೆ. ಇದರಲ್ಲಿ ಉತ್ತರ ಅಮೆರಿಕದ 39, ಪಾಶ್ಚಿಮಾತ್ಯ ಯುರೋಪ್ 39, ಏಷ್ಯಾ 17, ಉತ್ತರ ಯುರೋಪ್ 14, ದಕ್ಷಿಣ ಅಮೆರಿಕ 4 ಮತ್ತು ಈಜಿಪ್ಟ್ 1, ಆಸ್ಟ್ರೇಲಿಯಾ 1 ಮತ್ತು ಬಹುಪ್ರದೇಶದಲ್ಲಿ 33 ಅಧ್ಯಯನಗಳನ್ನು ಪರಿಗಣಿಸಲಾಗಿದೆ.
ಅಧ್ಯಯನದಲ್ಲಿ ನಾವು ಏನು ಕಂಡುಕೊಂಡಿದ್ದೇವೋ ಅದು ಒಟ್ಟಾರೆ ಮಧುಮೇಹದ ಫಲಿತಾಂಶದ ಮೇಲೆ ಸಾಕಷ್ಟು ನಕಾರಾತ್ಮಕ ಪ್ರಭಾವ ಹೊಂದಿದೆ ಎಂದು ಅಧ್ಯಯನದ ಸಹಲೇಖಕ ಜೆಮಿ ಹಾರ್ಟ್ಮ್ಯಾನ್ ಬೊಯ್ಸೆ ತಿಳಿಸಿದ್ದಾರೆ.
ಮಕ್ಕಳ ಐಸಿಯು ಪ್ರಕರಣಗಳಲ್ಲಿ ಮಧುಮೇಹ ಸಂಬಂಧಿತ ದಾಖಲಾತಿಗಳು ಹೆಚ್ಚಿವೆ. ಇದರ ಜೊತೆಗೆ ಡಯಾಬಿಟಿಕ್ ಕೆಟೊಆಸಿಡೊಸಿಸ್ (ಡಿಕೆಎ) ಪ್ರಕರಣಗಳು ಮಕ್ಕಳು ಮತ್ತು ಹದಿ ಹರೆಯದವರಲ್ಲಿ ಜಾಸ್ತಿಯಾಗಿದೆ. ಡಿಕೆಎ ಎಂಬುದು ಗಂಭೀರ ಮತ್ತು ಜೀವ ಬೆದರಿಕೆಯೊಡ್ಡುವ ಸಂಕೀರ್ಣ ಮಧುಮೇಹ. ಈ ಡಿಕೆಯು ವಯಸ್ಕರಲ್ಲಿ ಏರಿಕೆಯಾಗಿರುವ ದಾಖಲೆಗಳು ಕಂಡುಬಂದಿಲ್ಲ.
ಭಾರತದಲ್ಲಿ ಸಾವಿನ ಪ್ರಮಾಣದಲ್ಲಿ ಏರಿಕೆಯಾಗಿದೆ. ಮಕ್ಕಳ ಐಸಿಯು ದಾಖಲಾತಿ ಏರಿಕೆ ಮತ್ತು ಡಿಕೆಎಯು ಸಾವಿನ ಪ್ರಮಾಣವನ್ನು ಏರಿಸಿದೆ. ತಂಡವು ಸಾಂಕ್ರಾಮಿಕತೆಯು ಮಧುಮೇಹ ನಿರ್ವಹಣೆ ಮಾಡುವಲ್ಲಿ ಪರೀಕ್ಷೆಯ ಪರಿಣಾಮದ ಕುರಿತು ಅಧ್ಯಯನ ನಡೆಸಿದೆ ಎಂದಿದ್ದಾರೆ.
ಮಧುಮೇಹಿಗಳು ಕಣ್ಣಿನ ಸಮಸ್ಯೆ ಹೊಂದಿದ್ದಲ್ಲಿ, ನಿಯಮಿತವಾಗಿ ಪರೀಕ್ಷೆಗೆ ಒಳಗಾಗದೆ ಹೋದರೆ, ಇದು ದೃಷ್ಟಿ ನಷ್ಟಕ್ಕೆ ಕಾರಣವಾಗಬಹುದು. ಅಲ್ಲದೇ ನಾವು ಮಧುಮೇಹದ ಸಾವಿನ ದರವನ್ನು ಕಾಣುತ್ತಿದ್ದೇವೆ. ಅಮೆರಿಕದಲ್ಲಿ ಮೊದಲ ಅಲೆಯಲ್ಲಿ ಸಂಭವಿಸಿದ ಎಲ್ಲಾ ಸಾವುಗಳಿಗೆ ಕೋವಿಡ್ ಕಾರಣವಲ್ಲ. ಆದರೆ, ಈ ಸಂದರ್ಭದಲ್ಲಿ ಆರೋಗ್ಯ ವ್ಯವಸ್ಥೆ ಕುಸಿದಿತ್ತು ಎಂದು ವಿವರಿಸಿದ್ದಾರೆ.
ಸಂಶೋಧಕರು ಹೇಳುವಂತೆ, ಟೈಪ್ 1 ಮಧುಮೇಹದ ಹಲವು ಹೊಸ ಪ್ರಕರಣಗಳನ್ನು ನಿರೀಕ್ಷಿಸಲಾಗುತ್ತಿದೆ. ಇಂಥ ಮಧುಮೇಹಕ್ಕೆ ಗುರಿಯಾದ ಮಕ್ಕಳು ಸಾಂಕ್ರಾಮಿಕತೆ ಸಮಯದಲ್ಲಿ ಅತಿ ಹೆಚ್ಚು ಅನಾರೋಗ್ಯಕ್ಕೆ ಗುರಿಯಾದರು. ಈ ಪರಿಸ್ಥಿತಿ ಟೈಪ್ 2 ಮಧುಮೇಹಿ ಮಕ್ಕಳಲ್ಲಿ ಕಡಿಮೆ ಇತ್ತು. ಟೈಪ್ 1 ಮಧುಮೇಹಿ ಎಂಬುದು ಸ್ವಯಂ ನಿರೋಧಕ ರೋಗವಾಗಿದ್ದು, ಇದು ಬಾಲ್ಯದಲ್ಲಿ ಪತ್ತೆಯಾದರೂ, ಯಾವುದೇ ವಯಸ್ಸಿನಲ್ಲಾದರೂ ಕಾಣಿಸಿಕೊಳ್ಳಬಹುದು.
ಈ ಸಮಸ್ಯೆಯಿಂದ ಅತಿ ಹೆಚ್ಚು ನಕಾರಾತ್ಮಕತೆಗೆ ಒಳಗಾಗುವವರು ಮಹಿಳೆಯರು, ಯುವಜನರು ಮತ್ತು ವರ್ಣೀಯ ಮತ್ತು ಸಂಸ್ಕೃತಿ ಅಲ್ಪಸಂಖ್ಯಾತ ಸಮುದಾಯ ಎಂದು ಸಂಶೋಧನೆ ತಿಳಿಸಿದೆ. ಭವಿಷ್ಯದ ಸಾಂಕ್ರಾಮಿಕತೆ ಎದುರಿಸುವ ಯೋಜನೆ ರೂಪಿಸುವಾಗ ಸರ್ಕಾರಗಳು ಆರೋಗ್ಯ ಆರೈಕೆ ಮಧುಮೇಹಿಗಳು ಮತ್ತು ವಿಶೇಷವಾಗಿ ಕಡಿಮೆ ಪ್ರಯೋಜನದ ಗುಂಪನ್ನು ಒಳಗೊಂಡಿರಬೇಕು ಎಂದು ತಂಡ ಸಲಹೆ ನೀಡಿದೆ.(ಐಎಎನ್ಎಸ್)
ಇದನ್ನೂ ಓದಿ:ಕೋವಿಡ್ ಜಗತ್ತಿಗೆ ತಿಳಿಯುವ 2 ವಾರ ಮೊದಲೇ ಚೀನಾ ಸಂಶೋಧಕರಿಗೆ ಗೊತ್ತಾಗಿತ್ತು: ವರದಿ