Dengue Plasma Leakage:ಮಳೆಗಾಲದಲ್ಲಿ ಡೆಂಗ್ಯೂ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತವೆ. ಡೆಂಗ್ಯೂ ರೋಗಿಗಳಲ್ಲಿ ಪ್ಲೇಟ್ಲೆಟ್ ಪ್ರಮಾಣ ಇಳಿಕೆಯಾಗುವುದು ಅಪಾಯಕಾರಿಯಾಗಿದೆ. ಇದರೊಂದಿಗೆ ಪ್ಲಾಸ್ಮಾ ಸೋರಿಕೆಯ ಹಲವು ಅಪಾಯಗಳಿಗೆ ಕಾರಣವಾಗುತ್ತದೆ ಎಂದು ವೈದ್ಯರು ಎಚ್ಚರಿಕೆ ನೀಡಿದ್ದಾರೆ. ಪ್ಲಾಸ್ಮಾ ಸೋರಿಕೆಯು ಪ್ಲೇಟ್‌ಲೆಟ್‌ಗಳ ಇಳಿಕೆಗಿಂತ ಹೆಚ್ಚು ಅಪಾಯಕಾರಿ ಎಂದು ಪರಿಗಣಿಸಲಾಗಿದೆ. ಡೆಂಗ್ಯೂ ಪ್ರಕರಣಗಳು ಹೆಚ್ಚುತ್ತಿರುವ ಮಧ್ಯೆಯೇ, ಪ್ಲಾಸ್ಮಾ ಸೋರಿಕೆಯ ಮತ್ತೊಂದು ಹೊಸ ಸಮಸ್ಯೆಗೆ ಎಡೆ ಮಾಡಿಕೊಟ್ಟಿದೆ.
ಪ್ಲಾಸ್ಮಾ ಸೋರಿಕೆ ಅರ್ಥಮಾಡಿಕೊಳ್ಳುವುದು ಹೇಗೆ?:ಡೆಂಗ್ಯೂ ವೈರಸ್ ರಕ್ತನಾಳಗಳ ಒಳ ಪದರವಾದ ಎಂಡೋಥಿಲಿಯಂನಲ್ಲಿ ಉರಿಯೂತವನ್ನು ಉಂಟುಮಾಡಬಹುದು. ಈ ಉರಿಯೂತವು ರಕ್ತನಾಳಗಳಲ್ಲಿ ಅಂತರವನ್ನು ಸೃಷ್ಟಿಸುತ್ತದೆ. ಸುತ್ತಮುತ್ತಲಿನ ಅಂಗಾಂಶಗಳಿಗೆ ಪ್ಲಾಸ್ಮಾ ಸೋರಿಕೆಯನ್ನು ಉಂಟುಮಾಡುತ್ತದೆ. ಕೆಲವು ರೋಗಿಗಳಿಗೆ ಡೆಂಗ್ಯೂ ಸೋಂಕಿನ ತೀವ್ರತೆಗೆ ಪ್ಲಾಸ್ಮಾ ಸೋರಿಕೆ ಪ್ರಮುಖ ಅಂಶವಾಗಿದೆ.
ಕಣ್ಣುಗಳು ಮತ್ತು ಕಾಲುಗಳ ಸುತ್ತ ಊತ, ಹೆಚ್ಚಿದ ಹೆಮಟೋಕ್ರಿಟ್ ಮಟ್ಟಗಳು (ರಕ್ತದಲ್ಲಿನ ಕೆಂಪು ರಕ್ತ ಕಣಗಳ (ಆರ್‌ಬಿಸಿ) ಅನುಪಾತದ ಅಳತೆ), ನಾಡಿ ಮತ್ತು ರಕ್ತದೊತ್ತಡದಲ್ಲಿನ ಕುಸಿತ, ವಾಂತಿ ಮತ್ತು ಹೊಟ್ಟೆಯಲ್ಲಿ ತೀವ್ರವಾದ ನೋವು, ಕೈಗಳು - ಪಾದಗಳಲ್ಲಿ ತಣ್ಣನೆಯ ಭಾವನೆ ಸೇರಿದಂತೆ ಗಮನಿಸಬೇಕಾದ ಲಕ್ಷಣಗಳಿವು.
ಈ ಲಕ್ಷಣಗಳು ಪ್ಲಾಸ್ಮಾ ಸೋರಿಕೆಯ ಆರಂಭವನ್ನು ಸೂಚಿಸುತ್ತವೆ. ಮತ್ತು ಸಕಾಲಿಕ ವೈದ್ಯರ ಸಲಹೆ ಮತ್ತು ಚಿಕಿತ್ಸೆಯು ಮುಖ್ಯವಾಗಿದೆ. ಚಿಕಿತ್ಸೆ ನೀಡದಿದ್ದರೆ, ಈ ಸ್ಥಿತಿಯು ಹೆಮರಾಜಿಕ್ ಆಘಾತ ಸಿಂಡ್ರೋಮ್ ಆಗಿ ಬದಲಾಗಬಹುದು, ಇದು ಮಾರಣಾಂತಿಕವಾಗಬಹುದು.