ಹೈದರಾಬಾದ್: ಈ ಮೊದಲು ಕೋವಿಡ್ 19 ಸೋಂಕಿಗೆ ನೀವು ತುತ್ತಾಗಿದ್ದೀರಾ ಅಥವಾ ಯಾವುದಾದರೂ ತೀವ್ರತರಹದ ನ್ಯೂಮೋನಿಯಾದಿಂದ ಬಳಲಿದ್ದೀರಾ? ಹಾಗಾದ್ರೆ ನಿಮ್ಮ ಹೃದಯದ ಮೇಲೆ ಒಂದು ಕಣ್ಣಿಡಿ. ಕಾರಣ ಇತ್ತೀಚಿಗೆ ಹೊರಬಿದ್ದಿರುವ ಮಾಹಿತಿ ಪ್ರಕಾರ, ಕೋವಿಡ್ 19ಗೆ ಕಾರಣವಾಗುವ ಸಾರ್ಸ್- ಕೋವಿಡ್-2 ನೇರವಾಗಿ ಹೃದಯದ ಅಂಗಾಂಶಗಳ ಮೇಲೆ ದಾಳಿ ಮಾಡುವುದಿಲ್ಲ. ಬದಲಾಗಿ ಇದು ಹೃದಯಕ್ಕೆ ಹಾನಿ ಮಾಡುತ್ತದೆ.
ಕೋವಿಡ್ 19ನ ಹೃದಯಾಘಾತ, ಪಾರ್ಶ್ವವಾಯು ಮತ್ತು ದೀರ್ಘಾವಧಿಯ ಕೋವಿಡ್ ಅನ್ನು ಹೆಚ್ಚಿಸುತ್ತದೆ ಎಂಬ ಅಂಶ ತಿಳಿದಿದೆ. ಕೋವಿಡ್ 19 ಮೇಲೆ ನಡೆದ ಬಹುತೇಕ ಅಂದರೆ ಅರ್ಧಕ್ಕಿಂತ ಹೆಚ್ಚಿನ ಅಧ್ಯಯನದಲ್ಲಿ, ಕೋವಿಡ್ 19, ಸೆಲ್ಯೂಲರ್ ಮಟ್ಟದಲ್ಲಿ ಉರಿಯೂತವನ್ನು ಸಂತ್ರಸ್ತರು ಅನುಭವಿಸುತ್ತಾರೆ. ಇದರಿಂದ ಹೃದಯಕ್ಕೆ ಹಾನಿಯಾಗುತ್ತದೆ. ಆದರೆ, ವೈರಸ್ ನೇರವಾಗಿ ಹೃದಯದ ಅಂಗಾಂಶದ ಮೇಲೆ ಪರಿಣಾಮ ಬೀರುತ್ತದೆ ಅಥವಾ ಪ್ರತಿರಕ್ಷಣಾ ವ್ಯವಸ್ಥೆಯು ವೈರಸ್ ವಿರುದ್ಧ ಹೋರಾಡಲು ಪ್ರತಿಕ್ರಿಯಿಸಿದಾಗ ಉಂಟಾಗುವ ಉರಿಯೂತದ ಪ್ರಕ್ರಿಯೆಯೇ ಅನ್ನೋದು ತಿಳಿದಿಲ್ಲ.
ಇದಕ್ಕೆ ಉತ್ತರ ಹುಡುಕುವ ನಿಟ್ಟಿನಲ್ಲಿ ತೀವ್ರತರಹದ ಶ್ವಾಸಕೋಶ ಹಾನಿ ಮತ್ತು ಉರಿಯೂತ ಪ್ರಕ್ರಿಯೆಯ ನಡುವಿನ ಸಂಬಂಧವೂ ಹೃದಯ ರೋಗಕ್ಕೆ ಕಾರಣವಾಗುತ್ತದೆ ಎಂಬುದನ್ನು ಅರ್ಥೈಸಿಕೊಳ್ಳಬಹುದು. ಇದೇ ಕಾರಣಕ್ಕೆ ಸಂಶೋಧನೆ ಹೃದಯದಲ್ಲಿ ಪ್ರತಿರಕ್ಷಣಾ ಕೋಶದ ಕುರಿತು ಅಧ್ಯಯನ ನಡೆಸಿದೆ. ಸಾಮಾನ್ಯವಾಗಿ, ಈ ಕೋಶಗಳು ಹೃದಯ ಆರೋಗ್ಯ ರಕ್ಷಣೆ ಮಾಡುತ್ತದೆ ಮತ್ತು ಉರಿಯೂತ ಪ್ರಕ್ರಿಯೆ ಉತ್ತೇಜನ ಹೃದಯಾಘಾತಕ್ಕೆ ಕಾರಣವಾಗುತ್ತದೆ. ಕೋವಿಡ್ 10 ಸಂಬಂಧ ತೀವ್ರ ಹೃದಯ ಸಮಸ್ಯೆಯಲ್ಲಿ ಹೃದಯದ ಅಂಗಾಂಶವನ್ನು ಪರೀಕ್ಷಿಸಿದಾಗ ಈ ಅಂಶ ಕಂಡು ಬಂದಿದೆ. ಇವು ಸಾಮಾನ್ಯ ಜೀವಕೋಶಗಳಿಂದ ಉರಿಯೂತದ ಅಂಶಗಳಾಗಿ ಬದಲಾಗಿವೆ ಎಂದು ತಿಳಿದುಬಂದಿದೆ.