ಕರ್ನಾಟಕ

karnataka

ETV Bharat / health

ವಯಸ್ಸು 36, ಈಗ ಎರಡನೇ ಮಗುವಿಗೆ ಪ್ರಯತ್ನಿಸಬಹುದೇ?: ಏನ್​ ಹೇಳ್ತಾರೆ ತಜ್ಞರು? - PREGNANCY AGE TIPS

ಈಗಿನ ಕಾಲದಲ್ಲಿ ಒಂದು ಮಗು ಬಯಸುವ ದಂಪತಿಗಳು ಜಾಸ್ತಿ ಆಗಿದ್ದಾರೆ. ಈ ನಡುವೆ ಕೆಲವರು ಕೊಂಚ ಸಮಯದ ನಂತರ ಮಕ್ಕಳನ್ನು ಪಡೆಯಬೇಕು ಎಂದರೆ ಏನು ಮಾಡಬೇಕು ಎಂಬ ಚಿಂತನೆಯಲ್ಲಿರ್ತಾರೆ. ಅಂತಹವರಿಗಾಗಿ ಈ ಸುದ್ದಿ

confused-about-having-second-child-and-age-36-is-trying-to-conceive
ವಯಸ್ಸು 36, ಈಗ ಎರಡನೇ ಮಗುವಿಗೆ ಪ್ರಯತ್ನಿಸಬಹುದೇ?: ಏನ್​ ಹೇಳ್ತಾರೆ ತಜ್ಞರು? (ETV Bharat)

By ETV Bharat Karnataka Team

Published : Feb 5, 2025, 9:08 AM IST

Confused About Having Second Child:ಆಗೊಂದು ಕಾಲವಿತ್ತು ಮನೆ ತುಂಬ ಮಕ್ಕಳ ಕಲರವ.. ಅವರ ಆಟ ನೋವು ನಲಿವು ಕಂಡು ಕುಟುಂಬಸ್ಥರು ಸಂಭ್ರಮಿಸುತ್ತಿದ್ದರು. ಅವಿಭಕ್ತ ಕುಟುಂಬದಲ್ಲಿ ಮನೆಯವರೆಲ್ಲ ಸೇರಿ ಮಕ್ಕಳಿಗೆ ಆಟ, ಪಾಠದ ನಡುವೆ ಜೀವನದ ಪಾಠವನ್ನು ಕಲಿಸುತ್ತಿದ್ದರು. ಆದರೆ ಕಾಲ ಕಳೆದಂತೆ ಅವಿಭಕ್ತ ಕುಟುಂಬಗಳು ಮಾಯವಾಗುತ್ತಿದ್ದು, ಈಗೇನಿದ್ದರು ನಾವಿಬ್ಬರು ನಮಗೊಬ್ಬರು ಎಂಬ ನೀತಿ ಪಾಲಿಸುತ್ತಿದ್ದಾರೆ.

ಇನ್ನೊಂದು ಕಡೆ ಕೆಲವರು ವೈದ್ಯಕೀಯ ಕಾರಣಗಳಿಂದ ಮೊದಲ ಮಗುವನ್ನು ಪಡೆದ ನಂತರ ಎರಡನೇ ಮಗುವನ್ನು ಹೊಂದುವುದನ್ನು ತಡೆಯುತ್ತಾರೆ. ಮೂವತ್ತು ವರ್ಷದ ಬಳಿಕ ಎರಡನೇ ಮಗು ಪಡೆಯುವತ್ತ ಒಲವು ತೋರಿಸುತ್ತಾರೆ. ಮಹಿಳೆಯೊಬ್ಬರು ಇದೇ ರೀತಿಯ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಅವರ ಪ್ರಶ್ನೆ ಎಂದರೆ ನಾನೀಗ ಮಗು ಪಡೆಯಬಹುದಾ ಅಂತಾ. ಬನ್ನಿ ಏನಿದು ಸಮಸ್ಯೆ ತಿಳಿದುಕೊಳ್ಳೋಣ

ನನ್ನ ವಯಸ್ಸು 36. ಮದುವೆಯಾಗಿ 10 ವರ್ಷಗಳಾಗಿವೆ. ನನಗೆ ಒಂದು ಮಗು ಕೂಡಾ ಇದೆ. ಮೊದಲ ಮಗು ಪಡೆಯುವಾಗ ಗರ್ಭಾವಸ್ಥೆಯಲ್ಲಿ ಅನೇಕ ಆರೋಗ್ಯ ಸಮಸ್ಯೆಗಳನ್ನು ಎದುರಿಸಿದೆ. ಪರಿಣಾಮವಾಗಿ ನಾನು ಖಿನ್ನತೆಗೆ ಒಳಗಾಗಿದ್ದೆ. ಹಾಗಾಗಿ ನಮಗೆ ಇನ್ನು ಮಕ್ಕಳು ಬೇಡ ಎಂದು ನಿರ್ಧರಿಸಿದ್ದೆ. ಆದರೆ ಈಗ ನಾನು ಮಗುವನ್ನು ನೋಡಿದಾಗಲೆಲ್ಲಾ, ಈತ ಭವಿಷ್ಯದಲ್ಲಿ ಒಬ್ಬನೇ ಇರುತ್ತಾನೆ ಎಂದು ಅನಿಸುತ್ತದೆ. ಮತ್ತೊಂದು ಮಗುವನ್ನು ಮಾಡಿಕೋ ಎಂದು ಮನೆಯಲ್ಲಿ ಹಿರಿಯರು ಒತ್ತಡ ಹಾಕುತ್ತಿದ್ದಾರೆ. ಆದರೆ, ಈ ಬಗ್ಗೆ ನಿರ್ಧರಿಸಲು ನನ್ನಿಂದ ಸಾಧ್ಯವಾಗುತ್ತಿಲ್ಲ ಏನು ಮಾಡಬೇಕು?' ಮನಶ್ಶಾಸ್ತ್ರಜ್ಞರ ಮೊರೆ ಹೋಗುವುದಾ ಎಂದು ಯೋಚಿಸುತ್ತಿದ್ದೇನೆ ಅಂತಿದ್ದಾರೆ. ಈ ಸಮಸ್ಯೆ ಬಗ್ಗೆ ಖ್ಯಾತ ಮನಶಾಸ್ತ್ರಜ್ಞೆ ಡಾ.ಮಂಡಾದಿ ಗೌರಿದೇವಿ ಹೇಳುವುದು ಇಷ್ಟು.

ಸಾಮಾನ್ಯವಾಗಿ ಹೆಚ್ಚಿನ ಜನರು ತಮ್ಮ ಮೊದಲ ಮಗುವಿನ ಎರಡು ಅಥವಾ ಮೂರು ವರ್ಷಗಳ ನಂತರ ಎರಡನೇ ಮಗುವನ್ನು ಹೊಂದಿದ್ದಾರೆ. ನೀವು ಇಲ್ಲಿಯವರೆಗೆ ಇನ್ನೊಂದು ಮಗುವಿನ ಬಗ್ಗೆ ಯೋಚಿಸಿರಲಿಲ್ಲ, ಏಕೆಂದರೆ ನೀವು ಆ ಸಮಯದಲ್ಲಿ ಮತ್ತೊಂದು ಮಗುಬೇಕು ಎಂಬ ಯೋಚನೆಯಲ್ಲಿ ಇರಲಿಲ್ಲ. ಆದರೆ ಈಗ ನಿಮಗೆ ಮಗುಬೇಕು ಅನಿಸುತ್ತಿದೆ. ಮೊದಲ ಮಗು ಒಂಟಿ ಆಗುತ್ತಿದ್ದಾನೆ /ಳೆ ಎನಿಸುತ್ತಿದೆ. ಈಗ ಹಾಗೆ ಯೋಚಿಸುವುದರಲ್ಲಿ ತಪ್ಪೇನಿಲ್ಲ. ಮಕ್ಕಳು ಒಡಹುಟ್ಟಿದವರಿದ್ದರೆ ಅನೇಕ ವಿಷಯಗಳನ್ನು ಕಲಿಯುತ್ತಾರೆ. ಅವರು ಸಹ ಪರಸ್ಪರ ಬೆಂಬಲಿಸುತ್ತಾರೆ.

ನೀವು ಈ ಹಿಂದೆ ಖಿನ್ನತೆಯಿಂದ ಬಳಲುತ್ತಿದ್ದೀರಿ. ನಿಮಗೂ 30 ವರ್ಷ ದಾಟಿದೆ. ಈಗ ನೀವು ನಿಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಪರಿಗಣಿಸಬೇಕು. ಹಾಗಾದರೆ ನೀವು ನಿಜವಾಗಿಯೂ ಮಗುವಿನೊಂದಿಗೆ ಒಂಟಿತನ ಅನುಭವಿಸುತ್ತೀರಾ? ನಿಮಗೆ ಈಗ ಎರಡನೇ ಮಗು ಬೇಕೇ? ಯೋಚಿಸಿ. ಇತರರ ಒತ್ತಡದಿಂದಾಗಿ ಈ ನಿರ್ಧಾರಕ್ಕೆ ಬರುವುದು ಬೇಡ ಅನಿಸುತ್ತದೆ ಅಂತಾರೆ ಮನೋವಿಜ್ಞಾನಿ ಡಾ.ಮಂಡಾದಿ ಗೌರಿದೇವಿ

ಎರಡನೆಯ ಮಗು ಅಗತ್ಯವೆಂದು ಭಾವಿಸಿದರೆ, ಗಂಡ ಮತ್ತು ಹೆಂಡತಿ ಇಬ್ಬರೂ ಫಿಟ್ನೆಸ್ ಮತ್ತು ಜೆನೆಟಿಕ್ ಪರೀಕ್ಷೆಗಳಿಗೆ ಒಳಗಾಗಬೇಕು. ಅದರೊಂದಿಗೆ ಮಾನಸಿಕವಾಗಿಯೂ ತಯಾರಿ ಮಾಡಿಕೊಳ್ಳಬೇಕು. ಈಗಾಗಲೇ ತಡವಾಗಿದೆ. ಹಾಗಾಗಿ ಯೋಚನೆ ಮಾಡುತ್ತಾ ಸಮಯ ಹಾಳು ಮಾಡದೆ ಕೂಡಲೇ ನಿರ್ಧಾರ ಕೈಗೊಳ್ಳಿ ಎಂದು ಮಂದಾಡಿ ಗೌರಿದೇವಿ ಸಲಹೆ ನೀಡಿದ್ದಾರೆ.

ಇದನ್ನು ಓದಿ:ಪ್ರತಿನಿತ್ಯ ಸ್ನಾನ ಮಾಡುವುದು ಉತ್ತಮ ಅಭ್ಯಾಸನಾ? ತಜ್ಞರು ಏನಂತಾರೆ?

ABOUT THE AUTHOR

...view details