ನವದೆಹಲಿ:ಥ್ರಂಬೋಸಿಸ್ ಥ್ರಂಬೋಸೈಟೋಪೆನಿಯಾ ಸಿಂಡ್ರೋಮ್ (ಟಿಟಿಎಸ್) ರಕ್ತನಾಳಗಳಲ್ಲಿನ ಹೆಪ್ಪುಗಟ್ಟುವಿಕೆಯನ್ನು ಸೂಚಿಸುತ್ತದೆ. ಮತ್ತು ಕೆಲವು ರೀತಿಯ ಲಸಿಕೆಗಳ ಬಳಕೆಯನ್ನು ಅನುಸರಿಸಿ ಬಹಳ ಅಪರೂಪದ ಸಂದರ್ಭಗಳಲ್ಲಿ ರಕ್ತನಾಳಗಳಲ್ಲಿನ ಹೆಪ್ಪುಗಟ್ಟುವಿಕೆ ಸಂಭವಿಸುತ್ತದೆ ಎಂದು ವೈದ್ಯಕೀಯ ತಜ್ಞ ಡಾ. ರಾಜೀವ್ ಜಯದೇವನ್ ಹೇಳಿದ್ದಾರೆ.
ಕೇರಳದ ರಾಷ್ಟ್ರೀಯ ಭಾರತೀಯ ವೈದ್ಯಕೀಯ ಸಂಘದ (ಐಎಂಎ) ಕೋವಿಡ್ ಟಾಸ್ಕ್ ಫೋರ್ಸ್‌ನ ಸಹ - ಅಧ್ಯಕ್ಷರಾಗಿರುವ ಜಯದೇವನ್ ಅವರು, ಕೋವಿಡ್ ಲಸಿಕೆಗಳು ಹಲವಾರು ಸಾವುಗಳನ್ನು ತಡೆಗಟ್ಟುವಲ್ಲಿ ಸಹಾಯ ಮಾಡಿವೆ. ಆ ರೀತಿಯ ಪ್ರಕರಣಗಳ ವರದಿಗಳನ್ನು ಅನೇಕ ವರದಿಗಳಲ್ಲಿ ಎತ್ತಿ ತೋರಿಸಲಾಗಿದೆ ಎಂದರು.
ಡಾ.ಜಯದೇವನ್ ಮಾಹಿತಿ:"ಟಿಟಿಎಸ್ ಥ್ರಂಬೋಸೈಟೋಪೆನಿಯಾ ಸಿಂಡ್ರೋಮ್ನೊಂದಿಗೆ ಥ್ರಂಬೋಸಿಸ್ ಆಗಿದೆ. ಇದು ಮೂಲಭೂತವಾಗಿ ಮಿದುಳಿನ ಅಥವಾ ಬೇರೆಡೆಯ ರಕ್ತನಾಳಗಳಲ್ಲಿ ಹೆಪ್ಪುಗಟ್ಟುವಿಕೆಯಾಗಿದೆ. ಜೊತೆಗೆ ಕಡಿಮೆ ಪ್ಲೇಟ್ಲೆಟ್ ಕೌಂಟ್ ಇರುವುದು ಕೂಡಾ ಕಂಡು ಬಂದಿದೆ. ಇದು ಕೆಲವು ವಿಧದ ಲಸಿಕೆಗಳ ನಂತರ ಮತ್ತು ಇತರ ಕಾರಣಗಳಿಂದ ಬಹಳ ಅಪರೂಪದ ಸಂದರ್ಭಗಳಲ್ಲಿ ರಕ್ತನಾಳಗಳಲ್ಲಿ ಹೆಪ್ಪುಗಟ್ಟುವಿಕೆ ಕಂಡುಬರುತ್ತದೆ. ಇವೆಲ್ಲ ಅಪರೂಪವಾಗಿ ಕಂಡು ಬರುತ್ತವೆ ಎಂದು ಜಯದೇವನ್ ತಿಳಿಸಿದ್ದಾರೆ.
"ಕೋವಿಡ್ ಲಸಿಕೆಗಳು ಹಲವಾರು ಸಾವುಗಳನ್ನು ತಡೆಗಟ್ಟಿದರೂ, ಅಪರೂಪದ ಸಂಭಾವ್ಯ ಗಂಭೀರವಾದ ಪ್ರತಿರಕ್ಷಣಾ ಘಟನೆಗಳು ಜೀವಕ್ಕೆ ಅಪಾಯ ತಂದೊಡ್ಡಿರುವ ಬಗ್ಗೆ ಹೆಸರಾಂತ ನಿಯತಕಾಲಿಕಗಳಲ್ಲಿ ಪ್ರಕಟಿಸಲಾಗಿದೆ. ಲಸಿಕೆ ತಯಾರಿಸಿದ ಕಂಪನಿಗಳು ಸಹ ಇದನ್ನು ಒಪ್ಪಿಕೊಂಡಿದೆ. ಕೋವಿಡ್ ಲಸಿಕೆಗಳು ಅಪರೂಪದ ಸಂದರ್ಭಗಳಲ್ಲಿ, ರಕ್ತನಾಳಗಳಲ್ಲಿ ಹೆಪ್ಪುಗಟ್ಟುವಿಕೆ ಕಾರಣವಾಗಿರಲೂ ಬಹುದು' ಎಂದು ಡಾ. ಜಯದೇವನ್ ಹೇಳಿದರು.
ಇಂಗ್ಲೆಂಡ್ನ ಹಲವು ಮಾಧ್ಯಮ ವರದಿಗಳ ಪ್ರಕಾರ, ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯದೊಂದಿಗೆ ಅಭಿವೃದ್ಧಿಪಡಿಸಿದ ಲಸಿಕೆಯು 12 ಪ್ರಕರಣಗಳಲ್ಲಿ ಸಾವು ಮತ್ತು ಗಂಭೀರವಾದ ಅನಾರೋಗ್ಯವನ್ನು ಉಂಟುಮಾಡಿದೆ ಎಂದು ಆರೋಪಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಆಸ್ಟ್ರಾಜೆನೆಕಾ ನ್ಯಾಯಾಲಯಕ್ಕೆ ಹಲವು ದಾಖಲೆಗಳುನ್ನು ಸಲ್ಲಿಸಿದೆ. ಅದರಲ್ಲಿ ಹಲವು ಮಹತ್ವದ ವಿಚಾರಗಳು ತಿಳಿದು ಬಂದಿವೆ.