ಹೈದರಾಬಾದ್: ಹೃದಯದ ಅಪಧಮನಿಗಳಲ್ಲಿ ಪ್ಲೇಕ್ಗಳ (ಬ್ಲಾಕ್) ಬಗ್ಗೆ ಹೆಚ್ಚು ಎಚ್ಚರಿಕೆಯಿಂದ ಇರುವುದು ಅಗತ್ಯವಾಗಿದೆ. ಅದರಲ್ಲೂ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ಗಳು ಹೆಚ್ಚಾದಗ ಈ ರೀತಿ ಬ್ಲಾಕ್ಗಳು ರೂಪುಗೊಳ್ಳುತ್ತದೆ. ಕ್ರಮೇಣ ಇದು ಹೃದಯದ ಸಮಸ್ಯೆಗೆ ಕಾರಣವಾಗುತ್ತದೆ ಎನ್ನುತ್ತಾರೆ ಹೃದ್ರೋಗ ತಜ್ಞರು. ಹೈದರಾಬಾದ್ನಲ್ಲಿ ಅಪೋಲೋ ಆಸ್ಪತ್ರೆ ಮತ್ತು ಅಮೆರಿಕದ ಕಾರ್ಡಿಯೋವಸ್ಕ್ಯುಲರ್ ರಿಸರ್ಚ್ ಫೌಂಡೇಷನ್ (ಸಿಆರ್ಎಫ್) ಅಡಿ ಮೂರು ದಿನ ಕಾರ್ಡಿಯೋ ಕಾನ್ಫರೆನ್ಸ್ ಅನ್ನು ಹಮ್ಮಿಕೊಳ್ಳಲಾಗಿದ್ದು, ಈಟಿವಿ ಭಾರತನೊಂದಿಗೆ ಹೆಚ್ಐಸಿಸಿ ವಕ್ತಾರರು ಮಾತನಾಡಿದ್ದಾರೆ.
ಈ ಹಿಂದೆ ಅಪಧಮನಿಯಲ್ಲಿ ಬ್ಲಾಕ್ಗಳು ಇದ್ದಾಗ ಸರ್ಜರಿಗಳ ಅಗತ್ಯವಿತ್ತು. ಆದರೆ, ಇದೀಗ ಹೊಸ ಆಧುನಿಕ ಮಾದರಿ ಲಭ್ಯವಿದ್ದು, ಈ ಫ್ಲೇಕ್ಗಳನ್ನು ಸುಲಭವಾಗಿ ನಿವಾರಣೆ ಮಾಡಬಹುದಾಗಿದೆ. ಈ ರೀತಿ ಬ್ಲಾಕ್ ರೂಪುಗೊಳ್ಳದಂತೆ ಮಾಡುವಲ್ಲಿ ಇರುವ ಪ್ರಮುಖ ಹೆಜ್ಜೆ ಎಂದರೆ ಕೆಟ್ಟ ಕೊಲೆಸ್ಟ್ರಾಲ್ ನಿಯಂತ್ರಣವಾಗಿದೆ. ಅಧಿಕ ರಕ್ತದೊತ್ತಡ, ಧೂಮಪಾನ, ಅಧಿಕ ತೂಕ, ಮಧುಮೇಹ, ಮಾನಸಿಕ ಒತ್ತಡ, ನಿದ್ರೆ ಕೊರತೆ ಮತ್ತು ಜಂಕ್ ಫುಡ್ಗಳು ಕೆಟ್ಟ ಕೊಲೆಸ್ಟ್ರಾಲ್ಗಳ ಹೆಚ್ಚಳಕ್ಕೆ ಕಾರಣವಾಗುತ್ತದೆ.
ಚುಚ್ಚುಮದ್ದು: ಕೊಲೆಸ್ಟ್ರಾಲ್ ನಿಯಂತ್ರಣಕ್ಕಾಗಿ ಅನೇಕ ವಿಧದ ಔಷಧಗಳು ಲಭ್ಯವಿದೆ. ಇತ್ತೀಚಿಗೆ ಇನ್ಸಿಲಿಸಿರೊನ್ ಎಂಬ ಚುಚ್ಚುಮದ್ದು ಕೂಡ ಮಾರುಕಟ್ಟೆಯಲ್ಲಿ ಲಭ್ಯವಿದೆ. ಇದನ್ನು ಆರು ತಿಂಗಳ ಕಾಲ ತೆಗೆದುಕೊಳ್ಳುವುದರಿಂದ ಕೆಟ್ಟ ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸಬಹುದು. ಸಣ್ಣ ವಯಸ್ಸಿನಲ್ಲಿಯೇ ಅಪಧಮನಿಯಲ್ಲಿ ಫ್ಲೆಕ್ ಹೊಂದಿರುವ ಮತ್ತು ಅಧಿಕ ಕೊಲೆಸ್ಟ್ರಾಲ್ ಅಪಾಯದ ಇತಿಹಾಸ ಹೊಂದಿರುವ ಕುಟುಂಬದ ರೋಗಿಗಳಿಗೆ ಇದು ಉಪಯುಕ್ತವಾಗಿದೆ. ಈ ಇಂಜೆಕ್ಷನ್ನ ಬೆಲೆ 1. 20 ಲಕ್ಷವಾಗಿದೆ. ಈ ಔಷಧಿಯು ಪಿಸಿಎಸ್ಕೆ 9 ಜೀನ್ ಅನ್ನು ನಿಯಂತ್ರಿಸಿ, ದೇಹದಲ್ಲಿನ ಕೆಟ್ಟ ಕೊಬ್ಬು ಎಲ್ಡಿಎಲ್ ವಾಹಕಗಳನ್ನು ನಾಶಮಾಡುತ್ತದೆ. ಇದು ಎಲ್ಡಿಎಲ್ ಮಟ್ಟ ಏರಿಕೆಯಾಗುವುದನ್ನು ತಡೆಯುತ್ತದೆ. ಈ ಹಿಂದೆ ಅಪಧಮನಿ ಸಂಪೂರ್ಣವಾಗಿ ಬ್ಲಾಕ್ ಆಗಿದ್ದಾಗ ಶಸ್ತ್ರಚಿಕಿತ್ಸೆ ಕಡ್ಡಾಯವಾಗಿತ್ತು. ಇದೀಗ ವಿಶೇಷ ವೈದ್ಯಕೀಯ ಕ್ರಮದಿಂದ ಅಪಧಮನಿಯಲ್ಲಿ ಬ್ಲಾಕ್ ಅನ್ನು ಕ್ಲೀಯರ್ ಮಾಡಬಹುದಾಗಿದೆ ಎಂದು ಅಪೋಲೋ ಆಸ್ಪತ್ರೆಯ ಕ್ಲಿನಿಕಲ್ ಸಂಶೋಧನಾ ನಿರ್ದೇಶಕರು ಡಾ ಎ ಶ್ರೀನಿವಾಸ್ಕುಮಾರ್ ತಿಳಿಸಿದ್ದಾರೆ.