ಹೈದರಾಬಾದ್:ದೇಶದ ಪೂರ್ವ ಮತ್ತು ಈಶಾನ್ಯ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ತಮಿಳುನಾಡು, ಕರ್ನಾಟಕ, ತೆಲಂಗಾಣ ಮತ್ತು ದೆಹಲಿಯಲ್ಲಿ ಸ್ತನ ಕ್ಯಾನ್ಸರ್ ಹೊರೆ ಹೆಚ್ಚಿದೆ ಎಂದು ಐಸಿಎಂಆರ್ ಅಧ್ಯಯನ ತಿಳಿಸಿದೆ. ಅಷ್ಟೇ ಅಲ್ಲದೇ ಸ್ತನ ಕ್ಯಾನ್ಸರ್ ಹೊರೆ 2025ಕ್ಕೆ ಗಣನೀಯ ಏರಿಕೆ ಕಾಣಲಿದೆ ಎಂದು ತಿಳಿಸಿದೆ.
ಈ ತಿಂಗಳಾರಂಭದಲ್ಲಿ ಈ ಅಧ್ಯಯನ ಪ್ರಕಟವಾಗಿದೆ. ದೇಶದಲ್ಲಿ 2012ರಿಂದ 2016ರವರೆಗೆ ರಾಜ್ಯ ಮಟ್ಟದಲ್ಲಿ ಸ್ತನ ಕ್ಯಾನ್ಸರ್ ಹೊರೆಯನ್ನು ವರ್ಷಗಳ ನಷ್ಟ ಮತ್ತು ಅಂಗವೈಕಲ್ಯ ಹೊಂದಾಣಿಕೆ ಜೀವನ ವರ್ಷ ಎಂಬ ಆಧಾರದಡಿ ಅಧ್ಯಯನ ಮಾಡಲಾಗಿದೆ. 2016ರಲ್ಲಿ ಭಾರತೀಯ ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಹೊರೆ ವಯಸ್ಸಿನ ಪ್ರಮಾಣೀಕರಣದ ನಂತರ, 1,00,000 ಮಹಿಳೆಯರಿಗೆ ಅಂಗವೈಕಲ್ಯ ಹೊಂದಾಣಿಕೆಯ ಜೀವನ ವರ್ಷಗಳು 515.4 ಎಂದು ಅಂದಾಜಿಸಲಾಗಿದೆ.
ರಾಜ್ಯ ಮಟ್ಟದ ಈ ಹೊರೆಯ ಮಾಪನ ಹಲವು ವೈವಿಧ್ಯತೆಯನ್ನು ಹೊಂದಿದೆ. ಪೂರ್ವ ಮತ್ತು ಈಶಾನ್ಯ ಪ್ರದೇಶಗಳಿಗೆ ಹೋಲಿಸಿದರೆ ತಮಿಳುನಾಡು, ತೆಲಂಗಾಣ, ಕರ್ನಾಟಕ ಮತ್ತು ದೆಹಲಿ ಹೆಚ್ಚಿನ ಮಟ್ಟದ ಕ್ಯಾನ್ಸರ್ ಭಾರ ಹೊಂದಿದೆ. ಇದು 2025ರಲ್ಲಿ ಗಣನೀಯ ಹೆಚ್ಚಳ ಕಂಡಿದ್ದು, ಅಂಗವೈಕಲ್ಯ ಹೊಂದಾಣಿಕೆಯ ಜೀವನ ವರ್ಷಗಳು 5.6 ತಲುಪಲಿದೆ ಎಂದು ಐಸಿಎಂಆರ್ ಹೇಳಿದೆ.
ಅಂಗವೈಕಲ್ಯ ಹೊಂದಾಣಿಕೆಯ ಜೀವನ ವರ್ಷವನ್ನು ರೋಗದ ಒಟ್ಟಾರೆ ಹೊರೆ, ಅನಾರೋಗ್ಯ, ಅಂಗವೈಕಲ್ಯ ಅಥವಾ ಅಕಾಲಿಕ ಸಾವಿನೊಂದಿಗೆ ಲೆಕ್ಕ ಹಾಕಲಾಗಿದೆ. ನಗರ ಪ್ರದೇಶಗಳಿಗೆ ಹೋಲಿಕೆ ಮಾಡಿದಾಗ ವಯಸ್ಸಿನ ಪ್ರಮಾಣೀಕರಣ ಪ್ರಕರಣದ ದರದಲ್ಲಿ ಗ್ರಾಮೀಣ ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಅಭಿವೃದ್ಧಿ ಕಡಿಮೆ ಇದೆ. ಈ ದರ ಮೆಟ್ರೋ ನಗರದಲ್ಲಿ ಜಾಸ್ತಿಯಿದ್ದು, ಭಾರತದ ಇತರೆ ನಗರಗಳಿಗೆ ಹೋಲಿಸಿದಾಗ ಹೈದರಾಬಾದ್, ಚೆನ್ನೈ, ಬೆಂಗಳೂರು ದೆಹಲಿಯಲ್ಲಿ ಏರಿಕೆ ಕಂಡಿದೆ.