Best position to sleep at night:ಮನುಷ್ಯನಿಗೆ ಆಹಾರ, ನೀರು ಮತ್ತು ಉಸಿರಾಟ ಕೂಡ ಎಷ್ಟು ಮುಖ್ಯವೋ ಹಾಗೆಯೇ ನಿದ್ರೆಯೂ ಬಹಳ ಮುಖ್ಯ. ಒಬ್ಬ ವ್ಯಕ್ತಿಯು ಸಾಕಷ್ಟು ನಿದ್ರೆ ಮಾಡದೇ ಇದ್ದರೆ, ಅವನು ಅನೇಕ ಸಮಸ್ಯೆಗಳಿಂದ ಬಳಲುವ ಸಾಧ್ಯತೆ ಹೆಚ್ಚಿದೆ. ವೈದ್ಯರ ಪ್ರಕಾರ, ಪ್ರತಿಯೊಬ್ಬ ವ್ಯಕ್ತಿಯು ಪ್ರತಿದಿನ ಸಾಕಷ್ಟು ನಿದ್ರೆ ಮಾಡಬೇಕಾಗುತ್ತದೆ. ಉತ್ತಮ ನಿದ್ರೆಗಾಗಿ ಯಾವ ಭಂಗಿಯಲ್ಲಿ ಮಲಗುವುದು ಉತ್ತಮ ಎಂಬ ಪ್ರಶ್ನೆ ಉದ್ಭವಿಸುತ್ತದೆ.
ಹೆಚ್ಚಿನ ಜನರು ತಮ್ಮ ಜೀವನದ ಮೂರನೇ ಒಂದು ಭಾಗವನ್ನು ನಿದ್ರೆ ಅಥವಾ ವಿಶ್ರಾಂತಿಯಲ್ಲಿ ಕಳೆಯುತ್ತಾರೆ. ನಿದ್ರೆಯ ಸಮಯದಲ್ಲಿ, ದೇಹವು ರಿಚಾರ್ಜ್ ಆಗುತ್ತದೆ ಮತ್ತು ಸ್ವತಃ ರಿಪೇರಿ ಮಾಡಿಕೊಳ್ಳುತ್ತದೆ. ಮತ್ತು ರಾತ್ರಿ ಸಮಯದಲ್ಲಿ ಉತ್ತಮ ನಿದ್ರೆ ಮಾಡಲು ನೀವು ಹಾಸಿಗೆಯಲ್ಲಿ ಯಾವ ಭಂಗಿಯಲ್ಲಿ ಮಲಗುತ್ತೀರಿ ಎಂಬುದು ಹೆಚ್ಚಾಗಿ ನಿರ್ಧರಿಸಲಾಗುತ್ತದೆ. ಕೆಲವರು ಬಲ ಬದಿಯಲ್ಲಿ ಮತ್ತು ಇನ್ನೂ ಕೆಲವರು ಎಡಬದಿಯಲ್ಲಿ ಮಲಗುತ್ತಾರೆ. ಮತ್ತೆ ಕೆಲವರು ಬೆನ್ನಿನ (ಹೊಟ್ಟೆ ಅಂಗಾತ ಮಾಡಿ ಮಲಗುವುದು) ಮೇಲೆ ಮಲಗಲು ಸಲಹೆ ನೀಡುತ್ತಾರೆ. ಆದರೆ, ರಾತ್ರಿಯಲ್ಲಿ ಉತ್ತಮ ನಿದ್ರೆಗೆ ಉತ್ತಮವಾದ ಭಂಗಿ ಯಾವುದು ಎಂಬುದನ್ನು ಇಲ್ಲಿ ತಿಳಿಯೋಣ.
ನಿದ್ರೆ ಮಾಡುವ ವಿವಿಧ ಭಂಗಿಗಳು:ಈ ಪ್ರಮುಖವಾಗಿ ನಾಲ್ಕು ಮಲಗುವ ಭಂಗಿಗಳನ್ನು ಅತ್ಯುತ್ತಮವೆಂದು ಪರಿಗಣಿಸಲಾಗುತ್ತದೆ. ಇದರಲ್ಲಿ ಹಿಂಭಾಗದಲ್ಲಿ (ಬೆನ್ನಿನ ಮೇಲೆ), ಹೊಟ್ಟೆಯ ಮೇಲೆ, ಎಡಭಾಗದಲ್ಲಿ ಮತ್ತು ಬಲಭಾಗದಲ್ಲಿ ಮಲಗುವುದು ಸೇರಿದೆ.
ಎಡಬದಿಯಲ್ಲಿ ಮಲಗುವುದು:ಎಡಬದಿಯಲ್ಲಿ ಮಲಗುವುದರಿಂದ ಗೊರಕೆ ಮತ್ತು ಎದೆಯುರಿ ಕಡಿಮೆ ಮಾಡುತ್ತದೆ. ಎಡಭಾಗದಲ್ಲಿ ಮಲಗುವುದು ಕರುಳಿಗೆ ಪ್ರಯೋಜನವನ್ನು ನೀಡುತ್ತದೆ. ಮತ್ತು ಜೀರ್ಣಕ್ರಿಯೆಯ ಪ್ರಕ್ರಿಯೆಯನ್ನು ಆರೋಗ್ಯಕರವಾಗಿರಿಸುತ್ತದೆ.
ನಿಮ್ಮ ಬೆನ್ನಿನ ಮೇಲೆ ಮಲಗುವುದು:ಇದನ್ನು ಸಾಮಾನ್ಯವಾಗಿ ತಲೆ, ಬೆನ್ನುಮೂಳೆ ಮತ್ತು ಕುತ್ತಿಗೆಗೆ ಉತ್ತಮ ಮಲಗುವ ಭಂಗಿ ಎಂದು ಪರಿಗಣಿಸಲಾಗುತ್ತದೆ. ಆದಾಗ್ಯೂ, ಬೆನ್ನಿನ ಮೇಲೆ ನಿದ್ರಿಸುವವರು ಗೊರಕೆ ಮತ್ತು ನಿದ್ರೆಯಲ್ಲಿ ಉಸಿರುಕಟ್ಟುವಿಕೆಯಂತಹ ಹೆಚ್ಚಿನ ಅಪಾಯ ಹೊಂದಿರುತ್ತಾರೆ.