ಹೈದರಾಬಾದ್: ಕೆಲಸದ ಒತ್ತಡ, ಆಹಾರ ಅಭ್ಯಾಸಗಳ ಬದಲಾವಣೆ ವ್ಯಕ್ತಿಯ ಆರೋಗ್ಯದ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ವೇಗವಾಗಿ ಬದಲಾಗುತ್ತಿರುವ ಜೀವನಶೈಲಿ ಮತ್ತು ಸವಾಲುಗಳಿಂದಾಗಿ ಬಿಪಿ, ಮಧುಮೇಹ ಮತ್ತು ಹೃದಯ ಸಮಸ್ಯೆಗಳು ವಿಶ್ವದೆಲ್ಲೆಡೆ ಜನರ ಆರೋಗ್ಯದ ಮೇಲೆ ಬೆದರಿಕೆ ಒಡ್ಡುತ್ತಿದೆ. ಇದು ಒಟ್ಟಾರೆ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಅದರಲ್ಲೂ ಕಿಡ್ನಿ ಬಗ್ಗೆ ವಿಶೇಷ ಜಾಗೃತಿವಹಿಸಬೇಕಿದೆ. ಈ ಹಿನ್ನೆಲೆಯಲ್ಲಿ ಅದರ ನಿಯಂತ್ರಣ ನಡೆಸುವುದು ಅವಶ್ಯ. ಅದರಲ್ಲಿ ಊಟವು ಪ್ರಮುಖವಾಗಿದೆ. ಅಧಿಕ ಬಿಪಿ ಹೊಂದಿರುವ ಜನರು ಈ ತಮ್ಮ ಊಟದ ಬಗ್ಗೆ ಕೂಡ ಹೆಚ್ಚಿನ ಗಮನ ಹೊಂದಿರಬೇಕು. ಜೊತೆಗೆ ಅವರು ಸೇವಿಸುವ ಔಷಧಗಳಿಂದ ಈ ಆಹಾರ ಬದಲಾವಣೆ ಮಾಡುವುದು ಅನಿವಾರ್ಯವಾಗಿದೆ.
ಹಸಿರಿಗೆ ಪ್ರಾಶಸ್ತ್ಯ: ಆಹಾರದಲ್ಲಿ ಪೋಟಾಶಿಯಂ ಸಮೃದ್ಧ ಹಣ್ಣು, ತರಕಾರಿ, ಸೊಪ್ಪು, ಕಾಳುಗಳಿಗೆ ಒತ್ತು ನೀಡಿ. ಇದು ರಕ್ತದ ಒತ್ತಡದ ಸಮಸ್ಯೆ ತಗ್ಗಿಸಲು ಸಹಾಯ ಮಾಡುತ್ತದೆ. ಅಧಿಕ ಬಿಪಿ ನಿಯಂತ್ರಿಸುವ ಜೊತೆಗೆ ದೇಹದ ಅಗತ್ಯ ಕಾರ್ಯಾಚರಣೆಗೆ ಬೇಕಾದ ವಿಟಮಿನ್, ಖನಿಜಾಂಶ, ಫೈಬರ್ ಒದಗಿಸುತ್ತದೆ.
ಸ್ಟಾಬೆರಿ:ರಕ್ತದೊತ್ತಡ ನಿಯಂತ್ರಿಸಬೇಕು ಎಂದರೆ ಇದು ಅತ್ಯಂತ ಪ್ರಮುಖವಾದ ಹಣ್ಣಾಗಿದೆ. ಇದರಲ್ಲಿ ಸಮೃದ್ಧ ಆಂಟಿ ಆಕ್ಸಿಡೆಂಟ್ ಮತ್ತು ಫ್ಲವೊನೊಯ್ಡ್ಸ್ ಇದ್ದು, ಇದು ರಕ್ತದ ಪರಿಚಲನೆ ಸುಧಾರಣೆ ಮಾಡಿ, ಅಧಿಕ ರಕ್ತದೊತ್ತಡ ನಿಯಂತ್ರಿಸುತ್ತದೆ.
ಬಾಳೆಹಣ್ಣು: ಅನೇಕ ಪೋಷಕಾಂಶಗಳಿಂದ ಕೂಡಿದ್ದು, ಇದು ರಕ್ತದೊತ್ತಡ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದರಲ್ಲಿನ ಪೋಟಾಶಿಯಂ ದೇಹದ ಸೋಡಿಯಂ ಮಟ್ಟವನ್ನು ನಿಯಂತ್ರಿಸಿ, ಆರೋಗ್ಯಯುತ ರಕ್ತದೊತ್ತಡಕ್ಕೆ ಸಹಾಯ ಮಾಡುತ್ತದೆ.
ಓಟ್ಮಿಲ್: ಫೈಬರ್ನ ಅಗರವಾಗಿರುವ ಇದು ಕೊಲೆಸ್ಟ್ರಾಲ್ ನಿಯಂತ್ರಿಸುತ್ತದೆ. ಇದರ ಸೇವನೆಯಿಂದ ಕೂಡ ರಕ್ತದೊತ್ತಡ ನಿಯಂತ್ರಿಸಬಹುದು.
ಬೀಟ್ರೂಟ್: ರಕ್ತದ ಸಂಖ್ಯೆ ಹೆಚ್ಚಿಸಲು ಇದು ಪ್ರಯೋಜನಕಾರಿ. ಬಹುತೇಕ ಜನರಿಗೆ ಇದು ತಿಳಿದಿಲ್ಲ. ಇದರಲ್ಲಿ ನೈಟ್ರೇಟ್ ಅಂಶವೂ ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ.