Belly Fat Reduction Exercises:ನಮ್ಮಲ್ಲಿ ಹಲವರಿಗೆ ಸ್ಲಿಮ್ ಆಗಿ ಕಾಣುವ ಬಯಕೆ. ಅದಕ್ಕಾಗಿ ಕಟ್ಟುನಿಟ್ಟಾದ ಆಹಾರದ ನಿಯಮಗಳನ್ನೂ ಅನುಸರಿಸುತ್ತಾರೆ. ಹೀಗೆ ಮಾಡಿದರೂ ಹೊಟ್ಟೆಯ ಸುತ್ತಲಿರುವ ಕೊಬ್ಬು (ಬೆಲ್ಲಿ ಫ್ಯಾಟ್) ಎಷ್ಟೋ ಜನರಿಗೆ ಹಾಗೆಯೇ ಇರುತ್ತದೆ. ಇದಕ್ಕಾಗಿ ತಜ್ಞರು 10-20-30 ನಿಯಮ ಅನುಸರಿಸಲು ಪ್ರಯತ್ನಿಸುವಂತೆ ಸಲಹೆ ನೀಡಿದ್ದಾರೆ.
ಹಾರ್ವರ್ಡ್ ಮೆಡಿಕಲ್ ಪಬ್ಲಿಷಿಂಗ್ ನಡೆಸಿದ ಅಧ್ಯಯನವು ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲು ಕಾರ್ಡಿಯೋ ವ್ಯಾಯಾಮಗಳು ಅಥವಾ ಏರೋಬಿಕ್ ವ್ಯಾಯಾಮಗಳು ತುಂಬಾ ಉಪಯುಕ್ತವಾಗಿದೆ ಎಂದು ಬಹಿರಂಗಪಡಿಸಿದೆ. (ವರದಿಗಾಗಿ ಇಲ್ಲಿ ಕ್ಲಿಕ್ ಮಾಡಿ). ಈ ವ್ಯಾಯಾಮಗಳು ತೂಕ ನಷ್ಟಕ್ಕೆ ಮಾತ್ರವಲ್ಲ, ನಮ್ಮ ಒಟ್ಟಾರೆ ಆರೋಗ್ಯವನ್ನು ಸುಧಾರಿಸಲು ಅನುಕೂಲಕರ. ಇದು ಹೃದಯದ ಆರೋಗ್ಯ ಹಾಗೂ ಮಾನಸಿಕ ಆರೋಗ್ಯವನ್ನು ಸುಧಾರಿಸುತ್ತದೆ. ಆದ್ದರಿಂದ ಒಂದು ವಾರದಲ್ಲಿ ಕನಿಷ್ಠ 150 ನಿಮಿಷಗಳ ಮಧ್ಯಮ ತೀವ್ರತೆಯ ವ್ಯಾಯಾಮ ಮಾಡಲು ಪ್ರಯತ್ನಿಸಲು ತಜ್ಞರು ಹೇಳುತ್ತಾರೆ.
ಕಡಿಮೆ ಸಮಯದಲ್ಲಿ ಹೊಟ್ಟೆಯ ಭಾಗದಲ್ಲಿರುವ ಬೆಲ್ಲಿ ಫ್ಯಾಟ್ ಕರಗಿಸಲು ತಜ್ಞರು ಈ 10-20-30 ವಿಶೇಷ ವ್ಯಾಯಾಮವನ್ನು ತಿಳಿಸುತ್ತಾರೆ. ಇದರಂತೆ 10-20-30 ಸಂಖ್ಯೆಗಳ ಪ್ರಕಾರ, ಎಷ್ಟು ಸಮಯದವರೆಗೆ ಯಾವ ತಾಲೀಮುಗಳನ್ನು ಮಾಡಬೇಕು. ಈ ವ್ಯಾಯಾಮವನ್ನು ಕೇವಲ ಒಂದು ನಿಮಿಷ ಮಾಡಿದರೂ ಹೆಚ್ಚು ಉತ್ತಮ ಫಲಿತಾಂಶ ಸಿಗುತ್ತದೆ. ಆದರೆ ಈ ನಿಯಮವನ್ನು ಫಾಲೊ ಮಾಡುವ ಮೊದಲು, ಕನಿಷ್ಠ 5 ನಿಮಿಷಗಳ ಕಾಲ ವಾರ್ಮ್ಅಪ್ ಮಾಡಬೇಕಾಗುತ್ತದೆ.
30 ಸೆಕೆಂಡು:ನಿಧಾನ ಜಾಗಿಂಗ್ ಅಥವಾ ಸೈಕ್ಲಿಂಗ್‌ನಂತಹ ಲಘು ವ್ಯಾಯಾಮ.
20 ಸೆಕೆಂಡು:ನಂತರ, ವೇಗ ಹೆಚ್ಚಿಸಲು ಮತ್ತು 20 ಸೆಕೆಂಡುಗಳ ಕಾಲ ಓಡುವುದು ಅಥವಾ ಬೈಸಿಕಲ್ ಅನ್ನು ಸ್ವಲ್ಪ ವೇಗವಾಗಿ ಓಡಿಸುವುದು.