ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಐದನೇ ಪೋಲಿಯೊ ಪ್ರಕರಣ ಪತ್ತೆಯಾಗಿದೆ. ನೈಋತ್ಯ ಬಲೂಚಿಸ್ತಾನ್ ಪ್ರಾಂತ್ಯದ ಕ್ವೆಟ್ಟಾ ನಗರದಲ್ಲಿ ಪೋಲಿಯೊ ಪೀಡಿತ ಮಗು ಪಾರ್ಶ್ವವಾಯುಗೆ ತುತ್ತಾಗಿ ಸಾವನ್ನಪ್ಪಿದೆ ಎಂದು ಪಾಕಿಸ್ತಾನದ ಆರೋಗ್ಯ ಸಚಿವಾಲಯ ತಿಳಿಸಿದೆ. 2 ವರ್ಷದ ಮಗುವಿನ ಎರಡು ಕಾಲುಗಳಲ್ಲಿ ಪಾರ್ಶ್ವವಾಯುಗೆ ತುತ್ತಾಗಿದೆ. ಬಳಿಕ ಮಗುವಿನ ತೋಳುಗಳು ಕೂಡ ದುರ್ಬಲಗೊಂಡು ಕ್ರಮೇಣ ಮಗು ಅನಾರೋಗ್ಯಕ್ಕೆ ಒಳಗಾಗಿದೆ. ಬಳಿಕ ವಾರದ ನಂತರ ಕರಾಚಿಯ ಆಸ್ಪತ್ರೆಯಲ್ಲಿ ಮಗು ಸಾವನ್ನಪ್ಪಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.
ಮಗು, ಅದರ ಜೊತೆ ಮನೆಯಲ್ಲಿ ವಾಸ ಮಾಡುತ್ತಿದ್ದ ಆತನ ಸಹೋದರ ಮತ್ತು ಸಹೋದರ ಸಂಬಂಧಿ ಮಾದರಿಗಳನ್ನು ಸಂಗ್ರಹಿಸಲಾಗಿದ್ದು, ಮಗುವಿನಲ್ಲಿ ಪೋಲಿಯೊ ವೈರಸ್ ಟೈಪ್ 1 ಇರುವುದು ದೃಢಪಟ್ಟಿದೆ ಎಂದು ಕ್ಸಿನುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ. ಮಗುವಿನಿಂದ ಸಂಗ್ರಹಿಸಿದ ಮಾದರಿಯನ್ನು ಪ್ರತ್ಯೇಕಿಸಲಾಗಿದ್ದು, ಅದನ್ನು ಡಬ್ಲೂಪಿವಿ1ನಿಂದ ಪಡೆಯಲಾದ ವೈಬಿ3ಎ ಕ್ಲಸ್ಟರ್ಗೆ ಸೇರಿಸಲಾಗಿದೆ.
ಸರ್ಕಾರ ಪೋಲಿಯೊ ಲಸಿಕೆಗೆ ಪ್ರೋತ್ಸಾಹ ನೀಡುವ ಮೂಲಕ ವೈರಸ್ ಕೊನೆಗಣಿಸುವ ಪ್ರಯತ್ನದತ್ತ ಗುರಿ ನೆಟ್ಟಿದೆ. ಲಸಿಕೆ ದರ ಹೆಚ್ಚಿಸುವ ಮೂಲಕ ಕೇಂದ್ರೀಕರಿಸುತ್ತಿದೆ. ಮಕ್ಕಳಿಗೆ ರೋಗನಿರೋಧಕ ಶಕ್ತಿಯನ್ನು ಬಲಗೊಳಿಸುವ ಕಾರ್ಯ ನಡೆಸಲಾಗುವುದು ಎಂದು ಸಚಿವಾಲಯ ತಿಳಿಸಿದೆ.
ಬಲೂಚಿಸ್ತಾನದಲ್ಲಿ 50ಕ್ಕೂ ಹೆಚ್ಚು ಪರಿಸರ ಮಾದರಿ ಪೋಲಿಯೊ ವೈರಸ್ ಪತ್ತೆಯಾಗಿದ್ದು, ಪರೀಕ್ಷೆಗಳಲ್ಲಿ ಪಾಸಿಟಿವ್ ಬಂದಿದೆ. ಕ್ವೆಟ್ಟಾ ಸ್ಥಳದಲ್ಲೇ 21 ವೈರಸ್ಗಳು ಪತ್ತೆಯಾಗಿದೆ. 2024ರಲ್ಲಿ ಬಲೂಚಿಸ್ತಾನದಲ್ಲಿ ಒಂದು ಮತ್ತು ಸಿಂಧ್ ಪ್ರದೇಶದಲ್ಲಿ ಒಂದು ವೈರಸ್ ದೃಢಪಟ್ಟಿತು.