ಕರ್ನಾಟಕ

karnataka

ETV Bharat / health

ದೇಶದಲ್ಲಿ 5ಕ್ಕೆ ಏರಿಕೆ ಕಂಡ ಎಚ್​ಎಂಪಿವಿ ಸೋಂಕಿತ ಪ್ರಕರಣಗಳ ಸಂಖ್ಯೆ: ಇದನ್ನು ತಡೆಗಟ್ಟೋದು ಹೇಗೆ? - 3 HMPV INFECTED CASES DETECTED

HMPV VIRUS SPREAD IN INDIA: HMPV ವೈರಸ್ ಭಾರತದಲ್ಲಿ ಹರಡುತ್ತಿದೆ. ದೇಶದಲ್ಲಿ ಎಚ್​ಎಂಪಿವಿ ಸೋಂಕಿತ ಪಕರಣಗಳ ಸಂಖ್ಯೆ 5ಕ್ಕೆ ಏರಿಕೆ ಕಂಡಿದೆ. 3 ಪ್ರಕರಣಗಳನ್ನು ಆರೋಗ್ಯ ಸಚಿವಾಲಯ ಈಗಾಗಲೇ ದೃಢಪಡಿಸಿದೆ.

HMPV VIRUS REACHED INDIA  HMPV VIRUS SPREAD IN INDIA  THREE INFECTED CONFIRMED IN INDIA  HMPV VIRUS CONFIRMED IN INDIA
ಸಾಂದರ್ಭಿಕ ಚಿತ್ರ (Getty Images)

By ETV Bharat Health Team

Published : Jan 6, 2025, 5:13 PM IST

Updated : Jan 6, 2025, 9:45 PM IST

HMPV VIRUS SPREAD IN INDIA:ಚೀನಾದಲ್ಲಿ ಹ್ಯೂಮನ್ ಮೆಟಾಪ್ನ್ಯೂಮೋವೈರಸ್ (HMPV) ವೇಗವಾಗಿ ಹರಡುತ್ತಿದೆ. ಈ HMPV ವೈರಸ್ ಈಗ ಹಲವು ದೇಶಗಳಲ್ಲಿ ಹರಡಲು ಪ್ರಾರಂಭಿಸಿದೆ. ಈ ವೈರಸ್ ಎಷ್ಟು ಅಪಾಯಕಾರಿ ಎಂಬುದರ ಕುರಿತು ಸಂಶೋಧನೆಗಳು ನಡೆಯುತ್ತಿವೆ. ಇದರಿಂದ ಭಾರತ ಸೇರಿದಂತೆ ಹಲವು ದೇಶಗಳು ಅಲರ್ಟ್‌ ಮೋಡ್‌ನಲ್ಲಿವೆ.

ದೇಶದಲ್ಲಿ HMPV ಪ್ರಕರಣಗಳ ಸಂಖ್ಯೆ ಐದಕ್ಕೆ ಏರಿಕೆ:ಭಾರತದಲ್ಲಿ ಐವರು HMPV ವೈರಸ್ ಸೋಂಕಿಗೆ ಒಳಗಾಗಿದ್ದಾರೆ. ಬೆಂಗಳೂರಿನಲ್ಲಿ ಎಂಟು ತಿಂಗಳ ಗಂಡು ಮತ್ತು ಮೂರು ತಿಂಗಳ ಹೆಣ್ಣು ಮಗುವಿಗೆ ಎಚ್‌ಎಂಪಿವಿ ಸೋಂಕು ತಗುಲಿರುವುದು ದೃಢಪಟ್ಟಿದೆ. ಈ ಇಬ್ಬರು ಮಕ್ಕಳು ಯಾವುದೇ ಅಂತಾರಾಷ್ಟ್ರೀಯ ಪ್ರಯಾಣ ಮಾಡಿರುವ ಬಗ್ಗೆ ವಿವರವಿಲ್ಲ ಎಂದು ಆರೋಗ್ಯ ಅಧಿಕಾರಿಗಳು ಖಚಿತಪಡಿಸಿದ್ದಾರೆ.

ಜೊತೆಗೆ ರಾಜಸ್ಥಾನದ ಡುಂಗರ್‌ಪುರ ನಿವಾಸಿಯಾಗಿರುವ ಅಹಮದಾಬಾದ್‌ನಲ್ಲಿ ಎರಡು ತಿಂಗಳ ಮಗುವಿನಲ್ಲಿ HMPV ವೈರಸ್ ಪತ್ತೆಯಾಗಿದೆ. ಸದ್ಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಗುವಿನ ಸ್ಥಿತಿ ಸ್ಥಿರ (ನಾರ್ಮಲ್​) ಆಗಿದೆ. ಎಚ್‌ಎಂಪಿವಿ ಜಾಗತಿಕವಾಗಿ ಹರಡುತ್ತಿರುವುದರಿಂದ ಆರೋಗ್ಯ ಅಧಿಕಾರಿಗಳು ಪರಿಸ್ಥಿತಿಯ ಮೇಲ್ವಿಚಾರಣೆ ಮಾಡುತ್ತಿದ್ದಾರೆ.

ಇನ್ನು ತಮಿಳುನಾಡಿನಲ್ಲಿ ಜ್ವರ, ನೆಗಡಿ ಮತ್ತು ಕೆಮ್ಮಿನಿಂದ ಆಸ್ಪತ್ರೆಗೆ ದಾಖಲಾದ ಇಬ್ಬರು ವ್ಯಕ್ತಿಗಳಿಂದ ತೆಗೆದ ಮಾದರಿಗಳಲ್ಲಿ ಎಚ್‌ಎಂಪಿವಿ ಸೋಂಕು ತಗುಲಿರುವುದು ಬೆಳಕಿಗೆ ಬಂದಿದೆ.

ಆರೋಗ್ಯ ಸಚಿವಾಲಯ ಹೇಳಿಕೆ:ಭಾರತದಲ್ಲಿ ಮೂರು ಶಿಶುಗಳಲ್ಲಿ HPMV ವೈರಸ್ ಪತ್ತೆಯಾದ ನಂತರ, ಆರೋಗ್ಯ ಸಚಿವಾಲಯವು ಹೇಳಿಕೆ ಬಿಡುಗಡೆ ಮಾಡಿದೆ. ರೋಗಿಗಳಿಗೆ ಅಂತಾರಾಷ್ಟ್ರೀಯ ಪ್ರಯಾಣ ಮಾಡಿರುವ ಕುರಿತು ಯಾವುದೇ ವಿವರವಿಲ್ಲ ಎಂದು ಸ್ಪಷ್ಟಪಡಿಸಿದೆ. ಈಗಾಗಲೇ ಭಾರತ ಸೇರಿದಂತೆ ಪ್ರಪಂಚದಾದ್ಯಂತ HMPV ವೈರಸ್​ ಹಾಗೂ HMPV-ಸಂಬಂಧಿತ ಉಸಿರಾಟದ ಕಾಯಿಲೆಗಳ ಪ್ರಕರಣಗಳು ವಿವಿಧ ದೇಶಗಳಲ್ಲಿ ವರದಿಯಾಗಿವೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಇದಲ್ಲದೇ, ICMR ಮತ್ತು ಇಂಟಿಗ್ರೇಟೆಡ್ ಡಿಸೀಸ್ ಸರ್ವೆಲೆನ್ಸ್ ಪ್ರೋಗ್ರಾಂ (IDSP) ನೆಟ್‌ವರ್ಕ್‌ನಿಂದ ಅಸ್ತಿತ್ವದಲ್ಲಿರುವ ಡೇಟಾದ ಪ್ರಕಾರ, ದೇಶದಲ್ಲಿ ಇನ್ಫ್ಲುಯೆನ್ಸ್​​ ತರಹದ ಅನಾರೋಗ್ಯ (ILI) ಅಥವಾ ತೀವ್ರ ಉಸಿರಾಟದ ಕಾಯಿಲೆ (SARI) ಪ್ರಕರಣಗಳಲ್ಲಿ ಯಾವುದೇ ಅಸಾಮಾನ್ಯ ಹೆಚ್ಚಳ ಕಂಡುಬಂದಿಲ್ಲ. ಪೀಡಿತ ರೋಗಿಗಳಲ್ಲಿ ಯಾರೂ ಅಂತಾರಾಷ್ಟ್ರೀಯ ಟ್ರಾವೆಲ್​ ಹಿಸ್ಟರಿ ಹೊಂದಿಲ್ಲ ಎಂಬುದನ್ನು ಗಮನಿಸಬೇಕಾಗುತ್ತದೆ.

ಪರಿಸ್ಥಿತಿಯ ನಿರಂತರ ಮೇಲ್ವಿಚಾರಣೆ:ದೊರೆತಿರುವ ಮಾಹಿತಿಯನ್ನು ಆಧರಿಸಿ, ಎಲ್ಲ ಪರಿಸ್ಥಿತಿಗಳನ್ನು ಗಮನದಲ್ಲಿರಿಸಿಕೊಂಡು ಮೇಲ್ವಿಚಾರಣೆ ಮಾಡಲಾಗುತ್ತಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ICMR ಕೂಡು HMPV ಹರಡುತ್ತಿರುವ ಕುರಿತಂತೆ ಮೇಲ್ವಿಚಾರಣೆ ಮಾಡುವುದನ್ನು ಮುಂದುವರಿಸುತ್ತದೆ.

HMPV ವೈರಸ್ ಎಂದರೇನು?:2001ರಲ್ಲಿ HMPV ವೈರಸ್​ ಮೊದಲು ನೆದರ್‌ಲ್ಯಾಂಡ್ಸ್‌ನಲ್ಲಿ ಪತ್ತೆಯಾಗಿದೆ. ಪ್ರಾಥಮಿಕವಾಗಿ ಉಸಿರಾಟದ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ಈ ವೈರಸ್ ಎಲ್ಲಾ ವಯಸ್ಸಿನ ಜನರಿಗೆ ಸೋಂಕು ತಗುಲಬಹುದಾಗಿದೆ. ಆದರೆ, ಚಿಕ್ಕ ಮಕ್ಕಳು ಮತ್ತು ವೃದ್ಧರ ಮೇಲೆ ಹೆಚ್ಚಿನ ಅಪಾಯವನ್ನುಂಟು ಮಾಡುತ್ತದೆ. ರೋಗಲಕ್ಷಣಗಳೆಂದ್ರೆ ಕೆಮ್ಮು, ಜ್ವರ, ಮೂಗಿನ ದಟ್ಟಣೆ ಹಾಗೂ ಉಸಿರಾಟದ ತೊಂದರೆ, ಬ್ರಾಂಕೈಟಿಸ್ ಅಥವಾ ನ್ಯುಮೋನಿಯಾದಂತಹ ತೊಂದರೆಗಳು ಉಂಟಾಗುತ್ತದೆ. ಸಾಮಾನ್ಯವಾಗಿ 3ರಿಂದ 6ದಿನಗಳ ಒಳಗಾಗಿ ರೋಗಲಕ್ಷಣಗಳು ಕಾಣಿಸಿಕೊಳ್ಳುತ್ತವೆ.

HMPV ವೈರಸ್ ತಡೆಯೋದು ಹೇಗೆ ?:

  • ಕೆಮ್ಮುವಾಗ ಅಥವಾ ಸೀನುವಾಗ ನಿಮ್ಮ ಬಾಯಿ, ಮೂಗನ್ನು ಕರವಸ್ತ್ರ ಅಥವಾ ಟಿಶ್ಯೂ ಪೇಪರ್‌ನಿಂದ ಮುಚ್ಚಿಕೊಳ್ಳಿ.
  • ನಿಮ್ಮ ಕೈಗಳನ್ನು ಸಾಬೂನು ಹಾಗೂ ನೀರು, ಆಲ್ಕೋಹಾಲ್ ಆಧಾರಿತ ಸ್ಯಾನಿಟೈಜರ್‌ನಿಂದ ಆಗಾಗ್ಗೆ ತೊಳೆಯಿರಿ.
  • ಜ್ವರ, ಕೆಮ್ಮು ಮತ್ತು ಸೀನುವಂತಹ ಸಂದರ್ಭದಲ್ಲಿ ಸಾರ್ವಜನಿಕ ಸ್ಥಳಗಳಿಂದ ದೂರವಿರಿ.
  • ಸಾಕಷ್ಟು ನೀರು ಕುಡಿಯಿರಿ ಹಾಗೂ ಪೌಷ್ಟಿಕ ಆಹಾರವನ್ನು ಸೇವಿಸಿ.
  • ಜನದಟ್ಟಣೆ ಇರುವ ಪ್ರದೇಶಗಳಿಗೆ ಹೋಗದೇ ಇರುವುದು ಒಳ್ಳೆಯದು.

ಮುಖ್ಯವಾಗಿ ಏನನ್ನು ಮಾಡಬಾರದು?:

  • ಕೈಕುಲುಕ ಬೇಡಿ
  • ಟಿಶ್ಯೂ ಪೇಪರ್ ಮತ್ತು ನ್ಯಾಪ್ಕಿನ್​ಗಳನ್ನು ಮರುಬಳಕೆ ಮಾಡಬೇಡಿ
  • ಅನಾರೋಗ್ಯದ ಜನರೊಂದಿಗೆ ನಿಕಟ ಸಂಪರ್ಕ ಹೋಗಬೇಡಿ
  • ಪದೇ ಪದೇ ಕಣ್ಣು, ಮೂಗು ಮತ್ತು ಬಾಯಿ ಮುಟ್ಟಿಕೊಳ್ಳಬೇಡಿ.

ಇದನ್ನೂ ಓದಿ:ಎಚ್​ಎಂಪಿವಿ ಆತಂಕ: ಕಡ್ಡಾಯ ಐಸೋಲೇಷನ್​ ಸೇರಿ ಮಾರ್ಗಸೂಚಿ ಪ್ರಕಟಿಸಿದ ದೆಹಲಿ ಸರ್ಕಾರ

ಎಚ್​ಎಂಪಿವಿ ಸೋಂಕು: ರಾಜ್ಯ ಆರೋಗ್ಯ ಇಲಾಖೆಯಿಂದ ಮಾರ್ಗಸೂಚಿ ಪ್ರಕಟ

Last Updated : Jan 6, 2025, 9:45 PM IST

ABOUT THE AUTHOR

...view details