ಕರ್ನಾಟಕ

karnataka

ETV Bharat / entertainment

ಪಿಆರ್​​ಕೆ ಬ್ಯಾನರ್​​ನಲ್ಲಿ ಯುವ ರಾಜ್​ಕುಮಾರ್ ಎರಡನೇ ಸಿನಿಮಾ - Yuva Rajkumar Movie - YUVA RAJKUMAR MOVIE

ಪಿಆರ್​​ಕೆ ಬ್ಯಾನರ್​​ನಲ್ಲಿ ಯುವ ರಾಜ್​ಕುಮಾರ್ ಎರಡನೇ ಸಿನಿಮಾಗೆ ಮುಹೂರ್ತ ಫಿಕ್ಸ್ ಆಗಿದೆ. ಕನ್ನಡ ಚಿತ್ರರಂಗದಲ್ಲಿ ನಿರ್ಮಾಣದ ಜೊತೆಗೆ ವಿತರಣೆ ಮಾಡುತ್ತಿರುವ ಕೆಆರ್​​ಜಿ ಸ್ಟುಡಿಯೋ, ಅಶ್ವಿನಿ ಪುನೀತ್ ರಾಜ್‍ಕುಮಾರ್ ಜೊತೆ ಕೈಜೋಡಿಸಲಿದೆ.

prk banner
ಪುನೀತ್ ರಾಜ್​​ಕುಮಾರ್​, ಅಶ್ವಿನಿ ಪುನೀತ್ ರಾಜ್‍ಕುಮಾರ್, ಯುವ ರಾಜ್​ಕುಮಾರ್ (ETV Bharat)

By ETV Bharat Karnataka Team

Published : Oct 5, 2024, 6:59 AM IST

ಪವರ್ ಸ್ಟಾರ್ ಪುನೀತ್ ರಾಜ್​​ಕುಮಾರ್​ ಹುಟ್ಟು ಹಾಕಿದ ಸಿನಿಮಾ ನಿರ್ಮಾಣ ಸಂಸ್ಥೆ ಪಿಆರ್​​​ಕೆ ಪ್ರೊಡಕ್ಷನ್, ಕನ್ನಡ ಚಿತ್ರರಂಗದಲ್ಲಿ ಮೊದಲಿನಿಂದಲೂ ಸದಭಿರುಚಿಯ ಸಿನಿಮಾಗಳ ಜೊತೆಗೆ ಟ್ಯಾಲೆಂಟ್‌ ಇರುವ ನಟ ಹಾಗೂ ನಿರ್ದೇಶಕರಿಗೆ ಅವಕಾಶ ಕೊಡುತ್ತಿದೆ. ಅಪ್ಪು ಅಗಲಿಕೆಯ ಬಳಿಕ ಅವರ ಪತ್ನಿ ಅಶ್ವಿನಿ ಪುನೀತ್ ರಾಜ್‍ಕುಮಾರ್ ಈ ಸಂಸ್ಥೆ ಮುನ್ನಡೆಸುತ್ತಿದ್ದಾರೆ‌. ಇದೀಗ ಪವರ್ ಸ್ಟಾರ್​​​ ಪವರ್ ಹೌಸ್​​ನಿಂದ ಅಭಿಮಾನಿಗಳಿಗೆ ಗುಡ್ ನ್ಯೂಸ್​​ವೊಂದು ಸಿಕ್ಕಿದೆ.

ಅದುವೇ ಯುವ ರಾಜ್​ಕುಮಾರ್ ಎರಡನೇ ಸಿನಿಮಾ ಬಗ್ಗೆ ಹೊಸ ಅಪ್ಡೇಟ್‌. ಈಗಾಗಲೇ 'ಯುವ' ಸಿನಿಮಾದಿಂದ ಕನ್ನಡ ಬೆಳ್ಳಿತೆರೆ ಮೇಲೆ ಅಬ್ಬರಿಸಿರುವ ಯುವ ರಾಜ್​ಕುಮಾರ್ ಮೊದಲ ಚಿತ್ರದಲ್ಲೇ ಬೊಂಬಾಟ್ ಆಕ್ಷನ್, ಪಂಚಿಂಗ್ ಡೈಲಾಗ್​​ಗಳಿಂದ ಅಭಿಮಾನಿಗಳ ಮನ ಗೆದ್ದಿದ್ದರು. ಇದೀಗ ಯುವ ರಾಜ್ ಕುಮಾರ್ ಎರಡನೇ ಸಿನಿಮಾವನ್ನು ಪಿಆರ್​​ಕೆ ಪ್ರೊಡಕ್ಷನ್​ನಡಿ ಮಾಡಲು ಸಿದ್ಧತೆ ನಡೆಯತ್ತಿದೆ.

ಯುವ ರಾಜ್​ಕುಮಾರ್ (ETV Bharat)

ಈ ವಿಚಾರವಾಗಿ ಯುವರಾಜ್ ಕುಮಾರ್ ಕುಟುಂಬದ ಆಪ್ತರೊಬ್ಬರು ಹೇಳುವಂತೆ, 'ಯುವ ರಾಜ್​ಕುಮಾರ್ ಎರಡನೇ ಚಿತ್ರವನ್ನು ಪಿಆರ್​ಕೆ ಬ್ಯಾನರ್​​ನಲ್ಲಿ ಅಶ್ವಿನಿ ಪುನೀತ್ ರಾಜ್‍ಕುಮಾರ್ ಅವರೇ ಮಾಡಲು ನಿರ್ಧರಿಸಿದ್ದಾರೆ. ಈಗಾಗಲೇ ಕಂಟೆಂಟ್ ಇರುವ ಕಥೆಯನ್ನು ಮಾಡಲಾಗುತ್ತಿದೆ. ಸಿನಿಮಾವನ್ನು ದೊಡ್ಡಮಟ್ಟದಲ್ಲಿ ಸದ್ಯ ಕನ್ನಡ ಚಿತ್ರರಂಗದಲ್ಲಿ ನಿರ್ಮಾಣದ ಜೊತೆಗೆ ವಿತರಣೆ ಮಾಡುತ್ತಿರುವ ಕೆಆರ್​​ಜಿ ಸ್ಟುಡಿಯೋ ಕೂಡ ಅಶ್ವಿನಿ ಪುನೀತ್ ರಾಜ್‍ಕುಮಾರ್ ಜೊತೆ ಕೈಜೋಡಿಸಿದ್ದಾರೆ' ಅಂತಾ ತಿಳಿಸಿದ್ದಾರೆ.

ಇದನ್ನೂ ಓದಿ:ಕುಕ್ಕೆ ಸುಬ್ರಹ್ಮಣ್ಯದಲ್ಲಿ ಹುಲಿಕುಣಿತ ವೀಕ್ಷಿಸಿ ಖುಷಿಪಟ್ಟ ರಕ್ಷಿತಾ ಪ್ರೇಮ್ ದಂಪತಿ - Rakshita Prem Couple

ಪಿಆರ್‌ಕೆ ಪ್ರೊಡಕ್ಷನ್‌ ಬ್ಯಾನರ್‌ನಲ್ಲಿ ನಿರ್ಮಾಣ ಆಗುತ್ತಿರುವ ಸಿನಿಮಾದ ನಿರ್ದೇಶಕರು ಯಾರು? ಈ ಚಿತ್ರದ ಟೈಟಲ್ ಏನು? ಈ ಸಿನಿಮಾದಲ್ಲಿ ಯಾರೆಲ್ಲ ನಟರು ಹಾಗೂ ತಂತ್ರಜ್ಞರು ಇರಲಿದ್ದಾರೆ ಎಂಬ ಮಾಹಿತಿಯನ್ನು ಸದ್ಯದಲ್ಲೇ ಸ್ವತಃ ಅಶ್ವಿನಿ ಪುನೀತ್ ರಾಜ್‍ಕುಮಾರ್ ಘೋಷಣೆ ಮಾಡಲಿದ್ದಾರೆ ಅಂತಾ ಯುವ ಕುಟುಂಬದ ಆಪ್ತರೊಬ್ಬರು 'ಈಟಿವಿ ಭಾರತ'ಕ್ಕೆ ತಿಳಿಸಿದ್ದಾರೆ.

ಯುವ ರಾಜ್​ಕುಮಾರ್ (ETV Bharat)

ಒಟ್ಟಾರೆ, ಯುವ ರಾಜ್​ಕುಮಾರ್ ಎರಡನೇ ಚಿತ್ರ ಪಿಆರ್​​ಕೆ ಪ್ರೊಡಕ್ಷನ್​ನಲ್ಲಿ ನಿರ್ಮಾಣ ಆಗುತ್ತಿರುವುದರಿಂದ ಕುತೂಹಲ ಹೆಚ್ಚಿದೆ. ದೊಡ್ಮನೆ ಹುಡುಗನ ಎರಡನೇ ಚಿತ್ರ ಹೇಗಿರುತ್ತೆ, ಯಾರು ನಿರ್ದೇಶಕರು? ಎಂಬುದು ಅಭಿಮಾನಿಗಳಲ್ಲಿ ನಿರೀಕ್ಷೆ ಹುಟ್ಟುಹಾಕಿದೆ.

ಇದನ್ನೂ ಓದಿ:'ಕಲ್ಟ್' ಸೆಟ್​​​ನಲ್ಲಿ ರಚಿತಾರಾಮ್ ಬರ್ತ್​​ಡೇ​: ನಟಿಗೆ ಜಮೀರ್​ ಪುತ್ರ ಝೈದ್ ಸಾಥ್ - Rachitha Ram Birthday

ABOUT THE AUTHOR

...view details