ರಾಕಿಂಗ್ ಸ್ಟಾರ್ ಯಶ್ ಅವರ 39ನೇ ಹುಟ್ಟುಹಬ್ಬದ ಸಲುವಾಗಿ ಬುಧವಾರದಂದು ಬಹುನಿರೀಕ್ಷಿತ 'ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್' ಗ್ಲಿಂಪ್ಸ್ ಅನಾವರಣಗೊಂಡಿತ್ತು. ದಿ ಮೋಸ್ಟ್ ಎಕ್ಟ್ಪೆಕ್ಟೆಡ್ ಪ್ರಾಜೆಕ್ಟ್ನ ಮೊದಲ ನೋಟಕ್ಕಾಗಿ ಅಭಿಮಾನಿಗಳು ಬಹಳ ಕಾತರರಾಗಿದ್ದರು. ಅದರಂತೆ ಕಳೆದ ದಿನ ಅನಾವರಣಗೊಂಡಿರೋ 'ಟಾಕ್ಸಿಕ್: ಬರ್ತ್‌ಡೇ ಪೀಕ್' ಅಭಿಮಾನಿಗಳ ಉತ್ಸಾಹ ಹೆಚ್ಚಿಸಿತ್ತು.
ಇದೀಗ ಟಾಕ್ಸಿಕ್ ಗ್ಲಿಂಪ್ಸ್ ಯೂಟ್ಯೂಬ್ನಲ್ಲಿ ನಂಬರ್ ಒನ್ ಟ್ರೆಂಡಿಂಗ್ನಲ್ಲಿದೆ. ಈ ವಿಷಯವನ್ನು ಸಿನಿಮಾದ ಹಿಂದಿರುವ ಕೆವಿಎನ್ ಪ್ರೊಡಕ್ಷನ್ಸ್ ತನ್ನ ಅಧಿಕೃತ ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದೆ. ಇದು ಅಭಿಮಾನಿ ಬಳಗಕ್ಕೆ ಖುಷಿ ತರಿಸಿದೆ.
'ಟಾಕ್ಸಿಕ್: ಬರ್ತ್‌ಡೇ ಪೀಕ್' ಶೀರ್ಷಿಕೆಯ 59 ಸೆಕೆಂಡುಗಳ ಆಕರ್ಷಕ ಗ್ಲಿಂಪ್ಸ್ ಸ್ವಾಗ್ ಆ್ಯಂಡ್ ಗ್ಲ್ಯಾಮರ್‌ನಿಂದ ತುಂಬಿದೆ. ಕೆಜಿಎಫ್ ಸಿನಿಮಾಗಳಲ್ಲಿ ಆ್ಯಕ್ಷನ್ ಜೊತೆ ಸ್ಟೈಲಿಶ್ ಅವತಾರದಲ್ಲಿ ಕಾಣಿಸಿಕೊಂಡಿದ್ದ ಯಶ್ ಈ ಚಿತ್ರದಲ್ಲೂ ಸ್ಟೈಲಿಶ್ ಗ್ಯಾಂಗ್ಸ್ಟರ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ನಟನ ಒಂದು ನೋಟ 'ಟಾಕ್ಸಿಕ್: ಬರ್ತ್‌ಡೇ ಪೀಕ್'ನಲ್ಲಿ ಲಭ್ಯವಾಗಿದ್ದು ಸಂಪೂರ್ಣ ಸಿನಿಮಾ ನೋಡೋ ಪ್ರೇಕ್ಷಕರ ಕಾತರ ಹೆಚ್ಚಾಗಿದೆ.
ಇದನ್ನೂ ಓದಿ:ಕ್ರಿಕೆಟರ್ ಚಹಾಲ್ ಡಿವೋರ್ಸ್ ವದಂತಿ: ಕೊನೆಗೂ ಮೌನ ಮುರಿದ ಪತ್ನಿ ಧನಶ್ರೀ ವರ್ಮಾ
ವಿಂಟೇಜ್ ಕಾರಿನಲ್ಲಿ ಬರುವ ದೃಶ್ಯದಿಂದ 'ಟಾಕ್ಸಿಕ್: ಬರ್ತ್‌ಡೇ ಪೀಕ್' ಗ್ಲಿಂಪ್ಸ್ ಆರಂಭಗೊಂಡಿದೆ. ರಾಯಲ್ ಕ್ಲಬ್‌ನ ಹೊರಭಾಗದ ಶಾಟ್‌ನೊಂದಿಗೆ ಕುತೂಹಲ ಹೆಚ್ಚಿಸೋ ಟೀಸರ್ ನಟನ ಸ್ಟೈಲಿಷ್ ಗ್ಯಾಂಗ್ಸ್ಟರ್ ಲುಕ್ ಅನ್ನು ಪ್ರೇಕ್ಷಕರಿಗೆ ಒದಗಿಸಿದೆ. ನಟನ ಬಿಯರ್ಡ್ ಲುಕ್ ಸಖತ್ ಅಟ್ರ್ಯಾಕ್ಟೀವ್ ಆಗಿದೆ. ವಿಡಿಯೋದಲ್ಲಿ ಒಂದೇ ಒಂದು ಡೈಲಾಗ್ ಇಲ್ಲ. ನಟನ ಎಂಟ್ರಿ ಮತ್ತು ಬ್ಯಾಕ್ಗ್ರೌಂಡ್ ಮ್ಯೂಸಿಕ್ ದೃಶ್ಯದ ತ್ರೀವ್ರತೆ ಹೆಚ್ಚಿಸಿದೆ.
ಇದನ್ನೂ ಓದಿ:ಬಜೆಟ್‌ಗಿಂತ 6 ಪಟ್ಟು ಲಾಭ, ಚಿತ್ರಮಂದಿರಗಳಲ್ಲಿ 200 ದಿನ ಓಡಿದ ಯಶ್ ಸಿನಿಮಾ; 2014ರ ಹಿಟ್ ಚಿತ್ರವಿದು
ಈ ಹಿಂದೆ ನಟ ಯಶ್ ''ನಾನು ಸಿನಿಮಾ ಕಥೆಯನ್ನು ನಂಬುತ್ತೇನೆ, ನಿರ್ದೇಶಕರು ಗಂಡೋ ಅಥವಾ ಹೆಣ್ಣೋ ಎಂಬುದಕ್ಕೆ ನಾನು ಮಹತ್ವ ಕೊಡುವುದಿಲ್ಲ'' ಎಂದು ಹೇಳಿದ್ದರು. ಪ್ರತಿಭೆ ಮತ್ತು ಕಥಾಹಂದರಕ್ಕೆ ಮಹತ್ವ ಕೊಡುವ ನಟನ ಈ ಚಿತ್ರವನ್ನು ಮಲಯಾಳಂನ ಸ್ಟಾರ್ ಲೇಡಿ ಡೈರೆಕ್ಟರ್ ಗೀತು ಮೋಹನ್ದಾಸ್ ನಿರ್ದೇಶಿಸುತ್ತಿದ್ದಾರೆ. ಕೆವಿಎನ್ ಪ್ರೊಡಕ್ಷನ್ಸ್ ಮತ್ತು ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್ ಬ್ಯಾನರ್‌ಗಳಡಿಯಲ್ಲಿ ವೆಂಕಟ್ ಕೆ.ನಾರಾಯಣ್ ಮತ್ತು ಯಶ್ ಜಂಟಿಯಾಗಿ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ನಯನತಾರಾ, ಕಿಯಾರಾ ಅಡ್ವಾಣಿ ಮತ್ತು ಹುಮಾ ಖುರೇಷಿ ಸೇರಿದಂತೆ ಯಶ್ ಜೊತೆ ಹಲವು ನಟಿಯರ ಹೆಸರು ಕೇಳಿಬಂದಿದ್ದು, ಅಧಿಕೃತ ಘೋಷಣೆ ಬಾಕಿ ಇದೆ. ಕಿಯಾರಾ ಅಡ್ವಾಣಿ ಕಾಣಿಸಿಕೊಳ್ಳೋದು ಬಹುತೇಕ ಪಕ್ಕಾ ಆಗಿದೆ. ಕೆಲ ದಿನಗಳ ಹಿಂದೆ ಮುಂಬೈ ಶೂಟಿಂಗ್ ಸ್ಫಾಟ್ನಲ್ಲಿ ಯ್ ಮತ್ತು ಕಿಯಾರಾ ಕಾಣಿಸಿಕೊಂಡಿದ್ದರು.