ಮುಂಬೈ(ಮಹಾರಾಷ್ಟ್ರ): ಕಳೆದ ವಾರ ನಡೆದ ಅಂಬಾನಿ ಕುಟುಂಬದ ಅದ್ಧೂರಿ ಮದುವೆ ಇಡೀ ವಿಶ್ವದ ಗಮನ ಸೆಳೆಯಿತು. ಶುಕ್ರವಾರ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಸಪ್ತಪದಿ ತುಳಿದರು. ಸುಮಾರು ಎರಡು ವಾರಗಳ ಕಾಲ ವಿವಾಹ ಮಹೋತ್ಸವ ಜರುಗಿತ್ತು. ಸಾವಿರಾರು ಕೋಟಿ ರೂ. ಖರ್ಚು ಮಾಡಿರುವ ಈ ವೈಭವೋಪೇತ ವಿವಾಹ ಸಮಾರಂಭಕ್ಕೆ ಬಾಲಿವುಡ್‌ನಿಂದ ಹಿಡಿದು ದಕ್ಷಿಣ ಚಿತ್ರರಂಗದ ಖ್ಯಾತನಾಮರೆಲ್ಲ ಸಾಕ್ಷಿಯಾಗಿದ್ದರು. ಸ್ಯಾಂಡಲ್ವುಡ್ನ ರಾಕಿಂಗ್ ಸ್ಟಾರ್ ಯಶ್ ಕೂಡ ತಮ್ಮ ಪತ್ನಿಯೊಂದಿಗೆ ಹೈ-ಪ್ರೊಫೈಲ್ ಪ್ರೋಗ್ರಾಮ್ನಲ್ಲಿ ಭಾಗವಹಿಸಿದ್ದರು.
ಕಳೆದ ವಾರ ಸೋಷಿಯಲ್ ಮೀಡಿಯಾದಲ್ಲಿ ಅಂಬಾನಿ ಮದುವೆಯದ್ದೇ ಸದ್ದುಗದ್ದಲವಾಗಿತ್ತು. ಕ್ಷಣ ಕ್ಷಣದ ಮಾಹಿತಿ, ಫೋಟೋ-ವಿಡಿಯೋಗಳನ್ನು ಪಾಪರಾಜಿಗಳು ತಮ್ಮ ಅಧಿಕೃತ ಸೋಷಿಯಲ್ ಮೀಡಿಯಾ ಪ್ಲಾಟ್ಫಾರ್ಮ್ಗಳಲ್ಲಿ ಶೇರ್ ಮಾಡುತ್ತಾ ನೆಟ್ಟಿಗರ ಕಾತರ ತಣಿಸಿದ್ದರು. ಅಮಿತಾಭ್ ಬಚ್ಚನ್ ಅವರಿಂದ ಹಿಡಿದು ಶಾರುಖ್ ಖಾನ್, ಸಲ್ಮಾನ್ ಖಾನ್ವರೆಗೆ ಅನೇಕ ಬಾಲಿವುಡ್ ತಾರೆಯರ ಫೋಟೋ, ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು.
ಆದರೆ, ಕೆಜಿಎಫ್ ಸ್ಟಾರ್ನ ಫೋಟೋ, ವಿಡಿಯೋ ನೋಡಲು ಅಪಾರ ಸಂಖ್ಯೆಯ ಅಭಿಮಾನಿಗಳು ಕಾತರರಾಗಿದ್ದು, ತಡವಾಗಿ ಒಂದು ವಿಡಿಯೋವಷ್ಟೇ ವೈರಲ್ ಆಗಿತ್ತು. ಏರ್ಪೋರ್ಟ್ನಿಂದ ಯಶ್ ರಾಧಿಕಾ ಅವರ ವಿಡಿಯೋ ವೈರಲ್ ಆದ ಬೆನ್ನಲ್ಲೇ ಮದುವೆ ಸಮಾರಂಭದ ವಿಡಿಯೋಗಳಿಗಾಗಿ, ಪಾಪರಾಜಿಗಳು ಶೇರ್ ಮಾಡುವ ದೃಶ್ಯಗಳಿಗಾಗಿ ದಕ್ಷಿಣದ ಮಂದಿ ಕಾತರರಾಗಿದ್ದರು. ಆದರೆ ಫೋಟೋ- ವಿಡಿಯೋ ಮಾತ್ರ ಸಿಕ್ಕಿರಲಿಲ್ಲ. ನಂತರ ಗಣ್ಯರೊಂದಿಗೆ ಕುಳಿತಿರುವ ಒಂದು ವಿಡಿಯೋ ವೈರಲ್ ಆಗಿತ್ತು. ಇದೀಗ ಯಶ್ ರಾಧಿಕಾ ಅವರ ಸಂಪೂರ್ಣ ನೋಟ ರಿವೀಲ್ ಆಗಿದೆ.