ಕರ್ನಾಟಕ

karnataka

ETV Bharat / entertainment

ವಿನಯ್​​ ರಾಜ್​ಕುಮಾರ್​ 'ಪೆಪೆ': ಜೇನು ಕುರುಬರ ಕುರಿತ ಹಾಡಿಗೆ ಫ್ಯಾನ್ಸ್ ಫಿದಾ - Vinay Rajkumar Pepe - VINAY RAJKUMAR PEPE

'ಒಂದು ಸರಳ ಪ್ರೇಮ ಕಥೆ' ಸಿನಿಮಾದಲ್ಲಿ ತಮ್ಮ ಉತ್ತಮ ನಟನೆಯಿಂದ ಕನ್ನಡಿಗರ ಮನಗೆದ್ದಿರುವ ವಿನಯ್ ರಾಜ್ ಕುಮಾರ್ ಅವರೀಗ 'ಪೆಪೆ' ಸಿನಿಮಾ ಮೂಲಕ ಮಾಸ್ ಅವತಾರ ತಾಳಿದಿದ್ದಾರೆ. ಇತ್ತೀಚೆಗೆ ರಿಲೀಸ್ ಆಗಿರುವ ಹಾಡು ಕೇಳುಗರಿಗೆ ಮುದ ನೀಡುತ್ತಿದೆ.

Vinay Rajkumar
ನಟ ವಿನಯ್ ರಾಜ್​​ಕುಮಾರ್ (ETV Bharat)

By ETV Bharat Entertainment Team

Published : Aug 8, 2024, 6:14 PM IST

ಪ್ರತೀ ಸಿನಿಮಾದಲ್ಲೂ ತಾನೊಬ್ಬ ಕ್ಲಾಸ್ ಆ್ಯಕ್ಟರ್ ಅನ್ನೋದನ್ನು ಸಾಬೀತುಪಡಿಸಿಕೊಂಡು ಬಂದಿರುವ ದೊಡ್ಮನೆ ಕುಟುಂಬದ ಕುಡಿ ವಿನಯ್ ರಾಜ್​​ಕುಮಾರ್ ಅವರ ಮುಂದಿನ ಚಿತ್ರಗಳ ಮೇಲೆ ಅಭಿಮಾನಿಗಳು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. 'ಒಂದು ಸರಳ ಪ್ರೇಮ ಕಥೆ'ಯಲ್ಲಿ ತಮ್ಮ ಉತ್ತಮ ನಟನೆಯಿಂದ ಕನ್ನಡಿಗರ ಮನಗೆದ್ದಿರುವ ವಿನಯ್ ರಾಜ್ ಕುಮಾರ್ ಅವರೀಗ 'ಪೆಪೆ' ಸಿನಿಮಾ ಮೂಲಕ ಮಾಸ್ ಅವತಾರ ತಾಳಿದಿದ್ದಾರೆ. 'ಪೆಪೆ' ಟೀಸರ್ ಈಗಾಗಲೇ ಹಿಟ್ ಲಿಸ್ಟ್ ಸೇರಿದ್ದು, ಇದೀಗ ಬಿಡುಗಡೆ ಆಗಿರುವ ಹಾಡು ಸದ್ದು ಮಾಡುತ್ತಿದೆ.

'ಪೆಪೆ' ಚಿತ್ರತಂಡ ಪ್ರಿಸೆಟ್ ಎಂಬ ಶೀರ್ಷಿಕೆ ಅಡಿ ಚಿತ್ರದ ಹಾಡೊಂದನ್ನು ಅನಾವರಣಗೊಳಿಸಿದೆ. ಪಿಆರ್​ಕೆ ಆಡಿಯೋದಲ್ಲಿ ರಿಲೀಸ್ ಆಗಿರುವ ಗಾನಬಜಾನ ವಿಭಿನ್ನತೆಯಿಂದ ಕೂಡಿದೆ. ಜೇನು ಕುರುಬ ಬುಡಕಟ್ಟು ಜನಾಂಗದ ಆಚಾರ ವಿಚಾರ ತೆರೆದಿಡುವ ಗೀತೆಗೆ ಗಿರಿಜನ ಸಮಗ್ರ ಅಭಿವೃದ್ಧಿ ಕಲಾ ಸಂಸ್ಥೆ ಸಾಥ್​ ನೀಡಿದೆ. ಈ ಹಾಡಿಗೆ ಜೆ.ಜಿ.ಕುಮಾರ ಧ್ವನಿಯಾಗಿದ್ದು, ಪೂರ್ಣಚಂದ್ರ ತೇಜಸ್ವಿ ಟ್ಯೂನ್ ಹಾಕಿದ್ದಾರೆ. ಚಿತ್ರತಂಡ ಖುದ್ದು ಹೇಳಿಕೊಂಡಂತೆ ಇಡೀ ಚಿತ್ರದ ಸೌಂಡ್ ಡಿಸೈನ್ ಬೇರೆ ರೀತಿ ಇದೆ ಅನ್ನೋದಕ್ಕೆ ಇದೀಗ ಬಿಡುಗಡೆ ಆಗಿರುವ ಈ ಹಾಡು ಸೂಕ್ತ ಉದಾಹರಣೆ.

ಶ್ರೀಲೇಶ್ ಎಸ್.ನಾಯರ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಪೆಪೆ ಒಂದು ವಿಭಿನ್ನ ಸಿನಿಮಾ. ಈ ಚಿತ್ರದಲ್ಲಿ ನಾಯಕಿಯಾಗಿ ಕಾಜಲ್‌ ಕುಂದರ್‌ ನಟಿಸಿದ್ದು, ಮಯೂರ್‌ ಪಟೇಲ್‌, ಯಶ್‌ ಶೆಟ್ಟಿ, ಬಲ ರಾಜ್‌ವಾಡಿ, ಮೇದಿನಿ ಕೆಳಮನೆ, ಅರುಣಾ ಬಾಲರಾಜ್‌, ನವೀನ್‌ ಡಿ. ಪಡೀಲ್‌ ಅವರನ್ನು ಒಳಗೊಂಡ ತಾರಾಬಳಗವಿದೆ. ಚಿತ್ರಕ್ಕೆ ಅಭಿಷೇಕ್‌ ಜಿ.ಕಾಸರಗೋಡು ಕ್ಯಾಮರಾ ವರ್ಕ್ ಮತ್ತು ಪೂರ್ಣಚಂದ್ರ ತೇಜಸ್ವಿ ಸಂಗೀತ ನಿರ್ದೇಶನವಿದೆ.

ಇದನ್ನೂ ಓದಿ:ಕನ್ನಡಿಗರ ಮನಗೆಲ್ಲಲು ಪಣ ತೊಟ್ಟ ಪ್ರಭು ಮುಂಡ್ಕುರ್: ಮುಂದಿನ ತಿಂಗಳು ನಿಮ್ಮೆದುರು 'ಮರ್ಫಿ' - Murphy

ಡಾ.ರವಿವರ್ಮಾ, ಚೇತನ್‌ ಡಿಸೋಜಾ, ಡಿಫ್ರೆಂಟ್‌ ಡ್ಯಾನಿ, ನರಸಿಂಹ ಅವರ ತಂಡ ಚಿತ್ರದ ಸಾಹಸ ದೃಶ್ಯಗಳನ್ನು ನಿರ್ದೇಶಿಸಿದೆ. ಬೆಂಗಳೂರು, ಮೈಸೂರು, ಕೊಡಗು, ಸಕಲೇಶಪುರದಲ್ಲಿ ಚಿತ್ರೀಕರಣ ನಡೆಸಲಾಗಿದೆ. ಉದಯ್‌ ಸಿನಿ ವೆಂಚರ್‌, ದೀಪ ಫಿಲ್ಮ್ಸ್ ಬ್ಯಾನರ್‌ ಅಡಿ ಉದಯ್ ಶಂಕರ್ ಎಸ್ ಹಾಗೂ ಕೋಲಾರದ ಬಿ.ಎಂ.ಶ್ರೀರಾಮ್ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ.

ಇದನ್ನೂ ಓದಿ:ಇದು ಎ, ಬಿ ಅಲ್ಲ, 'ಸಿ'ನಿಮಾ!: ಹೊಸಬರ ತಂಡಕ್ಕೆ ಲೂಸ್ ಮಾದ ಯೋಗಿ ಬೆಂಬಲ - Actor Yogesh

ಟೈಟಲ್, ಟೀಸರ್​​ನಿಂದ ಸದ್ದು ಮಾಡಿರುವ ಸಿನಿಮಾ ಸೆನ್ಸಾರ್ ಪರೀಕ್ಷೆಯಲ್ಲಿ ಎ ಸರ್ಟಿಫಿಕೇಟ್ ಪಡೆದಿದ್ದು, ಪ್ರೇಕ್ಷಕರ ಮುಂದೆ ಬರಲು ಸಜ್ಜಾಗುತ್ತಿದೆ.

ABOUT THE AUTHOR

...view details