ರಾಷ್ಟ್ರಪ್ರಶಸ್ತಿ ವಿಜೇತ ನಟ ವಿಕ್ಕಿ ಕೌಶಲ್ ಮುಖ್ಯಭೂಮಿಕೆಯ ಐತಿಹಾಸಿಕ ನಾಟಕ 'ಛಾವಾ' ತನ್ನ ಬಾಕ್ಸ್ ಆಫೀಸ್ ಓಟವನ್ನು ಮುಂದುವರೆಸಿದೆ. ತೆರೆಕಂಡು 2 ವಾರ ಸಮೀಪಿಸಿದರೂ ಅಂಕಿ - ಅಂಶ ಕುಗ್ಗುವ ಯಾವುದೇ ಲಕ್ಷಣಗಳಿಲ್ಲ. ಮರಾಠಾ ರಾಜ ಛತ್ರಪತಿ ಸಂಭಾಜಿ ಮಹಾರಾಜರ ಜೀವನ ಮತ್ತು ಮೊಘಲ್ ಚಕ್ರವರ್ತಿ ಔರಂಗಜೇಬನ ವಿರುದ್ಧದ ಅವರ ಹೋರಾಟವನ್ನಾಧರಿಸಿದ ಈ ಚಿತ್ರ ಭಾರತ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗೆಲುವು ಕಾಣುವಲ್ಲಿ ಯಶಸ್ವಿಯಾಗಿದೆ. ಕೇವಲ 12 ದಿನಗಳಲ್ಲಿ, ಈ ಚಿತ್ರವು ಭಾರತೀಯ ಬಾಕ್ಸ್ ಆಫೀಸ್‌ನಲ್ಲಿ 350 ಕೋಟಿ ರೂ.ಗಳನ್ನು ದಾಟಿದೆ. ಜಾಗತಿಕವಾಗಿ 500 ಕೋಟಿ ರೂ.ಗಳನ್ನು ದಾಟುವ ಕ್ಷಣದಲ್ಲಿದೆ.
12ನೇ ದಿನದ ಛಾವಾ ಬಾಕ್ಸ್ ಆಫೀಸ್ ಕಲೆಕ್ಷನ್: ಸಿನಿಮಾ ಇಂಡಸ್ಟ್ರಿ ಟ್ರ್ಯಾಕರ್ ಸ್ಯಾಕ್ನಿಲ್ಕ್ ವರದಿ ಪ್ರಕಾರ, ರಶ್ಮಿಕಾ ಮಂದಣ್ಣ ಪ್ರಮುಖ ಪಾತ್ರ ವಹಿಸಿರುವ ಈ ಚಿತ್ರ ತನ್ನ 12ನೇ ದಿನದಂದು (ಮಂಗಳವಾರ) ಭಾರತದಲ್ಲಿ 18 ಕೋಟಿ ರೂ. (ಆರಂಭಿಕ ಅಂದಾಜು) ಗಳಿಸಿದೆ. ತನ್ನ ಮೊದಲ ದಿನ 31 ಕೋಟಿ ರೂಪಾಯಿಯೊಂದಿಗೆ ಬಾಕ್ಸ್ ಆಫೀಸ್ ಪ್ರಯಾಣ ಪ್ರಾರಂಭಿಸಿದ್ದ ಈ ಸಿನಿಮಾ ಮೊದಲ ವಾರದಲ್ಲಿ 219.25 ಕೋಟಿ ರೂ. ಕಲೆಕ್ಷನ್ ಮಾಡಿತ್ತು. ವಾರಾಂತ್ಯ ಮಾತ್ರವಲ್ಲದೇ ವಾರದ ದಿನಗಳಲ್ಲಿಯೂ ಚಿತ್ರ ಉತ್ತಮ ಪ್ರದರ್ಶನ ಕಂಡಿದೆ. ಕಳೆದ ಶುಕ್ರವಾರ 23.5 ಕೋಟಿ ರೂ., ಶನಿವಾರ 44 ಕೋಟಿ ರೂ. ಮತ್ತು ಭಾನುವಾರ 40 ಕೋಟಿ ರೂ. ಗಳಿಸಿದ್ದ ಸಿನಿಮಾ ತನ್ನ 11ನೇ ದಿನ (ಸೋಮವಾರ) ಇದು 18.5 ಕೋಟಿ ರೂಪಾಯಿಯ ವ್ಯವಹಾರ ನಡೆಸಿದೆ.
ಇದನ್ನೂ ಓದಿ:ಪುನೀತ್ ರಾಜ್ಕುಮಾರ್ ಚಾರಿಟಬಲ್ ಟ್ರಸ್ಟ್ ಉದ್ಘಾಟನೆ: ಮಕ್ಕಳಿಗೆ ಕನ್ನಡಕ ವಿತರಣೆ