ಹೈದರಾಬಾದ್: ನಟ ವರುಣ್ ಧವನ್ ಮತ್ತು ನತಾಶಾ ದಲಾಲ್ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಏಪ್ರಿಲ್ 21ರಂದು ಈ ಜೋಡಿ ತಮ್ಮ ಆಪ್ತರ ಸಮ್ಮುಖದಲ್ಲಿ ಬೇಬಿ ಶವರ್ (ಸಿಮಾಂತ) ಸಂಭ್ರಮವನ್ನು ಆಚರಿಸಿದ್ದಾರೆ. ಕಾರ್ಯಕ್ರಮದಲ್ಲಿ ಶಾಹೀದ್ ಕಪೂರ್ ಮಡದಿ ಮೀರಾ ರಜಪೂತ್ ಕೂಡ ಆಗಮಿಸಿದ್ದು, ಕುಟುಂಬಕ್ಕೆ ಶುಭ ಕೋರಿದ್ದಾರೆ. ಇವರ ಹೊರತಾಗಿ ಸ್ನೇಹಿತರು ಮತ್ತು ಕುಟುಂಬದ ಆಪ್ತರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು, ಈ ಫೋಟೋಗಳು ಇದೀಗ ಎಲ್ಲರ ಗಮನ ಸೆಳೆಯುತ್ತಿದೆ.
ವರುಣ್ ಧವನ್ ಅಣ್ಣನ ಹೆಂಡತಿ ಜಾನ್ವಿ ಧವನ್, ಕಾರ್ಯಕ್ರಮದಲ್ಲಿ ಎರಡು ಹಂತದ ಅಂದದ ಕೇಕ್ ಅನ್ನು ತಾವೇ ಸ್ವತಃ ತಯಾರಿಸಿದ್ದು, ಅದನ್ನು ಅಚ್ಚುಕಟ್ಟಾಗಿ ಸಿಂಗರಿಸಿದ್ದಾರೆ. ಬೇಬಿ ಶವರ್ಗಾಗಿ ವಿಶೇಷವಾಗಿ ಈ ಕೇಕ್ ಅನ್ನು ತಯಾರಿಸಲಾಗಿದೆ. ಅವುಗಳನ್ನು ಹೂವು ಮತ್ತು ಟೆಡ್ಡಿ ಬೇರ್ನ ಆಕೃತಿಗಳಿಂದ ಸಿಂಗರಿಸಿದ್ದಾರೆ. ಕೇಕ್ನ ಮೇಲ್ಭಾಗದಲ್ಲಿ ಬಿಳಿ ಟೆಡ್ಡಿಬೇರ್ ಗುಲಾಬಿ ಬಣ್ಣದ ರೋಸ್ ಅನ್ನು ಕೈಯಲ್ಲಿ ಇಡುವ ಕೇಕ್ ಎಲ್ಲರ ಕಣ್ಮನ ಸೆಳೆದಿದೆ.
ಈ ಚಿತ್ರವನ್ನು ಜಾನ್ವಿ ಹೊರತಾಗಿ ನಟಿ ಶಾಹೀದ್ ಕಪೂರ್ ಹೆಂಡತಿ ಮೀರಾ ರಜಪೂತ್ ಕೂಡ ತಮ್ಮ ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ. ಇದಕ್ಕೆ ಅಡಿ ಬರಹ ಬರೆದಿರುವ ಮೀರಾ, ಜಾನ್ವಿ ಕಪೂರ್ ಬೇಕಿಂಗ್ ಅದ್ಬುತ, ವಿಡಿ ಮತ್ತು ನಾತಾಶಾಗೆ ಶುಭಾಶಯ ಎಂದು ತಿಳಿಸಿದ್ದಾರೆ. ಇದರ ಹೊರತಾಗಿ ನಟ ವರುಣ್ ಧವನ್ ಅಭಿಮಾನಿಗಳು ಕೂಡ ಹಲವು ಪುಟದಲ್ಲಿ ಈ ಕಾರ್ಯಕ್ರಮದ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಸದ್ಯ ಈ ಖುಷಿಯ ಸಂಭ್ರಮದ ಕ್ಷಣಗಳ ಫೋಟೋ ವೈರಲ್ ಆಗಿದೆ.