ಕರ್ನಾಟಕ

karnataka

ETV Bharat / entertainment

ಚಿತ್ರದ ಹೆಸರು 'ಡಿ ಗ್ಯಾಂಗ್' ; ಫಿಲ್ಮ್ ಚೇಂಬರ್​ನಲ್ಲಿ ಟೈಟಲ್ ನೋಂದಣಿಗೆ ಪ್ರಯತ್ನ - D GANG FILM - D GANG FILM

D Gang Name Issue: ಈಗ ಫಿಲ್ಮ್​ ಚೇಂಬರ್​ನಲ್ಲಿ ಡಿ ಗ್ಯಾಂಗ್ ಹೆಸರಿನ ಟೈಟಲ್ ರಿಜಿಸ್ಟರ್ ಮಾಡಿಸಲು ಪ್ರಯತ್ನಿಸಲಾಗಿದ್ದು, ಇದಕ್ಕೆ ಫಿಲ್ಮ್​ ಚೇಂಬರ್​ ಅವಕಾಶ ನೀಡಲು ನಿರಾಕರಿಸಿದೆ.

FILM CHAMBER  TITLES REGISTER  DIRECTED RAKHI SOMLI  BENGALURU
ಡಿ ಗ್ಯಾಂಗ್ ಹೆಸರಲ್ಲಿ ಫಿಲ್ಮ್ ಚೇಂಬರ್​ನಲ್ಲಿ ಟೈಟಲ್ ರಿಜಿಸ್ಟರ್ ಪ್ರಯತ್ನ (ETV Bharat)

By ETV Bharat Karnataka Team

Published : Jun 25, 2024, 3:13 PM IST

D Gang Name Issue:ಡಿ ಗ್ಯಾಂಗ್​ ಹೆಸರನ್ನು ಸಿನಿಮಾ ಟೈಟಲ್‌ ಮಾಡಿಕೊಳ್ಳೋ ಪ್ರಯತ್ನಗಳು ಕೆಲ ನಿರ್ದೇಶಕರಿಂದ ನಡೆಯುತ್ತಿವೆ. ಆದ್ರೆ ಇದಕ್ಕೆ ಫಿಲ್ಮ್​ ಚೇಂಬರ್​ ಅವಕಾಶ ಕಲ್ಪಿಸಲು ನಿರಾಕರಿಸಿದೆ.

ಹೌದು, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಡಿ ಗ್ಯಾಂಗ್ ಎಂಬ ಟೈಟಲ್ ಅನ್ನು ರಿಜಿಸ್ಟರ್ ಮಾಡಲು ಮುಂದಾಗಿದ್ದಾರೆ. ಪಿಎಂ ಫಿಲಮ್ಸ್ ನಿರ್ಮಾಣ ಸಂಸ್ಥೆಯ ಮಂಜು ಎನ್ ನಾಯಕ್ ಎಂಬುವರು ಡಿ ಗ್ಯಾಂಗ್ ಹೆಸರಿನ ನೋಂದಣಿಗಾಗಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಅರ್ಜಿ ಸಲ್ಲಿಸಿದ್ದರು. ಆದರೆ ಈ ಹೆಸರನ್ನು ನೀಡಲು ಸಾಧ್ಯವಿಲ್ಲವೆಂದು ವಾಣಿಜ್ಯ ಮಂಡಳಿ ಅಧ್ಯಕ್ಷ ಎನ್‌.ಎಂ ಸುರೇಶ್ ಹೇಳಿದ್ದಾರೆ. ಈ ಬಗ್ಗೆ ನಿರ್ದೇಶಕ ರಾಖಿ ಸೊಮ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ‌.

ಡಿ ಗ್ಯಾಂಗ್ ಹೆಸರಲ್ಲಿ ಫಿಲ್ಮ್ ಚೇಂಬರ್​ನಲ್ಲಿ ಟೈಟಲ್ ರಿಜಿಸ್ಟರ್ ಪ್ರಯತ್ನ (ETV Bharat)

ಕನ್ನಡದಲ್ಲಿ ಕೆಂಡದ ಸೆರಗು ಚಿತ್ರವನ್ನ ನಿರ್ದೇಶನ ಮಾಡಿರುವ ನಿರ್ದೇಶಕ ರಾಖಿ ಸೊಮ್ಲಿ ಡಿ ಗ್ಯಾಂಗ್ ಎನ್ನುವ ಹೆಸರಿನಲ್ಲಿ ರಿಜಿಸ್ಟರ್ ಮಾಡಿಸಲು ಹೋದಾಗ ಫಿಲ್ಮ್‌ ಚೇಂಬರ್ ಈ ಟೈಟಲ್ ಕೊಡುವುದಕ್ಕೆ ಬರೋದಿಲ್ಲ ಅಂದಿದ್ದಾರೆ. ಆಗ ನಿರ್ದೇಶಕ ರಾಖಿ ಸೊಮ್ಲಿ ಕೋಪಗೊಂಡು ನಾವು ಈ ಟೈಟಲ್​ನ ಮೇಲೆ ಸುಮಾರು ಎರಡು ವರ್ಷಗಳಿಂದ ಕೆಲಸ ಮಾಡಿದ್ದೇವೆ. ಅದಕ್ಕೆ ಸಾಕ್ಷಿಯಾಗಿ ಯೂಟ್ಯೂಬ್​ನಲ್ಲಿ ಡಿ ಗ್ಯಾಂಗ್ ಎನ್ನುವ ಹಾಡು ಬಿಡುಗಡೆ ಆಗಿದೆ. ಈಗ ನಡೆಯುತ್ತಿರುವ ದರ್ಶನ್ ಅವರ ಪ್ರಕರಣಕ್ಕೂ ನಮ್ಮ ಟೈಟಲ್​ಗೂ ಯಾವುದೇ ಸಂಬಂಧ ಇರುವುದಿಲ್ಲ. ಆದರೆ ನಮ್ಮ ಟೈಟಲ್ ಅನ್ನು ಯಾವ ಕಾರಣಕ್ಕೆ ಚಲನಚಿತ್ರ ವಾಣಿಜ್ಯ ಮಂಡಳಿ ಅವರು ನೋಂದಣಿ ಮಾಡಿಕೊಳ್ಳಲು ಆಗುವುದಿಲ್ಲ ಎಂದರು ಎನ್ನುವುದು ನನಗೆ ಅರ್ಥವಾಗಲಿಲ್ಲ. ಮುಂದಿನ ದಿನಗಳಲ್ಲಿ ದೊಡ್ಡ ನಿರ್ಮಾಪಕರಿಗೆ ಅಥವಾ ದೊಡ್ಡ ನಿರ್ದೇಶಕರಿಗೆ ಈ ಟೈಟಲ್ ಕೊಟ್ಟರೆ ಆಗ ಮಾತನಾಡುತ್ತೇನೆ ಅಂತಾರೆ ನಿರ್ದೇಶಕ ರಾಖಿ ಸೊಮ್ಲಿ.

ಇನ್ನು, ರಾಖಿ ಸೊಮ್ಲಿ ಹೇಳುವ ಪ್ರಕಾರ ಡಿ ಗ್ಯಾಂಗ್‌ ಚಿತ್ರದ ಕಥೆಯಲ್ಲಿ ಈಗಿನ ದರ್ಶನ್‌ ಸ್ಟೋರಿ ಇಲ್ಲವೇ ಇಲ್ಲ. ಚಿತ್ರಕಥೆ ಸಿದ್ಧವಾಗಿದೆಯಂತೆ. ಸಿನಿಮಾ ಮಂಡಳಿಯವರು ಸಿನಿಮಾ ಟೈಟಲ್ ನೀಡಲು ನಿರಾಕರಿಸಿದ್ದಾರೆ. ಪ್ರಕರಣದ ವಿಚಾರಣೆ ನಡೆಯುತ್ತಿರುವ ಕಾರಣ ಟೈಟಲ್ ನೀಡಲಾಗುವುದಿಲ್ಲ ಎಂದು ಫಿಲ್ಮ್ ಚೇಂಬರ್ ಅಧ್ಯಕ್ಷ ಎನ್ ಎಂ ಸುರೇಶ್ ತಿಳಿಸಿದ್ದಾರೆ.

ಓದಿ:ಕಮಲ್ ಹಾಸನ್ ಅಭಿನಯದ 'ಇಂಡಿಯನ್ 2' ಟ್ರೇಲರ್​​: ಪ್ರೇಕ್ಷಕರ ರಿಯಾಕ್ಷನ್​​​ ಹೀಗಿತ್ತು - Indian 2 Trailer

ABOUT THE AUTHOR

...view details