ಕರ್ನಾಟಕ

karnataka

ETV Bharat / entertainment

'ಅಳಿದು ಉಳಿದವರು' ಖ್ಯಾತಿಯ ಅಶು ಬೆದ್ರ ನಟನೆಯ ಹೊಸ ಸಿನಿಮಾ‌‌ದ ಮೇಕಿಂಗ್​ ವಿಡಿಯೋ ರಿವೀಲ್​ - Ashu Bedra new movie - ASHU BEDRA NEW MOVIE

ಅಶು ಬೆದ್ರ ವಫಾ ನಟನೆಯ ಮುಂದಿನ ಚಿತ್ರದ ಮೇಕಿಂಗ್ ವಿಡಿಯೋ ಅನಾವರಣಗೊಂಡಿದೆ.

Ashu Bedra's new movie team
ಅಶು ಬೆದ್ರ ನಟನೆಯ ಹೊಸ ಸಿನಿಮಾ‌‌ದ ತಂಡ (ETV Bharat)

By ETV Bharat Karnataka Team

Published : Jul 23, 2024, 3:30 PM IST

ಅಶು ಬೆದ್ರ ನಟನೆಯ ಹೊಸ ಸಿನಿಮಾ‌‌ದ ಮೇಕಿಂಗ್​ ವಿಡಿಯೋ (ETV Bharat)

'ಅಳಿದು ಉಳಿದವರು' ಸಿನಿಮಾ ಮೂಲಕ ಹೀರೋ ಆಗಿ ಸ್ಯಾಂಡಲ್​​ವುಡ್​ಗೆ ಪರಿಚಿತರಾದವರು ಅಶು ಬೆದ್ರ ವಫಾ. ಕೇವಲ ನಾಯಕನಾಗಿ ಅಲ್ಲದೇ ನಿರ್ಮಾಪಕನಾಗಿಯೂ ಕನ್ನಡ ಕಿರುತೆರೆ ಹಾಗೂ ಹಿರಿತೆರೆಯಲ್ಲಿ ಗುರುತಿಸಿಕೊಂಡಿದ್ದಾರೆ. ಜನಪ್ರಿಯ 'ರಾಧಾ ಕಲ್ಯಾಣ' ಸೀರಿಯಲ್ ಜೊತೆ 'ಅಳಿದು ಉಳಿದವರು' ಹಾಗೂ 'ಸಿಂಪಲ್ಲಾಗ್​​​ ಇನ್ನೊಂದ್ ಲವ್ ಸ್ಟೋರಿ' ನಿರ್ಮಿಸಿದ್ದ ಅಶು ಬೆದ್ರ ಅವರೀಗ ಮತ್ತೊಂದು ಹೊಸ ಪ್ರಯತ್ನದ ಮೂಲಕ ಪ್ರೇಕ್ಷಕರ ಎದುರು ಬರಲು ಸಜ್ಜಾಗುತ್ತಿದ್ದಾರೆ. ಅದರ ಮೊದಲ ಭಾಗವಾಗಿ ಮೇಕಿಂಗ್ ವಿಡಿಯೋ ಬಿಡುಗಡೆ ಮಾಡಲಾಗಿದೆ.

ಅಶು ಬೆದ್ರ ವಫಾರ ಹುಟ್ಟುಹಬ್ಬದ ವಿಶೇಷವಾಗಿ ಹೊಸ ಸಿನಿಮಾದ ಮೇಕಿಂಗ್ ದೃಶ್ಯವನ್ನು ಅನಾವರಣಗೊಳಿಸಲಾಗಿದೆ. ಸ್ಪೆಷಲ್ ಝಲಕ್ ಮೂಲಕ ಚಿತ್ರತಂಡ ಶುಭಾಶಯ ಕೋರಿದೆ. ಅಂದ ಹಾಗೇ, ಅಶು ಬೆದ್ರ ವಫಾರ ಹೊಸ ಕನಸಿಗೆ ಪ್ರವೀಣ್ ಕಾಡಶೆಟ್ಟಿ ಸಾಥ್ ಕೊಡುತ್ತಿದ್ದಾರೆ. ಈ ಚಿತ್ರದ ಮೂಲಕ ಪ್ರವೀಣ್ ಅವರು ನಿರ್ದೇಶಕರಾಗಿ ಮೊದಲ ಹೆಜ್ಜೆ ಇಡುತ್ತಿದ್ದಾರೆ. ಸದ್ಯ ಮೇಕಿಂಗ್ ಬಿಡುಗಡೆ ಮಾಡಿರುವ ಚಿತ್ರತಂಡ, ಶೀಘ್ರದಲ್ಲೇ ಟೈಟಲ್ ಜೊತೆಗೆ ಉಳಿದ ತಾರಾಬಳಗ, ತಾಂತ್ರಿಕ ಬಳಗದ ಬಗ್ಗೆ ಮಾಹಿತಿ ನೀಡಲಿದೆ.

ಇದನ್ನೂ ಓದಿ:ಶೀಘ್ರದಲ್ಲೇ ಶಿವಣ್ಣನ 131ನೇ ಸಿನಿಮಾ ಮುಹೂರ್ತ: ಸಂಪೂರ್ಣ ಚಿತ್ರತಂಡದೊಂದಿಗೆ ನಾಯಕ ನಟ - Shivarajkumar New Movie

ಮೇಕಿಂಗ್ ವಿಡಿಯೋ ಚಿತ್ರದ ಬಗ್ಗೆ ಕುತೂಹಲ ಹುಟ್ಟಿಸಿದೆ. ಹಳ್ಳಿ ಸೊಗಡನ್ನು ತೆರೆದಿಡುವ ವಿಡಿಯೋ ತುಣುಕು ನೋಡ್ತಿದ್ದರೆ, ಸಾಕಷ್ಟು ಜನರು ಈ ಸಿನಿಮಾಗೆ ಪರಿಶ್ರಮ ಹಾಕಿರುವುದು ಗೊತ್ತಾಗುತ್ತಿದೆ. ಅದ್ಧೂರಿಯಾಗಿ ಸಿನಿಮಾ ಮೂಡಿ ಬರುತ್ತಿದ್ದು, ಚಿತ್ರದ ಬಗ್ಗೆ ಒಂದೊಂದಾಗಿಯೇ ಚಿತ್ರತಂಡ ಅಪ್ಡೇಟ್ ಕೊಡಲಿದೆ.

ABOUT THE AUTHOR

...view details