ಕರ್ನಾಟಕ

karnataka

ETV Bharat / entertainment

ಹಂಪಿ ವಿರೂಪಾಕ್ಷನ ಸನ್ನಿಧಿಯಲ್ಲಿ ಸೆಟ್ಟೇರಿತು ರಾಮ್ ಚರಣ್ ನಿರ್ಮಾಣದ ಚಿತ್ರ - The India House - THE INDIA HOUSE

ಆರ್​​ಆರ್​​​ಆರ್ ಸ್ಟಾರ್ ರಾಮ್​ ಚರಣ್​ ನಿರ್ಮಾಣದ 'ದಿ ಇಂಡಿಯಾ ಹೌಸ್' ಮುಹೂರ್ತ ಸಮಾರಂಭ ಹಂಪಿಯ ವಿರೂಪಾಕ್ಷ ದೇವರ ಸನ್ನಿಧಿಯಲ್ಲಿ ನೆರವೇರಿದೆ.

The India House Muhurta ceremony
'ದಿ ಇಂಡಿಯಾ ಹೌಸ್' ಮುಹೂರ್ತ ಸಮಾರಂಭ (ETV Bharat)

By ETV Bharat Karnataka Team

Published : Jul 2, 2024, 3:44 PM IST

'ಆರ್​​ಆರ್​​​ಆರ್' ಸಿನಿಮಾ ಮೂಲಕ ಜಾಗತಿಕ ಮಟ್ಟದಲ್ಲಿ ಹೆಸರು ಮಾಡಿರುವ ದಕ್ಷಿಣ ಚಿತ್ರರಂಗದ ಖ್ಯಾತ ನಟ ರಾಮ್ ಚರಣ್ ಇತ್ತೀಚೆಗೆ 'ವಿ ಮೆಗಾ ಪಿಕ್ಚರ್ಸ್' ಹೆಸರಿನ ಚಲನಚಿತ್ರ ನಿರ್ಮಾಣ ಸಂಸ್ಥೆಯನ್ನು ಆರಂಭಿಸಿದ್ದಾರೆ. ತಮ್ಮ ಮೊದಲ ಸಿನಿಮಾವಾಗಿ ಸಾವರ್ಕರ್ ಜೀವನ ಕಥೆಯನ್ನು ತೆರೆ ಮೇಲೆ ತರಲು ಸಜ್ಜಾಗಿದ್ದಾರೆ.

'ದಿ ಇಂಡಿಯಾ ಹೌಸ್' ಸಿನಿಮಾದ ಶೀರ್ಷಿಕೆ. ತೆಲುಗಿನ ನಿಖಿಲ್ ಸಿದ್ಧಾರ್ಥ್ ನಾಯಕನಾಗಿ ನಟಿಸಲಿದ್ದಾರೆ. ಕಳೆದ ದಿನ ಹಂಪಿಯ ವಿರೂಪಾಕ್ಷ ಸನ್ನಿಧಿಯಲ್ಲಿ 'ದಿ ಇಂಡಿಯಾ ಹೌಸ್' ಸಿನಿಮಾದ ಮುಹೂರ್ತ ಸಮಾರಂಭ ನೆರವೇರಿದೆ. ಈ ವೇಳೆ ಇಡೀ ಚಿತ್ರತಂಡ ಭಾಗಿಯಾಗಿತ್ತು.

'ದಿ ಇಂಡಿಯಾ ಹೌಸ್' ಮುಹೂರ್ತ ಸಮಾರಂಭ (ETV Bharat)

ದಿ ಕಾಶ್ಮೀರಿ ಫೈಲ್ಸ್, ಕಾರ್ತಿಕೇಯ-2ನಂತಹ ಹಿಟ್ ಸಿನಿಮಾಗಳನ್ನು ನಿರ್ಮಿಸಿರುವ ಅಭಿಷೇಕ್ ಅಗರ್ವಾಲ್ ತಮ್ಮದೇ ಅಭಿಷೇಕ್ ಅಗರ್ವಾಲ್ ಆರ್ಟ್ಸ್ ಬ್ಯಾನರ್ ಹಾಗೂ ರಾಮ್ ಚರಣ್ ಒಡೆತನದ ವಿ ಮೆಗಾ ಪಿಕ್ಚರ್ಸ್ ಜಂಟಿಯಾಗಿ ಈ ಚಿತ್ರವನ್ನು ನಿರ್ಮಿಸುತ್ತಿವೆ. ಭಾರತದ ಸ್ವಾತಂತ್ರ್ಯ ಪೂರ್ವದಲ್ಲಿ ನಡೆದ ಘಟನೆಗಳನ್ನು ಆಧರಿಸಿ 'ದಿ ಇಂಡಿಯಾ ಹೌಸ್' ಅನ್ನು ಕಟ್ಟಿಕೊಡಲಾಗುತ್ತಿದೆ.

ಇದನ್ನೂ ಓದಿ:ಅದೃಷ್ಟ ಪರೀಕ್ಷೆಗಿಳಿದ ಪ್ರವೀಣ್ ತೇಜ್, ಹೊಸಬರ ಚಿತ್ರ: ಈ ವಾರ ಜಿಗರ್, ಕಾಗದ ಸಿನಿಮಾಗಳು ತೆರೆಗೆ - Jigar and Kaagada Movies

ಸಿನಿಮಾದಲ್ಲಿ ನಾಯಕ ನಿಖಿಲ್, ಶಿವನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ರಾಮ್ ವಂಶಿ ಕೃಷ್ಣ ನಿರ್ದೇಶನದ ಚಿತ್ರದಲ್ಲಿ ಬಾಲಿವುಡ್ ಸ್ಟಾರ್ ಅನುಪಮ್ ಖೇರ್ ಕೂಡ ನಟಿಸಲಿದ್ದಾರೆ. ಅನುಪಮ್, ಶ್ಯಾಮ್‌ಜಿ ಕೃಷ್ಣ ವರ್ಮಾ ಪಾತ್ರ ನಿರ್ವಹಿಸಲಿದ್ದಾರೆ. ನಿಖಿಲ್ ಸಿದ್ಧಾರ್ಥ್​​​ಗೆ ಜೋಡಿಯಾಗಿ ಸಾಯಿ ಮಂಜ್ರೇಕರ್ ಬಣ್ಣ ಹಚ್ಚಲಿದ್ದಾರೆ.

'ದಿ ಇಂಡಿಯಾ ಹೌಸ್' ಮುಹೂರ್ತ ಸಮಾರಂಭ (ETV Bharat)

ಇದನ್ನೂ ಓದಿ:ಮೊದಲ ಮಗುವಿನ ನಿರೀಕ್ಷೆಯಲ್ಲಿ ಹರ್ಷಿಕಾ ಪೂಣಚ್ಚ-ಭುವನ್​ ಪೊನ್ನಣ್ಣ; ಅಕ್ಟೋಬರ್​ಗೆ ಕಂದನ ಜನನ - Harshika Poonacha Pregnant

ಪ್ಯಾನ್ ಇಂಡಿಯಾ ಮಟ್ಟದಲ್ಲಿ ಮೂಡಿ ಬರುತ್ತಿರುವ ದಿ ಇಂಡಿಯನ್ ಹೌಸ್ ಸಿನಿಮಾದಲ್ಲಿ ಕ್ಯಾಮರಾನ್ ಬ್ರೈಸನ್ ಕ್ಯಾಮರಾ ಹಿಡಿಯಲಿದ್ದಾರೆ. ಕಾರ್ತಿಕೇಯ 2 ನಂತರ ನಿಖಿಲ್, ಅನುಪಮ್ ಖೇರ್ ಜೊತೆ ಅಭಿಷೇಕ್ ಅಗರ್ವಾಲ್ ಆರ್ಟ್ಸ್ ಮತ್ತೊಮ್ಮೆ ಕೈ ಜೋಡಿಸಿದೆ. ಈ ಚಿತ್ರದ ಶೂಟಿಂಗ್ ಇಂದಿನಿಂದ ಶುರುವಾಗಲಿದೆ.

ABOUT THE AUTHOR

...view details