ಕನ್ನಡ ಚಿತ್ರರಂಗದ ಬಹುನಿರೀಕ್ಷಿತ ಚಿತ್ರ 'ಬಘೀರ' ಅಕ್ಟೋಬರ್ 31ರಂದು ಬಿಡುಗಡೆಯಾಗಿ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿತ್ತು. ಸ್ಯಾಂಡಲ್ವುಡ್ನ ಬಹುಬೇಡಿಕೆ ನಟ ರೋರಿಂಗ್ ಸ್ಟಾರ್ ಶ್ರೀಮುರಳಿ ಮತ್ತು ಚೆಂದುಳ್ಳಿ ಚೆಲುವೆ ರುಕ್ಮಿಣಿ ವಸಂತ್ ತೆರೆಕಂಡ ಚಿತ್ರ ಸಿನಿಪ್ರಿಯರಿಂದ ಉತ್ತಮ ಪ್ರತಿಕ್ರಿಯೆ ಸ್ವೀಕರಿಸಿದ್ದಲ್ಲದೇ, ಬಾಕ್ಸ್ ಆಫೀಸ್ನಲ್ಲೂ ಉತ್ತಮ ಗಳಿಕೆ ಮಾಡಿತ್ತು. ಸದ್ಯ ಒಟಿಟಿ ಪ್ಲ್ಯಾಟ್ಫಾರ್ಮ್ನಲ್ಲೂ ಟ್ರೆಂಡಿಂಗ್‌ನಲ್ಲಿದೆ.
ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ಸಲಾರ್ ಸಿನಿಮಾ ಒಟಿಟಿಯಲ್ಲೂ ಭಾರಿ ಯಶಸ್ಸು ಕಂಡಿದೆ. 300 ದಿನಗಳಿಗಿಂತಲೂ ಹೆಚ್ಚು ಸಮಯದಿಂದ ಟ್ರೆಂಡ್‌ನಲ್ಲಿದೆ, ಇನ್ನೂ ಟ್ರೆಂಡಿಂಗ್‌ನಲ್ಲಿದೆ. ಇದೀಗ ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ಬಘೀರ ಹಾಟ್‌ಸ್ಟಾರ್‌ನಲ್ಲಿ #1 ಸ್ಥಾನವನ್ನು ಪಡೆದುಕೊಂಡಿದೆ. ಡಾ.ಸೂರಿ ನಿರ್ದೇಶನ ಈ ಸಿನಿಮಾ ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರನ್ನು ರಂಜಿಸುವಲ್ಲಿ ಯಶ ಕಂಡಿದೆ. ಪವರ್ಫುಲ್ ವಿಎಫ್ಎಕ್ಸ್, ಆಸಕ್ತಿದಾಯಕ ಕಥೆ ಮತ್ತು ಉತ್ತಮ ಹಿನ್ನೆಲೆ ಸಂಗೀತದೊಂದಿಗೆ ಆ್ಯಕ್ಷನ್-ಪ್ಯಾಕ್ಡ್ ಮನರಂಜನೆಯನ್ನು ಒದಗಿಸುತ್ತಿದೆ. ಇದೀಗ ಒಟಿಟಿ ಪ್ಲ್ಯಾಟ್ಫಾರ್ಮ್ನಲ್ಲೂ ಟ್ರೆಂಡಿಂಗ್ನಲ್ಲಿದ್ದು ಸಖತ್ ಸದ್ದು ಮಾಡುತ್ತಿದೆ.
ಹೌದು, ಡಿಸ್ನಿ ಪ್ಲಸ್ ಹಾಟ್‌ಸ್ಟಾರ್‌ನಲ್ಲಿ ಟಾಪ್ 10 ಹಿಂದಿ ಸಿನಿಮಾಗಳ ಪೈಕಿ 'ಬಘೀರ' #1 ಟ್ರೆಂಡಿಂಗ್‌ನಲ್ಲಿದೆ. ಒಟಿಟಿ ಪ್ಲ್ಯಾಟ್ಫಾರ್ಮ್ನಲ್ಲಿ ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರು ಕನ್ನಡ ಸಿನಿಮಾದ ಹಿಂದಿ ಆವೃತ್ತಿಯನ್ನು ಆನಂದಿಸುತ್ತಿದ್ದಾರೆ. ಈ ವಿಚಾರವನ್ನು ಚಿತ್ರದ ಹಿಂದಿರುವ ಖ್ಯಾತ ಚಲನಚಿತ್ರ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್ ಹಂಚಿಕೊಂಡಿದೆ.
ಇದನ್ನೂ ಓದಿ: 'ಹಲವು ಜನರು ನನ್ನಿಂದೆ ಬಿದ್ದಿದ್ದಾರೆಂಬುದನ್ನು ಕೇಳಿದೆ..' ಸಲ್ಮಾನ್ ಖಾನ್ 'ಸಿಕಂದರ್' ಟೀಸರ್ ರಿಲೀಸ್
ಈ ಹಿಂದೆ ಮಾತನಾಡಿದ್ದ ನಟ ಶ್ರೀಮುರಳಿ, ''ಬಘೀರ ಚಿತ್ರದ ಯಶಸ್ಸು ನನ್ನ 3 ವರ್ಷಗಳ ಶ್ರಮಕ್ಕೆ ಸಿಕ್ಕ ಪ್ರತಿಫಲ. ಇದರಲ್ಲಿ ಚಿತ್ರತಂಡದ ಸಂಪೂರ್ಣ ಶ್ರಮ ಅಡಗಿದೆ. ಈ ಗೆಲುವನ್ನು ನಮ್ಮ ಅಭಿಮಾನಿಗಳಿಗೆ ಅರ್ಪಿಸುತ್ತೇನೆ. ಚಿತ್ರತಂಡದ ಶ್ರಮ ಮತ್ತು ಪ್ರೇಕ್ಷಕರ ಶ್ರಮದಿಂದ ಗೆಲುವು ಸಿಕ್ಕಿದೆ. ಇನ್ನೂ ಯಾವುದೇ ಕೊರತೆ ಬಾರದ ಹಾಗೆ ಚಿತ್ರವನ್ನು ನಿರ್ಮಿಸಿರುವ ನಿರ್ಮಾಪಕ ವಿಜಯ್ ಕಿರಗಂದೂರು ಮತ್ತು ಖ್ಯಾತ ನಿರ್ದೇಶಕ ಪ್ರಶಾಂತ್ ನೀಲ್ ಅವರ ಕಥೆಯನ್ನು ಮನಮುಟ್ಟುವಂತೆ ನಿರ್ದೇಶಿಸಿರುವ ಡಾ.ಸೂರಿ ಅವರಿಗೆ ಧನ್ಯವಾದಗಳು ಎಂದು ತಿಳಿಸಿದ್ದರು.
ಇದನ್ನೂ ಓದಿ: ಕಿಚ್ಚನೆದುರೇ ನಡೆಯಿತು ಚೈತ್ರಾ ಕುಂದಾಪುರ ರಜತ್ ಫೈಟ್: ಕೈ ಕೈ ಮಿಲಾಯಿಸಿಕೊಂಡ್ರಾ?
ಬ್ಲಾಕ್ಬಸ್ಟರ್ ಚಿತ್ರಗಳ ನಿರ್ದೇಶಕ ಪ್ರಶಾಂತ್ ನೀಲ್ ಅವರು ಈ ಚಿತ್ರಕ್ಕೆ ಕಥೆ ಒದಗಿಸಿದ ಹಿನ್ನೆಲೆ ಸಿನಿಮಾ ಸೆಟ್ಟೇರಿದ ಕ್ಷಣದಿಂದಲೂ ಸಾಕಷ್ಟು ಸದ್ದು ಮಾಡುತ್ತಾ ಬಂತು. ಡಾ.ಸೂರಿ ನಿರ್ದೇಶನದ ಜೊತೆಗೆ ಚಿತ್ರಕಥೆ ಮತ್ತು ಸಂಭಾಷಣೆಯ ಜವಾಬ್ದಾರಿ ಹೊತ್ತಿದ್ದರು. ಎ.ಜೆ ಶೆಟ್ಟಿ ಅವರ ಛಾಯಾಗ್ರಹಣ ನಿರ್ವಹಿಸಿದ್ದರೆ, ಚೇತನ್ ಡಿಸೋಜಾ ಆ್ಯಕ್ಷನ್ ಕಂಪೋಸ್ ಮಾಡಿದ್ದರು. ಉಳಿದಂತೆ ಸೆನ್ಸಾರ್ ಪರೀಕ್ಷೆಯಲ್ಲಿ ಯು/ಎ ಸರ್ಟಿಫಿಕೇಟ್ ಪಡೆದುಕೊಂಡ ಚಿತ್ರ ಪ್ರೇಕ್ಷಕರಿಂದಲೂ ಬಹುತೇಕ ಮೆಚ್ಚುಗೆಯನ್ನೇ ಸ್ವೀಕರಿಸಿದೆ. ಸದ್ಯ ಒಟಿಟಿಯಲ್ಲೂ ಕಮಾಲ್ ಮಾಡುತ್ತಿದೆ.