ETV Bharat / entertainment

ಕಿಚ್ಚನೆದುರೇ ನಡೆಯಿತು ಚೈತ್ರಾ ಕುಂದಾಪುರ ರಜತ್​ ಫೈಟ್​​: ಕೈ ಕೈ ಮಿಲಾಯಿಸಿಕೊಂಡ್ರಾ? - BBK11

ಬಿಗ್​ ಬಾಸ್​ ಮನೆ ರಣರಂಗವಾಗಿದೆ. ಚೈತ್ರಾ ಕುಂದಾಪುರ ರಜತ್​ ಕಿಶನ್​ ಗಲಾಟೆ ಮಾಡಿಕೊಂಡಿದ್ದು, ಕೈ ಕೈ ಮಿಲಾಯಿಸಿಕೊಳ್ಳಲಿದ್ದಾರಾ ಅನ್ನೋ ಅನುಮಾನ ಶುರುವಾಗಿದೆ.

Rajath, Chaitra Kundapura
ರಜತ್ ಕಿಶನ್​, ಚೈತ್ರಾ ಕುಂದಾಪುರ (Photo: bigg boss team)
author img

By ETV Bharat Entertainment Team

Published : 14 hours ago

ಕನ್ನಡ ಕಿರುತೆರೆಯ ಅತ್ಯಂತ ಜನಪ್ರಿಯ ಕಾರ್ಯಕ್ರಮ ಬಿಗ್​ ಬಾಸ್​ ಸೀಸನ್​ 11ರಲ್ಲಿ ದೊಡ್ಡ ಗಲಾಟೆ ನಡೆದೇ ಬಿಟ್ಟಿದೆ. ಭವ್ಯಾ ಅವರ ವಿಷಯದಿಂದ ಆರಂಭವಾಯಿತಾದರೂ ಫೈಟ್​ ಆಗಿದ್ದು ಮಾತ್ರ ಚೈತ್ರಾ ಕುಂದಾಪುರ ಹಾಗೂ ರಜತ್​ ಕಿಶನ್​ ನಡುವೆ. ಈ ಬಾರಿ ಗಲಾಟೆಯ ತೀವ್ರತೆ ಕೊಂಚ ಹೆಚ್ಚೇ ಎನ್ನಬಹುದು. ಇನ್ನೇನು ಕೈ ಕೈ ಮಿಲಾಯಿಸಿಕೊಳ್ತಾರೆ ಅನ್ನುವಷ್ಟರ ಮಟ್ಟಿಗೆ ಹೋಗಿದೆ. ಪರಿಣಾಮ ಸಂಪೂರ್ಣ ಸಂಚಿಕೆಯಲ್ಲಿ ಸ್ಪಷ್ಟವಾಗಲಿದೆ.

ದೊಡ್ಡ ಗಲಾಟೆಯ ಒಂದು ಚಿಕ್ಕ ನೋಟ ಬಿಗ್​ ಬಾಸ್​​ ಅನಾವರಣಗೊಳಿಸಿರುವ ಪ್ರೋಮೋದಲ್ಲಿ ಕಾಣಬಹುದಾಗಿದೆ. 'ಒಂದು ಸತ್ಯ ಮನೆಯನ್ನು ರಣರಂಗವಾಗಿಸ್ತಾ? ವಾರದ ಕಥೆ ಕಿಚ್ಚನ ಜೊತೆ, ಇಂದು ರಾತ್ರಿ 9ಕ್ಕೆ ಎಂಬ ಕ್ಯಾಪ್ಷನ್​ನಡಿ ಅನಾವರಣಗೊಂಡಿರುವ ಪ್ರೋಮೋದಲ್ಲಿ ಕಾಣಬಹುದಾಗಿದೆ. ಇವೆಲ್ಲವೂ ನಡೆದಿದ್ದು ಅಭಿನಯ ಚಕ್ರವರ್ತಿ ಸುದೀಪ್​ ಎದುರೇ ಅನ್ನೋದು ಮಾತ್ರ ಶಾಕಿಂಗ್​. ಭವ್ಯಾ ಕ್ಯಾಪ್ಟನ್ಸಿ ವಿಷಯವನ್ನು ಪ್ರಸ್ತಾಪಿಸಿ, ಬ್ರೇಕ್​ ಕೊಟ್ಟ ಬಳಿಕ ಇಬ್ಬರೂ ಜಗಳಕ್ಕಿಳಿದಿದ್ದಾರೆ. ಸನ್ನಿವೇಶವನ್ನು ಸುದೀಪ್​​ ಕ್ಯಾಮರಾ ಮೂಲಕ ಗಮನಿಸಿದ್ದಾರೆ. ಹಾಗಾಗಿ ಕಿಚ್ಚ ಯಾವ ಕ್ರಮ ಕೈಗೊಳ್ಳಲಿದ್ದಾರೆ ಅನ್ನೋ ಕುತೂಹಲದಲ್ಲಿ ಪ್ರೇಕ್ಷಕರಿದ್ದಾರೆ.

ಪ್ರೋಮೋ ಆರಂಭದಲ್ಲಿ, ಕ್ಯಾಪ್ಟನ್ಸಿಗೆ ಬರೋಣ, ಅಭಿನಂದನೆಗಳು ಭವ್ಯಾ ಅವರೇ ಎಂದು ಸುದೀಪ್​​ ವಿಶ್ ಮಾಡಿದ್ದಾರೆ. ಸಂಪೂರ್ಣ ವಿಷಯವನ್ನರಿತಿದ್ದ ಸುದೀಪ್​ ಅವರ ಮೊಗದಲ್ಲಿದ್ದ ನಗು ಎಂದಿಗಿಂತ ಭಿನ್ನವಾಗಿತ್ತು. ನಂತರ, ಎಲ್ಲಿಂದ ಬಿದ್ದಿತ್ತು ಬಾಲ್​ ಭವ್ಯಾ ಅವರೇ ಎಂದು ಸುದೀಪ್​ ಪ್ರಶ್ನಿಸಿದ್ದಾರೆ. ನಂತರ, ಅದು 9ರಿಂದ ಬಿದ್ದಿದ್ದಲ್ಲ ಅನ್ನೋದು ರಜತ್​ ಅವರಿಗೆ ಗೊತ್ತಿದೆ ಎಂದು ಕಿಚ್ಚ ತಿಳಿಸಿದ್ದಾರೆ. ಭವ್ಯಾ ಸುಮ್ಮನೆ ಇರಿ ಎಂದು ತಿಳಿಸಿದ್ರು ಅಂತಾ ಎಲ್ಲರ ಸಮ್ಮುಖದಲ್ಲಿ ರಜತ್​ ಸತ್ಯ ಒಪ್ಪಿಕೊಂಡಿದ್ದಾರೆ.

ಇದನ್ನೂ ಓದಿ: 'ಹಲವು ಜನರು ನನ್ನಿಂದೆ ಬಿದ್ದಿದ್ದಾರೆಂಬುದನ್ನು ಕೇಳಿದೆ..' ಸಲ್ಮಾನ್​ ಖಾನ್​​ 'ಸಿಕಂದರ್'​ ಟೀಸರ್ ರಿಲೀಸ್​

ಈ ಬಗ್ಗೆ ಬಂದಿಷ್ಟು ಚರ್ಚೆ ಆದ ಬಳಿಕ ಸುದೀಪ್ ಬ್ರೇಕ್​ ಕೊಟ್ಟಿದ್ದಾರೆ. ಸ್ಪರ್ಧಿಗಳು ಇಂದಿನ ಎಪಿಸೋಡ್​ಗಾಗಿ ಕುಳಿತ ಸ್ಥಳದಿಂದ ಎದ್ದು ಹೋಗಿದ್ದು, ಸುದೀಪ್​ ಮಾತ್ರ ಸ್ಕ್ರೀನ್​ನಲ್ಲಿ ಎಲ್ಲವನ್ನೂ ಗಮನಿಸಿದ್ದಾರೆ. ಚೈತ್ರಾ ಕುಂದಾಪುರ ಈ ವಿಷಯವನ್ನು ಎತ್ತಿದ್ದಾರೆ. ಇದು ರಜತ್​ ಆಕ್ರೋಶಕ್ಕೆ ಕಾರಣವಾಗಿದೆ.

ಇದನ್ನೂ ಓದಿ: ಬ್ರಹ್ಮಗಂಟು ನಟಿ ಶೋಭಿತಾ To ಶ್ಯಾಮ್​ ಬೆನಗಲ್​: 2024ರಲ್ಲಿ ನಾವು ಕಳೆದುಕೊಂಡ ಭಾರತೀಯ ಸೆಲೆಬ್ರಿಟಿಗಳಿವರು

ಹೋಗು ನನಗೆ ಗೊತ್ತು ಎಂದು ರಜತ್​ ಕಿಡಿ ಕಾರಿದ್ರೆ ಸುಮ್ಮನಿರಿ ಎಂದು ಚೈತ್ರಾ ಬಾಯಿ ಮುಚ್ಚಿಸಲು ಪ್ರಯತ್ನಿಸಿದ್ದಾರೆ. ಥೂ ಎಂದು ರಜತ್​ ಉಗಿದಿದ್ದಾರೆ. ರೌಡಿಸಂ ಬೇಡ ಎಂದು ಚೈತ್ರಾ ತಿಳಿಸಿದ್ದಾರೆ. ಡ್ರಾಮಾ, ಯೋಗ್ಯತೆ, ರೌಡಿಸಂ ಅನ್ನೋ ಪದಗಳು ಇಬ್ಬರ ಬಾಯಿಂದಲೂ ಬಂದಿದೆ. ಮಾತಿಗೆ ಮಾತು ಬೆಳೆದು ದೊಡ್ಡ ವಾಗ್ವಾದವೇ ನಡೆದುಬಿಟ್ಟಿದೆ. ಕೊನೆಗೆ ಇಬ್ಬರೂ ಮುಖಾಮುಖಿಯಾಗಿದ್ದು ಕೈ ಕೈ ಮಿಲಾಯಿಸಿಕೊಂಡ್ರಾ ಅನ್ನೋ ಅನುಮಾನ ಶುರುವಾಗಿದೆ. ಎಲ್ಲರ ತಪ್ಪುಗಳನ್ನು ಎತ್ತಿ ಹಿಡಿಯುವ ರಜತ್​ ಅವರು ಸ್ನೇಹಿತೆಯ ತಪ್ಪನ್ನು ಮುಚ್ಚಿಟ್ಟಿದ್ದೇ ಗಲಾಟೆಗೆ ಕಾರಣ. ಇದು ಎಷ್ಟರ ಮಟ್ಟಿಗೆ ಸರಿ ಎಂಬುದನ್ನು ನೀವೇ ನಿರ್ಧರಿಸಿ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.