ETV Bharat / entertainment

'ಹಲವು ಜನರು ನನ್ನಿಂದೆ ಬಿದ್ದಿದ್ದಾರೆಂಬುದನ್ನು ಕೇಳಿದೆ..' ಸಲ್ಮಾನ್​ ಖಾನ್​​ 'ಸಿಕಂದರ್'​ ಟೀಸರ್ ರಿಲೀಸ್​ - SIKANDAR TEASER

ಎ.ಆರ್.ಮುರುಗದಾಸ್ ನಿರ್ದೇಶನದ 'ಸಿಕಂದರ್'​ ಟೀಸರ್ ಅನಾವರಣಗೊಂಡಿದೆ. ತಮಗೆ ಬಂದಿರುವ ​ಜೀವ ಬೆದರಿಕೆಗಳಿಗೆ ಈ​ ಟೀಸರ್​ ಮೂಲಕ ಪ್ರತಿಕ್ರಿಯಿಸಿದ್ರಾ ಸಲ್ಮಾನ್​ ಖಾನ್​? ಎಂಬ ಪ್ರಶ್ನೆ ಎದ್ದಿದೆ.

SIKANDAR Teaser out
'ಸಿಕಂದರ್'​ ಟೀಸರ್ ರಿಲೀಸ್​ (Photo: A still from Sikandar teaser)
author img

By ETV Bharat Entertainment Team

Published : Dec 28, 2024, 4:34 PM IST

ಬಾಲಿವುಡ್​​ ಭಾಯ್​ಜಾನ್​​ ಸಲ್ಮಾನ್ ಖಾನ್ ತಮ್ಮ ಬಹು ನಿರೀಕ್ಷಿತ ಚಿತ್ರ 'ಸಿಕಂದರ್' ಮೂಲಕ 2025ರ ಈದ್​ಗೆ ಪ್ರೇಕ್ಷಕರೆದುರು ಬರಲು ಸಜ್ಜಾಗಿದ್ದಾರೆ. ಎ.ಆರ್.ಮುರುಗದಾಸ್ ನಿರ್ದೇಶನದ ಸಿನಿಮಾದಲ್ಲಿ ಕನ್ನಡತಿ ರಶ್ಮಿಕಾ ಮಂದಣ್ಣ ಪ್ರಮುಖ ಪಾತ್ರ ವಹಿಸಿದ್ದಾರೆ. ಬಹುನಿರೀಕ್ಷಿತ ಪ್ರಾಜೆಕ್ಟ್​​ ಹಿಂದಿರುವ ಚಲನಚಿತ್ರ ನಿರ್ಮಾಣ ಸಂಸ್ಥೆ ನಾಡಿಯಾಡ್‌ವಾಲಾ ಗ್ರ್ಯಾಂಡ್‌ಸನ್ ಎಂಟರ್‌ಟೈನ್‌ಮೆಂಟ್‌ ಇಂದು ಟೀಸರ್​ ಅನಾವರಣಗೊಳಿಸುವ ಮೂಲಕ ಅಭಿಮಾನಿಗಳಿಗೆ ಸಲ್ಮಾನ್ ಖಾನ್ ಬರ್ತ್​ಡೇಯ ಟ್ರೀಟ್​ ಕೊಟ್ಟಿದ್ದಾರೆ.

ಪ್ರಸ್ತುತ ವರ್ಷ ಸಲ್ಮಾನ್ ಖಾನ್​ ನಾಯಕ ನಟನಾಗಿ ಯಾವುದೇ ಸಿನಿಮಾದಲ್ಲಿ ಕಾಣಿಸಿಕೊಂಡಿಲ್ಲ. ಅವರ ಚಿತ್ರ ತೆರೆಕಂಡು ಬಹಳ ದಿನಗಳಾಗಿದ್ದು, ಅಪಾರ ಸಂಖ್ಯೆಯ ಅಭಿಮಾನಿಗಳ ಜೊತೆಗೆ ಸಲ್ಮಾನ್ ಖಾನ್ ಕೂಡಾ ತಮ್ಮ ಸಿಕಂದರ್ ಸಿನಿಮಾ ಬಿಡುಗಡೆಗಾಗಿ ಎದುರು ನೋಡುತ್ತಿದ್ದಾರೆ. ಮುಂದಿನ ವರ್ಷ ಈದ್​​ಗೆ ಅದ್ಧೂರಿಯಾಗಿ ತೆರೆಕಾಣಲಿರುವ ಸಿನಿಮಾದ ಟೀಸರ್​​ ಇಂದು ಅನಾವರಣಗೊಂಡಿದೆ.

ಸಿಕಂದರ್ ಟೀಸರ್ ನಿನ್ನೆ, ಡಿಸೆಂಬರ್ 27 ರಂದು ಬಿಡುಗಡೆಯಾಗಬೇಕಿತ್ತು. ಆದ್ರೆ ಸಿಂಗ್ ಅವರ ನಿಧನದಿಂದಾಗಿ ಮುಂದೂಡಲ್ಪಟ್ಟಿತು. ಇಂದು ಬೆಳಗ್ಗೆ 11.07ಕ್ಕೆ ಸಮಯ ನಿಗದಿಯಾಗಿತ್ತಾದರೂ, ಸಂಜೆ 4.05ಕ್ಕೆ ಮುಂದೂಡಲಾಯಿತು. ಅಂತಿಮವಾಗಿ ಅಭಿಮಾನಿಗಳ ಕಾಯುವಿಕೆ ಪೂರ್ಣಗೊಂಡಿದೆ. ನಿನ್ನೆ ಸೂಪರ್​ ಸ್ಟಾರ್ ಹುಟ್ಟುಹಬ್ಬ ಆಚರಿಸಿಕೊಂಡಿದ್ದು, ಇಂದು ಅಭಿಮಾನಿಗಳು ಟೀಸರ್​ ಕಣ್ತುಂಬಿಕೊಂಡಿದ್ದಾರೆ.

ಮೂಲತಃ ಸಿಕಂದರ್ ಟೀಸರ್ ಅನ್ನು ಸಲ್ಮಾನ್ ಖಾನ್ ಅವರ 59ನೇ ಹುಟ್ಟುಹಬ್ಬದ ಅಂಗವಾಗಿ ಕಳೆದ ದಿನ ಅಂದರೆ ಡಿಸೆಂಬರ್ 27ರಂದು ಬಿಡುಗಡೆ ಮಾಡಲು ನಿರ್ಧರಿಸಲಾಗಿತ್ತು. ಆದ್ರೆ, ಚಿತ್ರದ ಹಿಂದಿರುವ ನಾಡಿಯಾಡ್ವಾಲಾ ಗ್ರ್ಯಾಂಡ್‌ಸನ್ ಎಂಟರ್‌ಟೈನ್‌ಮೆಂಟ್ ಒಂದು ದಿನ ಮುಂದೂಡಲ್ಪಟ್ಟಿತು. ಡಾ.ಮನಮೋಹನ್​​ ಸಿಂಗ್ ಅವರ ನಿಧನ ಹಿನ್ನೆಲೆ ರಾಷ್ಟ್ರೀಯ ಶೋಕಾಚರಣೆಯಿಂದಾಗಿ ಬಿಡುಗಡೆಯನ್ನು ವಿಳಂಬಗೊಳಿಸಲಾಗುವುದು ಎಂದು ಪ್ರೊಡಕ್ಷನ್​ ಹೌಸ್​ ಘೋಷಿಸಿತು. ಇದೀಗ ಟೀಸರ್​ ಅನಾವರಣಗೊಂಡಿದ್ದು, ಅದರಲ್ಲಿರುವ ಡೈಲಾಗ್​ ಕೇಳಿದ್ರೆ ತಮ್ಮ ಹಿಂದೆ ಬಿದ್ದಿರುವವರಿಗೆ ಟಾಂಗ್​ ಕೊಟ್ಟಂತೆ ಕಂಡಿದೆ.

1 ನಿಮಿಷ 41 ಸೆಕೆಂಡುಗಳುಳ್ಳ ಟೀಸರ್ ಆ್ಯಕ್ಷನ್-ಪ್ಯಾಕ್ಡ್ ಚಿತ್ರದ ಒಂದು ನೋಟವನ್ನು ಒದಗಿಸಿದೆ. ಸಲ್ಮಾನ್ ಖಾನ್ ಆ್ಯಕ್ಷನ್​​ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಂಪೂರ್ಣ ಟೀಸರ್​​ನಲ್ಲಿ ಬಂದಿರುವ ಒಂದೇ ಒಂದು ಡೈಲಾಗ್​ ಸಕತ್​ ಪವರ್​ಫುಲ್​ ಆಗಿದೆ. "ಅನೇಕ ಜನರು ನನ್ನ ಹಿಂದೆ ಬಿದ್ದಿದ್ದಾರೆಂಬುದನ್ನು ಕೇಳಿದೆ. ನಾನು ಹಿಂತಿರುಗುವುದೊಂದೇ.. " ಎಂದು ಹೇಳುತ್ತಾ ನಾಯಕ ನಟ ತಮ್ಮನ್ನು ಕೊಲ್ಲಲು ಬಂದ ಮುಸುಕುಧಾರಿಗಳ ಮೇಲೆ ತಿರುಗಿಬಿದ್ದಿದ್ದಾರೆ.

ಇದನ್ನೂ ಓದಿ: ಅಮಿತಾಭ್​, ಶಾರುಖ್​​​ To ದೀಪಿಕಾ: ನಯಾ ಪೈಸೆ ಪಡೆಯದೇ ನಟಿಸಿದ ಸೂಪರ್​​ ಸ್ಟಾರ್​ಗಳಿವರು

ಸಲ್ಮಾನ್ ಡೈಲಾಗ್ಸ್​ ಮತ್ತು ಮುಖವಾಡ ಧರಿಸಿರುವ ದಾಳಿಕೋರರ ಗುಂಪನ್ನು ನೋಡಿದ್ರೆ ಸೂಪರ್‌ಸ್ಟಾರ್ ಎದುರಿಸುತ್ತಿರುವ ಮಾರಣಾಂತಿಕ ಬೆದರಿಕೆಗಳಿಗೆ ಕೊಟ್ಟ ತಿರುಗೇಟಿನಂತೆ ಕಾಣುತ್ತಿದೆ. ಈ ವರ್ಷ ನಟ ಕೆಲವು ಬಾರಿ ಜೀವ ಬೆದರಿಕೆ ಸ್ವೀಕರಿಸಿರೋದು ನಿಮಗೆ ತಿಳಿದಿರುವ ವಿಚಾರವೇ. ಈ ಹಿನ್ನೆಲೆ ಹೆಸರಾಂತ ನಟನ ಭದ್ರತೆಯನ್ನೂ ಹೆಚ್ಚಿಸಲಾಗಿದೆ.

ಇದನ್ನೂ ಓದಿ: ಬ್ರಹ್ಮಗಂಟು ನಟಿ ಶೋಭಿತಾ To ಶ್ಯಾಮ್​ ಬೆನಗಲ್​: 2024ರಲ್ಲಿ ನಾವು ಕಳೆದುಕೊಂಡ ಭಾರತೀಯ ಸೆಲೆಬ್ರಿಟಿಗಳಿವರು

2023ರಲ್ಲಿ ಬಿಡುಗಡೆಯಾದ ಟೈಗರ್ 3 ನಂತರ ಬರುತ್ತಿರುವ ಸಲ್ಮಾನ್ ಖಾನ್ ಮುಖ್ಯಭೂಮಿಕೆಯ ಬಹುನಿರೀಕ್ಷಿತ ಚಿತ್ರವಿದು. ಗಜಿನಿ, ತುಪ್ಪಕ್ಕಿ ಮತ್ತು ಸರ್ಕಾರ್‌ಗೆ ಹೆಸರುವಾಸಿಯಾಗಿರುವ ತಮಿಳು ನಿರ್ದೇಶಕ ಎಆರ್ ಮುರುಗದಾಸ್ ನಿರ್ದೇಶನದ ಈ ಚಿತ್ರವು ಸಲ್ಮಾನ್ ಅಭಿಮಾನಿಗಳಿಗೆ ಭರ್ಜರಿ ಟ್ರೀಟ್ ಆಗಲಿದೆ ಎಂದು ನಿರೀಕ್ಷಿಸಲಾಗಿದೆ.

ಸಿಕಂದರ್​ನಲ್ಲಿ ರಶ್ಮಿಕಾ ಮಂದಣ್ಣ, ವತ್ಸನ್ ಚಕ್ರವರ್ತಿ, ಕಾಜಲ್ ಅಗರ್ವಾಲ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಸಾಜಿದ್ ನಾಡಿಯಾಡ್ವಾಲಾ ಅವರು ತಮ್ಮ ನಾಡಿಯಾಡ್ವಾಲಾ ಗ್ರ್ಯಾಂಡ್‌ಸನ್ ಎಂಟರ್‌ಟೈನ್‌ಮೆಂಟ್ ಬ್ಯಾನರ್​ ಅಡಿಯಲ್ಲಿ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.