ಕರ್ನಾಟಕ

karnataka

ETV Bharat / entertainment

ಆಗಸ್ಟ್ 15 ಅಲ್ಲ 23ಕ್ಕೆ 'ಪೌಡರ್​​' ಸಿನಿಮಾ ಬಿಡುಗಡೆ: ಕನ್ನಡ ಸಿನಿಮಾಗಳ ಉಳಿವಿಗಾಗಿ ಕೆಆರ್​ಜಿ ಸಂಸ್ಥೆಯಿಂದ ನಿರ್ಣಯ - Powder movie release date postponed - POWDER MOVIE RELEASE DATE POSTPONED

ಆಗಸ್ಟ್ 15ಕ್ಕೆ ಬಿಡುಗಡೆಗೊಳ್ಳಬೇಕಿದ್ದ ಪೌಡರ್​ ಸಿನಿಮಾ ಕೆಲವು ಕಾರಣಗಳಿಂದ ಮುಂದೂಡಿದೆ.

ಪೌಡರ್​ ಚಿತ್ರ ತಂಡ
ಪೌಡರ್​ ಚಿತ್ರ ತಂಡ (ETV Bharat)

By ETV Bharat Karnataka Team

Published : Jul 29, 2024, 12:39 PM IST

ಆಗಸ್ಟ್​​ 15ರಂದು ತೆರೆಗೆ ಬರಲು ಸಿದ್ಧವಾಗಿದ್ದ ಬಹುನಿರೀಕ್ಷಿತ 'ಪೌಡರ್​​' ಸಿನಿಮಾ ಬಿಡುಗಡೆ ದಿನವನ್ನು ಮುಂದೂಡಿದೆ. ಕನ್ನಡ ಸಿನಿಮಾಗಳ ಉಳಿವಿಗಾಗಿ ಕೆಆರ್​ಜಿ ಸಂಸ್ಥೆ ಈ ನಿರ್ಣಯ ಕೈಗೊಂಡಿದೆ.

ಆಗಸ್ಟ್ 15ರಂದು ಸಾಕಷ್ಟು ಕನ್ನಡ ಸಿನಿಮಾಗಳ ಜೊತೆಗೆ ಪರಭಾಷಾ ಸೇರಿ ಹತ್ತರಿಂದ ಹದಿನೈದು ಸಿನಿಮಾಗಳು ಬಿಡುಗಡೆಯಾಗುತ್ತಿವೆ. ಒಂದೇ ದಿನ ಸಾಕಷ್ಟು ಸಿನಿಮಾಗಳು ಬಿಡುಗಡೆಯಾದರೆ ಬಾಕ್ಸ್​ ಆಫೀಸ್​ನಲ್ಲಿ ಕ್ಲಾಷ್​ ಆಗಲಿದೆ. ಹೀಗಾಗಿ ಕೆಆರ್​ಜಿ ನಿರ್ಮಾಣ ಸಂಸ್ಥೆ ಆಗಸ್ಟ್ 15ರ ಬದಲಿಗೆ ಆಗಸ್ಟ್ 23ಕ್ಕೆ ಸಿನಿಮಾವನ್ನು ತೆರೆಗೆ ತರಲು ಸಜ್ಜಾಗಿದೆ.

ಕಲೆಕ್ಷನ್ ಮೇಲೆಯೂ ಹೊಡೆತ ಬೀಳಲಿದೆ. ಮೊದಲೇ ಕನ್ನಡ ಚಿತ್ರರಂಗದ ಸ್ಥಿತಿ ಶೋಚನೀಯವಾಗಿದೆ. ಇಂತಹ ಸಂದರ್ಭದಲ್ಲಿ ಬಾಕ್ಸಾಫೀಸ್​ ವಾರ್​​ ಬೇಡ ಎಂಬುದನ್ನು ಅರಿತ ಕೆಆರ್​ಜಿ ಸಂಸ್ಥಾಪಕಾರದ ಕಾರ್ತಿಕ್ ಗೌಡ ಹಾಗೂ ಯೋಗಿ ಜಿ ರಾಜ್ 'ಪೌಡರ್' ರಿಲೀಸ್ ದಿನಾಂಕವನ್ನು ಮುಂದೂಡಿದ್ದಾರೆ.

ಜನಾರ್ಧನ್​ ಚಿಕ್ಕಣ್ಣ ನಿರ್ದೇಶನದ 'ಪೌಡರ್' ಚಿತ್ರದಲ್ಲಿ ದಿಗಂತ್ ಮಂಚಾಲೆ, ಧನ್ಯ ರಾಮ್ ಕುಮಾರ್, ಅನಿರುದ್ಧ್ ಆಚಾರ್ಯ, ಶರ್ಮಿಳಾ ಮಾಂಡ್ರೆ, ರಂಗಾಯಣ ರಘು, ಗೋಪಾಲಕೃಷ್ಣ ದೇಶಪಾಂಡೆ ಮುಂತಾದವರು ಅಭಿನಯಿಸಿದ್ದಾರೆ. ಈ ಚಿತ್ರಕ್ಕೆ ವಾಸುಕಿ ವೈಭವ್​ ಸಂಗೀತ ಸಂಯೋಜನೆ ಮಾಡಿದ್ದು, ಕಾರ್ತಿಕ್ ಗೌಡ, ಯೋಗಿ ಜಿ. ರಾಜ್ ಮತ್ತು ವಿಜಯ್ ಸುಬ್ರಹ್ಮಣ್ಯಂ ಕೆ.ಆರ್.ಜಿ. ಸ್ಟುಡಿಯೋಸ್​​ ಬ್ಯಾನರ್​ ಅಡಿಯಲ್ಲಿ ಹಾಗೂ ಅರುನಭ್ ಕುಮಾರ್ ಟಿ.ವಿ.ಎಫ್. ಮೋಷನ್ ಪಿಕ್ಚರ್ಸ್ ಬ್ಯಾನರ್​ ಅಡಿಯಲ್ಲಿ ನಿರ್ಮಾಣ ಮಾಡಿದ್ದಾರೆ.

ಇದನ್ನೂ ಓದಿ:ಪೌಡರ್‌ನಿಂದ 'ಪರಪಂಚ ಘಮ ಘಮ': ಅಭಿಮಾನಿಗಳಿಗೆ ದಿಗಂತ್, ಧನ್ಯಾ ಸಿನಿಮಾ ನೋಡುವ ಹಂಬಲ - Parapancha Gama Gama Song

ABOUT THE AUTHOR

...view details