ಕರ್ನಾಟಕ

karnataka

ETV Bharat / entertainment

ಇಳಿಕೆ ಕಂಡ 'ತೇರಿ ಬಾತೋ ಮೇ ಐಸಾ ಉಲ್ಜಾ ಜಿಯಾ' ಕಲೆಕ್ಷನ್​: ಶಾಹಿದ್ -​ ಕೃತಿ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ

ಸಿನಿಮಾ ಬಿಡುಗಡೆಗೊಂಡು ಮೊದಲ ಮೂರು ದಿನ ಉತ್ತಮ ಸಂಪಾದನೆ ಕಂಡ ಚಿತ್ರ ಎರಡನೇ ದಿನಕ್ಕೆ ಇಳಿಕೆ ಕಾಣುತ್ತಿದೆ.

tbmauj-bo-day-4-shahid-kritis-film-comes-crashing-down-on-first-monday-drops-by-more-than-65-pc
tbmauj-bo-day-4-shahid-kritis-film-comes-crashing-down-on-first-monday-drops-by-more-than-65-pc

By ETV Bharat Karnataka Team

Published : Feb 13, 2024, 11:36 AM IST

ಹೈದರಾಬಾದ್​: ನಟಿ ಕೃತಿ ಸನೋನ್ ​ - ಶಾಹೀದ್​ ಕಪೂರ್​ ಮೊದಲ ಬಾರಿ ಒಟ್ಟಿಗೆ ನಟಿಸಿದ 'ತೇರಿ ಬಾತೋ ಮೇ ಐಸಾ ಉಲ್ಜಾ ಜಿಯಾ' ಚಿತ್ರ ಕಳೆದ ವಾರ ಫೆ. 9ರಂದು ಬಿಡುಗಡೆಯಾಗಿದ್ದು, ಉತ್ತಮವಾಗಿ ಪ್ರದರ್ಶನ ಕಾಣುತ್ತಿದೆ. ಟಿಬಿಎಂಎಯುಜೆ ಸಿನಿಮಾದ ಚಿತ್ರ ಕಥೆ ವಿಭಿನ್ನವಾಗಿದ್ದು, ಅಭಿಮಾನಿಗಳನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ವೈಜ್ಞಾನಿಕ ಕಾಲ್ಪನಿಕ ಹಾಸ್ಯ ಮಿಶ್ರಿತ ಪ್ರೇಮ ಕಥೆ ಇದಾಗಿದ್ದು, ಅಮಿತ್​ ಜೋಶಿ ಮತ್ತು ಆರಾಧಾನ ಶಾ ನಿರ್ದೇಶನದಲ್ಲಿ ಈ ಚಿತ್ರ ಮೂಡಿ ಬಂದಿದೆ. ಧರ್ಮೇಂದ್ರ ಮತ್ತು ಡಿಂಪಲ್​ ಕಪಾಡಿಯಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದ ಕುರಿತು ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಶಾಹಿದ್​ ಮತ್ತು ಕೃತಿ ಕೆಮಿಸ್ಟ್ರಿ ಸೊಗಸಾಗಿದೆ ಎಂಬ ಮಾತು ಕೇಳಿ ಬಂದಿದೆ.

ಬಿಡುಗಡೆಗೊಂಡಾಗಿನಿಂದ 'ತೇರಿ ಬಾತೋ ಮೇ ಐಸಾ ಉಲ್ಜಾ ಜಿಯಾ' ಬಾಕ್ಸ್​​ ಆಫೀಸ್​ನಲ್ಲಿ ಉತ್ತಮ ಗಳಿಕೆ ಕಾಣುತ್ತಿದೆ. ಬಿಡುಗಡೆಗೊಂಡ ಮೊದಲ ದಿನವೇ ಚಿತ್ರ 6.7 ಕೋಟಿ ರೂ ಗಳಿಸಿತು. ವಾರಂತ್ಯದಲ್ಲಿ ಉತ್ತಮ ಗಳಿಕೆ ಕಂಡಿದ್ದ ಚಿತ್ರ ಶನಿವಾರ 9.65 ಕೋಟಿ ರೂ ಗಳಿಸಿದರೆ, ಭಾನುವಾರ 10.5 ಕೋಟಿ ರೂವನ್ನು ಬಾಚಿಕೊಳ್ಳುವ ಮೂಲಕ ಬಿಡುಗಡೆಗೊಂಡ ಮೂರೇ ದಿನಗಳಲ್ಲಿ 27 ಕೋಟಿ ರೂ ಸಂಪಾದಿಸಿತ್ತು. ಸೋಮವಾರದಿಂದ ಗಳಿಕೆಯಲ್ಲಿ ಸಿನಿಮಾ ಕೊಂಚ ಹಿನ್ನಡೆಯನ್ನು ಕಂಡಿದೆ. ಉದ್ಯಮದ ಟ್ರ್ಯಾಕರ್​ ಸ್ಯಾಕ್ನಿಲ್ಕ್ ಪ್ರಕಾರ, ಚಿತ್ರ ನಾಲ್ಕನೇ ದಿನ 3.76 ಕೋಟಿ ರೂ ಗಳಿಸಿದ್ದು, ಒಟ್ಟಾರೆ ಇದುವರೆಗೆ 30.85 ಕೋಟಿ ಸಂಪಾದಿಸಿದೆ.

'ತೇರಿ ಬಾತೋ ಮೇ ಐಸಾ ಉಲ್ಜಾ ಜಿಯಾ' ಚಿತ್ರ ಬಿಡುಗಡೆಯಾದ ಬಳಿಕ ಫೈಟರ್​ ಚಿತ್ರದ ಗಳಿಕೆ ಮೇಲೆ ಪ್ರಭಾವ ಬೀರಿದೆ. ರೋಬೋ- ಮಾನವನ ನಡುವಿನ ಪ್ರೇಮ ಕುರಿತ ಕಥೆಯ ಚಿತ್ರ ಸದ್ಯ ಎಲ್ಲರನ್ನು ಸೆಳೆಯುತ್ತಿದೆ. ಫೆಬ್ರವರಿ 14ರವರೆಗೆ ಚಿತ್ರ ಟಿಕೆಟ್​​ಗಳ ಬುಕ್ಕಿಂಗ್​ಗಳ ಮೇಲೆ ಆಫರ್​​ಗಳು ನಡೆದಿದೆ. ಹಲವೆಡೆ ಒಂದು ಟಿಕೆಟ್​​ಗೆ ಒಂದು ಆಫರ್​​ ಕೂಡ ನೀಡಲಾಗುತ್ತಿದ್ದು, ಚಿತ್ರ ಬಿಡುಗಡೆಯಾದ ವಾರದೊಳಗೆ 40 ಕೋಟಿ ರೂ ಸಂಪಾದಿಸಲಿದೆ ಎಂಬ ಮಾತು ಕೇಳಿ ಬಂದಿದೆ.

ಈ ಶುಕ್ರವಾರ ಅಂದರೆ, ಫೆ 16ರಂದು ಯಾವುದೇ ಹೊಸ ಚಿತ್ರ ಕೂಡ ತೆರೆ ಕಾಣದ ಹಿನ್ನಲೆ 'ತೇರಿ ಬಾತೋ ಮೇ ಐಸಾ ಉಲ್ಜಾ ಜಿಯಾ' ಯಶಸ್ವಿ ಪ್ರದರ್ಶನ ನಡೆಸಲಿದೆ ಎಂಬ ಲೆಕ್ಕಾಚಾರವನ್ನು ಕೂಡ ನಡೆಸಿದ್ದಾರೆ ಸಿನಿ ಪಂಡಿತರು. ಯಂತ್ರ ಮಾನವರ ನಡುವಿನ ಪ್ರೇಮ ಕಥೆಯನ್ನು ಈ ಚಿತ್ರ ಹೊಂದಿದೆ. ಕೃತಿ ಸನೋನ್​ ಮಾನವ ರೋಬೋಟ್​ ಆಗಿ ಕಾಣಿಸಿಕೊಂಡಿದ್ದು, ಯಂತ್ರದೊಂದಿಗೆ ಪ್ರೇಮಕ್ಕೆ ಬೀಳುವ ಪ್ರೇಮಿಯಾಗಿ ಶಾಹಿದ್​ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ: ಶಾಹಿದ್ ​-ಕೃತಿ ಅಭಿನಯದ 'ತೇರಿ ಬಾತೋ ಮೇ ಐಸಾ ಉಲ್ಜಾ ಜಿಯಾ' ಎಕ್ಸ್ ವಿಮರ್ಶೆ ಇಲ್ಲಿದೆ

ABOUT THE AUTHOR

...view details