ಕರ್ನಾಟಕ

karnataka

ETV Bharat / entertainment

'ನಟಿಯರ ಮೇಲಿನ ದೌರ್ಜನ್ಯದಂತಹ ಪ್ರಕರಣಗಳು ಕನ್ನಡ ಚಿತ್ರರಂಗದಲ್ಲಿಲ್ಲ': ತಾರಾ ಅನುರಾಧ - Tara Anuradha Reaction - TARA ANURADHA REACTION

ಫೈರ್ - 'ಫಿಲ್ಮ್ ಇಂಡಸ್ಟ್ರಿ ಫಾರ್ ರೈಟ್ಸ್ ಆ್ಯಂಡ್​ ಈಕ್ವಾಲಿಟಿ'ಯ ಸದಸ್ಯರು ನಟಿಯರ ಮೇಲಿನ ದೌರ್ಜನ್ಯದ ಬಗ್ಗೆ ಅಧ್ಯಯನ ಮಾಡಲು ಸಮಿತಿಯೊಂದನ್ನು ರಚಿಸಬೇಕು ಎಂದು ಗುರುವಾರದಂದು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಮನವಿ ಪತ್ರ ಸಲ್ಲಿಸಿದ್ದಾರೆ. ಹಿರಿಯ ನಟಿ ತಾರಾ ಅನುರಾಧ ಅವರು ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

Tara Anuradha
ನಟಿ ತಾರಾ ಅನುರಾಧ (ETV Bharat)

By ETV Bharat Entertainment Team

Published : Sep 6, 2024, 4:24 PM IST

ಬೆಂಗಳೂರು: ''ಕನ್ನಡ ಚಿತ್ರರಂಗದಲ್ಲಿ ನಟಿಯರ ಮೇಲಿನ ಕಿರುಕುಳದಂತಹ ಪ್ರಕರಣಗಳು ಇಲ್ಲ. ಅಂತಹ ಪ್ರಕರಣಗಳು ಕಂಡುಬಂದಲ್ಲಿ ಅದನ್ನು ಖಂಡಿಸುತ್ತೇವೆ. ಸಮಿತಿಯೊಂದು ರನಚೆಯಾಗಬೇಕು ಎಂದು ಕೆಲವರು ಸಿಎಂ ಬಳಿ ಹೋಗಿದ್ದಾರೆ. ವೈಯಕ್ತಿಕವಾಗಿ ನನಗೆ ಆ ರೀತಿಯ ಸಮಸ್ಯೆಗಳು ಎದುರಾಗಿಲ್ಲ. ನಾವೆಲ್ಲದರಲ್ಲೂ ಧ್ವನಿ ಎತ್ತುತ್ತೇವೆ, ಮುಂದೆ ಇರುತ್ತೇವೆ. ನಿಜ ಹೇಳಲೇ, ಗಂಡು ಮಕ್ಕಳು ಪಾಪ'' ಎಂದು ನಟಿ ತಾರಾ ಅನುರಾಧ ತಿಳಿಸಿದರು.

ನಟಿ ತಾರಾ ಅನುರಾಧ (ETV Bharat)

ಮಲಯಾಳಂ ಸಿನಿಮಾ ಇಂಡಸ್ಟ್ರಿಯ ಕರಾಳ ಮುಖವನ್ನು ನ್ಯಾಯಮೂರ್ತಿ ಹೇಮಾ ಸಮಿತಿ ವರದಿ ಬಹಿರಂಗಪಡಿಸಿದೆ. ಅದಾದ ನಂತರ ನಮ್ಮಲ್ಲೂ ಒಂದು ಸಮಿತಿ ರಚನೆಯಾಗಬೇಕೆಂದು ಇತರ ಚಿತ್ರರಂಗಗಳು ಮುಂದೆ ಬರುತ್ತಿವೆ. ಅದೇ ರೀತಿ ಕನ್ನಡ ಚಿತ್ರರಂಗದಲ್ಲಿ ಫೈರ್ - 'ಫಿಲ್ಮ್ ಇಂಡಸ್ಟ್ರಿ ಫಾರ್ ರೈಟ್ಸ್ ಆ್ಯಂಡ್​ ಈಕ್ವಾಲಿಟಿ'ಯ (FIRE - Film Industry for Rights and Equality) ಸದಸ್ಯರು ಸಮಿತಿಯೊಂದನ್ನು ರಚಿಸಬೇಕು ಎಂದು ನಿನ್ನೆ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ. ಇದರ ಬೆನ್ನಲ್ಲೇ ಚಿತ್ರರಂಗದ ನಟ ನಟಿಯರು ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ.

ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಬೇಡಿಕೆ ಹೊಂದಿರುವ ಹಿರಿಯ ನಟಿ ತಾರಾ ಅನುರಾಧ ಕೂಡಾ ಈ ಬಗ್ಗೆ ಮಾತನಾಡಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ''ಸಿನಿಮಾರಂಗ ಅಷ್ಟೇ ಅಲ್ಲ, ಪ್ರತೀ ಕ್ಷೇತ್ರದಲ್ಲೂ ಇಂತಹ ಸಮಸ್ಯೆ ಇರುತ್ತವೆ. ಇದರ ನಿವಾರಣೆಗೆ ರಾಜ್ಯ ಮಹಿಳಾ ಆಯೋಗ ಇದೆ. ಜೊತೆಗೆ ನಮ್ಮ ಮಾತೃಸಂಸ್ಥೆ ಫಿಲ್ಮ್ ಚೇಂಬರ್ ಇದೆ. ಕಲಾವಿದರ ಸಂಘ ಕೂಡಾ ಇದೆ. ಅಲ್ಲಿ ಏನಾದರೂ ದೂರು ಕೊಟ್ರೆ ನ್ಯಾಯ ಒದಗಿಸುತ್ತಾರೆ'' ಎಂದು ತಿಳಿಸಿದರು.

ಇನ್ನೂ 'ಫೈರ್' ಕರ್ನಾಟಕ ಸರ್ಕಾರಕ್ಕೆ ಎರಡು ಬೇಡಿಕೆಗಳನ್ನು ಇಟ್ಟಿದೆ. ಮೊದಲನೆಯದು, ಕನ್ನಡ ಚಿತ್ರರಂಗದಲ್ಲಿ ಮಹಿಳೆಯರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಸಮಿತಿ ರಚಿಸಿ ವ್ಯವಸ್ಥಿತವಾಗಿ ತನಿಖೆ ನಡೆಸಬೇಕು ಎಂದು ಆಗ್ರಹಿಸಿದೆ. ಜೊತೆಗೆ, ಮಹಿಳೆಯರು ಕನ್ನಡ ಚಿತ್ರರಂಗದಲ್ಲಿ ಆರೋಗ್ಯಕರವಾಗಿ ಹಾಗೂ ಸಮಾನವಾಗಿ ಕೆಲಸ ಮಾಡುವಂತೆ ನಿಯಮಗಳನ್ನು ತರುವಂತೆ ಕೇಳಿಕೊಳ್ಳಲಾಗಿದೆ.

ಇದನ್ನೂ ಓದಿ:'ಕೊಲೆ ಪ್ರಕರಣದಿಂದ ದರ್ಶನ್ ಬೇಗ ಹೊರಬರಲಿ, ಚಿತ್ರರಂಗಕ್ಕೆ ಅವರ ಕೊಡುಗೆ ಅಪಾರ': ನೆನಪಿರಲಿ ಪ್ರೇಮ್ - Nenapirali Prem

ಕನ್ನಡ ಚಿತ್ರರಂಗದ ಪ್ರಮುಖರು ಈ ಅರ್ಜಿಗೆ ಸಹಿ ಹಾಕಿದ್ದಾರೆ. ಫೈರ್‌ನ ಅಧ್ಯಕ್ಷೆ ಕವಿತಾ ಲಂಕೇಶ್, ಕಾರ್ಯದರ್ಶಿ ಚೇತನ್ ಅಹಿಂಸಾರಿಂದ ಹಿಡಿದು ರಮ್ಯಾ, ಸುದೀಪ್, ಕಿಶೋರ್, ಹಿರಿಯ ನಟ ಶರತ್ ಲೋಹಿತಾಶ್ವ, ವಿನಯ್ ರಾಜ್ ಕುಮಾರ್, ನಿರ್ದೇಶಕ ಸಿಂಪಲ್ ಸುನಿ, ಐಂದ್ರಿತಾ ರೇ, ಅಮೃತಾ ಅಯ್ಯಂಗಾರ್, ಪೂಜಾ ಗಾಂಧಿ, ಶ್ರುತಿ ಹರಿಹರನ್, ಆಶಿಕಾ ರಂಗನಾಥ್, ಚೈತ್ರಾ ಜೆ ಆಚಾರ್, ಧನ್ಯಾ ರಾಮ್‌ಕುಮಾರ್, ಸಂಯುಕ್ತ ಹೆಗಡೆ, ಶ್ರದ್ದಾ ಶ್ರೀನಾಥ್, ಕಿಶೋರ್, ನಿಶ್ವಿಕಾ ನಾಯ್ಡು ಸೇರಿದಂತೆ 153 ಜನರು ಅರ್ಜಿಗೆ ಸಹಿ ಹಾಕಿದ್ದಾರೆ.

ಇದನ್ನೂ ಓದಿ:'ಪ್ರೀತಿ, ನಗುವಿನ ಕ್ಷಣ': ಪ್ರಕೃತಿ ಮಡಿಲಲ್ಲಿ ಜೂ.ಎನ್​ಟಿಆರ್​, ನೀಲ್​​ ಕುಟುಂಬದ ಜೊತೆ ರಿಷಬ್​ ಶೆಟ್ಟಿ​ ಕುಟುಂಬ - Rishab Shetty With Jr NTR And Neel

ನೆನಪಿರಲಿ ಸಿನಿಮಾ ಖ್ಯಾತಿಯ ಪ್ರೇಮ್ ಕೂಡಾ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ''ಮಡಿವಂತಿಕೆ ಇರುವ ಇಂಡಸ್ಟ್ರಿ ನಮ್ಮದು. ಹೆಣ್ಣುಮಕ್ಕಳಿಗೆ ಒಳ್ಳೆಯದಾಗುತ್ತದೆ ಎಂದರೆ ನಮಿತಿ ರಚನೆಗೆ ನಮ್ಮ ಬೆಂಬಲವಿದೆ. ಈವರೆಗೂ ದೌರ್ಜನ್ಯದಂತಹ ಘಟನೆ ನನ್ನ ಗಮನಕ್ಕೆ ಬಂದಿಲ್ಲ'' ಎಂದು ತಿಳಿಸಿದರು.

ABOUT THE AUTHOR

...view details